AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಗಾಜನೂರು ತುಂಗಾ ಡ್ಯಾಂ ಭರ್ತಿ; ಕರ್ನಾಟಕದ ಪ್ರಮುಖ ಡ್ಯಾಂಗಳ ಜುಲೈ 8ರ ನೀರಿನ ಮಟ್ಟದ ವಿವರ

ಕರ್ನಾಟಕದ ಜಲಾಶಯಗಳ ಜುಲೈ 9ರ ನೀರಿನ ಮಟ್ಟ: ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮುಂಗಾರು ಮಳೆಯಿಂದ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಿದೆ. ಜುಲೈ 9ರಂದು ಆಲಮಟ್ಟಿ, ಹೇಮಾವತಿ, ಲಿಂಗನಮಕ್ಕಿ, ಭದ್ರಾ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ. ಗಾಜನೂರು ತುಂಗಾ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ದೂದಗಂಗಾ ನದಿಯ ಪ್ರವಾಹದಿಂದ ನೂರಾರು ಎಕರೆ ಬೆಳೆ ಹಾನಿಯಾಗಿದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.

Karnataka Dam Water Level: ಗಾಜನೂರು ತುಂಗಾ ಡ್ಯಾಂ ಭರ್ತಿ; ಕರ್ನಾಟಕದ ಪ್ರಮುಖ ಡ್ಯಾಂಗಳ ಜುಲೈ 8ರ ನೀರಿನ ಮಟ್ಟದ ವಿವರ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
| Edited By: |

Updated on:Jul 13, 2026 | 12:26 PM

Share

ಬೆಂಗಳೂರು, ಜು.9 : ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಒಂದೆಡೆ ಶಿವಮೊಗ್ಗದ ಗಾಜನೂರು ಡ್ಯಾಂ ಭರ್ತಿಯಾಗಿದ್ದರೆ, ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನೂರಾರು ಎಕರೆ ಬೆಳೆ ಹಾನಿಯಾಗಿದೆ. ಇಂದು ಅಂದರೆ ಜುಲೆ 9ರಂದು ಯಾವೆಲ್ಲ ನದಿಗಳ ನೀರಿನ ಒಳಹರಿವು ಎಷ್ಟಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

1.ಆಲಮಟ್ಟಿ ಜಲಾಶಯ (ವಿಜಯಪುರ)

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಲಾದ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರಕ್ಕೆ (ಆಲಮಟ್ಟಿ ಡ್ಯಾಂ) ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ.

ಗರಿಷ್ಠ ಮಟ್ಟ: 519.60 ಮೀಟರ್

ಇಂದಿನ ನೀರಿನ ಮಟ್ಟ: 512.59 ಮೀಟರ್

ಒಳಹರಿವು: 1,31,940 ಕ್ಯೂಸೆಕ್

ಹೊರಹರಿವು: 483 ಕ್ಯೂಸೆಕ್

2. ಹೇಮಾವತಿ ಜಲಾಶಯ (ಗೊರೂರು, ಹಾಸನ)

ಗರಿಷ್ಠ ಮಟ್ಟ: 2922 ಅಡಿ (37 TMC)

ಇಂದಿನ ನೀರಿನ ಮಟ್ಟ: 2900.63 ಅಡಿ (20.102 TMC)

ಒಳಹರಿವು: 15,647 ಕ್ಯೂಸೆಕ್

ಹೊರಹರಿವು: 300 ಕ್ಯೂಸೆಕ್ ( ಕಳೆದ ವರ್ಷ ಇದೇ ದಿನ 2919.82 ಅಡಿ ಅಂದರೆ 35.003 TMC ನೀರಿತ್ತು).

3. ಲಿಂಗನಮಕ್ಕಿ ಜಲಾಶಯ (ಸಾಗರ, ಶಿವಮೊಗ್ಗ)

ಗರಿಷ್ಠ ಮಟ್ಟ: 1819 ಅಡಿ (151.64 TMC)

ಇಂದಿನ ನೀರಿನ ಮಟ್ಟ: 1760.85 ಅಡಿ (28.58 TMC)

ಒಳಹರಿವು: 36,867 ಕ್ಯೂಸೆಕ್

ಹೊರಹರಿವು: ಸದ್ಯಕ್ಕೆ ಯಾವುದೇ ಹೊರಹರಿವು ಇಲ್ಲ.

4. ಭದ್ರಾ ಜಲಾಶಯ (ಭದ್ರಾವತಿ, ಶಿವಮೊಗ್ಗ)

ಗರಿಷ್ಠ ಮಟ್ಟ: 186 ಅಡಿ (71.535 TMC)

ಇಂದಿನ ನೀರಿನ ಮಟ್ಟ: 144.7 ಅಡಿ (30.142 TMC)

ಒಳಹರಿವು: 16,304 ಕ್ಯೂಸೆಕ್

ಹೊರಹರಿವು: 216 ಕ್ಯೂಸೆಕ್

ಇದನ್ನೂ ಒದಿ: ಯಾದಗಿರಿ: ಮಳೆ ಬಂದರೆ ಕುರಿಗಳಂತೆ ಒಂದೇ ರೂಮಲ್ಲಿ 5 ತರಗತಿಯ ವಿದ್ಯಾರ್ಥಿಗಳು; ಶಿಕ್ಷಣ ಇಲಾಖೆಯ ವಿರುದ್ಧ ಪೋಷಕರ ಆಕ್ರೋಶ

ಗಾಜನೂರಿನ ತುಂಗಾ ಡ್ಯಾಂ ಭರ್ತಿ

ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದರೂ, ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ಡ್ಯಾಂನ 22 ಗೇಟ್‌ಗಳ ಮೂಲಕ ಸದ್ಯ 30,000 ಕ್ಯೂಸೆಕ್ಸ್ ನೀರನ್ನು ತುಂಗಾ ನದಿಗೆ ಬಿಡಲಾಗುತ್ತಿದ್ದು, ನದಿ ತುಂಬಿ ಹರಿಯುತ್ತಿದೆ. ನಿನ್ನೆ ನದಿಗೆ 48,000 ಕ್ಯೂಸೆಕ್ಸ್ ನೀರು ಹರಿಸಲಾಗಿತ್ತು.

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಅವಾಂತರ: ಜಲಾವೃತಗೊಂಡ ನೂರಾರು ಎಕರೆ ಬೆಳೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ದೂದಗಂಗಾ ನದಿಯ ಅಬ್ಬರ ಮುಗಿಲು ಮುಟ್ಟಿದೆ. ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತಟದ ಗ್ರಾಮಗಳು ಜಲಾವೃತಗೊಳ್ಳುತ್ತಿವೆ. ನದಿ ದಡದಿಂದ ಅರ್ಧ ಕಿಲೋಮೀಟರ್ ಹೊರಗೂ ಪ್ರವಾಹದ ನೀರು ನುಗ್ಗಿದ್ದು, ಬೇಡಕಿಹಾಳ ಗ್ರಾಮ ಸಂಪೂರ್ಣವಾಗಿ ಊರು ಸುತ್ತುವರೆದಿದೆ. ಗ್ರಾಮದ ನೂರಾರು ಎಕರೆಯಲ್ಲಿ ಬೆಳೆದಿದ್ದ ಕಬ್ಬು, ಮೆಕ್ಕೆಜೋಳ, ಶೇಂಗಾ ಹಾಗೂ ಸೋಯಾಬೀನ್ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಕಳೆದ ಐದು ದಿನಗಳಿಂದ ಬೆಳೆಗಳು ನೀರಲ್ಲೇ ನಿಂತಿರುವುದರಿಂದ ಸಂಪೂರ್ಣ ಕೊಳೆತು ಹೋಗುವ ಆತಂಕ ಎದುರಾಗಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 am, Thu, 9 July 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ