Weather Forecast
ಕರ್ನಾಟಕವು ಮೂರು ಬಗೆಯ ಹವಾಮಾನ ಬದಲಾವಣೆಗೆ ಪ್ರತಿವರ್ಷ ಸಾಕ್ಷಿಯಾಗುತ್ತದೆ. ಅದು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತದೆ. ಸಾಮಾನ್ಯವಾಗಿ ಹವಾಮಾನ ಇಲಾಖೆ ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶ ಎಂದು ವಿಂಗಡಣೆ ಮಾಡಿದೆ.
ಸಾಮಾನ್ಯವಾಗಿ ಮಳೆಗಾಲ, ಬಳಿಕ ಚಳಿಗಾಲ ಹಾಗೆಯೇ ಬೇಸಿಗೆ ಕಾಲ ಮೂರು ಕಾಲಗಳಿರುತ್ತವೆ.
ರೈತಾಪಿ ವರ್ಗವು ಮುಂಗಾರು ಮಳೆಯನ್ನು ಅವಲಂಬಿಸಿದೆ, ಮುಂಗಾರು ಜೂನ್ನಿಂದ ಸೆಪ್ಟೆಂಬರ್ವರೆಗೆ ಇರಲಿದೆ. ಅದಾಸ ಬಳಿಕ ಚಳಿಗಾಲ ಶುರುವಾಗಲಿದೆಡ. ಕರ್ನಾಟಕದಲ್ಲಿ ಅಕ್ಟೋಬರ್ನಿಂದ ಡಿಸೆಂಬರ್-ಜನವರಿವರೆಗೂ ಚಳಿ ಇರಲಿದ್ದು ಬಳಿಕ ತಾಪಮಾನ ಹೆಚ್ಚಾಗುತ್ತದೆ. ಕರಾವಳಿ ಬಯಲು ಪ್ರದೇಶಗಳಲ್ಲಿ ತಾಪಮಾನವು ಮೇ ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಮಳೆಗಾಲದ ನಂತರ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ರಾಜ್ಯದಲ್ಲಿ ತಾಪಮಾನವು ಕಡಿಮೆಯಾಗುತ್ತದೆ ಮತ್ತು ಡಿಸೆಂಬರ್ ತಿಂಗಳಲ್ಲಿ ಮತ್ತಷ್ಟು ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಸರಾಸರಿ ಹೆಚ್ಚಿನ ತಾಪಮಾನವು ರಾಜ್ಯದಾದ್ಯಂತ 34 ಡಿಗ್ರಿ ಸೆಲ್ಸಿಯಸ್ ಆಗಿದೆ. ಮಳೆಗಾಲದಲ್ಲಿ ದಿನದ ಸರಾಸರಿ ತಾಪಮಾನ 29 ಡಿಗ್ರಿ ಸೆಲ್ಸಿಯಸ್. ಚಳಿಗಾಲದಲ್ಲಿ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ನಿಂದ 20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತದೆ