AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಲು ತೂರಾಟ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಮತ್ತೊಂದು ವಿವಾದ: ಮಸೀದಿ ಕಾಂಪೌಂಡ್‌ ಮೇಲೆ ಮಗನಿಂದ ಜೈ ಶ್ರೀರಾಮ್‌ ಬರಹ ಬರೆಸಿದ ತಂದೆ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮುಸ್ಮಿಮರು ಕಲ್ಲು ತೂರಾಟ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದು ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಇದರಿಂದ ಬಾಗಲಕೋಟೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಕಿಡಿ ಹಾರುವ ಮುನ್ನವೇ ಬಾಗಲಕೋಟೆಯಲ್ಲಿ ಮತ್ತೊಂದು ವಿವಾದ ಬೆಳಕಿಗೆ ಬಂದಿದೆ. ಮಸೀದಿ ಕಾಂಪೌಂಡ್ ಗೋಡೆ ಮೇಲೆ ವ್ಯಕ್ತಿಯೋರ್ವ ತನ್ನ ಮಗನ ಕೈಯಿಂದ ಜೈ ಶ್ರೀರಾಮ್ ಬರಹ ಬರೆಸಿದ್ದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಕಲ್ಲು ತೂರಾಟ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಮತ್ತೊಂದು ವಿವಾದ: ಮಸೀದಿ ಕಾಂಪೌಂಡ್‌ ಮೇಲೆ ಮಗನಿಂದ ಜೈ ಶ್ರೀರಾಮ್‌ ಬರಹ ಬರೆಸಿದ ತಂದೆ
Bagalkot Mosque
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Mar 06, 2026 | 10:59 PM

Share

ಬಾಗಲಕೋಟೆ, (ಮಾರ್ಚ್ 03): ಶಿವಾಜಿ ಜಯಂತಿ ಮೆರವಣಿ ವೇಳೆ ಕಲ್ಲು ತೂರಾಟ ಪ್ರಕರಣ (Stone Pelting Case) ಮಾಸುವ ಮುನ್ನವೇ ಬಾಗಲಕೋಟೆಯಲ್ಲಿ (Bagalkot) ಮತ್ತೊಂದು ಕೋಮು ಸೌಹಾರ್ದತೆ ಹಾಳುವ ಮಾಡುವ ಘಟನೆ ನಡೆದಿದೆ. ಹೌದು… ಮಸೀದಿ ಗೋಡೆ ಮೇಲೆ ವ್ಯಕ್ತಿಯೋರ್ವ ತನ್ನ ಮಗನ ಕೈಯಿಂದ ಜೈ ಶ್ರೀರಾಮ್‌ ಎಂದು ಬರೆಯಿಸಿದ್ದು, ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ಬಾಗಲಕೋಟೆಯ ಸೆಕ್ಟರ್ 44ರ ಮಸೀದಿ ಕಾಂಪೌಂಡ್‌ ಮೇಲೆ ಬರಹ ಬರೆದು ಬಳಿಕ ಆಟೋದಲ್ಲಿ ತೆರಳುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇನ್ನು ಈ ಪ್ರಕರಣ ಸಂಬಂಧ ನವನಗರ ಠಾಣೆ ಪೊಲೀಸರು, ಯಮನೂರಿ ಹಾಗೂ ಆತನ ಮಗನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮೊದಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಅಲ್ಲದೇ ಗೋಡೆ ಮೇಲೆ ಬರೆದಿದ್ದ ಬರಹವನ್ನು ನೀರು ಹಾಕಿ ಅಳಿಸಿ ಸಮಾಧಾನಪಡಿಸಿದ್ದಾರೆ. 12 ವರ್ಷದ ಮಗುವಿನ ಕೈಯಿಂದ ಮಸೀದಿ ಗೋಡೆ ಮೇಲೆ ಜೈ ಶ್ರೀರಾಮ್ ಎಂದು ಬರೆದಿರುವ ಸಂಬಂಧ ಲಾಡಖಾನ್ ಎಂಬುವರು ನೀಡಿದ ದೂರಿನ ಮೇರೆಗೆ ನವನಗರ ಠಾಣೆಯಲ್ಲಿ FIR ದಾಖಲಾಗಿದ್ದು, ಈ ಬಗ್ಗೆ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಕೈಗೊಂಡಿರುವ ಪೊಲೀಸರು, ಅಲರ್ಟ್ ಆಗಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ ಕಲ್ಲು ತೂರಾಟ: ಹಿಂದೂ ಯುವಕರ ಬಂಧನಕ್ಕೆ ಹೋಗಿದ್ದ ಪೊಲೀಸರನ್ನ ಅಡ್ಡಗಟ್ಟಿದ ಮಹಿಳೆಯರು

ಮೊನ್ನೆ ಅಷ್ಟೇ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮುಸ್ಲಿಮರು ಕಲ್ಲು, ಚಪ್ಪಲಿ ತೂರಿದ್ದರು. ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಹಿಂದೂ ಮುಸ್ಲಿಮರ ನಡುವಿನ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.  ಹಿಂದೂ ಸಂಘಟನೆಗಳು ಬಿಜೆಪಿ ನಾಯಕರು ಸಿಡಿದೆದ್ದು ಘಟನೆ ನಡೆದ ಸ್ಥಳದಿಂದಲೇ ಮತ್ತೆ ಶಿವಾಜಿ ಮೆರವಣಿಗೆ ಮಾಡುತ್ತೇವೆಂದು ಪಟ್ಟು ಹಿಡಿದಿದ್ದರು.  ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಪೊಲೀಸರು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರು. ಈ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಕರ್ನಾಟಕದ ಮ್ತತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
‘ಡೆವಿಲ್’ ಎದುರು ‘ಕರ್ನಾಟಕದ ಅಳಿಯ’ ತೆರೆ ಕಾಣಲಿಲ್ಲ: ಕಾರಣ ತಿಳಿಸಿದ ಪ್ರಥಮ್
‘ಡೆವಿಲ್’ ಎದುರು ‘ಕರ್ನಾಟಕದ ಅಳಿಯ’ ತೆರೆ ಕಾಣಲಿಲ್ಲ: ಕಾರಣ ತಿಳಿಸಿದ ಪ್ರಥಮ್
ಶಾಲಾ ಬಸ್ ನಿಲ್ಲಿಸಿ ಕಬ್ಬಿಣದ ರಾಡ್ ಹಿಡಿದು ಬೆದರಿಸಿದ ಯುವಕರು
ಶಾಲಾ ಬಸ್ ನಿಲ್ಲಿಸಿ ಕಬ್ಬಿಣದ ರಾಡ್ ಹಿಡಿದು ಬೆದರಿಸಿದ ಯುವಕರು
ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್
ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್
1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’
1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’
ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!
ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!
ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಏನು?
ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಏನು?
ಮೀಸಲು ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲೇಕೆ ನಿಮ್ಮ ತಾಯಿಗೆ ಚಿಕಿತ್ಸೆ?
ಮೀಸಲು ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲೇಕೆ ನಿಮ್ಮ ತಾಯಿಗೆ ಚಿಕಿತ್ಸೆ?
ಗುಡ್​ ನ್ಯೂಸ್: ಎಲ್‌ಪಿಜಿ ಹೊತ್ತು ಕತಾರ್​​ನಿಂದ ಮಂಗಳೂರಿಗೆ ಬಂದ ಹಡಗು
ಗುಡ್​ ನ್ಯೂಸ್: ಎಲ್‌ಪಿಜಿ ಹೊತ್ತು ಕತಾರ್​​ನಿಂದ ಮಂಗಳೂರಿಗೆ ಬಂದ ಹಡಗು
ಬಸ್ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್ ಎಂದು ಬರಹ
ಬಸ್ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್ ಎಂದು ಬರಹ
ನಿಮ್ಮ ಹಲ್ಲುಗಳ ವಯಸ್ಸು ನಿಮ್ಮ ವಯಸ್ಸಿಗಿಂತ ಹೆಚ್ಚಾಗಿದೆಯೇ?
ನಿಮ್ಮ ಹಲ್ಲುಗಳ ವಯಸ್ಸು ನಿಮ್ಮ ವಯಸ್ಸಿಗಿಂತ ಹೆಚ್ಚಾಗಿದೆಯೇ?