ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.
ಶಿವಾಜಿಯನ್ನು ಮುಸ್ಲಿಂ ವಿರೋಧಿ ಅನ್ನಬಾರದು: ಲಾಡ್ ಹೇಳುತ್ತಿದ್ದಂತೆಯೇ ಮೊಳಗಿತು ಜೈ ಶ್ರೀರಾಮ್ ಘೋಷಣೆ
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಇಂದು ಶಿವಾಜಿ ಪ್ರತಿಮೆ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ನಾನು ಮರಾಠ ಸಮುದಾಯದವನು. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ. ಹೀಗಾಗಿ ಇಲ್ಲಿ ಯಾರೂ ಇತಿಹಾಸದ ಬಗ್ಗೆ ಸುಳ್ಳು ಹೇಳಬಾರದು ಎಂದಿದ್ದಾರೆ.
- Ravi H Mooki
- Updated on: Dec 14, 2025
- 4:12 pm
ಬಾಗಲಕೋಟೆ: ಮೊಬೈಲ್ ಬಳಸಬೇಡಿ ಎಂದಿದ್ದಕ್ಕೆ ಹಾಸ್ಟೆಲ್ ಬಿಟ್ಟ SSLC ವಿದ್ಯಾರ್ಥಿನಿಯರು
ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಮೊಬೈಲ್ ಬಳಸಬೇಡಿ ಎಂಬ ಸಿಬ್ಬಂದಿಯ ಎಚ್ಚರಿಕೆಗೆ ನಾಲ್ವರು SSLC ವಿದ್ಯಾರ್ಥಿನಿಯರು ರಾತ್ರೋರಾತ್ರಿ ಹಾಸ್ಟೆಲ್ ತೊರೆದ ಘಟನೆ ನಡೆದಿದೆ. ಈ ಬಗ್ಗೆ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಾಲ್ಕೇ ಗಂಟೆಗಳಲ್ಲಿ, ನಾಪತ್ತೆಯಾದ ವಿದ್ಯಾರ್ಥಿನಿಯರನ್ನು ವಿಜಯಪುರದಲ್ಲಿ ಪತ್ತೆ ಹಚ್ಚಲಾಗಿದೆ.
- Ravi H Mooki
- Updated on: Dec 12, 2025
- 11:45 am
ಬಾಗಲಕೋಟೆ: ಪತ್ನಿ ಜೊತೆ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಡ್ಯಾನ್ಸ್
ಪತ್ನಿ ಮತ್ತು ಬಾಗಲಕೋಟೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಜೊತೆ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಇಳಕಲ್ ನಗರದ ವೀರಮಣಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಕಾರ್ಯಕ್ರಮದ ವೇಳೆ ಪತ್ನಿ ಜೊತೆಗಿನ ಶಾಸಕ ಡ್ಯಾನ್ಸ್ ವಿಡಿಯೋ ಫುಲ್ ವೈರಲ್ ಆಗಿದೆ. 'ನಾ ಡ್ರೈವರ್, ನಿ ನನ್ನ ಲವರ್' ಸಾಂಗ್ಗೆ ಶಾಸಕರು ಹೆಜ್ಜೆ ಹಾಕುತ್ತಿದ್ದಂತೆ ನೆರೆದಿದ್ದವರು ಹುಚ್ಚೆದ್ದು ಕುಣಿದಿದ್ದಾರೆ.
- Ravi H Mooki
- Updated on: Dec 7, 2025
- 12:39 pm
HIV ಪಾಸಿಟಿವಿಟಿ ರೇಟಿಂಗ್ನಲ್ಲಿ ಕರ್ನಾಟಕದಲ್ಲೇ ಬಾಗಲಕೋಟೆ ನಂಬರ್ 1
ಬಾಗಲಕೋಟೆ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಐವಿ ಪ್ರಮಾಣ ಕಡಿಮೆಯಾಗಿದೆ. ಮೊದಲನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಆದರೆ ರಾಜ್ಯದಲ್ಲೇ ಪಾಸಿಟಿವಿಟಿ ರೇಟ್ನಲ್ಲಿ ಇಂದಿಗೂ ಬಾಗಲಕೋಟೆ ನಂಬರ್ ಒನ್ ಸ್ಥಾನದಲ್ಲಿದೆ. ಸದ್ಯ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳು ಜನರ ನಿದ್ದೆಗೆಡಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.
- Ravi H Mooki
- Updated on: Dec 3, 2025
- 6:57 pm
ಬಾಗಲಕೋಟೆ ವಿಜಯಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರು ಸಾವು
ಜಮಖಂಡಿಯ ಸಿದ್ದಾಪುರ ಗ್ರಾಮದ ಬಳಿ ಬಾಗಲಕೋಟೆ–ವಿಜಯಪುರ ಹೆದ್ದಾರಿಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ 1 ಗಂಟೆಯ ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಸಿದ್ದಾಪುರದವರೇ ಎಂಬುದು ಗೊತ್ತಾಗಿದೆ. ಜಮಖಂಡಿ ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Ravi H Mooki
- Updated on: Dec 3, 2025
- 9:39 am
ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ಹಿಂಸಾಚಾರ: ಕಿಡಿಗೇಡಿಗಳಿಗೆ ಖಾಕಿ ಶಾಕ್; 17 ಮಂದಿ ಅರೆಸ್ಟ್
ಬಾಗಲಕೋಟೆ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಆರೋಪಿಗಳಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಜೊತೆಗೆ ಘಟನೆಗೆ ಕಾರಣರಾದವರು ರೈತರಲ್ಲ, ಕಿಡಿಗೇಡಿಗಳು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ವಿಡಿಯೋ ಸಾಕ್ಷ್ಯ ಆಧರಿಸಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
- Ravi H Mooki
- Updated on: Nov 26, 2025
- 4:20 pm
ಚಡ್ಡಿ ಹೋಗಿ ಲುಂಗಿ ಗ್ಯಾಂಗ್ ಬಂತು: ಕಳ್ಳರ ಹಾವಳಿಗೆ ಆತಂಕಗೊಂಡ ಬಾಗಲಕೋಟೆ ಜನ
ಬಾಗಲಕೋಟೆ ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಅಮೀನಗಡದಲ್ಲಿ ಲುಂಗಿ ಗ್ಯಾಂಗ್ ಆಟೋ ಚಾಲಕನ ಮನೆಯಲ್ಲಿ 8 ಲಕ್ಷ ರೂ ಕಳ್ಳತನ ನಡೆದಿದೆ. ಈ ಹಿಂದೆ ಮುಧೋಳದಲ್ಲಿ ಚಡ್ಡಿ ಗ್ಯಾಂಗ್ ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿತ್ತು. ಇಂತಹ ಗ್ಯಾಂಗ್ಗಳಿಂದ ಸಾರ್ವಜನಿಕರಲ್ಲಿ ಭಯ ಹೆಚ್ಚಿದ್ದು, ಪೊಲೀಸರು ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
- Ravi H Mooki
- Updated on: Nov 25, 2025
- 7:24 pm
ಬ್ಯಾಂಕ್ಗಳ ರಾಬರಿ ಪ್ರಕರಣ: ಅಂತಾರಾಜ್ಯ ಕಳ್ಳರು ಅಂದರ್; ಹಣ, ಬಂಗಾರ ಸೀಜ್
ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಎಸ್ಬಿಐ ಕಾಕನೂರು ಮತ್ತು ಕುಳಗೇರಿ ವೀರಪುಲಿಕೇಶಿ ಬ್ಯಾಂಕ್ ದರೋಡೆ ಪ್ರಕರಣಗಳ ಸಂಬಂಧ ಬಾಗಲಕೋಟೆ ಜಿಲ್ಲಾ ಪೊಲೀಸರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದ್ದು, ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.
- Ravi H Mooki
- Updated on: Nov 25, 2025
- 12:41 pm
ವೇದಿಕೆ ಮೇಲೆ ಸಚಿವ ಸಂತೋಷ್ ಲಾಡ್ ಬಳಿಯೇ ನಿಮ್ಮ ಹೆಸರೇನೆಂದು ಕೇಳಿದ ಯುವಕ
ಮುಧೋಳದ ಕುಮಕಾಲೆ ಖಾಸಗಿ ಪಿಯುಸಿ ಕಾಲೇಜಿಂದ ಸೈಕ್ಲಿಂಗ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸೈಕ್ಲಿಂಗ್ ಪಟು ಭಾಷಣ ಮಾಡುವಾಗ ಅವರ ಪಕ್ಕದಲ್ಲೇ ಸಚಿವ ಸಂತೋಷ ಲಾಡ್ ನಿಂತಿದ್ದರು. ಭಾಷಣ ಮಾಡುವಾಗ ಆ ಯುವಕ ಸಂತೋಷ್ ಲಾಡ್ ಅವರ ಬಳಿ ತಮ್ಮ ಹೆಸರು ಏನೆಂದು ಕೇಳಿದ್ದಾರೆ. ನಾನು ನಿಮ್ಮನ್ನ ಟಿವಿ, ಪೇಪರಲ್ಲಿ ನೋಡಿದ್ದೇನೆ, ಆದರೆ ನಿಮ್ಮ ಹೆಸರು ಮರೆತುಹೋಯಿತು ಎಂದ ಸೈಕ್ಲಿಂಗ್ ಪಟುಗೆ ನಗುತ್ತಲೇ ನನ್ನ ಹೆಸರು ಸಂತೋಷ್ ಲಾಡ್ ಎಂದು ಹೇಳಿದ ಸಚಿವರ ಮಾತಿಗೆ ಅಲ್ಲಿ ಸೇರಿದ್ದವರೆಲ್ಲ ನಗಲಾರಂಭಿಸಿದರು. ಆದರೂ ಸಚಿವರು ಕೋಪಗೊಳ್ಳದೆ ನಗುತ್ತಲೇ ಆ ಯುವಕನ ಹೆಗಲ ಮೇಲೆ ಕೈಹಾಕಿ ಆತ ಮಾಡಿದ ಭಾಷಣ ಕೇಳಿದ್ದಾರೆ.
- Ravi H Mooki
- Updated on: Nov 22, 2025
- 7:45 pm
ಬಾಗಲಕೋಟೆ: ದೇಣಿಗೆ ಕೊಡಿಸುವ ನೆಪದಲ್ಲಿ ವಂಚನೆ: ಎರಡು ದಿನದಲ್ಲೇ 2 ಕೋಟಿ ರೂ ಪಂಗನಾಮ
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಜಯ ಭಾರತ ಮಾತೆ ಎಂಬ NGO ಸಂಸ್ಥೆಗೆ 2 ಕೋಟಿಗೂ ಹೆಚ್ಚು ಹಣವನ್ನು ಅಂತಾರಾಜ್ಯ ಖದೀಮರು ವಂಚಿಸಿದ್ದಾರೆ. ದೇಣಿಗೆ ನೀಡುವುದಾಗಿ ನಂಬಿಸಿ, ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದ್ದಾರೆ. ಸದ್ಯ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Ravi H Mooki
- Updated on: Nov 20, 2025
- 5:34 pm
ಬಾಗಲಕೋಟೆ: ಲೋಕಾಪುರ ಬಳಿ ಹಳ್ಳಕ್ಕೆ ನುಗ್ಗಿದ KSRTC ಬಸ್
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪೆಟ್ಲೂರು ಕ್ರಾಸ್ ಬಳಿ KSRTC ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ನುಗ್ಗಿದೆ. ಸವದತ್ತಿಯಿಂದ ಮಹಾರಾಷ್ಟ್ರದ ಮಿರಜ್ಗೆ ಹೊರಟಿದ್ದ ಈ ಬಸ್ ಅಪಘಾತದಲ್ಲಿ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Ravi H Mooki
- Updated on: Nov 17, 2025
- 2:09 pm
ಬಾಗಲಕೋಟೆ ಕಬ್ಬು ಬೆಳೆಗಾರರ ಹೋರಾಟ ಕೇಸ್ಗೆ ಟ್ವಿಸ್ಟ್: ಬೆಂಕಿ ಹಚ್ಚುತ್ತಿರುವ ವಿಡಿಯೋ ವೈರಲ್
ಬಾಗಲಕೋಟೆಯ ಮುಧೋಳದಲ್ಲಿ ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ನಡೆಯುತ್ತಿದ್ದ ರೈತರ ಪ್ರತಿಭಟನೆ ವಿಕೋಪಕ್ಕೆ ತಿರುಗಿ, 20ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆ ಸಂಬಂಧ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಎಫ್ಐಆರ್ಗಳು ದಾಖಲಾಗಿದ್ದು, 150ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
- Ravi H Mooki
- Updated on: Nov 16, 2025
- 7:12 pm