ಶಾಸಕ ಯತ್ನಾಳ್ ಪುತ್ರನ ಆರತಕ್ಷತೆಯಲ್ಲಿ ಜನವೋ ಜನ!: ವಿವಿಧ ಗಣ್ಯರು, ಮಠಾಧೀಶರು ಭಾಗಿ
ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ರ ರಾಮನಗೌಡ ಮತ್ತು ಅಬೋಲಿ ಅವರ ಆರತಕ್ಷತೆ ಅದ್ದೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ವಿವಿಧ ಮಠಾಧೀಶರು, ರಾಜಕಾರಣಿಗಳು ಹಾಗೂ ಗಣ್ಯರು ಆಗಮಿಸಿ ನವದಂಪತಿಗಳನ್ನು ಹಾರೈಸಿದರು. ಕಲಾವಿದರ ಸ್ವಾಗತದೊಂದಿಗೆ ವಧು-ವರರು ಆಗಮಿಸಿ, ಮಂತ್ರ-ಘೋಷಗಳ ಮಧ್ಯೆ ಹಾರ ಬದಲಾಯಿಸಿಕೊಂಡರು.
ವಿಜಯಪುರ, ಮಾರ್ಚ್ 15: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ರ ರಾಮನಗೌಡ ಅವರ ಅದ್ದೂರಿ ವಿವಾಹ ಆರತಕ್ಷತೆ ಕಾರ್ಯಕ್ರಮವು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಜರುಗಿತು. ರಾಮನಗೌಡ ಹಾಗೂ ಅಬೋಲಿ ಅವರ ವಿವಾಹೋತ್ಸವದ ಆರತಕ್ಷತೆಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ನಾಡಿನ ವಿವಿಧ ಮಠಾಧೀಶರು, ರಾಜಕಾರಣಿಗಳು ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸಿ ನೂತನ ದಂಪತಿಗಳನ್ನು ಶುಭ ಹಾರೈಸಿದ್ದಾರೆ. ಮಂತ್ರ-ಘೋಷಗಳ ಮಧ್ಯೆ ವಧು-ವರರು ಪರಸ್ಪರ ಹಾರ ಬದಲಾಯಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್ ಅವರ ನೃತ್ಯ ವಿಶೇಷವಾಗಿತ್ತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
