AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ

ರಾಜೇಶ್ ದುಗ್ಗುಮನೆ
|

Updated on: Nov 20, 2026 | 10:33 PM

Share

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಕಳಪೆ ಆಯ್ಕೆ ಪ್ರಕ್ರಿಯೆ ತೀವ್ರ ನಾಟಕೀಯ ತಿರುವು ಪಡೆದಿದೆ. ಮನೆಮಂದಿಯ ಸಮ್ಮತಿಯೊಂದಿಗೆ ರಾಣಿ ಮತ್ತು ಮಾಜಿ ಯುವರಾಣಿಯರನ್ನೇ ಜೈಲಿಗೆ ನೂಕಲಾಗಿದ್ದು, ಕೆಲ ಸ್ಪರ್ಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾನು ಹೋಗೋದೇ ಇಲ್ಲ’ ಎಂಬ ಆಕ್ರೋಶದ ಮಾತುಗಳು ಕೇಳಿಬಂದಿದ್ದು, ಮಹಾರಾಣಿಯ ಜೈಲು ವಾಸದ ನಿರ್ಧಾರದಿಂದ ಸ್ಪರ್ಧಿಗಳ ನಡುವೆ ಬಿರುಕು ಮೂಡಿದೆ.

ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಕಳಪೆ ಆಯ್ಕೆ ಪ್ರಕ್ರಿಯೆ ತೀವ್ರ ಕುತೂಹಲ ಮತ್ತು ನಾಟಕೀಯತೆಗೆ ಕಾರಣವಾಗಿದೆ. ಈ ವಾರದ ಕಳಪೆ ಪ್ರದರ್ಶನಕ್ಕಾಗಿ ಮನೆಮಂದಿ ರಾಣಿ ಮತ್ತು ಮಾಜಿ ಯುವರಾಣಿಯರನ್ನೇ ಜೈಲಿಗೆ ನೂಕುವ ನಿರ್ಧಾರ ಕೈಗೊಂಡಿದ್ದಾರೆ.

ಸೌಂದರ್ಯ, ಗಾನ್ವಿ, ಆಸಿಯಾ ಕಳಪೆ ಎಂದು ಆಯ್ಕೆ ಮಾಡುವ ಬಗ್ಗೆ ಚರ್ಚೆಗಳು ನಡೆದವು. ‘ಮೂರು ಜನನ್ನಾ ಕಳಪೆ ಕಳಿಸಿರಿ’ ಎಂದು ಕೆಲವರು ಹೇಳಿದರೆ, ‘ಮೂರು ಜನಕ್ಕೆ ಕಳಪೆ ಕೊಡೋಕೆ ಆಗಲ್ಲ’ ಎಂದು ಮತ್ತೆ ಕೆಲವರು ವಿರೋಧಿಸಿದರು. ಅಂತಿಮವಾಗಿ ಇಡೀ ಮನೆಮಂದಿಯ ಸಮ್ಮತಿಯೊಂದಿಗೆ, ಈ ವಾರ ಮಹಾರಾಣಿನೇ ಜೈಲು ಸೇರುವಂತಾಗಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಈ ರೀತಿ ಆಗಿದ್ದು ಇದೇ ಮೊದಲು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More