ಪತ್ರಿಕೋದ್ಯಮಕ್ಕೆ ಕಾಲಿಟ್ಟು ಏಳು ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Devil Trailer: ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷ; ಇದು ‘ಡೆವಿಲ್’ ನಿಜರೂಪ
ಡೆವಿಲ್ ಸಿನಿಮಾ ಟ್ರೇಲರ್: ‘ಡೆವಿಲ್’ ಸಿನಿಮಾಗೆ ಪ್ರಕಾಶ್ ನಿರ್ದೇಶನ ಮಾಡುವುದರಿಂದ ನಿರೀಕ್ಷೆ ಹೆಚ್ಚಿದೆ. ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿದ್ದಾರೆ. ಅವರು ಇಲ್ಲದೆ ಅಭಿಮಾನಿಗಳು ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ ರಿಲೀಸ್ ಆದ ಹಾಡುಗಳು ಗಮನ ಸೆಳೆದಿವೆ. ಈಗ ಟ್ರೇಲರ್ ರಿಲೀಸ್ ಆಗಿದ್ದು ನಿರೀಕ್ಷೆ ಹೆಚ್ಚಿದೆ.
- Rajesh Duggumane
- Updated on: Dec 5, 2025
- 10:18 am
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟೂ ದಿನ ಸಾಕಷ್ಟು ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಆದರೆ, ಇತ್ತೀಚೆಗೆ ಅವರ ಆಟ ಏಕೋ ಡಲ್ ಆಗುತ್ತಿದೆ. ಈಗ ರಕ್ಷಿತಾ ವಿರುದ್ಧ ಇಡೀ ಮನೆ ತಿರುಗಿಬಿದ್ದಿದೆ. ಇದಕ್ಕೆ ಕಾರಣ ಆಗಿದ್ದು ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರ.
- Rajesh Duggumane
- Updated on: Dec 5, 2025
- 8:47 am
‘ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ’; ರಿಷಬ್ಗೆ ಅಭಯ ನೀಡಿದ ದೈವ
ರಿಬಷ ಶೆಟ್ಟಿ ಅವರು ದೈವದ ಬಗ್ಗೆ ಅಪಾರ ಭಕ್ತಿ ಹೊಂದಿದವರು. ಅವರು ಈಗ ಪಂಜುರ್ಲಿಗೆ ಹರಕೆ ಕೋಲ ನೀಡಿ ಸಂತುಷ್ಟಗೊಂಡಿದ್ದಾರೆ. ಈ ವೇಳೆ ದೈವವು ನಿನ್ನ ಪರವಾಗಿ ಇರೋದಾಗಿ ಅಭಯ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.
- Rajesh Duggumane
- Updated on: Dec 5, 2025
- 8:30 am
ಮೊದಲ ಬಾರಿ ಕಾವ್ಯಾ ವಿರುದ್ಧ ಗಿಲ್ಲಿ ಅಸಮಾಧಾನ; ರಕ್ಷಿತಾಗೆ ಹೊಡೆಯೋದೊಂದೇ ಬಾಕಿ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ-ಕಾವ್ಯಾ ನಡುವೆ ಭಾರಿ ಗಲಾಟೆ ನಡೆದಿದೆ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಕಾವ್ಯಾ ಮಾಡಿದ ನಿರ್ಧಾರಗಳಿಂದ ತಂಡ ಸೋಲನುಭವಿಸಿತು. ಚಿಕ್ಕ ಬಾಲ್ಗಳಿಗಾಗಿ ಹಟ ಹಿಡಿದ ಕಾವ್ಯಾ ನಿರ್ಧಾರ ಗಿಲ್ಲಿಗೆ ಅಸಮಾಧಾನ ತಂದಿದೆ. ಕ್ಯಾಪ್ಟನ್ ಆಗುವ ಅವಕಾಶ ಕಳೆದುಕೊಂಡ ಗಿಲ್ಲಿ ಅವರು ಕಾವ್ಯಾ ವಿರುದ್ಧ ನೇರವಾಗಿ ಸಿಟ್ಟು ಹೊರಹಾಕಿದ್ದಾರೆ.
- Rajesh Duggumane
- Updated on: Dec 5, 2025
- 7:34 am
ಅರ್ಹತೆ ಪಡೆಯದಿದ್ದರೂ ಅನುಭವಿಸೋ ಹಂಬಲ; ಗಿಲ್ಲಿ ನಟ ತಿದ್ದಿಕೊಳ್ಳೋದು ಯಾವಾಗ?
ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ, ಕ್ಯಾಪ್ಟನ್ ಅರ್ಹತೆ ಇಲ್ಲದಿದ್ದರೂ ಕ್ಯಾಪ್ಟನ್ ರೂಂ ಬಳಸಿದ್ದಾರೆ. ಇದು ಬಿಗ್ ಬಾಸ್ ನಿಯಮಗಳ ಉಲ್ಲಂಘನೆಯಾಗಿದ್ದು, ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಅವರಿಂದ ಪಾಠ ಕಲಿಯುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾದ ಗಿಲ್ಲಿ ನಟ, ಸುದೀಪ್ ಹೊರತುಪಡಿಸಿ ಬೇರೆ ಯಾರ ಮಾತನ್ನೂ ಕೇಳುವುದಿಲ್ಲ.
- Rajesh Duggumane
- Updated on: Dec 5, 2025
- 7:03 am
ಸದ್ದಿಲ್ಲದೆ ಪೂರ್ಣಗೊಂಡಿತು ‘ಟಾಕ್ಸಿಕ್’ ಶೂಟ್? ಮುಂದಿರೋ ಪ್ಲ್ಯಾನ್ಗಳೇನು?
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಶೂಟಿಂಗ್ ಸದ್ದಿಲ್ಲದೆ ಪೂರ್ಣಗೊಂಡಿದೆ. ಈ ಕುರಿತು ಹರಡಿದ್ದ ಗಾಸಿಪ್ಗಳಿಗೆ ತೆರೆ ಬಿದ್ದಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಮಾರ್ಚ್ 19ರಂದು ಬಿಡುಗಡೆಯಾಗಲಿರುವ ಈ ಪ್ಯಾನ್-ವರ್ಲ್ಡ್ ಸಿನಿಮಾಕ್ಕಾಗಿ ಮೂರೂವರೆ ತಿಂಗಳ ಮೊದಲೇ ತಂಡ ಭರ್ಜರಿ ಪ್ರಚಾರಕ್ಕೆ ಸಿದ್ಧವಾಗಿದೆ. ಜನವರಿ 8ರಂದು ಯಶ್ ಜನ್ಮದಿನದಂದು ಟೀಸರ್ ಬಿಡುಗಡೆಯ ನಿರೀಕ್ಷೆಯಿದೆ.
- Rajesh Duggumane
- Updated on: Dec 4, 2025
- 3:02 pm
ಮದುವೆ ವಿಷಯದಲ್ಲಿ ಮೌನ ಮುರಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು ಮದುವೆ ವಿಷಯ ಇತ್ತೀಚೆಗೆ ಸಾಕಷ್ಟು ಹರಿದಾಡಿದೆ. ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.
- Rajesh Duggumane
- Updated on: Dec 4, 2025
- 2:21 pm
ಸಿನಿಮಾ ಶೂಟಿಂಗ್ ವೇಳೆ ಕುಸಿದು ಬಿದ್ದು ಕನ್ನಡದ ನಿರ್ದೇಶಕನ ಸಾವು
ಸಂಗೀತ್ ಸಾಗರ್ ಶಿವಮೊಗ್ಗದಲ್ಲಿ ‘ಪಾತ್ರಧಾರಿ’ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಇಡೀ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಈ ವೇಳೆ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸದ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿಯೇ ಸಾಗರ್ ಮೃತದೇಹವನ್ನು ಇಡಲಾಗಿದೆ.
- Rajesh Duggumane
- Updated on: Dec 4, 2025
- 12:58 pm
ಸಮಂತಾ ಬಳಿಕ ಮದುವೆಗೆ ರೆಡಿ ಆದ ದಕ್ಷಿಣದ ಮತ್ತೋರ್ವ ಸ್ಟಾರ್ ನಟಿ
ನಟಿ ಸಮಂತಾ ರುತ್ ಪ್ರಭು ನಿರ್ದೇಶಕ ರಾಜ್ ಅವರನ್ನು ವರಿಸಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಗ ದಕ್ಷಿಣದಲ್ಲಿ ಸೆಲೆಬ್ರಿಟಿ ಜೋಡಿ ಮದುವೆಗೆ ರೆಡಿ ಆಗಿದೆ. ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ಇವರ ವಿವಾಹ ನಡೆಯಲಿದೆ ಎನ್ನಲಾಗಿದೆ. ಇತ್ತೀಚೆಗೆ ಇವರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
- Rajesh Duggumane
- Updated on: Dec 4, 2025
- 11:55 am
ಈ ವಾರ ಬಿಗ್ ಬಾಸ್ನಿಂದ ಹೋಗೋ ವಿಚಾರವನ್ನು ಬಾಯ್ತಪ್ಪಿ ಹೇಳಿದ ರಜತ್?
ಬಿಗ್ ಬಾಸ್ ಕನ್ನಡ ಸೀಸನ್ 12ರ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಜತ್ ಹಾಗೂ ಚೈತ್ರಾ ಕುಂದಾಪುರ, ಮನೆಯಿಂದ ಹೊರ ಹೋಗುವ ಬಗ್ಗೆ ವದಂತಿಗಳಿವೆ. ಟಾಸ್ಕ್ ಒಂದರಲ್ಲಿ ಸೋತ ನಂತರ ರಕ್ಷಿತಾ ಮಾತಿಗೆ ರಜತ್, "ಇದೇ ವಾರ ನಾವು ಹೋದರೆ?" ಎಂದು ಪ್ರಶ್ನಿಸಿದ್ದು, ಈ ಊಹಾಪೋಹಗಳಿಗೆ ಕಾರಣ. ನಾಮಿನೇಟ್ ಆಗದಿದ್ದರೂ, ಇವರ ನಿರ್ಗಮನದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.
- Rajesh Duggumane
- Updated on: Dec 4, 2025
- 11:13 am
ಬಿಗ್ ಬಾಸ್ನಲ್ಲಿ ಅನವಾರಣವಾಯ್ತು ರಘು ಮತ್ತೊಂದು ಮುಖ
ಬಿಗ್ ಬಾಸ್ ಮನೆಯಲ್ಲಿ ರಘು ಮ್ಯೂಟಂಟ್ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರ ಮತ್ತೊಂದು ಮುಖ ರಿವೀಲ್ ಆಗಿದೆ.
- Rajesh Duggumane
- Updated on: Dec 4, 2025
- 10:10 am
ಧ್ರುವಂತ್ ಉಸ್ತುವಾರಿಯಿಂದ ತಾಳ್ಮೆ ಕಳೆದುಕೊಂಡ ರಕ್ಷಿತಾ ಶೆಟ್ಟಿ
ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಆಗಾಗ ಕಿರಿಕ್ಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಈಗ ಇದು ಬೇರೆ ಹಂತಕ್ಕೆ ಹೋಗಿದೆ. ಉದ್ದೇಶ ಪೂರ್ವಕವಾಗಿ ಧ್ರುವಂತ್ ಅವರು ರಕ್ಷಿತಾಗೆ ಮೋಸ ಮಾಡಿದರೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
- Rajesh Duggumane
- Updated on: Dec 4, 2025
- 9:47 am