AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ಎಂಟ್ರಿ? ರಾಜ್ ಮತ್ತು ಡಿಕೆ ಸಿನಿಮಾಗೆ ಹೆಚ್ಚಿದ ಹೈಪ್

ಸಮಂತಾ, ಸಲ್ಮಾನ್ ಖಾನ್, ರಾಜ್ ಮತ್ತು ಡಿಕೆ ಜೊತೆಯಾಗಿ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಘಟಾನುಘಟಿಗಳು ಒಂದಾದರೆ ಅಭಿಮಾನಿಗಳಿಗೆ ಖಂಡಿತವಾಗಿಯೂ ಭರ್ಜರಿ ಮನರಂಜನೆ ಸಿಗಲಿದೆ. ಸೂಪರ್ ಹೀರೋ ಕಥಾಹಂದರ ಇರುವ ಸಿನಿಮಾದ ಬಗ್ಗೆ ಮಾತುಕಥೆ ನಡೆಯುತ್ತಿದ್ದು, ಆ ಬಗ್ಗೆ ಇಲ್ಲಿದೆ ಮಾಹಿತಿ..

ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ಎಂಟ್ರಿ? ರಾಜ್ ಮತ್ತು ಡಿಕೆ ಸಿನಿಮಾಗೆ ಹೆಚ್ಚಿದ ಹೈಪ್
Salman Khan, Samantha
ಮದನ್​ ಕುಮಾರ್​
|

Updated on: Mar 09, 2026 | 10:43 PM

Share

ಬಾಲಿವುಡ್‌ನ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ದಕ್ಷಿಣದ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಲಿದ್ದಾರೆಯೇ? ಇಂತಹದೊಂದು ದೊಡ್ಡ ಸುದ್ದಿ ಈಗ ಚಿತ್ರರಂಗದಲ್ಲಿ ಕೌತುಕ ಮೂಡಿಸಿದೆ. ಖ್ಯಾತ ನಿರ್ದೇಶಕರಾದ ರಾಜ್ ಮತ್ತು ಡಿಕೆ (Raj & DK) ಸಿದ್ಧಪಡಿಸುತ್ತಿರುವ ಹೊಸ ಬಿಗ್ ಬಜೆಟ್ ಸಿನಿಮಾದಲ್ಲಿ ಸಮಂತಾ ಮತ್ತು ಸಲ್ಮಾನ್ ಖಾನ್ (Salman Khan) ಅವರು ಜೋಡಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೊಂದು ಸೂಪರ್ ಹೀರೋ ಸಿನಿಮಾ ಆಗಿರಲಿದ್ದು, ಈ ಪ್ರಾಜೆಕ್ಟ್ ಮೂಲಕ ಸಮಂತಾ ಅವರು ಬಾಲಿವುಡ್​​ಗೆ ಕಾಲಿಟ್ಟಂತಾಗುತ್ತದೆ.

‘ದಿ ಫ್ಯಾಮಿಲಿ ಮ್ಯಾನ್’ ರೀತಿಯ ಸೂಪರ್ ಹಿಟ್ ವೆಬ್ ಸರಣಿಗಳನ್ನು ನೀಡಿದ ರಾಜ್ ಮತ್ತು ಡಿಕೆ, ಈಗ ದೊಡ್ಡ ಪರದೆಯ ಮೇಲೆ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಸಮಂತಾ ಈಗಾಗಲೇ ಈ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು, ಅವರ ನಡುವೆ ಉತ್ತಮ ಬಾಂಧವ್ಯವಿದೆ. ಮೂಲಗಳ ಪ್ರಕಾರ, ಈ ಚಿತ್ರದ ಪ್ರಮುಖ ಪಾತ್ರಕ್ಕೆ ಸಮಂತಾ ಅವರೇ ಸೂಕ್ತ ಎಂದು ನಿರ್ದೇಶಕರು ಭಾವಿಸಿದ್ದಾರೆ. ಒಂದು ವೇಳೆ ಇದು ಅಧಿಕೃತವಾದರೆ, ಇದು ಸಮಂತಾ ಅವರ ಪೂರ್ಣ ಪ್ರಮಾಣದ ಹಿಂದಿ ಸಿನಿಮಾ ಆಗಲಿದೆ.

ಸದ್ಯ ಸಲ್ಮಾನ್ ಖಾನ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನೈಜ ಘಟನೆ ಆಧಾರಿತ ಈ ಚಿತ್ರವನ್ನು ಅಪೂರ್ವ ಲಖಿಯಾ ಅವರು ನಿರ್ದೇಶಿಸುತ್ತಿದ್ದು, ಚಿತ್ರಾಂಗದಾ ಸಿಂಗ್ ಕೂಡ ನಟಿಸಿದ್ದಾರೆ. ಇದು ಏಪ್ರಿಲ್ 17ರಂದು ತೆರೆಕಾಣಲಿದೆ. ಇದಲ್ಲದೆ, ಸಲ್ಮಾನ್ ಖಾನ್ ಅವರು ದಕ್ಷಿಣದ ಖ್ಯಾತ ನಿರ್ಮಾಪಕ ದಿಲ್ ರಾಜು ಅವರೊಂದಿಗೂ ಒಂದು ಸಿನಿಮಾ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.

ಇನ್ನು, ಸಮಂತಾ ಕೂಡ ನಟನೆಯ ಜೊತೆಗೆ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿದ್ದಾರೆ. ಅವರು ನಿರ್ಮಿಸಿ ನಟಿಸುತ್ತಿರುವ ತೆಲುಗಿನ ಆ್ಯಕ್ಷನ್ ಡ್ರಾಮಾ ‘ಮಾ ಇಂಟಿ ಬಂಗಾರಂ’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಬಿ.ವಿ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರವು ಮೇ 15ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಶಿವಮೊಗ್ಗದಲ್ಲಿ ಈ ಚಿತ್ರಕ್ಕೆ ಶೂಟಿಂಗ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಶಿವಮೊಗ್ಗದ ಹೊಸನಗರದಲ್ಲಿ ಸಮಂತಾ ಹೋಳಿ: ಗಂಡನ ಜೊತೆ ಸಂಭ್ರಮ

ಸಲ್ಮಾನ್ ಖಾನ್ ಮತ್ತು ಸಮಂತಾ ರುತ್ ಪ್ರಭು ಅವರು ಒಂದಾಗಿದ್ದೇ ಹೌದಾದರೆ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗಲಿದೆ. ಸಲ್ಲು, ಸ್ಯಾಮ್ ಮತ್ತು ರಾಜ್​-ಡಿಕೆ ಕಾಂಬಿನೇಷನ್ ಎಂದರೆ ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಆಗಲಿದೆ. ಸದ್ಯಕ್ಕೆ ಈ ಬಗ್ಗೆ ಅಂತೆ-ಕಂತೆ ಮಾತ್ರ ಕೇಳಿಬಂದಿದೆ. ಅಧಿಕೃತ ಘೋಷಣೆ ಹೊರಬರುವುದು ಬಾಕಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us