Bollywood

Bollywood

ಭಾರತದ ಸಮೃದ್ಧ ಚಲನಚಿತ್ರೋದ್ಯಮಗಳಲ್ಲಿ ಬಾಲಿವುಡ್ ಕೂಡ ಒಂದು. ಈವರೆಗೆ ಹಲವು ಸೂಪರ್ ಹಿಟ್ ಚಿತ್ರಗಳು ಇಲ್ಲಿ ಸಿದ್ಧಗೊಳ್ಳುತ್ತವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಆಗುತ್ತದೆ. 1930ರ ಸಂದರ್ಭದಲ್ಲಿ ಬಾಲಿವುಡ್ ಆರಂಭ ಆಯಿತು. ನಂತರ ಜಾಗತಿಕವಾಗಿ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಚಿತ್ರರಂಗವಾಗಿ ಬೆಳೆಯಿತು. ಬಾಲಿವುಡ್ನಲ್ಲಿ ಈವರೆಗೆ ಎಲ್ಲಾ ರೀತಿಯ ಸಿನಿಮಾಗಳು ಸಿದ್ಧಗೊಂಡಿವೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್ ಅವರಂತಹ ಅಪ್ರತಿಮ ನಟರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ನಲ್ಲಿ ರೊಮ್ಯಾಂಟಿಕ್ ಡ್ರಾಮಾದಿಂದ ಹಿಡಿದು ಆ್ಯಕ್ಷನ್ ಪ್ಯಾಕ್ಡ್ ಬ್ಲಾಕ್‌ಬಸ್ಟರ್‌ಗಳವರೆಗೆ ವೈವಿಧ್ಯಮಯ ಶ್ರೇಣಿಯ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಬಾಲಿವುಡ್‌ನ ಪ್ರಭಾವವು ಮನರಂಜನೆಯನ್ನು ಮೀರಿ ವಿಸ್ತರಿಸಿದೆ.

ಇನ್ನೂ ಹೆಚ್ಚು ಓದಿ

ಸಂಕಷ್ಟದಲ್ಲಿ ಖ್ಯಾತ ನಿರ್ಮಾಣ ಸಂಸ್ಥೆ; ಇದೆ 31 ಲಕ್ಷ ರೂಪಾಯಿ ಬಾಕಿ

‘ಮಿಷನ್ ರಾಣಿಗಂಜ್’ ನಿರ್ದೇಶಕ ಟೀನು ದೇಸಾಯಿಗೆ ನೀಡಬೇಕಿದ್ದ 33.13 ಲಕ್ಷ ರೂಪಾಯಿ ಹಣವನ್ನು ಪೂಜಾ ಎಂಟರ್​ಟೇನ್​ಮೆಂಟ್ ಬಾಕಿ ಉಳಿಸಿಕೊಂಡಿದೆ. ಇದರ ಜೊತೆಗೆ 250 ಸಿಬ್ಬಂದಿಗೆ ಒಟ್ಟೂ 31.78 ಲಕ್ಷ ರೂಪಾಯಿ ಹಣವನ್ನು ಅವರು ಪಾವತಿ ಮಾಡಬೇಕಿದೆ. ಮೊದಲಿನಿಂದಲೂ ಈ ಬಗ್ಗೆ ಬೇಡಿಕೆ ಇಡುತ್ತಾ ಬಂದರೂ ಅವರು ಇದನ್ನು ಪಾವತಿಸೋಕೆ ಮುಂದಾಗಿಲ್ಲ.

ಭಯೋತ್ಪಾದನೆ ನಂಟು ಇರುವ ಪಾಕ್ ​ವ್ಯಕ್ತಿ ಜತೆ ಮಾಧುರಿ ದೀಕ್ಷಿತ್​ ಕಾರ್ಯಕ್ರಮ? ಜನರ ಆಕ್ರೋಶ

ಪಾಕಿಸ್ತಾನ ಮೂಲದ ಇವೆಂಟ್​ ಮ್ಯಾನೇಜರ್​ ಆಗಿರುವ ರಿಹಾನ್​ ಸಿದ್ಧಿಖಿ ಮೇಲೆ ಭಾರತದ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ. ಅಂಥ ವ್ಯಕ್ತಿಯ ಜೊತೆ ಮಾಧುರಿ ದೀಕ್ಷಿತ್​ ಕೈಜೋಡಿಸುತ್ತಾರೆ ಎಂಬ ಸುದ್ದಿ ತಿಳಿದು ಎಲ್ಲರಿಗೂ ಶಾಕ್​ ಆಗಿದೆ. ಆಗಸ್ಟ್​ 16ರಂದು ರಿಹಾನ್​ ಸಿದ್ಧಿಖಿ ಆಯೋಜನೆ ಮಾಡಲಿರುವ ಕಾರ್ಯಕ್ರಮದಲ್ಲಿ ಮಾಧುರಿ ದೀಕ್ಷಿತ್​ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ಬಿಗ್​ ಬಾಸ್​ ಸ್ಪರ್ಧಿ ಹಿನಾ ಖಾನ್​ಗೆ 3ನೇ ಹಂತದ ಸ್ತನ ಕ್ಯಾನ್ಸರ್​; ಶಾಕಿಂಗ್​ ವಿಚಾರ ತಿಳಿಸಿದ ನಟಿ

ಹಿನಾ ಖಾನ್​ ಅವರ ಆರೋಗ್ಯದ ಕುರಿತಂತೆ ಕೆಲವು ಅಂತೆಕಂತೆಗಳು ಹರಡಲು ಶುರುವಾಗಿವೆ. ಅದು ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಅವರು ಸ್ವತಃ ಸ್ಪಷ್ಟನೆ ನೀಡಿದ್ದಾರೆ. ತಾವು ಸ್ತನ ಕ್ಯಾನ್ಸರ್​ಗೆ ಒಳಗಾಗಿರುವುದನ್ನು ಹಿನಾ ಖಾನ್​ ಖಚಿತಪಡಿಸಿದ್ದಾರೆ. ಅಲ್ಲದೇ ಶೀಘ್ರವೇ ತಾವು ಗುಣಮುಖರಾಗುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ವೇದಿಕೆಯಲ್ಲಿ ಹಿರಿಯ ಗಾಯಕಿ ಆಶಾ ಭೋಂಸ್ಲೆ ಪಾದ ತೊಳೆದು ನಮಸ್ಕರಿಸಿದ ಸೋನು ನಿಗಮ್

ಪದ್ಮ ವಿಭೂಷಣ ಆಶಾ ಭೋಂಸ್ಲೆ ಅವರ ಕುರಿತ ‘ಸ್ವರಸ್ವಾಮಿನಿ ಆಶಾ’ ಪುಸ್ತಕದ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಗಾಯಕ ಸೋನು ನಿಗಮ್ ಅವರು ಆಶಾ ಭೋಂಸ್ಲೆಯ ಪಾದಗಳನ್ನು ಪನ್ನೀರಿನಿಂದ ತೊಳೆದು ಆಶೀರ್ವಾದ ಪಡೆದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ್ಸಂಗಚಾಲಕ್ ಮೋಹನ್ ಭಾಗವತ್ ಪುಸ್ತಕ ಬಿಡುಗಡೆ ಮಾಡಿದರು.

ಶೂಟಿಂಗ್​ನಲ್ಲಿ ಗಾಯಗೊಂಡ ಪ್ರಿಯಾಂಕಾ ಚೋಪ್ರಾ; ವಿದೇಶದಲ್ಲಿ ಭಾರತದ ಮನೆಮದ್ದು

ಪ್ರಿಯಾಂಕಾ ಚೋಪ್ರಾ ಅವರು ವಿದೇಶದಲ್ಲಿ ನೆಲೆಸಿದ್ದರೂ ಕೂಡ ಭಾರತದ ಸಂಪ್ರದಾಯ ಮರೆತಿಲ್ಲ. ಚಿತ್ರೀಕರಣದ ವೇಳೆ ಗಾಯಗೊಂಡಿರುವ ಅವರು ಭಾರತೀಯ ಶೈಲಿಯ ಮನೆಮದ್ದು ಪ್ರಯೋಗಿಸಿದ್ದಾರೆ. ಆ ಬಗ್ಗೆ ತಮ್ಮ ಅಭಿಮಾನಿಗಳಿಗೂ ಅವರು ಮಾಹಿತಿ ನೀಡಿದ್ದಾರೆ. ‘ದ ಬ್ಲಫ್​’, ‘ಹೆಡ್ಸ್​ ಆಫ್​ ಸ್ಟೇಟ್​’ ಮುಂತಾದ ಸಿನಿಮಾಗಳಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ.

ತಮ್ಮಿಂದ ನಿರ್ಮಾಣ ಸಂಸ್ಥೆಗೆ ಭರ್ಜರಿ ನಷ್ಟ; ಅಕ್ಷಯ್ ಕುಮಾರ್​ಗೆ ಶುರುವಾಗಿದೆ ಚಿಂತೆ

ಅಕ್ಷಯ್ ಕುಮಾರ್ ಅವರು ವಶು ಭಗ್ನಾನಿಗೆ ಕರೆ ಮಾಡಿದ್ದಾರೆ. ‘ನಾವು ನಿರ್ಮಾಣ ಸಂಸ್ಥೆ ಜೊತೆ ಇರುತ್ತೇವೆ’ ಎನ್ನುವ ಭರವಸೆಯನ್ನು ಅಕ್ಷಯ್ ಕುಮಾರ್ ನೀಡಿದ್ದಾರೆ ಎನ್ನಲಾಗಿದೆ. ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ, ಡೇವಿಡ್ ಧವನ್ ಮೊದಲಾದವರು ವಶುಗೆ ಕರೆ ಮಾಡಿದ್ದಾರೆ.

ಅಕ್ಷಯ್​ ಕುಮಾರ್​ ಸಿನಿಮಾಗಳನ್ನು ನಿರ್ಮಿಸಿ, ಆಸ್ತಿ ಕಳೆದುಕೊಂಡ ನಿರ್ಮಾಪಕ

‘ಬೆಲ್​ಬಾಟಂ’, ‘ಕಟ್​ಪುಟ್ಲಿ’, ‘ಮಿಷನ್ ರಾಣಿಗಂಜ್​’, ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗಳಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದಾರೆ. ಈ ಎಲ್ಲ ಸಿನಿಮಾಗಳಿಗೆ ‘ಪೂಜಾ ಎಂಟರ್​ಟೇನ್ಮೆಂಟ್​’ ಸಂಸ್ಥೆಯ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗಳ ಸೋಲಿನ ಬಳಿಕ ಅವರಿಗೆ 250 ಕೋಟಿ ರೂಪಾಯಿ ಸಾಲ ಆಗಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ..

250 ಕೋಟಿ ರೂ. ಸಾಲದ ಸುಳಿಯಲ್ಲಿ ರಕುಲ್ ಪ್ರೀತ್ ಸಿಂಗ್ ಗಂಡ; ಆಸ್ತಿ ಮಾರಾಟ

ದೊಡ್ಡ ದೊಡ್ಡ ನಿರ್ಮಾಪಕರನ್ನು ಮದುವೆಯಾಗಿ ಖುಷಿಯಿಂದ ಸಂಸಾರ ಮಾಡುತ್ತಿರುವ ಅನೇಕ ನಟಿಯರು ಇದ್ದಾರೆ. ನಟಿ ರಕುಲ್​ ಪ್ರೀತ್​ ಸಿಂಗ್​ ಕೂಡ ಅದೇ ರೀತಿ ಲೆಕ್ಕಾಚಾರ ಆಗಿದ್ದರು ಎನಿಸುತ್ತದೆ. ಆದರೆ ಅವರನ್ನು ಮದುವೆ ಆಗಿರುವ ನಿರ್ಮಾಪಕ ಜಾಕಿ ಭಗ್ನಾನಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. 250 ಕೋಟಿ ರೂಪಾಯಿ ಸಾಲ ಆಗಿರುವುದರಿಂದ ಆಸ್ತಿ ಮಾರಿಕೊಂಡಿದ್ದಾರೆ!

ಖುಷಿಯಿಂದ ನಡೆಯಿತು ಸೋನಾಕ್ಷಿ ಸಿನ್ಹಾ-ಝಹೀರ್ ಇಖ್ಬಾಲ್ ಅಂತರ್​ಧರ್ಮೀಯ ವಿವಾಹ

ಸೋನಾಕ್ಷಿ ಸಿನ್ಹಾ ಮತ್ತು ಝಹೀರ್ ಇಖ್ಬಾಲ್ ಅವರದ್ದು ಅಂತರ್​ಧರ್ಮೀಯ ವಿವಾಹ. ಹಾಗಾಗಿ ಆರಂಭದಲ್ಲಿ ಸೋನಾಕ್ಷಿ ಅವರ ತಂದೆ ಶತ್ರುಘ್ನ ಸಿನ್ಹಾಗೆ ಇದು ಇಷ್ಟವಿರಲಿಲ್ಲ ಎಂದು ಸುದ್ದಿ ಹಬ್ಬಿತ್ತು. ಬಳಿಕ ಅವರು ಅದನ್ನು ತಳ್ಳಿ ಹಾಕಿದ್ದರು. ಇಂದು (ಜೂನ್​ 23) ಶತ್ರುಘ್ನ ಸಿನ್ಹಾ ಅವರು ಖುಷಿಯಿಂದಲೇ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.

ಮುಂದುವರಿದ ಕಂಗನಾ-ಅನ್ನು ಕಪೂರ್​ ಕಿರಿಕ್​; ಇಷ್ಟಕ್ಕೆಲ್ಲ ಕಾರಣ ಏನು?

ಕಂಗನಾ ರಣಾವತ್​ ಅವರು ಅನೇಕರ ಜೊತೆ ವಿವಾದ ಮಾಡಿಕೊಂಡಿದ್ದಾರೆ. ಅಂಥವರ ಪಟ್ಟಿಗೆ ಈಗ ಹಿರಿಯ ನಟ ಅನ್ನು ಕಪೂರ್​ ಕೂಡ ಸೇರ್ಪಡೆ ಆಗಿದ್ದಾರೆ. ಇಬ್ಬರ ನಡುವೆ ಕಿರಿಕ್​ ಶುರುವಾಗಿದೆ. ಕಂಗನಾಗೆ ಅನ್ನು ಕಪೂರ್​ ಒಂದು ಸಲಹೆ ನೀಡಿದ್ದಾರೆ. ‘ಈಗ ನಿಮಗೆ ದೊಡ್ಡ ಜವಾಬ್ದಾರಿ ಇದೆ. ಸಾಧ್ಯವಾದರೆ ನಿಮ್ಮ ತಾಯ್ನಾಡಿಗಾಗಿ ಉತ್ತಮ ಕೆಲಸಗಳನ್ನು ಮಾಡಿ. ಅನಗತ್ಯ ವಿಚಾರದ ಬಗ್ಗೆ ನೀವು ಗಮನ ಕೊಡಬೇಡಿ’ ಎಂದು ಅವರು ಕಂಗನಾಗೆ ಕಿವಿಮಾತು ಹೇಳಿದ್ದಾರೆ.