ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್ ಇಂಟರ್ನೆಟ್) ಸಂಸ್ಥೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ.
‘ಬ್ಯಾಂಗಲ್ ಬಂಗಾರಿ ಹಾಡು ಸಿಎಂ ತನಕ ತಲುಪಿದೆ’: ಯುವ ರಾಜ್ಕುಮಾರ್
ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಚಿತ್ರ ರಿಲೀಸ್ಗೆ ಸಜ್ಜಾಗಿದೆ. ಈ ಸಿನಿಮಾದ ‘ಬ್ಯಾಂಗಲ್ ಬಂಗಾರಿ’ ಸಾಂಗ್ ಸೂಪರ್ ಹಿಟ್ ಆಗಿದೆ. ಚರಣ್ ರಾಜ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ‘ಎಕ್ಕ’ ಸಿನಿಮಾದ ತಂಡದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು.
- Madan Kumar
- Updated on: Jul 15, 2025
- 10:49 pm
ದರ್ಶನ್ ಫ್ಯಾನ್ಸ್ ಸಮ್ಮುಖದಲ್ಲಿ ಬಿಡುಗಡೆ ಆಗಲಿದೆ ‘ದಿ ಡೆವಿಲ್’ ಮೋಷನ್ ಪೋಸ್ಟರ್
ಜುಲೈ 19ರ ಶನಿವಾರ ರಾತ್ರಿ 8 ಗಂಟೆಗೆ ‘ದಿ ಡೆವಿಲ್’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಆಗಲಿದೆ. ಅತ್ತಿಬೆಲೆಯಲ್ಲಿ ನಟ ದರ್ಶನ್ ಅವರ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೇ, ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಲಿದೆ.
- Madan Kumar
- Updated on: Jul 15, 2025
- 10:16 pm
ಶೂಟಿಂಗ್ ಬಿಟ್ಟು ಸಿನಿಮಾ ನೋಡಲು ಹೋದ ಪ್ರಭಾಸ್, ಪ್ರಶಾಂತ್ ನೀಲ್; ಯಾವುದು ಆ ಚಿತ್ರ?
ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಅವರು ಬೇರೆ ಬೇರೆ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ನಡುವೆಯೂ ಕೂಡ ಬಿಡುವು ಮಾಡಿಕೊಂಡು ಅವರಿಬ್ಬರು ಸಿನಿಮಾ ವೀಕ್ಷಿಸಲು ತೆರಳಿದ್ದಾರೆ. ಹೈದರಾಬಾದ್ನ ಮಲ್ಟಿಪ್ಲೆಕ್ಸ್ಗೆ ತೆರಳಿದ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಅವರು ಹಾಲಿವುಡ್ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.
- Madan Kumar
- Updated on: Jul 15, 2025
- 7:26 pm
ವಿದ್ಯಾ ಬಾಲನ್ ಬೋಲ್ಡ್ ಅವತಾರ; 46ನೇ ವಯಸ್ಸಿನಲ್ಲಿ ಕಣ್ಣು ಕುಕ್ಕಿದ ನಟಿ
ಖ್ಯಾತ ನಟಿ ವಿದ್ಯಾ ಬಾಲನ್ ಅವರು ಹೊಸ ಅವತಾರದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಅವರ ಬೋಲ್ಡ್ ಗೆಟಪ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ. ಆದರೆ ಕೆಲವರು ಟೀಕೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾ ಬಾಲನ್ ಅವರ ಈ ಹೊಸ ಫೋಟೋಗಳು ವೈರಲ್ ಆಗಿವೆ.
- Madan Kumar
- Updated on: Jul 15, 2025
- 6:25 pm
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಜುಲೈ 14ರಂದು ಬೆಂಗಳೂರಿನಲ್ಲಿ ನಟಿ ಬಿ. ಸರೋಜಾದೇವಿ ಅವರು ನಿಧನರಾದರು. ಹಲವು ಸೆಲೆಬ್ರಿಟಿಗಳು, ರಾಜಕೀಯ ಕ್ಷೇತ್ರದ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು. ಇಂದು (ಜುಲೈ 15) ಹೂವಿನ ಪಲ್ಲಕ್ಕಿಯಲ್ಲಿ ಸರೋಜಾದೇವಿ ಅವರ ಪಾರ್ಥಿವ ಶರೀರವನ್ನು ತೋಟಕ್ಕೆ ತರಲಾಯಿತು. ತೋಟದಲ್ಲಿ ಕುಟುಂಬಸ್ಥರು ಅಂತಿಮ ಸಂಸ್ಕಾರ ಮಾಡಿದರು.
- Madan Kumar
- Updated on: Jul 15, 2025
- 4:54 pm
ಇಟಲಿಯಲ್ಲಿ ರಜೆಯ ಮಜಾ ಸವಿದ ನಟಿ ಮಲೈಕಾ ಅರೋರಾ
ಸಿನಿಮಾ, ಜಾಹೀರಾತು ಕೆಲಸಗಳಿಂದ ಬ್ರೇಕ್ ಪಡೆದ ಮಲೈಕಾ ಅರೋರಾ ಅವರು ಇಟಲಿಗೆ ತೆರಳಿದ್ದಾರೆ. ಅಲ್ಲಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಜೊತೆ ಪುತ್ರ ಅರ್ಹಾನ್ ಕೂಡ ಇದ್ದಾರೆ.
- Madan Kumar
- Updated on: Jul 15, 2025
- 4:35 pm
ಬಾಲಿವುಡ್ ಬೆಡಗಿ, ನಟಿ ಅನನ್ಯಾ ಪಾಂಡೆ ಬೋಲ್ಡ್ ಫೋಟೋಶೂಟ್
ಅನನ್ಯಾ ಪಾಂಡೆ ಅವರು ಸಖತ್ ಆಗಿ ಮಿಂಚುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಖ್ಯಾತಿ ಹೆಚ್ಚಾಗುತ್ತಿದೆ. ಹಿಂದಿ ಚಿತ್ರರಂಗದಲ್ಲಿ ಅನನ್ಯಾ ಪಾಂಡೆ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.
- Madan Kumar
- Updated on: Jul 15, 2025
- 4:35 pm
‘ಸರೋಜಾದೇವಿ ರೀತಿಯ ವ್ಯಕ್ತಿ ಮತ್ತೆ ಸಿಗಲ್ಲ’: ಭಾವುಕರಾದ ಅರ್ಜುನ್ ಸರ್ಜಾ
ನಟಿ ಬಿ. ಸರೋಜಾದೇವಿ ಅವರು ನಿಧನರಾಗಿದ್ದು, ಅವರ ಅಂತಿಮ ದರ್ಶನ ಪಡೆಯಲು ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಬಹುಭಾಷಾ ನಟ ಅರ್ಜುನ್ ಸರ್ಜಾ ಅವರು ಕೂಡ ಅಂತಿಮ ದರ್ಶನ ಪಡೆದು, ಸರೋಜಾದೇವಿ ಬಗ್ಗೆ ಮಾತನಾಡಿದರು. ಸರೋಜಾದೇವಿಯ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಅರ್ಜುನ್ ಸರ್ಜಾ ಅವರು ವಿವರಿಸಿದರು.
- Madan Kumar
- Updated on: Jul 14, 2025
- 10:52 pm
ಬಿ. ಸರೋಜಾದೇವಿ ನಿಧನ; ಚಂದನವನದ ಅಂತಿಮ ನಮನ
ಬಿ. ಸರೋಜಾದೇವಿ ಅವರ ನಿಧನದ ಸುದ್ದಿ ಕೇಳಿ ಕನ್ನಡ ಚಿತ್ರರಂಗದಲ್ಲಿ ಶೋಕ ಆವರಿಸಿದೆ. ಅನೇಕ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
- Madan Kumar
- Updated on: Jul 14, 2025
- 10:24 pm
ಬಿ.ಸಿ. ಪಾಟೀಲ್ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಖ್ಯಾತ ಕಲಾವಿದೆ ಬಿ. ಸರೋಜಾದೇವಿ ಅವರು ನಿಧನರಾಗಿದ್ದು, ಬೆಂಗಳೂರಿನಲ್ಲಿ ಬಿ.ಸಿ. ಪಾಟೀಲ್ ಅವರು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತಾಡಿದರು. ತಮ್ಮ ಮತ್ತು ಬಿ. ಸರೋಜಾದೇವಿ ನಡುವಿನ ಒಡನಾಟದ ಬಗ್ಗೆ ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
- Madan Kumar
- Updated on: Jul 14, 2025
- 8:08 pm
‘ನನ್ನ ಮತ್ತೊಬ್ಬ ತಾಯಿ’: ಬಿ. ಸರೋಜಾದೇವಿ ನೆನೆದು ಭಾವುಕರಾದ ಕಮಲ್ ಹಾಸನ್
ಬಹುಭಾಷಾ ನಟಿ ಬಿ. ಸರೋಜಾದೇವಿ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ತಮಿಳು ಚಿತ್ರರಂಗದ ಸ್ಟಾರ್ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಸಂತಾಪ ಸೂಚಿಸಿದ್ದಾರೆ. ಸರೋಜಾದೇವಿ ಅವರ ಜೊತೆಗಿನ ಒಡನಾಟವನ್ನು ಕಮಲ್ ಹಾಸನ್ ಸ್ಮರಿಸಿಕೊಂಡಿದ್ದಾರೆ.
- Madan Kumar
- Updated on: Jul 14, 2025
- 7:27 pm
ನಟಿ ಬಿ. ಸರೋಜಾದೇವಿ ನಿಧನ: ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳ ದಾನ
ಹಿರಿಯ ನಟಿ ಬಿ. ಸರೋಜಾದೇವಿ ಅವರು ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಈಗ ನೇತ್ರದಾನದ ಮೂಲಕ ಅವರು ನಿಧನದ ನಂತರವೂ ಸಾರ್ಥಕತೆ ಮೆರೆದಿದ್ದಾರೆ. ಸರೋಜಾದೇವಿ ಅವರಿಗೆ 87 ವರ್ಷ ವಯಸ್ಸಾಗಿತ್ತು. ನಾರಾಯಣ ನೇತ್ರಾಲಯಕ್ಕೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಈ ಮೂಲಕ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ.
- Madan Kumar
- Updated on: Jul 14, 2025
- 5:28 pm