ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 19ರ ದಿನಭವಿಷ್ಯ
Daily Horoscope Mach 19: ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 19ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ನಿಮ್ಮ ಮನೆಯಲ್ಲಿ ಇರುವಂಥ ಈಶ್ವರ ವಿಗ್ರಹ ಅಥವಾ ಚಿತ್ರಪಟಕ್ಕೆ ಸಕ್ಕರೆ ಅಥವಾ ಹಣ್ಣನ್ನು ನೈವೇದ್ಯ ಮಾಡಿ ಪ್ರಸಾದವಾಗಿ ಸ್ವೀಕರಿಸಿ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಮುಂದೆ ನಡೆಯುವ ಸಂಗತಿಗಳ ಬಗ್ಗೆ ಸುಳಿವು ದೊರೆಯಲಿದೆ. ನಿಮ್ಮ ಮಾತು ಬಹಳ ಪ್ರಭಾವಿ ಆಗಿರುತ್ತದೆ. ಹಲವರು ಅದರಿಂದ ಸಹಾಯ ಪಡೆಯುವ ಅವಕಾಶಗಳಿವೆ. ರಾಜಕೀಯ ಕ್ಷೇತ್ರದಲ್ಲಿ ಇರುವಂಥವರಾದರೆ ನಿಮ್ಮ ಬೆಂಬಲಿಗರು, ಅನುಯಾಯಿಗಳು ಹಲವು ರೀತಿಯಲ್ಲಿ ಅನುಕೂಲ ಮಾಡಿಕೊಡಲಿದ್ದೀರಿ. ಅದು ಉತ್ತಮ ಹುದ್ದೆಗಳನ್ನು ಕೊಡಿಸುವುದಕ್ಕೆ ಇರಬಹುದು ಅಥವಾ ಯಾವುದಾದರೂ ಕಾಂಟ್ರಾಕ್ಟ್ ಗಳನ್ನು ಕೊಡಿಸುವುದೇ ಇರಬಹುದು.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ದೊಡ್ಡ ಮಟ್ಟದಲ್ಲಿ ಅನಿರೀಕ್ಷಿತವಾಗಿ ಸಹಾಯ ದೊರೆಯಲಿದೆ. ನಿಮ್ಮ ಒಳಿತಿಗಾಗಿ ಸ್ನೇಹಿತರು, ಸಂಬಂಧಿಗಳು ಬಹಳ ಸಹಾಯ ಮಾಡಲಿದ್ದಾರೆ. ಭವಿಷ್ಯದಲ್ಲಿ ಅತಿ ದೊಡ್ಡ ಬದಲಾವಣೆ ತರುವಂಥ ನಿರ್ಧಾರವನ್ನು ತೆಗೆದುಕೊಳ್ಳಲು ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಲಿದೆ. ಗುರು ಸಮಾನರಾದವರು ನಿಮಗೆ ನೀಡುವಂಥ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಈ ಹಿಂದೆ ನೀವು ಕೆಲಸ ಮಾಡಿದ್ದ ಸ್ಥಳದಿಂದ ಮತ್ತೆ ಕರೆ ಬರುವಂಥ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಇತರರಿಗೆ ನೀವು ಶಿಫಾರಸು ಮಾಡುವ ಮೂಲಕವಾಗಿ ಸಹಾಯ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ತುಂಬ ದೊಡ್ಡ ಪ್ರಮಾಣದ ಕೃಷಿ ಜಮೀನನ್ನು ಗುತ್ತಿಗೆಗೆ ಪಡೆಯುವ ಅಥವಾ ಖರೀದಿ ಮಾಡುವ ಯೋಗ ಇದೆ. ಶಿಸ್ತನ್ನು ಅನುಸರಿಸುವುದರಿಂದ ಆಗುವ ಪ್ರಯೋಜನಗಳು ಹಲವು ಇವೆ. ಆದ್ದರಿಂದ ಯಾವುದೇ ಕೆಲಸವನ್ನು ಆಮೇಲೆ ಮಾಡಿದರಾಯಿತು ಎಂದು ಆಲೋಚನೆ ಮಾಡದೆ, ತಕ್ಷಣವೇ ಮಾಡಿ.
ಲೇಖನ- ಸ್ವಾತಿ ಎನ್.ಕೆ.
