ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 19ರ ದಿನಭವಿಷ್ಯ
Daily Horoscope Mach 19: ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 19ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ದುರ್ಗಾ ಸಪ್ತಶತಿ ಶ್ರವಣವನ್ನು ಮಾಡಿ. ಆಸ್ತಿ ಖರೀದಿ ಮೊದಲಾದ ವಿಚಾರಗಳಲ್ಲಿ ಕಾಡುತ್ತಿರುವ ಅಡೆತಡೆ ನಿವಾರಣೆಗೆ ದುರ್ಗಾ ದೇವಿಯನ್ನು ಪ್ರಾರ್ಥಿಸಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಉದ್ಯೋಗ ಸ್ಥಳದಲ್ಲಿ ನಿಮ್ಮ ಕೈ ಮೇಲಾಗುತ್ತದೆ. ಯಾರು ನಿಮ್ಮ ಸಾಮರ್ಥ್ಯ, ಶಕ್ತಿ ಹಾಗೂ ಪ್ರಭಾವದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ ಬಂದಿರುತ್ತಾರೋ ಅಂಥವರೇ ಬೆರಗಾಗುವಂಥ ಸಾಧನೆಗಳು ನಿಮ್ಮಿಂದ ಆಗಲಿದೆ. ಇತರರು ತಮ್ಮಿಂದ ಸಾಧ್ಯವೇ ಇಲ್ಲ ಎಂದು ಕೈ ಚೆಲ್ಲಿ, ಅಸಹಾಯಕರಾದ ಸಂದರ್ಭದಲ್ಲಿ ನೀವು ಅದನ್ನು ಯಶಸ್ವಿಯಾಗಿ ಮಾಡಲಿದ್ದೀರಿ. ಈ ದಿನ ನಿಮಗೆ ದೈವಾನುಗ್ರಹ ಸಹ ಇರಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಈಗಾಗಲೇ ಹೊಸ ಉದ್ಯಮವನ್ನೋ ಅಥವಾ ವ್ಯವಹಾರವನ್ನು ಆರಂಭಿಸಿದ್ದೀರಿ, ಅದು ನಿರೀಕ್ಷಿತ ಮಟ್ಟಕ್ಕೆ ಲಾಭ ತಂದುಕೊಡುತ್ತಿಲ್ಲ ಎಂದಾದಲ್ಲಿ ಈ ದಿನ ಅದು ಲಾಭದಾಯಕವಾಗಿ ಮಾಡುವುದಕ್ಕೆ ಬೇಕಾದ ಮಾರ್ಗೋಪಾಯಗಳು ದೊರೆಯುತ್ತವೆ. ಆದ್ದರಿಂದ ಒಟ್ಟಾರೆ ಈ ದಿನ ನಿಮ್ಮ ಪಾಲಿಗೆ ಉತ್ತಮವಾಗಿರುತ್ತದೆ. ಆದ್ದರಿಂದ ಅವಕಾಶಗಳನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳಲಿದ್ದೀರಿ ಎಂಬುದು ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಕೃತಕ ಗರ್ಭಧಾರಣೆ ವಿಧಾನದ ಮೂಲಕ ಸಂತಾನ ಅಪೇಕ್ಷಿತರಿಗೆ ಬಹಳ ಒತ್ತಡದ ದಿನ ಇದಾಗಿರುತ್ತದೆ. ದಂಪತಿ ಮಧ್ಯೆ ಯಾವುದೋ ಮೂರನೇ ವ್ಯಕ್ತಿಯ ಕಾರಣಕ್ಕೆ ವಿಪರೀತ ಮಾತಿಗೆ ಮಾತು ಬೆಳೆಯುವಂಥ ಸಾಧ್ಯತೆ ಇದೆ. ಈ ಹಿಂದೆ ಯಾವಾಗಲೋ ಆಡಿದ ಮಾತಿನ ರೆಕಾರ್ಡಿಂಗ್ ಮುಂದಿಟ್ಟುಕೊಂಡು ಜೋರು ಜಗಳಗಳಾಗಬಹುದು. ಮುಖ್ಯವಾಗಿ ನಿಮಗೆ ಗೊತ್ತಿಲ್ಲದ ಸನ್ನಿವೇಶವನ್ನು ಊಹಿಸಿಕೊಂಡು, ನೀನು ಹೇಗೆ ನನಗೆ ಗೊತ್ತಿಲ್ಲವಾ ಎಂಬ ರೀತಿಯ ಮಾತುಗಳನ್ನು ಆಡಬೇಡಿ.
ಲೇಖನ- ಸ್ವಾತಿ ಎನ್.ಕೆ.
