AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರನ ರಾಶಿಯಲ್ಲಿ ಅಪರೂಪದ ರಾಜಯೋಗ… ಲಾಭ ಪಡೆಯುವ ಅದೃಷ್ಟದ ರಾಶಿಗಳಿವು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರ, ಶುಕ್ರ ಮತ್ತು ಗುರು ಗ್ರಹಗಳು ಕರ್ಕಾಟಕ ರಾಶಿಯಲ್ಲಿ ಸೇರಿ ಅಪರೂಪದ ರಾಜಯೋಗ ಸೃಷ್ಟಿಯಾಗಿದೆ. ಇದು ಗಜಲಕ್ಷ್ಮಿ ಯೋಗ ಮತ್ತು ಗಜಕೇಸರಿ ಯೋಗಗಳ ಸಮ್ಮಿಲನವಾಗಿದೆ. ಈ ಶುಭ ಸಂಯೋಗವು ಕರ್ಕಾಟಕ, ಮೇಷ, ಕನ್ಯಾ ಮತ್ತು ವೃಶ್ಚಿಕ ರಾಶಿಗಳಿಗೆ ಭೌತಿಕ ಸುಖ, ಸಂಪತ್ತು, ಕೀರ್ತಿ ಮತ್ತು ಅದೃಷ್ಟವನ್ನು ತಂದು, ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ.

ಚಂದ್ರನ ರಾಶಿಯಲ್ಲಿ ಅಪರೂಪದ ರಾಜಯೋಗ... ಲಾಭ ಪಡೆಯುವ ಅದೃಷ್ಟದ ರಾಶಿಗಳಿವು
ಚಂದ್ರನ ರಾಶಿಯಲ್ಲಿ ಅಪರೂಪದ ರಾಜಯೋಗImage Credit source: Pinterest
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jun 18, 2026 | 12:09 PM

Share

ಕಾಲದ ಯಥಾರ್ಥವನ್ನು ತಿಳಿಸುವ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಚಂದ್ರ, ಸುಖ-ಭೋಗಗಳ ಅಧಿಪತಿ ಶುಕ್ರ ಮತ್ತು ದೇವಗುರು ಬೃಹಸ್ಪತಿ ಈ ಮೂರೂ ಗ್ರಹಗಳು ಕರ್ಕಾಟಕ ರಾಶಿಯಲ್ಲಿ ಒಂದೇ ಸೂರಿನಡಿ ಸೇರಿದಾಗ ಒಂದು ಅಪರೂಪದ ಮತ್ತು ಅತ್ಯಂತ ಶಕ್ತಿಶಾಲಿ ಯೋಗ ಸೃಷ್ಟಿಯಾಗುತ್ತದೆ.

​ಕರ್ಕಾಟಕ ರಾಶಿಯು ಚಂದ್ರನ ಸ್ವಂತ ರಾಶಿಯಾಗಿದ್ದು, ಗುರು ಗ್ರಹಕ್ಕೆ ಇದು ಉಚ್ಛ ಸ್ಥಾನವಾಗಿದೆ. ಶುಕ್ರನು ಇಲ್ಲಿ ಮಿತ್ರ ಭಾವದಲ್ಲಿದ್ದಾನೆ. ಈ ಮೂರು ಶುಭ ಗ್ರಹಗಳ ಸಮ್ಮಿಲನದಿಂದ ಜ್ಯೋತಿಷ್ಯದಲ್ಲಿ ಗಜಲಕ್ಷ್ಮಿ ಯೋಗ ಅಥವಾ ತ್ರಿಗ್ರಹಿ ಯೋಗ ಉಂಟಾಗುತ್ತದೆ. ಅದರಲ್ಲೂ ಗುರು-ಚಂದ್ರರ ಸಂಯೋಗದಿಂದ ಗಜಕೇಸರಿ ಯೋಗ ಹಾಗೂ ಗುರು-ಶುಕ್ರರ ಪ್ರಭಾವದಿಂದ ರಾಜಯೋಗದ ಮಿಶ್ರಣವೂ ಈ ಅವಧಿಯಲ್ಲಿ ಕಂಡುಬರುತ್ತದೆ. ಇದು ಭೌತಿಕ ಸುಖ, ಸಂಪತ್ತು ಮತ್ತು ಕೀರ್ತಿಯನ್ನು ತಂದುಕೊಡುವ ಅದ್ಭುತ ಯೋಗವಾಗಿದೆ. ​ಈ ಅಪರೂಪದ ಸಂಯೋಗದಿಂದ ಪ್ರಮುಖವಾಗಿ ಲಾಭ ಪಡೆಯುವ ಅದೃಷ್ಟದ ರಾಶಿಗಳಿವು. ಈ ಯೋಗವು ಅಪರೂಪದ ಸಂಯೋಗದಲ್ಲಿ ಇದೂ ಒಂದಾಗಿದೆ.

​ಕರ್ಕಾಟಕ ರಾಶಿ:

ಈ ಯೋಗವು ನಿಮ್ಮದೇ ರಾಶಿಯಲ್ಲಿ ಘಟಿಸುತ್ತಿರುವುದರಿಂದ ನಿಮಗೆ ಅತ್ಯಂತ ಗರಿಷ್ಠ ಲಾಭ ಸಿಗಲಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿವೆ. ಸಿಲುಕಿಕೊಂಡಿದ್ದ ಹಣ ಕೈ ಸೇರಲಿದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಗೌರವ ಸಿಗಲಿದೆ. ಉದ್ಯಮಿಗಳಿಗೆ ದೊಡ್ಡ ಲಾಭದಾಯಕ ಒಪ್ಪಂದಗಳು ಸಿಗಲಿವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದ್ದು, ದಾಂಪತ್ಯ ಜೀವನ ಮಧುರವಾಗಿರುತ್ತದೆ.

ಮೇಷ ರಾಶಿ:

​ಮೇಷ ರಾಶಿಯವರಿಗೆ ಈ ಸಂಯೋಗವು ನಾಲ್ಕನೇ ಮನೆಯಲ್ಲಿ ನಡೆಯುವುದರಿಂದ ಸುಖ-ಸಂತೋಷ ವೃದ್ಧಿಯಾಗಲಿದೆ. ಹೊಸ ಮನೆ, ಭೂಮಿ ಅಥವಾ ವಾಹನ ಖರೀದಿಸುವ ನಿಮ್ಮ ಕನಸು ನನಸಾಗುವ ಸಮಯವಿದು. ಕುಟುಂಬದಲ್ಲಿ ದೀರ್ಘಕಾಲದ ಭಿನ್ನಾಭಿಪ್ರಾಯಗಳು ದೂರವಾಗಿ ಶಾಂತಿ ನೆಲೆಸುತ್ತದೆ. ತಾಯಿಯ ಕಡೆಯಿಂದ ಧನಸಹಾಯ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

​ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಈ ತ್ರಿಗ್ರಹಿ ಯೋಗವು ಹನ್ನೊಂದನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಹೂಡಿಕೆಗಳಿಂದ ಅನಿರೀಕ್ಷಿತ ಲಾಭ ತರಲಿದೆ. ಲಾಟರಿ ಅಥವಾ ಷೇರು ಮಾರುಕಟ್ಟೆಯಿಂದ ಧನಲಾಭವಾಗಬಹುದು. ನೀವು ಕೈಹಾಕುವ ಪ್ರತಿಯೊಂದು ಕೆಲಸದಲ್ಲೂ ಅದೃಷ್ಟ ನಿಮ್ಮ ಪರ ಇರಲಿದೆ. ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ.

​ವೃಶ್ಚಿಕ ರಾಶಿ:

​ನಿಮ್ಮ ರಾಶಿಯ ಒಂಬತ್ತನೇ ಮನೆಯಲ್ಲಿ (ಭಾಗ್ಯ ಸ್ಥಾನ) ಈ ಯೋಗ ಸೃಷ್ಟಿಯಾಗುತ್ತಿರುವುದರಿಂದ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ತೀರ್ಥಯಾತ್ರೆ ಅಥವಾ ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ ಮಾಡುವ ಯೋಗವಿದೆ. ಹಳೆಯ ಆರೋಗ್ಯ ಸಮಸ್ಯೆಗಳು ದೂರವಾಗಿ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ತಂದೆಯೊಂದಿಗಿನ ಬಾಂಧವ್ಯ ಗಟ್ಟಿಯಾಗಲಿದೆ. ​ – ಲೋಹಿತ್ ಹೆಬ್ಬಾರ್

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us