ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.
ಭಕ್ತರಿಗೆ ದೊಡ್ಡ ರಿಲೀಫ್; ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಮೊಬೈಲ್ ನಿಷೇಧ ಸಡಿಲಿಕೆ
ತಮಿಳುನಾಡು ಸರ್ಕಾರವು ದೇವಾಲಯಗಳಲ್ಲಿ ಮೊಬೈಲ್ ಫೋನ್ ನಿಷೇಧವನ್ನು ಸಡಿಲಿಸಿದೆ. ಇನ್ನು ಭಕ್ತರು ತಮ್ಮ ಫೋನ್ಗಳನ್ನು ಸ್ವಿಚ್ ಆಫ್ ಮಾಡಿ ಒಳಗೆ ಕೊಂಡೊಯ್ಯಬಹುದು. ಹಿಂದೂ ಧಾರ್ಮಿಕ ಮತ್ತು ದಾನ ದತ್ತಿ ಇಲಾಖೆ (HR&CE) ಹೊರಡಿಸಿರುವ ಈ ಹೊಸ ಆದೇಶವು 52 ಪ್ರಮುಖ ದೇವಸ್ಥಾನಗಳಿಗೆ ಅನ್ವಯಿಸುತ್ತದೆ. ಆದರೆ, ಫೋಟೋ, ವಿಡಿಯೋ ತೆಗೆಯುವುದಕ್ಕೆ ಇನ್ನೂ ಅವಕಾಶವಿಲ್ಲ.
- Akshatha Vorkady
- Updated on: Oct 14, 2026
- 4:12 pm
ಕೆ-ರೈಡ್ನಲ್ಲಿ ಪ್ರಧಾನ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಲ್ಲಿದೆ ಪೂರ್ಣ ವಿವರ!
ಕರ್ನಾಟಕ ಸರ್ಕಾರದ ಕೆ-ರೈಡ್ ಸಂಸ್ಥೆಯು ಬೆಂಗಳೂರು ಉಪನಗರ ರೈಲು ಯೋಜನೆಗಾಗಿ (BSRP) ಪ್ರಧಾನ ವ್ಯವಸ್ಥಾಪಕ (ಸಿವಿಲ್) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಒಪ್ಪಂದ ಆಧಾರದ ಮೇಲೆ 02 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 12/11/2026ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು kride.in/careers ವೆಬ್ಸೈಟ್ಗೆ ಭೇಟಿ ನೀಡಿ.
- Akshatha Vorkady
- Updated on: Oct 14, 2026
- 2:59 pm
ಡಿಸೆಂಬರ್ ಒಳಗೆ 17,000 ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ
ಡಿಸೆಂಬರ್ ಒಳಗೆ 17,000 ಶಿಕ್ಷಕರನ್ನು ನೇಮಕ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. 1,200 ಕೆಪಿಎಸ್ ಶಾಲೆಗಳಿಗೆ ನವೆಂಬರ್ನಲ್ಲಿ ಗುದ್ದಲಿ ಪೂಜೆ ನೆರವೇರಿಸುವ ಯೋಜನೆ ಇದೆ. ದಸರಾ ಆಚರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರಜಾ ದಿನಗಳಲ್ಲೂ ಗ್ರಂಥಾಲಯ ತೆರೆಯುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಅವರು ಹೇಳಿದರು.
- Akshatha Vorkady
- Updated on: Oct 14, 2026
- 5:24 pm
ಬಿಹಾರದ ವಿಚಿತ್ರ ಸಂಪ್ರದಾಯ: ನವರಾತ್ರಿಯ 10 ದಿನ ಮಹಿಳೆಯರಿಗೆ ಪ್ರವೇಶವಿಲ್ಲದ ಆಶಾಪುರಿ ದೇವಿ ದೇವಾಲಯ!
ಬಿಹಾರದ ಘೋಸ್ರಾವನ್ ಗ್ರಾಮದ ಪ್ರಸಿದ್ಧ ಮಾ ಆಶಾಪುರಿ ದೇವಾಲಯದಲ್ಲಿ ನವರಾತ್ರಿಯ 10 ದಿನಗಳ ಕಾಲ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗುತ್ತದೆ. ಈ ಪ್ರದೇಶವು ಪ್ರಾಚೀನ ಕಾಲದಿಂದಲೂ ತಾಂತ್ರಿಕ ಆಚರಣೆಗಳ ಪ್ರಮುಖ ಕೇಂದ್ರವಾಗಿದ್ದು, ನವರಾತ್ರಿಯ ಸಮಯದಲ್ಲಿ ಸಿದ್ಧಿಗಳನ್ನು ಪಡೆಯಲು ತಾಂತ್ರಿಕ ಪೂಜೆಗಳು ನಡೆಯುವುದರಿಂದ ಶಿಸ್ತು ಮತ್ತು ಆಚಾರದ ಭಾಗವಾಗಿ ಈ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.
- Akshatha Vorkady
- Updated on: Oct 14, 2026
- 1:17 pm
ಅಪರೂಪದ ‘ಕೃಷ್ಣಕಾಳಿ ದೇವಸ್ಥಾನ’: ಇಲ್ಲಿ ಕಾಳಿ ಕೈಯಲ್ಲಿ ಕತ್ತಿ ಬದಲಿಗೆ ಕೊಳಲು ಇರುವುದೇಕೆ ಗೊತ್ತಾ?
ಕೋಲ್ಕತ್ತಾದಲ್ಲಿರುವ ಕೃಷ್ಣಕಾಳಿ ದೇವಸ್ಥಾನ ಅಪರೂಪದ ಆಧ್ಯಾತ್ಮಿಕ ಕೇಂದ್ರ. ಈ ದೇವಸ್ಥಾನದಲ್ಲಿ ಮಹಾಕಾಳಿಯು ಕತ್ತಿಯ ಬದಲಿಗೆ ಕೊಳಲು ಹಿಡಿದು ದರ್ಶನ ನೀಡುತ್ತಾಳೆ. ಭಗವದ್ಗೀತೆಯ ಪ್ರಕಾರ ಕೃಷ್ಣನು ಕಾಲನಾಗಿದ್ದರೆ, ಮಹಾಕಾಳಿಯು ಕಾಲದ ಸ್ವರೂಪಿಣಿಯಾಗಿದ್ದಾಳೆ. ಕೃಷ್ಣನ ಲೀಲೆ ಮತ್ತು ಕಾಳಿಯ ಸಂಹಾರಕ ಶಕ್ತಿ ಒಂದೇ ಪರಮ ಸತ್ಯದ ಎರಡು ಮುಖಗಳು ಎಂಬುದನ್ನು ಈ ದೇವಾಲಯವು ಜಗತ್ತಿಗೆ ಸಾರುತ್ತದೆ.
- Akshatha Vorkady
- Updated on: Oct 14, 2026
- 12:11 pm
ನವರಾತ್ರಿ ವಿಶೇಷ: ಅವಿವಾಹಿತ ಮಹಿಳೆಯರು ದೇವಿಗೆ ಕುಂಕುಮಾರ್ಚನೆ ಮಾಡಬಹುದೇ? ಧಾರ್ಮಿಕ ನಿಯಮ ಹೇಳುವುದೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ ಅವಿವಾಹಿತ ಹುಡುಗಿಯರು ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಗೆ ಖಂಡಿತವಾಗಿ ಕುಂಕುಮ ಅರ್ಪಿಸಬಹುದು. ಜಗನ್ಮಾತೆಯು 'ಸರ್ವಮಂಗಳೆ' ಆಗಿರುವುದರಿಂದ ಪ್ರತಿಯೊಬ್ಬ ಭಕ್ತರಿಗೂ ಪೂಜಿಸುವ ಸಮಾನ ಹಕ್ಕಿದೆ. ಯುವತಿಯರು ಶ್ರದ್ಧೆಯಿಂದ ಪೂಜಿಸುವುದರಿಂದ ಇಷ್ಟಾರ್ಥ ಸಿದ್ಧಿ ಹಾಗೂ ವಿವಾಹದ ಅಡೆತಡೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಆದರೆ ಪೂಜೆ ಮಾಡುವಾಗ ಮತ್ತು ಪ್ರಸಾದ ಸ್ವೀಕರಿಸುವಾಗ ವಿವಾಹಿತೆಯರಿಗಿಂತ ಕೆಲವು ಭಿನ್ನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- Akshatha Vorkady
- Updated on: Oct 14, 2026
- 11:09 am
ನವರಾತ್ರಿ: ಮನೆ ಮುಂದೆ ನಿಂಬೆ-ಮೆಣಸಿನಕಾಯಿ ಕಟ್ಟುವುದು ಯಾಕೆ? ಇಲ್ಲಿದೆ ಅಧ್ಯಾತ್ಮಿಕ ರಹಸ್ಯ!
ನವರಾತ್ರಿಯಲ್ಲಿ ಮನೆ ಬಾಗಿಲಿಗೆ ನಿಂಬೆ-ಮೆಣಸಿನಕಾಯಿ ನೇತುಹಾಕುವುದು ಅನಾದಿ ಕಾಲದಿಂದಲೂ ಬಂದ ಸಂಪ್ರದಾಯ. ನಕಾರಾತ್ಮಕ ಶಕ್ತಿ, ದೃಷ್ಟಿ ದೋಷದಿಂದ ಮನೆಯನ್ನು ರಕ್ಷಿಸಲು ಇದನ್ನು ಆಚರಿಸಲಾಗುತ್ತದೆ. ಅಲಕ್ಷ್ಮಿಯನ್ನು ತಡೆಯಲು ಹಾಗೂ ಮನೆಗೆ ಸಕಾರಾತ್ಮಕತೆ ತರಲು ಈ ಪದ್ಧತಿಯಿದೆ. ಇದು ಕೇವಲ ನಂಬಿಕೆಯಲ್ಲದೆ, ಸಮೃದ್ಧಿ ಮತ್ತು ರಕ್ಷಣೆಯ ಸಂಕೇತವಾಗಿ ಆಧ್ಯಾತ್ಮಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.
- Akshatha Vorkady
- Updated on: Oct 14, 2026
- 10:08 am
ನವರಾತ್ರಿ: ದುರ್ಗಾ ಸಪ್ತಶತಿ ಪಠಣಕ್ಕೂ ಮುನ್ನ ‘ದೇವೀ ಕವಚ’ ಪಠಿಸುವುದು ಯಾಕೆ ಅತ್ಯಾವಶ್ಯಕ?
ಶಾರದೀಯ ನವರಾತ್ರಿಯಂದು ದುರ್ಗಾ ಸಪ್ತಶತಿ ಪಠಿಸುವ ಭಕ್ತರು, ಅದಕ್ಕೂ ಮುನ್ನ ದೇವೀ ಕವಚವನ್ನು ಪಠಿಸುವುದು ಕಡ್ಡಾಯ. ಮಾರ್ಕಂಡೇಯ ಪುರಾಣದಿಂದ ಬಂದ ಈ ಶಕ್ತಿಶಾಲಿ ಸ್ತೋತ್ರವನ್ನು ಬ್ರಹ್ಮದೇವರು ಉಪದೇಶಿಸಿದ್ದಾರೆ. ಇದು ಸಾಧಕರಿಗೆ ರಕ್ಷಣೆ, ಧನಲಾಭ, ಆರೋಗ್ಯ, ನಿರ್ಭಯತೆ ಹಾಗೂ ಯಶಸ್ಸು ತರುತ್ತದೆ. ಸಕಲ ರೋಗ-ದೋಷ ನಿವಾರಿಸಿ ದೀರ್ಘಾಯುಷ್ಯ ನೀಡುವ ದೇವೀ ಕವಚದ ಮಹಿಮೆಯನ್ನು ತಿಳಿದುಕೊಳ್ಳಿ.
- Akshatha Vorkady
- Updated on: Oct 14, 2026
- 9:38 am
ನವರಾತ್ರಿ 2026: ದುರ್ಗಾ ವಿಸರ್ಜನೆಗೆ ಅತ್ಯುತ್ತಮ ಸಮಯ ಯಾವುದು? ರಾತ್ರಿ ವೇಳೆ ವಿಗ್ರಹ ನಿಮಜ್ಜನೆ ಮಾಡಬಹುದೇ? ಮಾಹಿತಿ ಇಲ್ಲಿದೆ
ಶರನ್ನವರಾತ್ರಿ ಮಹೋತ್ಸವದಲ್ಲಿ ದುರ್ಗಾ ವಿಸರ್ಜನೆ ವಿಜಯದಶಮಿಯಂದು ನಡೆಯುತ್ತದೆ. ನಿಮಜ್ಜನೆಗೆ ಶುಭ ಸಮಯ, ಬೆಳಿಗ್ಗೆ ಸಾಧ್ಯವಾಗದಿದ್ದರೆ ಪರ್ಯಾಯಗಳು ಹಾಗೂ ರಾತ್ರಿ ವಿಸರ್ಜನೆ ಕುರಿತು ಭಕ್ತರಲ್ಲಿ ಗೊಂದಲಗಳಿವೆ. ಶಾಸ್ತ್ರಗಳ ಪ್ರಕಾರ ಹಗಲಿನ ಶುಭ ಮುಹೂರ್ತಕ್ಕೆ ಆದ್ಯತೆ ನೀಡಬೇಕು. ಸ್ಥಳೀಯ ಪಂಚಾಂಗ ಹಾಗೂ ಸಂಪ್ರದಾಯದಂತೆ ಸೂಕ್ತ ಮುಹೂರ್ತ ಆಯ್ಕೆ ಮಾಡುವುದು ಮುಖ್ಯ.
- Akshatha Vorkady
- Updated on: Oct 14, 2026
- 9:02 am
ನವರಾತ್ರಿ ಪೂಜೆ: ದೇವಿಯ ಮುಂದೆ ತುಪ್ಪದ ದೀಪ ಹಚ್ಚಬೇಕಾ ಅಥವಾ ಎಣ್ಣೆ ದೀಪ? ಸರಿಯಾದ ನಿಯಮಗಳೇನು?
ನವರಾತ್ರಿಯ ಪವಿತ್ರ ದಿನಗಳಲ್ಲಿ ದುರ್ಗಾ ದೇವಿಯನ್ನು ಆರಾಧಿಸುವಾಗ ದೀಪ ಹಚ್ಚುವಿಕೆ ಅತ್ಯಂತ ಮುಖ್ಯ. ಯಾವ ದೀಪ (ತುಪ್ಪ ಅಥವಾ ಎಣ್ಣೆ) ಬಳಸಬೇಕು, ಅದನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬ ಗೊಂದಲಕ್ಕೆ ಇಲ್ಲಿದೆ ಪರಿಹಾರ. ದೀಪದ ಮಹತ್ವ, ನಿಯಮಗಳು ಮತ್ತು ದೇವಿಯ ಕೃಪೆಗೆ ಪೂಜಿಸುವ ವಿಧಾನಗಳನ್ನು ಇಲ್ಲಿ ತಿಳಿಯಿರಿ. ಇದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.
- Akshatha Vorkady
- Updated on: Oct 13, 2026
- 4:37 pm
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ದಸರಾ ಸಂಭ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಪ್ರತಿಭೆಗೆ ಅದ್ಭುತ ವೇದಿಕೆ ಕಲ್ಪಿಸಲಾಗಿದೆ. ಯುವ ದಸರಾ ಮೂಲಕ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಪುಟಾಣಿಗಳು ನೃತ್ಯ, ನಾಟಕ, ಜಾನಪದ ಸೇರಿದಂತೆ ವಿವಿಧ ಕಲೆಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಓದಿನ ನಡುವೆ ಬದಿಗಿಟ್ಟಿದ್ದ ತಮ್ಮ ಕಲಾಪ್ರತಿಭೆಗಳನ್ನು ಅನಾವರಣಗೊಳಿಸಲು ಜಿಲ್ಲಾಡಳಿತ ಅವಕಾಶ ನೀಡಿದೆ. ಈ ಕಾರ್ಯಕ್ರಮ ಮಕ್ಕಳಲ್ಲಿ ಸಂತಸ ತಂದಿದೆ.
- Akshatha Vorkady
- Updated on: Oct 14, 2026
- 5:28 pm
ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಪೂರ್ಣ ವಿವರ
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (NSP) 2026-27ನೇ ಸಾಲಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಹೊಸ ಅರ್ಜಿ ಮತ್ತು ನವೀಕರಣಕ್ಕೆ ಅಕ್ಟೋಬರ್ 31 ಕೊನೆಯ ದಿನಾಂಕ. OTR ಕಡ್ಡಾಯ, ಆಧಾರ್ ದೃಢೀಕರಣದ ಸಮಸ್ಯೆಗಳಿಗೆ ಪರಿಹಾರ ಲಭ್ಯವಿದೆ. ಅಂಗವಿಕಲ ವಿದ್ಯಾರ್ಥಿಗಳು UDID ಮೂಲಕ ಅರ್ಜಿ ಸಲ್ಲಿಸಬೇಕು. CSC ಕೇಂದ್ರಗಳಲ್ಲೂ ಅರ್ಜಿ ಸೌಲಭ್ಯವಿದೆ.
- Akshatha Vorkady
- Updated on: Oct 13, 2026
- 3:17 pm