ಎರಡಂಕಿ ಮೊತ್ತಕ್ಕೆ ನಮೀಬಿಯ ಆಲೌಟ್: ಭಾರತಕ್ಕೆ ಭರ್ಜರಿ ಜಯ
T20 World Cup 2026: ವಿಶೇಷ ಎಂದರೆ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿರುವ ಎರಡು ತಂಡಗಳ ವಿರುದ್ಧ ಭಾರತ ಎ ತಂಡ ಅಭ್ಯಾಸ ಪಂದ್ಯಗಳಲ್ಲಿ ಅಮೋಘ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಭಾರತ ಎ ತಂಡ ಯುಎಸ್ಎ ವಿರುದ್ಧ 38 ರನ್ಗಳ ಜಯ ಸಾಧಿಸಿತ್ತು. ಇದೀಗ ನಮೀಬಿಯ ತಂಡವನ್ನು 130 ರನ್ಗಳಿಂದ ಮಣಿಸಿದೆ.
ಟಿ20 ವಿಶ್ವಕಪ್ನ 16ನೇ ಅಭ್ಯಾಸ ಪಂದ್ಯದಲ್ಲಿ ನಮೀಬಿಯ ವಿರುದ್ಧ ಭಾರತ ಎ ತಂಡ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಆಯುಷ್ ಬದೋನಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರಿಯಾನ್ ಪರಾಗ್ 39 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 69 ರನ್ ಚಚ್ಚಿದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ಎ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿತು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ನಮೀಬಿಯ ತಂಡವು 12.1 ಓವರ್ಗಳಲ್ಲಿ ಕೇವಲ 67 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ಎ ತಂಡ 130 ರನ್ಗಳ ಭರ್ಜರಿ ಜಯ ಸಾಧಿಸಿದೆ.
ವಿಶೇಷ ಎಂದರೆ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿರುವ ಎರಡು ತಂಡಗಳ ವಿರುದ್ಧ ಭಾರತ ಎ ತಂಡ ಅಭ್ಯಾಸ ಪಂದ್ಯಗಳಲ್ಲಿ ಅಮೋಘ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಭಾರತ ಎ ತಂಡ ಯುಎಸ್ಎ ವಿರುದ್ಧ 38 ರನ್ಗಳ ಜಯ ಸಾಧಿಸಿತ್ತು. ಇದೀಗ ನಮೀಬಿಯ ತಂಡವನ್ನು 130 ರನ್ಗಳಿಂದ ಮಣಿಸಿದೆ.

