ಹೆಸರು ಝಾಹಿರ್ ಯೂಸುಫ್. ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟು ದಶಕ ಕಳೆದಿದೆ. ವೆಬ್ ದುನಿಯಾ ಕನ್ನಡ, ಉದಯವಾಣಿ, ನ್ಯೂಸ್18 ಕನ್ನಡ ವೆಬ್ಸೈಟ್ಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಇದೀಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವೆ. ಆಸಕ್ತಿದಾಯಕ ವಿಷಯ ಕ್ರೀಡೆ ಮತ್ತ ಸಿನಿಮಾ. ಇದರ ಜೊತೆಗೆ ಟೆಕ್, ಆಟೋಮೊಬೈಲ್ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ತಿಳಿಮೈ ಹೊಂದಿರುವೆ.
ಕ್ಯಾಚ್ ಹಿಡಿದು ವಿಶ್ವ ದಾಖಲೆ ಬರೆದ ಸ್ಟೀವ್ ಸ್ಮಿತ್
Steve Smith Record: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಐವರು ಆಟಗಾರರು ಮಾತ್ರ 200 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಭಾರತದ ರಾಹುಲ್ ದ್ರಾವಿಡ್. ಇದೀಗ 200 ಕ್ಯಾಚ್ಗಳೊಂದಿಗೆ ಸ್ಟೀವ್ ಸ್ಮಿತ್ ಈ ದಾಖಲೆ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (196) ಅವರ ದಾಖಲೆ ಮುರಿದು ಸ್ಮಿತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
- Zahir Yusuf
- Updated on: Feb 9, 2025
- 2:03 pm
IND vs ENG: ಟಾಸ್ ಗೆದ್ದ ಇಂಗ್ಲೆಂಡ್: ಟೀಮ್ ಇಂಡಿಯಾ ಪ್ಲೇಯಿಂಗ್ XI ನಲ್ಲಿ 2 ಬದಲಾವಣೆ
India vs England ODI: ಭಾರತ ಮತ್ತು ಇಂಗ್ಲೆಂಡ್ ಏಕದಿನ ಕ್ರಿಕೆಟ್ನಲ್ಲಿ ಈವರೆಗೆ 108 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 59 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಆಂಗ್ಲರು 44 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಈ ಅಂಕಿ ಅಂಶಗಳ ಪ್ರಕಾರ ಟೀಮ್ ಇಂಡಿಯಾ ಆಂಗ್ಲರ ವಿರುದ್ಧ ಮೇಲುಗೈ ಹೊಂದಿರುವುದು ಸ್ಪಷ್ಟ.
- Zahir Yusuf
- Updated on: Feb 9, 2025
- 1:11 pm
100ನೇ ಪಂದ್ಯದ ಸೋಲಿನೊಂದಿಗೆ ದಿಮುತ್ ಕರುಣರತ್ನೆ ವಿದಾಯ
Dimuth Karunaratne: ಶ್ರೀಲಂಕಾ ತಂಡದ ಎಡಗೈ ಆರಂಭಿಕ ಆಟಗಾರ ದಿಮುತ್ ಕರುಣರತ್ನೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸಿದ್ದಾರೆ. ಲಂಕಾ ಪರ 237 ಇನಿಂಗ್ಸ್ ಆಡಿರುವ ಅವರು ಒಟ್ಟು 8538 ರನ್ ಕಲೆಹಾಕಿದ್ದಾರೆ. ಈ ಮೂಲಕ ತಮ್ಮ 36ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
- Zahir Yusuf
- Updated on: Feb 9, 2025
- 11:54 am
ರೋಹಿತ್ ಶರ್ಮಾ ನಾಯಕತ್ವ ತ್ಯಜಿಸುವ ಸಾಧ್ಯತೆ: ವರದಿ
Rohit Sharma: ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿ ಮೂಲಕ ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವುದು ಬಹುತೇಕ ಖಚಿತ. ಆದರೆ ಅದಕ್ಕೂ ಮುನ್ನ ಅವರು ಫಾರ್ಮ್ ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಅವರು ನಾಯಕತ್ವದಿಂದ ಕೆಳಗಿಳಿಯಬೇಕಾಗಿ ಬರಬಹುದು. ಏಕೆಂದರೆ ಹಿಟ್ಮ್ಯಾನ್ ರನ್ಗಳಿಸಲು ಪರದಾಡುತ್ತಿರುವುದು ಟೀಮ್ ಇಂಡಿಯಾ ಪಾಲಿಗೆ ಹೊಸ ಚಿಂತೆಯನ್ನುಂಟು ಮಾಡಿದೆ.
- Zahir Yusuf
- Updated on: Feb 9, 2025
- 11:59 am
ಮುಂಬೈ ಇಂಡಿಯನ್ಸ್ ಮುಡಿಗೆ 11ನೇ ಟ್ರೋಫಿ… ಇದುವೇ ವಿಶ್ವ ದಾಖಲೆ
MUMBAI INDIANS: ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಐಪಿಎಲ್, ಡಬ್ಲ್ಯೂಪಿಎಲ್, ಎಸ್ಎ20, ಐಎಲ್ಟಿ20, ಎಂಎಲ್ಸಿ ಹಾಗೂ ಸಿಎಲ್ಟಿ20 ಲೀಗ್ಗಳಲ್ಲಿ ತಂಡಗಳನ್ನು ಕಣಕ್ಕಿಳಿಸಿದೆ. ಈ ಆರು ಲೀಗ್ಗಳ ಮೂಲಕ ಮುಂಬೈ ಇಂಡಿಯನ್ಸ್ ಮುಡಿಗೇರಿಸಿಕೊಂಡಿರುವುದು ಬರೋಬ್ಬರಿ 11 ಟ್ರೋಫಿಗಳನ್ನು. ಈ ಮೂಲಕ ಟಿ20 ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿದೆ.
- Zahir Yusuf
- Updated on: Feb 9, 2025
- 10:31 am
34085 ಎಸೆತಗಳಲ್ಲಿ ಹೊಸ ಮೈಲುಗಲ್ಲು ದಾಟಿದ ನಾಥನ್ ಲಿಯಾನ್
Nathan Lyon Record: ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ 253 ಇನಿಂಗ್ಸ್ ಆಡಿರುವ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ 34085* ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 24 ಬಾರಿ 5 ವಿಕೆಟ್ ಪಡೆದರೆ, 25 ಬಾರಿ 4 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಒಟ್ಟು 552* ವಿಕೆಟ್ ಉರುಳಿಸಿ ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಏಳನೇ ಬೌಲರ್ ಎನಿಸಿಕೊಂಡಿದ್ದಾರೆ.
- Zahir Yusuf
- Updated on: Feb 9, 2025
- 9:04 am
ಅಭ್ಯಾಸಕ್ಕೆ ಆಗಮಿಸಿದ ವಿರಾಟ್ ಕೊಹ್ಲಿಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ..!
India vs England, 2nd ODI: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯವು ಇಂದು (ಫೆ.9) ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್ಗಳ ಜಯ ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು.
- Zahir Yusuf
- Updated on: Feb 9, 2025
- 7:56 am
SA20: MI ಕೇಪ್ಟೌನ್ ಚಾಂಪಿಯನ್ಸ್
SA20 Final: ಸೌತ್ ಆಫ್ರಿಕಾ ಟಿ20 ಲೀಗ್ನ ಮೂರನೇ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕತ್ವದ ಎಂಐ ಕೇಪ್ಟೌನ್ ತಂಡವು ಚಾಂಪಿಯನ್ ಪಟ್ಟಕ್ಕೇರಿದೆ. 2023 ಮತ್ತು 2024 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಮಣಿಸಿ ಎಂಐ ಕೇಪ್ಟೌನ್ ತಂಡ ಇದೇ ಮೊದಲ ಬಾರಿ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದೆ.
- Zahir Yusuf
- Updated on: Feb 9, 2025
- 7:24 am
IND vs ENG: ಟೀಮ್ ಇಂಡಿಯಾ ಆಡುವ ಬಳಗದಲ್ಲಿ 2 ಬದಲಾವಣೆ ಸಾಧ್ಯತೆ
India vs England ODI: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್ನಲ್ಲಿ ಭಾರತ ತಂಡವು 4 ವಿಕೆಟ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 248 ರನ್ಗಳಿಸಿದರೆ, ಟೀಮ್ ಇಂಡಿಯಾ ಈ ಗುರಿಯನ್ನು ಕೇವಲ 38.4 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಭಾರತ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
- Zahir Yusuf
- Updated on: Feb 8, 2025
- 2:03 pm
ಟಿ20 ಬಳಿಕ ರಣಜಿಯಲ್ಲೂ ಮುಗ್ಗರಿಸಿದ ಸೂರ್ಯಕುಮಾರ್ ಯಾದವ್
Haryana vs Mumbai, Quarter Final: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರ್ಯಾಣ ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಮುಂಬೈ ವಿರುದ್ಧ ಹರ್ಯಾಣ ಬೌಲರ್ಗಳು ಕರಾರುವಾಕ್ ದಾಳಿ ಸಂಘಟಿಸಿದ್ದು, ಈ ಮೂಲಕ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಇಕ್ಕಟಿಗೆ ಸಿಲುಕಿದೆ.
- Zahir Yusuf
- Updated on: Feb 8, 2025
- 1:32 pm
Champions Trophy 2025: ಸೆಮಿಫೈನಲ್ಗೇರುವ 3 ತಂಡಗಳನ್ನು ಹೆಸರಿಸಿದ ಶೊಯೆಬ್ ಅಖ್ತರ್
Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. ಹಾಗೆಯೇ ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ. ಹೈಬ್ರಿಡ್ ಮಾದರಿಯಲ್ಲಿ ಜರುಗಲಿರುವ ಈ ಟೂರ್ನಿಯ ಬಹುತೇಕ ಮ್ಯಾಚ್ಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಭಾರತ ತಂಡದ ಪಂದ್ಯಗಳಿಗೆ ದುಬೈ ಆತಿಥ್ಯವಹಿಸಲಿದೆ.
- Zahir Yusuf
- Updated on: Feb 8, 2025
- 12:57 pm
ಟೆಸ್ಟ್ನಲ್ಲಿ ಇತಿಹಾಸ ನಿರ್ಮಿಸಿದ ಅಲೆಕ್ಸ್ ಕ್ಯಾರಿ
Sri Lanka vs Australia, 2nd Test: ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಶ್ರೀಲಂಕಾ ತಂಡ 257 ರನ್ ಕಲೆಹಾಕಿದರೆ, ಆಸ್ಟ್ರೇಲಿಯಾ ತಂಡ 414 ರನ್ಗಳಿಸಿದೆ. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 157 ರನ್ ಕಲೆಹಾಕಿದೆ. ಈ ಪಂದ್ಯದಲ್ಲಿ 156 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ.
- Zahir Yusuf
- Updated on: Feb 8, 2025
- 12:23 pm