AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2026: ಸೆಮಿಫೈನಲ್ ಪಂದ್ಯ ರದ್ದಾದ್ರೆ ಯಾರು ಫೈನಲ್​ಗೆ?

T20 World Cup 2026: ಟಿ20 ವಿಶ್ವಕಪ್​ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 16 ತಂಡಗಳು ಟೂರ್ನಿಯಿಂದ ಹೊರಬಿದ್ದಿದ್ದು, ಭಾರತ, ಇಂಗ್ಲೆಂಡ್, ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಿದೆ. ಈ ತಂಡಗಳಲ್ಲಿ ಎರಡು ಟೀಮ್ ಇಂಡಿಯಾ ಫೈನಲ್ ಆಡಲಿದೆ.

T20 World Cup 2026: ಸೆಮಿಫೈನಲ್ ಪಂದ್ಯ ರದ್ದಾದ್ರೆ ಯಾರು ಫೈನಲ್​ಗೆ?
T20 World Cup 2026
ಝಾಹಿರ್ ಯೂಸುಫ್
|

Updated on: Mar 03, 2026 | 7:34 AM

Share

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ನಾಳೆ (ಮಾರ್ಚ್ 4) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಗುರುವಾರ ಜರುಗಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿ ಅಥವಾ ಕಾರಣಾಂತರಗಳಿಂದ ರದ್ದಾದರೆ ಯಾರು ಫೈನಲ್​ಗೇರಲಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ.  ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…

  • ಮೀಸಲು ದಿನ:  ಸೆಮಿಫೈನಲ್​ ಪಂದ್ಯಕ್ಕೆ ನಿಗದಿಪಡಿಸಿದ ದಿನದಂದು ಆಟ ಸಾಧ್ಯವಾಗದಿದ್ದರೆ, ಮರುದಿನ (ರಿಸರ್ವ್ ಡೇ) ಪಂದ್ಯ ನಡೆಯುತ್ತದೆ. ಅಂದರೆ ಮಾರ್ಚ್ 4 ರ ಪಂದ್ಯಕ್ಕೆ ಮೀಸಲು ದಿನವಾಗಿ ಮಾರ್ಚ್ 5 ಅನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಮಾರ್ಚ್ 5 ರ ಪಂದ್ಯದ ಮೀಸಲು ದಿನ ಮಾರ್ಚ್ 6 .
  • ಪಂದ್ಯ ರದ್ದು: ಮೀಸಲು ದಿನದಂದೂ ಪಂದ್ಯ ನಡೆಯದಿದ್ದರೆ ಮಾತ್ರ ಸೆಮಿಫೈನಲ್ ಪಂದ್ಯವನ್ನು ರದ್ದು ಮಾಡಲಾಗುತ್ತದೆ.
  • ಯಾರು ಫೈನಲ್​​ಗೆ: ಸೆಮಿಫೈನಲ್ ಪಂದ್ಯ ರದ್ದಾದರೆ ಸೂಪರ್ 8 ಹಂತದ ಅಂಕಪಟ್ಟಿಯಲ್ಲಿ ಮೇಲಿರುವ ತಂಡ ಫೈನಲ್‌ಗೆ ಹೋಗುತ್ತದೆ.

ಸೆಮಿಫೈನಲ್ ಸನ್ನಿವೇಶ:

  • ಸೆಮಿಫೈನಲ್ 1 (ಸೌತ್ ಆಫ್ರಿಕಾ vs ನ್ಯೂಝಿಲೆಂಡ್): ಈ ಪಂದ್ಯ ರದ್ದಾದರೆ ಸೌತ್ ಆಫ್ರಿಕಾ ಫೈನಲ್‌ಗೆ ಹೋಗುತ್ತದೆ. ಏಕೆಂದರೆ ಸೌತ್ ಆಫ್ರಿಕಾ ತಂಡವು ಗ್ರೂಪ್ 1 ರಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
  • ಸೆಮಿಫೈನಲ್ 2 (ಭಾರತ vs ಇಂಗ್ಲೆಂಡ್): ಈ ಪಂದ್ಯ ರದ್ದಾದರೆ ಇಂಗ್ಲೆಂಡ್ ಫೈನಲ್‌ಗೆ ಹೋಗುತ್ತದೆ. ಏಕೆಂದರೆ ಇಂಗ್ಲೆಂಡ್ ಗ್ರೂಪ್ 2 ರಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ ಗ್ರೂಪ್ 1 ರಲ್ಲಿ ಎರಡನೇ ಸ್ಥಾನದಲ್ಲಿದೆ.

ಅಂದರೆ ಸೆಮಿಫೈನಲ್ ಪಂದ್ಯವು ನಿಗದಿತ ದಿನದಂದು ಸ್ಥಗಿತಗೊಂಡರೆ ಮರುದಿನ ಪಂದ್ಯವನ್ನು ಆಯೋಜಿಸಲಾಗುತ್ತದೆ. ಮೀಸಲು ದಿನದಂದು ಕೂಡ ಮ್ಯಾಚ್ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಮಾತ್ರ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಹೀಗೆ ರದ್ದಾದರೆ ಸೂಪರ್-8 ಸುತ್ತಿನ ಅಂಕಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಿದ್ದಾರೆ.

ಇಲ್ಲಿ ಸೂಪರ್-8 ಸುತ್ತಿನ ಗ್ರೂಪ್-1 ರ ಅಂಕಪಟ್ಟಿಯಲ್ಲಿ ಸೌತ್ ಆಫ್ರಿಕಾ ತಂಡವು ಅಗ್ರಸ್ಥಾನದಲ್ಲಿದ್ದು, ಭಾರತ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಗ್ರೂಪ್-2 ರ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ನ್ಯೂಝಿಲೆಂಡ್ ದ್ವಿತೀಯ ಸ್ಥಾನದಲ್ಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಂಡ ಟೀಮ್ ಇಂಡಿಯಾ

ಅದರಂತೆ ಸೆಮಿಫೈನಲ್ ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ ಸೂಪರ್-8 ಸುತ್ತಿನ ಅಂಕ ಪಟ್ಟಿಗಳಲ್ಲಿ ಅಗ್ರಸ್ಥಾನದಲ್ಲಿರುವ ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳು ಫೈನಲ್​ಗೇರಲಿವೆ.

Follow Us
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?