Ramayana Movie
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ದೃಶ್ಯಕಾವ್ಯವಾಗಿದೆ. ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ಲಂಕಾಧಿಪತಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರೊಂದಿಗೆ ಹಿರಿಯ ನಟರು ದಶರಥ ಸೇರಿದಂತೆ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಾಂತ್ರಿಕವಾಗಿ ಅತ್ಯುನ್ನತ ಗುಣಮಟ್ಟ ಹೊಂದಿರುವ ಈ ಚಿತ್ರಕ್ಕೆ ಹಕೀಮ್ ಅಲಿ ಅವರ ಛಾಯಾಗ್ರಹಣ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಮತ್ತು ಹನ್ಸ್ ಜಿಮ್ಮರ್ ಅವರ ಹಿನ್ನೆಲೆ ಸಂಗೀತ ಇದೆ. ಹಾಲಿವುಡ್ ಮಟ್ಟದ ಅದ್ದೂರಿ ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಈ ಮಹಾಕಾವ್ಯವು ದೀಪಾವಳಿಗೆ ರಿಲೀಸ್ ಆಗಲಿದೆ. ಈ ಚಿತ್ರ ಎರಡು ಭಾಗದಲ್ಲಿ ಬರಲಿದ್ದು, 4000 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗಿದೆ.
ಇನ್ನೂ ಹೆಚ್ಚು ಓದಿ‘ರಾಮಾಯಣ’ ಚಿತ್ರದ ಸಂಭಾವನೆಯನ್ನು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡಿದ ಸ್ಟಾರ್ ನಟ
ಬಾಲಿವುಡ್ ನಟ ವಿವೇಕ್ ಒಬೆರಾಯ್ ತಮ್ಮ 50ನೇ ಹುಟ್ಟುಹಬ್ಬದ ನೆನಪಿನಲ್ಲಿ ಕ್ಯಾನ್ಸರ್ ಪೀಡಿತ 50 ಮಕ್ಕಳ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದಾರೆ. 'ರಾಮಾಯಣ' ಸಿನಿಮಾದಿಂದ ಬಂದ ಸಂಪೂರ್ಣ ಸಂಭಾವನೆಯನ್ನು ಈ ಮಾನವೀಯ ಕಾರ್ಯಕ್ಕೆ ದೇಣಿಗೆ ನೀಡಿದ್ದಾರೆ. ಈ ಮೂಲಕ ಕಳೆದ ವರ್ಷ ನೀಡಿದ್ದ ಮಾತನ್ನು ಈಡೇರಿಸಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.
- Rajesh Duggumane
- Updated on: Sep 23, 2026
- 9:07 am
‘ರಾಮಾಯಣ’ದ ಇಂಗ್ಲೀಷ್ ಮತ್ತು ಹಿಂದಿ ಆವೃತ್ತಿಯಲ್ಲಿ ಇರಲಿದೆ ಭಿನ್ನತೆ
‘ರಾಮಾಯಣ’ ಸಿನಿಮಾವು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾನಲ್ಲಿ ರಣ್‌ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಅವರುಗಳು ಮುಖ್ಯವಾದ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಅದ್ಧೂರಿಯಾಗಿ ರಿಲೀಸ್ ಮಾಡಲು ಚಿತ್ರತಂಡ ಯೋಜಿಸಿದೆ. ಆದರೆ ಸಿನಿಮಾದ ಭಾರತೀಯ ಆವೃತ್ತಿಗೂ ಇಂಗ್ಲೀಷ್ ಆವೃತ್ತಿಗೂ ಸಾಕಷ್ಟು ಭಿನ್ನತೆ ಇರಲಿದೆಯಂತೆ. ಏನದು?
- Manjunatha C
- Updated on: Sep 19, 2026
- 5:25 pm
‘ರಾಮಾಯಣ’ಕ್ಕೂ ಮೊದಲು ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಟ್ರೇಲರ್ ಬಿಡುಗಡೆ
ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾ ಬಿಡುಗಡೆಯಾಗುವ ಮುನ್ನವೇ 'ಮಹಾಕಾವ್ಯ ಶ್ರೀ ರಾಮಾಯಣ ಕಥಾ' ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಅಭಿಷೇಕ್ ಸಿಂಗ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ 25 ರಂದು ಸಿನಿಮಾ ತೆರೆಕಾಣಲಿದೆ. ದೇವ್ ಶರ್ಮಾ ಹಾಗೂ ಅಂಜಲಿ ಅರೋರಾ ಮುಖ್ಯ ಪಾತ್ರದಲ್ಲಿದ್ದಾರೆ.
- Shreelaxmi H
- Updated on: Sep 18, 2026
- 7:44 am
‘ರಾಮಾಯಣ’ ಚಿತ್ರದ ‘ಜೈ ಜೈ ರಾಮ್’ ಹಾಡು ಬಿಡುಗಡೆ: ಶ್ರೇಯಾ-ಅರಿಜಿತ್ ಕಂಠಕ್ಕೆ ಅಭಿಮಾನಿಗಳು ಫಿದಾ
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಮೊದಲ ಹಾಡು ‘ಜೈ ಜೈ ರಾಮ್’ ಗಣೇಶ ಚತುರ್ಥಿಯಂದು ಬಿಡುಗಡೆಯಾಗಿದೆ. ಅರಿಜಿತ್ ಸಿಂಗ್, ಶ್ರೇಯಾ ಘೋಷಾಲ್ ಗಾಯನ ಮತ್ತು ಎ.ಆರ್. ರೆಹಮಾನ್ ಸಂಗೀತಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ನವೆಂಬರ್ 6 ರಂದು ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ನಟನೆಯ ಈ ಸಿನಿಮಾ ತೆರೆಗೆ ಬರಲಿದೆ.
- Rajesh Duggumane
- Updated on: Sep 14, 2026
- 2:51 pm
‘ರಾಮಾಯಣ’ ಸಿನಿಮಾಗೆ ಇನ್ನೂ ಶುರುವಾಗಿಲ್ಲ ಪ್ರಚಾರ; ಕಾರಣವೇನು?
ರಣಬೀರ್ ಕಪೂರ್ ಹಾಗೂ ಯಶ್ ಅಭಿನಯದ 'ರಾಮಾಯಣ' ಸಿನಿಮಾದ ಪ್ರಚಾರ ಕಾರ್ಯ ಇನ್ನೂ ಆರಂಭವಾಗದಿರುವುದು ಚಿತ್ರರಂಗದಲ್ಲಿ ಅಚ್ಚರಿ ಮೂಡಿಸಿದೆ. 'ಟಾಕ್ಸಿಕ್' ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಕಂಡಿಲ್ಲ. ಇದು ಅಂತಹ ದೊಡ್ಡ ಬದಲಾವಣೆ ಮಾಡೋದಿಲ್ಲ ಎನ್ನಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.
- Shreelaxmi H
- Updated on: Sep 5, 2026
- 11:22 am
ರಾವಣನ ಪಾತ್ರಕ್ಕೆ ರಾಮನಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಸರಿಯಲ್ಲ; ಮುಕೇಶ್ ಖನ್ನಾ
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ರಣಬೀರ್ ಅವರ 'ಅನಿಮಲ್' ಚಿತ್ರದ ಹಿಂಸಾತ್ಮಕ ಇಮೇಜ್ ಈ ಪೌರಾಣಿಕ ಪಾತ್ರದ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು ಹಾಗೂ ಮಕ್ಕಳಿಗೆ ತಪ್ಪು ಸಂದೇಶ ನೀಡಬಹುದು ಎಂದು ಹಿರಿಯ ನಟ ಮುಕೇಶ್ ಖನ್ನಾ ಕಳವಳ ವ್ಯಕ್ತಪಡಿಸಿದ್ದಾರೆ.
- Shreelaxmi H
- Updated on: Sep 5, 2026
- 8:05 am
‘ರಾಮಾಯಣದ ರಾವಣನ ಗರ್ಜನೆ ದೇವರಾಜ್ ಅವರದ್ದಲ್ಲ’; ಪ್ರಜ್ವಲ್ ಸ್ಪಷ್ಟನೆ
'ರಾಮಾಯಣ' ಸಿನಿಮಾದಲ್ಲಿ ರಾವಣನ ಧ್ವನಿ ನಟ ದೇವರಾಜ್ ಅವರದ್ದು ಎಂಬ ವದಂತಿಗೆ ನಟ ಪ್ರಜ್ವಲ್ ದೇವರಾಜ್ ತೆರೆ ಎಳೆದಿದ್ದಾರೆ. ಆ ಗಂಭೀರ ಗರ್ಜನೆ ಸ್ವತಃ ನಟ ಯಶ್ ಅವರ ಸ್ವಂತ ಧ್ವನಿಯಾಗಿದೆ. ಯಶ್ ಅವರ ಕಂಠಪವರ್ ಬಗ್ಗೆ ಹಿರಿಯ ನಟ ದೇವರಾಜ್ ಅವರ ಬಳಿ ಯಶ್ ಮಾತನಾಡಿದ್ದ ವಿಚಾರವನ್ನು ಪ್ರಜ್ವಲ್ ಹಂಚಿಕೊಂಡಿದ್ದಾರೆ.
- Rajesh Duggumane
- Updated on: Aug 20, 2026
- 1:03 pm
ಸ್ಕ್ರೀನ್‌ಎಕ್ಸ್ ಫಾರ್ಮ್ಯಾಟ್‌ನಲ್ಲಿ ಬಿಡುಗಡೆ ಆಗಲಿರುವ ಭಾರತದ ಮೊದಲ ಸಿನಿಮಾ ‘ರಾಮಾಯಣ’
ಈ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಜಾಗತಿಕವಾಗಿ ತೆರೆಕಾಣಲಿರುವ ‘ರಾಮಾಯಣ’ ಸಿನಿಮಾದಿಂದ ಪ್ರೇಕ್ಷಕರಿಗೆ ಅದ್ಭುತವಾದ ಅನುಭವ ಸಿಗಲಿದೆ. ಅದಕ್ಕಾಗಿ ಮಾಮೂಲಿ ಚಿತ್ರಮಂದಿರಗಳ ಜೊತೆಗೆ ‘ಸ್ಕ್ರೀನ್‌ಎಕ್ಸ್’ ಮತ್ತು ‘4ಡಿಎಕ್ಸ್’ ರೂಪದಲ್ಲೂ ಈ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Aug 18, 2026
- 8:32 pm
ಚೀನಾದಲ್ಲೂ ‘ರಾಮಾಯಣ’ ಸಿನಿಮಾದ ಟ್ರೇಲರ್ ನೋಡಿ ಫಿದಾ ಆದ ಪ್ರೇಕ್ಷಕರು
‘ರಾಮಾಯಣ: ಪಾರ್ಟ್ 1’ ಸಿನಿಮಾ ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 6ರಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಜಾಗತಿಕ ವಿತರಣೆಯನ್ನು ಸೋನಿ ಪಿಕ್ಚರ್ಸ್ ಸಂಸ್ಥೆ ವಹಿಸಿಕೊಂಡಿದ್ದು, ಚೀನಾದಲ್ಲಿ ‘ರಾಮಾಯಣ: ದಿ ಲೆಜೆಂಡ್ ಆಫ್ ದಿ ಪ್ರಿನ್ಸ್’ ಎಂಬ ಹೆಸರಿನಲ್ಲಿ ಬಿಡುಗಡೆ ಆಗಲಿದೆ.
- Madan Kumar
- Updated on: Aug 16, 2026
- 2:37 pm
‘ರಾಮಾಯಣ’ ಚಿತ್ರದ 4 ಸಾವಿರ ಕೋಟಿ ರೂ. ಬಜೆಟ್ ರಹಸ್ಯ ಬಿಚ್ಚಿಟ್ಟ ಯಶ್: ಇದು ಹಾಲಿವುಡ್ ಲೆಕ್ಕಾಚಾರ
ಈವರೆಗೂ ಭಾರತೀಯ ಚಿತ್ರರಂಗ ಕಂಡುಕೇಳರಿಯದ ರೀತಿಯಲ್ಲಿ ‘ರಾಮಾಯಣ’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದ ಬಜೆಟ್ ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ ಎಂಬುದನ್ನು ಕೇಳಿದ ಬಳಿಕ ಹಲವರಿಗೆ ಅನುಮಾನ ಮೂಡಿತ್ತು. ಆ ಬಗ್ಗೆ ನಟ, ಸಹ-ನಿರ್ಮಾಪಕ ಯಶ್ ಅವರು ಸ್ಪಷ್ಟನೆ ನೀಡಿದ್ದಾರೆ.
- Madan Kumar
- Updated on: Aug 16, 2026
- 1:10 pm
‘ರಾವಣನ ಪಾತ್ರವನ್ನು ನನಗಿಂತ ಉತ್ತಮವಾಗಿ ಯಾರೂ ಅಭಿನಯಿಸಲು ಸಾಧ್ಯವಿಲ್ಲ’; ಯಶ್
ದೇಶದ ಜನಪ್ರಿಯ 'ಆಪ್ ಕಿ ಅದಾಲತ್' ಶೋಗೆ ಭೇಟಿ ನೀಡಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಭಾಜನರಾಗಿದ್ದಾರೆ. ಈ ವೇದಿಕೆಯಲ್ಲಿ 'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನ ಬದಲು ರಾವಣನ ಪಾತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆ ಯಶ್ ಖಡಕ್ ಸ್ಪಷ್ಟನೆ ನೀಡಿದ್ದಾರೆ.
- Rajesh Duggumane
- Updated on: Aug 15, 2026
- 9:08 am
ಚೀನಾದಲ್ಲೂ ಅಬ್ಬರಿಸಲಿದೆ ‘ರಾಮಾಯಣ’ ಸಿನಿಮಾ; ಆದರೆ, ಬದಲಾಗಲಿದೆ ಶೀರ್ಷಿಕೆ
ಯಶ್, ಸಾಯಿ ಪಲ್ಲವಿ, ರಣಬೀರ್ ಕಪೂರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾಗೆ ಸಖತ್ ಬೇಡಿಕೆ ಇದೆ. ಭಾರತದಲ್ಲಿ ಮಾತ್ರವಲ್ಲದೇ ಚೀನಾದಲ್ಲೂ ಈ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಚಿತ್ರದ ಹೆಸರನ್ನು ಬದಲಾಯಿಸಿ ಚೀನಾದಲ್ಲಿ ರಿಲೀಸ್ ಮಾಡಲಾಗುತ್ತಿದೆ.
- Madan Kumar
- Updated on: Aug 14, 2026
- 8:01 pm