ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಕ್ರಿಶ್ಚಿಯನ್ ಶಾಲೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನಲ್ಲಿಂದು ಮಾತನಾಡಿದ ಅವರು. ದಸರಾ ನಮ್ಮ ನಾಡ ಹಬ್ಬ.ಆದರೂ ಕ್ರಿಶ್ಚಿಯನ್ ಶಾಲೆಗಳಲ್ಲಿ ಪರೀಕ್ಷೆಗಳನ್ನು ಇಟ್ಟಿದ್ದಾರೆ. ಕ್ರಿಶ್ಚಿಯನ್ ಶಾಲೆಗಳಲ್ಲಿ ಶೇ.90 ರಷ್ಟು ಹಿಂದು ವಿದ್ಯಾರ್ಥಿಗಳು, ಶಿಕ್ಷಕರಿದ್ದಾರೆ. ಹೀಗಾಗಿ ಕ್ರಿಶ್ಚಿಯನ್ ಶಾಲೆಗಳು ದಸರಾ ಹಬ್ಬಕ್ಕೆ ಹೆಚ್ಚು ರಜೆಯನ್ನು ಕೊಡಬೇಕು.
ಮಂಗಳೂರು, (ಸೆಪ್ಟೆಂಬರ್ 28): ದಸರಾ ರಜೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಕ್ರಿಶ್ಚಿಯನ್ ಶಾಲೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನಲ್ಲಿಂದು ಮಾತನಾಡಿದ ಅವರು. ದಸರಾ ನಮ್ಮ ನಾಡ ಹಬ್ಬ.ಆದರೂ ಕ್ರಿಶ್ಚಿಯನ್ ಶಾಲೆಗಳಲ್ಲಿ ಪರೀಕ್ಷೆಗಳನ್ನು ಇಟ್ಟಿದ್ದಾರೆ. ಕ್ರಿಶ್ಚಿಯನ್ ಶಾಲೆಗಳಲ್ಲಿ ಶೇ.90 ರಷ್ಟು ಹಿಂದು ವಿದ್ಯಾರ್ಥಿಗಳು, ಶಿಕ್ಷಕರಿದ್ದಾರೆ. ಹೀಗಾಗಿ ಕ್ರಿಶ್ಚಿಯನ್ ಶಾಲೆಗಳು ದಸರಾ ಹಬ್ಬಕ್ಕೆ ಹೆಚ್ಚು ರಜೆಯನ್ನು ಕೊಡಬೇಕು. ಆದ್ರೆ ಕ್ರಿಸ್ ಮಸ್ ಹಬ್ಬ ಒಂದೇ ದಿನ ಇರೋದು. ಆದ್ರೆ ಯಾಕೆ ಹೆಚ್ಚು ದಿನ ರಜೆ ಕೊಡ್ತಾರೆ. ಈ ಮೂಲಕ ಕ್ರಿಶ್ಚಿಯನ್ ಧರ್ಮ ಹೇರುತ್ತಾ ಕನ್ವರ್ಟ್ ಮಾಡುತ್ತಿದ್ದಾರೆ. ಇದು ನಿಲ್ಲದಿದ್ರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

