AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು: 2 ಬಾರಿ ನೋಟಿಸ್​ ನೀಡಿದ್ರೂ ವಿಚಾರಣೆಗೆ ಹಾಜರಾಗದ ನೆರೆ ರಾಜ್ಯದ ವ್ಯಕ್ತಿ

ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು: 2 ಬಾರಿ ನೋಟಿಸ್​ ನೀಡಿದ್ರೂ ವಿಚಾರಣೆಗೆ ಹಾಜರಾಗದ ನೆರೆ ರಾಜ್ಯದ ವ್ಯಕ್ತಿ

ಶಿವಪ್ರಸಾದ್​ ಬಿ.
| Edited By: |

Updated on: Nov 28, 2026 | 11:29 AM

Share

ಸಿದ್ದರಾಮಯ್ಯ ಕುರಿತ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು ಪತ್ತೆಯಾಗಿದ್ದು, ಕೃಪಾ ಆಳ್ವಾ ಪರಿಚಿತ ಕೇರಳ ಮೂಲದ ವ್ಯಕ್ತಿಗೆ ಬೆಂಗಳೂರು ಸೈಬರ್ ಪೊಲೀಸರು ಎರಡು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಗೈರಾಗಿದ್ದಾನೆ. ಇದೇ ವ್ಯಕ್ತಿಯ ಮೂಲಕ ಸ್ಟಿಂಗ್​ ಆಪರೇಷನ್​​ನಲ್ಲಿದ್ದ ಮಹಿಳೆ ಕೃಪಾ ಆಳ್ವಾರನ್ನು ಸಂಪರ್ಕಿಸಿದ್ದಳು. ಕೃಪಾ ಆಳ್ವಾ ಮಕ್ಕಳ ಆಯೋಗದಲ್ಲಿದ್ದ ಸಂದರ್ಭದಲ್ಲಿ ಕೇರಳದ ಈತ ಕಚೇರಿಯಲ್ಲಿ ಭಾಷಾಂತರನಾಗಿ ಕೆಲಸ ಮಾಡ್ತಿದ್ದ ಮಾಹಿತಿ ಸಿಕ್ಕಿದೆ.

ಬೆಂಗಳೂರು, ನವೆಂಬರ್​​ 28: ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸ್ಟಿಂಗ್​ ಆಪರೇಷನ್ ಪ್ರಕರಣ ಸಂಬಂಧ ಬೆಂಗಳೂರು ಕೇಂದ್ರ ಸೈಬರ್​ ಪೊಲೀಸರ ತನಿಖೆ ವೇಳೆ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣಕ್ಕೆ ನೆರೆ ರಾಜ್ಯದ ನಂಟು ಕಂಡುಬಂದಿದ್ದು, ಕೇರಳ ಮೂಲದ ವ್ಯಕ್ತಿಗೆ ನೋಟಿಸ್ ಕೊಡಲಾಗಿದೆ. 2 ಬಾರಿ ನೋಟಿಸ್​ ನೀಡಿದ್ರೂ ಆತ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದ್ದು, ಈತ ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ. ಇದೇ ವ್ಯಕ್ತಿಯ ಮೂಲಕ ಸ್ಟಿಂಗ್​ ಆಪರೇಷನ್​​ನಲ್ಲಿದ್ದ ಮಹಿಳೆ ಕೃಪಾ ಆಳ್ವಾರನ್ನು ಸಂಪರ್ಕಿಸಿದ್ದಳು. ಕೃಪಾ ಆಳ್ವಾ ಮಕ್ಕಳ ಆಯೋಗದಲ್ಲಿದ್ದ ಸಂದರ್ಭದಲ್ಲಿ ಕೇರಳದ ಈತ ಕಚೇರಿಯಲ್ಲಿ ಭಾಷಾಂತರನಾಗಿ ಕೆಲಸ ಮಾಡ್ತಿದ್ದ ಮಾಹಿತಿ ಸಿಕ್ಕಿದೆ. ಆದ್ರೆ ಈ ವ್ಯಕ್ತಿಗೂ ಸ್ಟಿಂಗ್​​ನಲ್ಲಿದ್ದ ಮಹಿಳೆ ಸಂಪರ್ಕ ಇರೋದು ನಿಜಾನಾ? ಕೃಪಾ ಆಳ್ವಾ ಬಳಿ ಮಹಿಳೆಯನ್ನ ಕರೆತಂದಿದ್ದು ಇದೇ ವ್ಯಕ್ತಿನಾ? ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More