ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ಸಿಟಿ ಜನರು ತತ್ತರಿಸಿದ್ದಾರೆ. ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ಗೆ ನೀರು ನುಗ್ಗಿತ್ತು. ಇದ್ರಿಂದ 1,500 ನಿವಾಸಿಗಳಿಗೆ ಜಲದಿಗ್ಬಂಧನ ಹಾಕಲಾಗಿತ್ತು. ಅಪಾರ್ಟ್ಮೆಂಟ್ನಿಂದ ಹೊರ ಬರಲು ನಿವಾಸಿಗಳು ಪರದಾಡಿದ್ದಾರೆ. ಹೀಗಾಗಿ ಬೋಟ್, ಟ್ರ್ಯಾಕ್ಟರ್ ಮೂಲಕ ನಿವಾಸಿಗಳ ಸ್ಥಳಾಂತರ ಮಾಡಲಾಗಿದೆ.