AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌದೆ ಒಲೆಯಲ್ಲಿ ಸಿದ್ಧವಾಗುತ್ತಿದೆ ಬಿಸಿ ಬಿಸಿ ಹೋಳಿಗೆ! ಮಲ್ಲೇಶ್ವರಂನಲ್ಲಿ ಕಿಲೋಮೀಟರ್ ಉದ್ದದ ಕ್ಯೂ

ಸೌದೆ ಒಲೆಯಲ್ಲಿ ಸಿದ್ಧವಾಗುತ್ತಿದೆ ಬಿಸಿ ಬಿಸಿ ಹೋಳಿಗೆ! ಮಲ್ಲೇಶ್ವರಂನಲ್ಲಿ ಕಿಲೋಮೀಟರ್ ಉದ್ದದ ಕ್ಯೂ

ಅಕ್ಷಯ್​ ಪಲ್ಲಮಜಲು​​
|

Updated on: Mar 19, 2026 | 2:26 PM

Share

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಪ್ರಸಿದ್ಧ ಹೋಳಿಗೆ ಮನೆ ಮುಂದೆ ನೂರು ಮೀಟರ್‌ಗೂ ಅಧಿಕ ಉದ್ದದ ಕ್ಯೂ ಕಂಡುಬಂದಿದೆ. ಬೆಂಗಳೂರಿನಲ್ಲಿ ಸಿಲಿಂಡರ್ ಕೊರತೆಯಿಂದ ಹೋಟೆಲ್ ಮಾಲೀಕರು ಸೌದೆ ಒಲೆ ಬಳಸಿ ಹೋಳಿಗೆ ತಯಾರಿಸುತ್ತಿದ್ದಾರೆ. ಸಮಸ್ಯೆಗಳ ನಡುವೆಯೂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಗ್ರಾಹಕರು ಉತ್ಸುಕರಾಗಿದ್ದು, ಹೋಳಿಗೆ ಖರೀದಿಗೆ ಕಾತರದಿಂದ ಕಾಯುತ್ತಿದ್ದಾರೆ.

ಬೆಂಗಳೂರು, ಮಾ.19: ಯುಗಾದಿ ಹಬ್ಬದ ಸಂಭ್ರಮದ ನಡುವೆಯೂ ಬೆಂಗಳೂರಿನಲ್ಲಿ ಸಿಲಿಂಡರ್ ಕೊರತೆಯು ಹೋಟೆಲ್ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ. ಈ ವರ್ಷ, ಅನೇಕ ಹೋಟೆಲ್‌ಗಳು ಸಾಂಪ್ರದಾಯಿಕ ಸೌದೆ ಒಲೆಗಳ ಮೇಲೆ ಅಡುಗೆ ಮಾಡಲು ಮೊರೆ ಹೋಗಿವೆ. ಇದರ ಮಧ್ಯೆಯೂ ಯುಗಾದಿಯ ಪ್ರಮುಖ ಸಿಹಿ ತಿಂಡಿ ಹೋಳಿಗೆಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಹೋಳಿಗೆ ಮನೆ ಮುಂದೆ ಹೋಳಿಗೆ ಖರೀದಿಸಲು ನೂರಾರು ಜನರು ಮುಗಿಬಿದ್ದಿರುವುದು ಕಂಡುಬಂದಿದೆ. ಸುಮಾರು 100 ಮೀಟರ್‌ಗೂ ಅಧಿಕ ಉದ್ದದ ಸರತಿ ಸಾಲು ಹೋಟೆಲ್‌ನಿಂದ ರಸ್ತೆಯುದ್ದಕ್ಕೂ ವಿಸ್ತರಿಸಿದೆ. ಸಿಲಿಂಡರ್ ಇಲ್ಲದ ಕಾರಣ ಹೋಳಿಗೆ ಮನೆ ಮಾಲೀಕರು ಸೌದೆ ಒಲೆಯಲ್ಲಿ ಹೋಳಿಗೆ ತಯಾರಿಸುತ್ತಿದ್ದು, ಗ್ರಾಹಕರಿಗೆ ವಿತರಿಸುತ್ತಿದ್ದಾರೆ. ಪ್ರತಿ ವರ್ಷ 7 ರಿಂದ 8 ಸಾವಿರಕ್ಕೂ ಹೆಚ್ಚು ಹೋಳಿಗೆಗಳು ಮಾರಾಟವಾಗುತ್ತಿದ್ದವು. ಆದರೆ ಈ ವರ್ಷ ಸಿಲಿಂಡರ್ ಕೊರತೆಯಿಂದ ವ್ಯಾಪಾರಕ್ಕೆ ಹಿನ್ನಡೆಯಾಗಿದೆ. ಆದಾಗ್ಯೂ, ಗ್ರಾಹಕರನ್ನು ಕಳೆದುಕೊಳ್ಳಲು ಇಚ್ಛಿಸದ ಮಾಲೀಕರು ಎಲ್ಲಾ ಅಡೆತಡೆಗಳ ನಡುವೆಯೂ ಹೋಳಿಗೆ ನೀಡಲು ಶ್ರಮಿಸುತ್ತಿದ್ದಾರೆ. “ಎಷ್ಟೇ ಸಮಸ್ಯೆಗಳಿದ್ದರೂ ಯುಗಾದಿ ಹಬ್ಬವನ್ನು ಹೋಳಿಗೆಯೊಂದಿಗೆ ಆಚರಿಸಬೇಕು” ಎಂಬುದು ಗ್ರಾಹಕರ ಮಾತಾಗಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More