ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ಪ್ರಸ್ತುತ ನಾನು ಟಿವಿ9 ಕನ್ನಡ ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.
ಕೋಗಿಲು ಬಡಾವಣೆ ತೆರವು: ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ ಎಂದ ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅನಧಿಕೃತ ಮನೆಗಳನ್ನು ತೆರವುಗೊಳಿಸಲಾಗಿದೆ. 2021ರಿಂದ ಅನಾಥರೈಸ್ಡ್ ಆಗಿದ್ದ ಈ ವಸತಿಗಳು ತ್ಯಾಜ್ಯ ನಿರ್ವಹಣಾ ಸ್ಥಳದ ಸಮೀಪದಲ್ಲಿದ್ದವು. ನೋಟಿಸ್ ನೀಡಿದರೂ ಖಾಲಿ ಮಾಡದ ಕಾರಣ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಸಿಎಂ ಸಿದ್ಧರಾಮಯ್ಯ ಮಾನವೀಯ ದೃಷ್ಟಿಯಿಂದ ವಲಸಿಗ ನಿವಾಸಿಗಳಿಗೆ ಪರ್ಯಾಯ ಜಾಗ ಹಾಗೂ ವಸತಿ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ.
- Akshay Pallamajalu
- Updated on: Dec 27, 2025
- 4:47 pm
Video: 4.5 ಲಕ್ಷ ರೂ. ಮೌಲ್ಯದ ಮೂರು ಹಸುಗಳ ಕಳ್ಳತನ, ಸಿಸಿಟಿವಿ ವಿಡಿಯೋ ವೈರಲ್
ಬೆಂಗಳೂರಿನ ಸಂಪಿಗೇಹಳ್ಳಿಯ ಮಂಜುನಾಥ ಲೇಔಟ್ನಲ್ಲಿ ₹4.5 ಲಕ್ಷ ಮೌಲ್ಯದ 3 ಹಸುಗಳನ್ನು ಕಳ್ಳತನ ಮಾಡಲಾಗಿದೆ. ಲಕ್ಷ್ಮಣ್ ಎಂಬುವರಿಗೆ ಸೇರಿದ ದನಗಳನ್ನು ಐದು ಜನರ ತಂಡ ಮಿನಿ ಟೆಂಪೋದಲ್ಲಿ ಕದ್ದೊಯ್ದಿದೆ. ಈ ಘಟನೆ ಗುರುವಾರ ರಾತ್ರಿ 1.20ಕ್ಕೆ ನಡೆದಿದ್ದು, ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
- Akshay Pallamajalu
- Updated on: Dec 27, 2025
- 4:02 pm
“ತಾಯಂದಿರಿಗಾಗಿ ಕಾಯ್ದಿರಿಸಲಾಗಿದೆ”: ಬೆಂಗಳೂರು ಮಾಲ್ನಲ್ಲಿ ಗರ್ಭಿಣಿಯರಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆ
ಬೆಂಗಳೂರಿನ ನೆಕ್ಸಸ್ ಮಾಲ್ ಗರ್ಭಿಣಿಯರಿಗಾಗಿ ವಿಶೇಷ ಗುಲಾಬಿ ಥೀಮ್ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ಇದು ಮಾಲ್ನ ದಟ್ಟಣೆಯಂದ ತಾಯಂದಿರು ತಪ್ಪಿಸಿಕೊಳ್ಳಲು ಹಾಗೂ ಸುರಕ್ಷತೆಯನ್ನು ಕಲ್ಪಿಸುತ್ತದೆ. ಅಕ್ಷಯ್ ರೈನಾ ಹಂಚಿಕೊಂಡ ಈ ವಿಡಿಯೋ ವೈರಲ್ ಆಗಿದ್ದು, ಮಾಲ್ನ ಈ ಪರಿಕಲ್ಪನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇಂತಹ ವ್ಯವಸ್ಥೆಯನ್ನು ಇತರ ಮಾಲ್ಗಳೂ ಅಳವಡಿಸಿಕೊಳ್ಳಬೇಕೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
- Akshay Pallamajalu
- Updated on: Dec 27, 2025
- 3:07 pm
ಶ್ರೀನಗರ: ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಖ್ಯಾತ ಸಿಬಿಐ ವಕೀಲ
ಜಮ್ಮು-ಶ್ರೀನಗರ ಹೆದ್ದಾರಿಯ ಬನಿಹಾಲ್ ಬಳಿ ಭೀಕರ ಅಪಘಾತದಲ್ಲಿ 35 ವರ್ಷದ ಸಿಬಿಐ ವಕೀಲ ಶೇಖ್ ಆದಿಲ್ ನಬಿ ಸಾವನ್ನಪ್ಪಿದ್ದಾರೆ. ಹಿಂದಿನಿಂದ ವೇಗವಾಗಿ ಬಂದ ಕಾರು ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇತ್ತೀಚೆಗೆ ಸಿಬಿಐನಲ್ಲಿ ಪ್ರಾಸಿಕ್ಯೂಟಿಂಗ್ ಅಧಿಕಾರಿಯಾಗಿ ನೇಮಕಗೊಂಡಿದ್ದ ಆದಿಲ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸಿಲ್ಲ. ಅಪಘಾತಕ್ಕೆ ಕಾರಣನಾದ ಚಾಲಕನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
- Akshay Pallamajalu
- Updated on: Dec 27, 2025
- 1:24 pm
ದೆಹಲಿ ಹೊಸ ವರ್ಷಾಚರಣೆ: ಆಪರೇಷನ್ ಆಘಾಟ್ 3.0 ಅಡಿಯಲ್ಲಿ 500ಕ್ಕೂ ಹೆಚ್ಚು ಜನರ ಬಂಧನ
ದೆಹಲಿ ಪೊಲೀಸರು ಹೊಸ ವರ್ಷಾಚರಣೆಗೆ ಭದ್ರತೆ ನೀಡಲು 'ಆಪರೇಷನ್ ಆಘಾಟ್ 3.0' ನಡೆಸಿದ್ದಾರೆ. ಅಪರಾಧ ತಡೆಗಟ್ಟುವ ಉದ್ದೇಶದಿಂದ ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ 500ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 21 ಅಕ್ರಮ ಶಸ್ತ್ರಾಸ್ತ್ರಗಳು, 7 ಕೆ.ಜಿ. ಗಾಂಜಾ, 12,000 ಮದ್ಯದ ಬಾಟಲಿಗಳು ಮತ್ತು ಲಕ್ಷಾಂತರ ನಗದು ವಶಪಡಿಸಿಕೊಳ್ಳಲಾಗಿದೆ. ಹೊಸ ವರ್ಷದ ಆಚರಣೆಯನ್ನು ಸುರಕ್ಷಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.
- Akshay Pallamajalu
- Updated on: Dec 27, 2025
- 12:38 pm
ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಬುಲ್ಡೋಜರ್ ರಾಜ್’ ನೀತಿಯಿಂದ ಬೀದಿಗೆ ಬಂದ ಮುಸ್ಲಿಂ ಕುಟುಂಬ: ಪಿಣರಾಯಿ ವಿಜಯನ್ ಆಕ್ರೋಶ
ಕೇರಳ ಸಿಎಂ ಪಿಣರಾಯಿ ವಿಜಯನ್ ಬೆಂಗಳೂರಿನಲ್ಲಿ ಮುಸ್ಲಿಂ ವಸತಿಗಳ ನೆಲಸಮವನ್ನು ಖಂಡಿಸಿದ್ದಾರೆ. ಕರ್ನಾಟಕ ಸರ್ಕಾರ ಉತ್ತರ ಪ್ರದೇಶದ 'ಬುಲ್ಡೋಜರ್ ನೀತಿ' ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ. ಫಕೀರ್ ಕಾಲೋನಿ, ವಸೀಮ್ ಲೇಔಟ್ನಲ್ಲಿ ನೋಟಿಸ್ ನೀಡದೆ ಮನೆ ತೆರವುಗೊಳಿಸಿದ್ದರಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಇದು ಸಂವಿಧಾನ ವಿರೋಧಿ ಕ್ರಮ ಎಂದಿದ್ದಾರೆ.
- Akshay Pallamajalu
- Updated on: Dec 27, 2025
- 9:24 am
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್ ಟ್ವಿಸ್ಟ್: ಏಕಾಏಕಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಬಹಿರಂಗ
ಚಿತ್ರದುರ್ಗ ಬಸ್ ಅಗ್ನಿ ದುರಂತದ ತನಿಖೆಯಲ್ಲಿ ಹೊಸ ತಿರುವು ಲಭಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಖಾಸಗಿ ಬಸ್ ಲಾರಿಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಇದೀಗ ಬಸ್ ಒಳಗೆ ರಾಶಿ ರಾಶಿ ಆಯಿಲ್ ಬಾಕ್ಸ್ಗಳು ಪತ್ತೆಯಾಗಿವೆ. ಈ ಆಯಿಲ್ ಬಾಕ್ಸ್ಗಳ ಉಪಸ್ಥಿತಿಯು ದುರಂತದ ತೀವ್ರತೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
- Akshay Pallamajalu
- Updated on: Dec 26, 2025
- 4:59 pm
ಒಂದೇ ಬೈಕ್ನಲ್ಲಿ 5 ಜನ ಸವಾರಿ! 31 ಸಾವಿರ ರೂ. ದಂಡ ಹಾಕಿದ ಪೊಲೀಸರು
ಉತ್ತರ ಪ್ರದೇಶದ ಹಾಪುರದಲ್ಲಿ ಒಂದೇ ಬೈಕ್ನಲ್ಲಿ ಐದು ಜನರು ಅಪಾಯಕಾರಿಯಾಗಿ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಈ ಸಾಹಸ ಮಾಡಿದ್ದು, ಪೊಲೀಸರು ₹31,000 ದಂಡ ವಿಧಿಸಿದ್ದಾರೆ. ಇಂತಹ ಸವಾರಿಗಳು ಸಾರ್ವಜನಿಕರ ಜೀವಕ್ಕೆ ಅಪಾಯಕಾರಿ ಎಂದು ಎಚ್ಚರಿಕೆ ನೀಡಲಾಗಿದೆ. ರಸ್ತೆ ಸುರಕ್ಷತೆ ಹಾಗೂ ನಿಯಮ ಪಾಲನೆ ಅತ್ಯಗತ್ಯ.
- Akshay Pallamajalu
- Updated on: Dec 26, 2025
- 4:38 pm
ಬೆಂಗಳೂರು: ಬುಲೆಟ್ಗೆ ಗುದ್ದಿ ಅರ್ಧ ಕಿಮೀ ಎಳೆದೊಯ್ದ ಕಾರು, ರಸ್ತೆಯುದ್ದಕ್ಕೂ ಬೆಂಕಿಯ ಕಿಡಿ
ಬೆಂಗಳೂರಿನ ಸುಮ್ಮನಹಳ್ಳಿ ಫ್ಲೈಓವರ್ನಲ್ಲಿ ನಡೆದ ಅಘಾತಕಾರಿ ಘಟನೆ ಇದು. ಡಿಸೆಂಬರ್ 24ರಂದು ವೇಗವಾಗಿ ಬಂದ ಎಸ್ಯುವಿ ಕಾರೊಂದು ಬುಲೆಟ್ ಬೈಕ್ ಅನ್ನು ಸುಮಾರು 500 ಮೀಟರ್ಗಳವರೆಗೆ ಎಳೆದುಕೊಂಡು ಹೋಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕರು ಚಾಲಕ ಶ್ರೀನಿವಾಸ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತನಿಖೆಯಲ್ಲಿ ಚಾಲಕ ಮದ್ಯಪಾನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
- Akshay Pallamajalu
- Updated on: Dec 26, 2025
- 3:30 pm
ಗಾನವಿ ಸಾವು ಪ್ರಕರಣ: ‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಒಂದು ದಿನವೂ ಮಲಗಿಲ್ಲ ಅವನು!’
ಬೆಂಗಳೂರಿನಲ್ಲಿ ನವ ವಿವಾಹಿತೆ ಗಾನವಿ ಮದುವೆಯಾದ ಒಂದೂವರೆ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಸೂರಜ್, ಅವರ ಅಣ್ಣ ಸಂಜಯ್ ಮತ್ತು ತಾಯಿ ಜಯಂತಿ ವಿರುದ್ಧ ವರದಕ್ಷಿಣೆ ಮತ್ತು ಮಾನಸಿಕ ಕಿರುಕುಳದ ಆರೋಪ ಕೇಳಿಬಂದಿದೆ. ಗಾನವಿ ಅವರ ಚಿಕ್ಕಪ್ಪ ಕಾರ್ತಿಕ್ ಅವರು, ಪತಿ ಸೂರಜ್ ಮದುವೆಯಾದಾಗಿನಿಂದ ದೈಹಿಕ ನಿಕಟತೆ ನಿರಾಕರಿಸಿ, ಆಸ್ತಿ ಮತ್ತು ಆಭರಣಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಆರೋಪಿಗಳು ಘಟನೆ ನಂತರ ತಲೆಮರೆಸಿಕೊಂಡಿದ್ದು, ಕುಟುಂಬಸ್ಥರು ಬಂಧನಕ್ಕೆ ಆಗ್ರಹಿಸಿದ್ದಾರೆ.
- Akshay Pallamajalu
- Updated on: Dec 26, 2025
- 2:08 pm
ಹಬ್ಬದ ದಿನ ಬೆಂಗಳೂರಿಗೆ ಬರುವಾಗ ಖಾಲಿ ಖಾಲಿ, ಆದರೆ ಹೊರಗೆ ಹೋಗುವಾಗ ಹೇಗಿರುತ್ತದೆ ನೋಡಿ?
ಕ್ರಿಸ್ಮಸ್ ಹಬ್ಬದಂದು ಬೆಂಗಳೂರಿನಲ್ಲಿ ಸಂಚಾರ ವಿಭಿನ್ನವಾಗಿತ್ತು. ವೈರಲ್ ವಿಡಿಯೋವೊಂದು ನಗರಕ್ಕೆ ಪ್ರವೇಶಿಸುವ ರಸ್ತೆಗಳು ಖಾಲಿಯಾಗಿದ್ದರೆ, ನಗರದಿಂದ ಹೊರ ಹೋಗುವ ಮಾರ್ಗಗಳಲ್ಲಿ ಭಾರಿ ವಾಹನ ದಟ್ಟಣೆ ಇರುವುದನ್ನು ತೋರಿಸಿದೆ. ಹಬ್ಬದ ದಿನಗಳಲ್ಲಿ ಬೆಂಗಳೂರಿನ ರಸ್ತೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಈ ಹಾಸ್ಯಮಯ ವಿಡಿಯೋ ವಿವರಿಸುತ್ತದೆ. ನೆಟ್ಟಿಗರು ಈ ವಿಶಿಷ್ಟ ಸಂಚಾರ ಪರಿಸ್ಥಿತಿಗೆ ಪ್ರತಿಕ್ರಿಯಿಸಿದ್ದಾರೆ.
- Akshay Pallamajalu
- Updated on: Dec 26, 2025
- 1:17 pm
ಚಿತ್ರದುರ್ಗ ಬಸ್ ದುರಂತ: ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಚಿತ್ರದುರ್ಗ ಬಸ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಾಸಗಿ ಬಸ್ ಚಾಲಕ ಮೊಹಮ್ಮದ್ ರಫೀಕ್ (42) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಗೋರ್ಲತ್ತು ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟುಬಿದ್ದಿತ್ತು. ಆಪರೇಷನ್ ನಂತರವೂ ಬದುಕುಳಿಯುವ ಭರವಸೆ ಕಡಿಮೆಯಾಗಿತ್ತು ಎಂದು ವೈದ್ಯರು ತಿಳಿಸಿದ್ದರು. ತಮ್ಮನ್ನು ಆಶ್ರಯಿಸಿದ್ದ ಕುಟುಂಬ ಅನಾಥವಾಗಿದೆ ಎಂದು ಚಾಲಕರ ಪತ್ನಿ ಕಣ್ಣೀರಾಗಿದ್ದಾರೆ.
- Akshay Pallamajalu
- Updated on: Dec 26, 2025
- 11:46 am