AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಎಚ್ಚೆತ್ತ ಸರ್ಕಾರ: ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ

ಕೊನೆಗೂ ಎಚ್ಚೆತ್ತ ಸರ್ಕಾರ: ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ

ರಮೇಶ್ ಬಿ. ಜವಳಗೇರಾ
|

Updated on: Feb 26, 2026 | 11:11 PM

Share

ಸಚಿವ ಸಂಪುಟ ಬಳಿಕ ಕಾನೂನು ಸಚಿವ ಎಚ್​​​​ಕೆ ಪಾಟೀಲ್ ಮಾತನಾಡಿ, ನೇಮಕಾತಿ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಯಾಗಲಿದೆ. ಪರಿಶಿಷ್ಟ ಜಾತಿ ಒಳಮೀಸಲಾತಿಯ ವಿಚಾರ ಹೈಕೋರ್ಟ್​ನಲ್ಲಿದೆ. ಹೆಚ್ಚುವರಿ ಮೀಸಲಾತಿ ವಿಚಾರವಾಗಿ ಹೈಕೋರ್ಟ್ ತಡೆ ನೀಡಿರುತ್ತದೆ. ಹೀಗಾಗಿ ಮೀಸಲಾತಿ 50% ಮೀರದಂತೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತೆ. ಸದ್ಯ ಎಸ್​ಸಿ 15% ಮೀಸಲಾತಿ ಅನ್ವಯವೇ ನೇಮಕಾತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು, (ಫೆಬ್ರವರಿ 26): ಉದ್ಯೋಗಕ್ಕಾಗಿ (Job) ಧಾರವಾಡದಲ್ಲಿ (Dharwad) ಯುವಶಕ್ತಿ ನಡೆಸಿದ ಉಗ್ರ ಹೋರಾಟಕ್ಕೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಮೊದಲ ಹಂತದಲ್ಲಿ 56,432 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ಕ್ಯಾಬಿನೆಟ್ (Cabinet) ತೀರ್ಮಾನಿಸಿದೆ. ಅಲ್ಲದೆ, ಸರ್ಕಾರಿ ಹೊಸ ನೇಮಕಾತಿಗಳಲ್ಲಿ ಸದ್ಯಕ್ಕೆ ಒಳಮೀಸಲಾತಿ ಜಾರಿ ಅಸಾಧ್ಯ ಎಂದು ಕ್ಯಾಬಿನೆಟ್ ತೀರ್ಮಾನಿಸಿದೆ. ಹಳೇ ಮೀಸಲಾತಿಯಲ್ಲೇ ನೇಮಕಾತಿಗೆ ತೀರ್ಮಾನಿಸಿದೆ.

ಸಚಿವ ಸಂಪುಟ ಬಳಿಕ ಕಾನೂನು ಸಚಿವ ಎಚ್​​​​ಕೆ ಪಾಟೀಲ್ ಮಾತನಾಡಿ, ನೇಮಕಾತಿ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಯಾಗಲಿದೆ. ಪರಿಶಿಷ್ಟ ಜಾತಿ ಒಳಮೀಸಲಾತಿಯ ವಿಚಾರ ಹೈಕೋರ್ಟ್​ನಲ್ಲಿದೆ. ಹೆಚ್ಚುವರಿ ಮೀಸಲಾತಿ ವಿಚಾರವಾಗಿ ಹೈಕೋರ್ಟ್ ತಡೆ ನೀಡಿರುತ್ತದೆ. ಹೀಗಾಗಿ ಮೀಸಲಾತಿ 50% ಮೀರದಂತೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತೆ. ಸದ್ಯ ಎಸ್​ಸಿ 15% ಮೀಸಲಾತಿ ಅನ್ವಯವೇ ನೇಮಕಾತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಇದನ್ನು ಓದಿ: ಸರ್ಕಾರವನ್ನ ಬಡಿದೆಬ್ಬಿಸಿದ ಉದ್ಯೋಗಾಕಾಂಕ್ಷಿಗಳು: 56 ಸಾವಿರ ಹುದ್ದೆ ನೇಮಕಕ್ಕೆ ಸಂಪುಟ ಒಪ್ಪಿಗೆ

Follow Us