Monsoon Rain
ಮಾನ್ಸೂನ್ ಮೂಲತಃ ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರದಿಂದ ಭಾರತದ ನೈಋತ್ಯ ಕರಾವಳಿಗೆ ಬೀಸುವ ಗಾಳಿಯಾಗಿದೆ. ಇದು ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳಿಗೆ ಮಳೆಯ ಮೋಡಗಳು ಚಲಿಸಲು ಕಾರಣವಾಗುತ್ತದೆ. ಇವುಗಳು ಕಾಲೋಚಿತ (ಸೀಸನಲ್) ಮಾರುತಗಳಾಗಿವೆ. ಇದು ಜೂನ್ ನಿಂದ ಸೆಪ್ಟೆಂಬರ್ ವರೆಗೆ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಸುಮಾರು ನಾಲ್ಕು ತಿಂಗಳುಗಳವರೆಗೆ ಸಕ್ರಿಯವಾಗಿರುತ್ತದೆ. ಮಾನ್ಸೂನ್ ಪದವನ್ನು ಮೊದಲು ಬ್ರಿಟಿಷ್ ಆಡಳಿತದ ಭಾರತದಲ್ಲಿ (ಇಂದಿನ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ) ಮತ್ತು ನೆರೆಯ ರಾಷ್ಟ್ರಗಳಲ್ಲಿ ಬಳಸಲಾಯಿತು. ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಿಂದ ಬೀಸುವ ದೊಡ್ಡ ಋತುಮಾನದ ಮಾರುತಗಳಿಗೆ ಇದನ್ನು ಬಳಸಲಾಗುತ್ತಿತ್ತು. ಇದು ನೈಋತ್ಯದಿಂದ ಬೀಸುತ್ತದೆ ಮತ್ತು ಮೇಲೆ ಉಲ್ಲೇಖಿಸಿದ ಪ್ರದೇಶಗಳಲ್ಲಿ ಭಾರೀ ಮಳೆಗೆ ಕಾರಣವಾಗುತ್ತದೆ.