ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ದೆಹಲಿ ಭೇಟಿ ಬಗ್ಗೆ ಡಿಕೆಶಿ ಅಚ್ಚರಿಯ ಹೇಳಿಕೆ
ಸಿಎಂ ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಮಾತನ್ನು ವಿಧಾನಸಭೆಯೊಳಗೆ ನಿಂತು ಶುಕ್ರವಾರ ಅಲ್ಲಗಳೆದಿದ್ದರು. ಎರಡೂವರೆ ವರ್ಷದ ತೀರ್ಮಾನ ಆಗಿಲ್ಲ. ಐದು ವರ್ಷವೂ ನಾನೇ ಸಿಎಂ ಎಂದಿದ್ದರು. ಈ ಬೆನ್ನಲ್ಲೇ ಹೈಕಮಾಂಡ್ ಕಡೆಗೆ ಕಾಂಗ್ರೆಸ್ನ ಗಮನ ಹೋಗಿದೆ. ಈ ನಡುವೆ ಡಿಕೆಶಿ ದೆಹಲಿಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ.
- Ganapathi Sharma
- Updated on: Dec 20, 2025
- 1:45 pm
ಸ್ಲೀವ್ಲೆಸ್ ಡ್ರೆಸ್, ಹರಿದ ಜೀನ್ಸ್ ಹಾಕೊಂಡು ಕಚೇರಿಗೆ ಹೋಗುವ ಸರ್ಕಾರಿ ನೌಕರರಿಗೆ ಇನ್ಮುಂದೆ ಕಾದಿದೆ ಸಂಕಷ್ಟ!
ಕಚೇರಿ ಶಿಸ್ತಿನ ಬಗ್ಗೆ ಕರ್ನಾಟಕ ಸರ್ಕಾರಿ ನೌಕರರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದೆ. ಮುಖ್ಯವಾಗಿ, ನೌಕರರು ಹರಿದ ಜೀನ್ಸ್, ಸ್ಲೀವ್ಲೆಸ್ ಡ್ರೆಸ್ನಂತಹ ಅಸಭ್ಯ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
- Ganapathi Sharma
- Updated on: Dec 20, 2025
- 9:46 am
ಮೆಟ್ರೋ ಪ್ರಯಾಣಿಕರೇ ಗಮನಿಸಿ: ಯೆಲ್ಲೋ ಮಾರ್ಗದಲ್ಲಿ ಭಾನುವಾರ ರೈಲು ಸಂಚಾರ ಶುರುವಾಗೋದು ಲೇಟ್
ಬೆಂಗಳೂರಿನ ನಮ್ಮ ಮೆಟ್ರೋದ ಯೆಲ್ಲೋ ಮಾರ್ಗದಲ್ಲಿ ಭಾನುವಾರ ಸಂಚಾರ ವಿಳಂಬವಾಗಲಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಬದಲಾಗಿ 8 ಗಂಟೆಗೆ ಯೆಲ್ಲೋ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿವೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಅರ್ಸಿಎಲ್ ತಿಳಿಸಿದೆ.
- Ganapathi Sharma
- Updated on: Dec 20, 2025
- 8:44 am
Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ಪವರ್ ಕಟ್, ಇಲ್ಲಿದೆ ವಿವರ
Bangalore Power Cut Today: ನಿರ್ವಹಣಾ ಕಾಮಗಾರಿ ಪ್ರಯುಕ್ತ ಬೆಂಗಳೂರಿನ ಬೆಸ್ಕಾಂ ವ್ಯಾಪ್ತಿಯ ನೂರಾರು ಏರಿಯಾಗಳಲ್ಲಿ ಇಂದು (ಡಿಸೆಂಬರ್ 20) ಪವರ್ ಕಟ್ ಇರಲಿದೆ. ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಇರಲಿದೆ?ಎಷ್ಟು ಗಂಟೆಯಿಂದ ಎಷ್ಟು ಗಂಟೆ ವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂಬ ವಿವರ ಇಲ್ಲಿದೆ.
- Ganapathi Sharma
- Updated on: Dec 20, 2025
- 8:02 am
ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲು
ಬಡವರ ಹೊಟ್ಟೆ ತುಂಬಲಿ ಎಂದು ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಸುಮಾರು ಕಡೆಗಳಲ್ಲಿ ದಾರಿ ತಪ್ಪುತ್ತಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ಅನ್ನಭಾಗ್ಯ ಅಕ್ಕಿಯನ್ನು ಫಲಾನುಭವಿಗಳಿಂದ ಅಕ್ಕಿ ಖರೀದಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಸದ್ಯ ಈ ವಿಚಾರವಾಗಿ ಪ್ರಕರಣ ಕೂಡ ದಾಖಲಾಗಿದೆ.
- Ganapathi Sharma
- Updated on: Dec 20, 2025
- 6:43 am
ದ್ವೇಷ ಭಾಷಣ ವಿಧೇಯಕ ರಿಜೆಕ್ಟ್ ಮಾಡಲು ಸಾಕಾಗಲಿದೆಯಾ ಆ ಒಂದು ಕಾರಣ! ರಾಜ್ಯಪಾಲರಿಗೆ ಸಲ್ಲಿಕೆಯಾದ ಪತ್ರದಲ್ಲೇನಿದೆ?
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ಮೇಲ್ಮನೆಯಲ್ಲಿ ಅಂಗೀಕಾರ ದೊರೆತಿದೆ. ಆದರೆ, ವಕೀಲ ಗಿರೀಶ್ ಭಾರದ್ವಾಜ್ ಮತ್ತು ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಪಾಲರಿಗೆ ಪತ್ರ ಬರೆದು, ವಿಧೇಯಕಕ್ಕೆ ಅಂಕಿತ ಹಾಕದಂತೆ ಮನವಿ ಮಾಡಿದ್ದಾರೆ. ಅಲ್ಲದೆ, ವಿಧೇಯಕವನ್ನು ತಿರಸ್ಕರಿಸಲು ಬಲವಾದ ಕಾರಣ (ಸಂವಿಧಾನದ ಸೆಕ್ಷನ್) ಒಂದನ್ನು ಅವರು ಉಲ್ಲೇಖಿಸಿದ್ದಾರೆ. ಅದ್ಯಾವುದು? ಇಲ್ಲಿದೆ ಮಾಹಿತಿ.
- Ganapathi Sharma
- Updated on: Dec 19, 2025
- 8:22 pm
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರಗೆ ಇಡಿ ಬಿಗ್ ಶಾಕ್
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ಮಾಜಿ ಸಚಿವ ಬಿ ನಾಗೇಂದ್ರಗೆ ಜಾರಿ ನಿರ್ದೇಶನಾಲಯ ಮತ್ತೆ ಶಾಕ್ ನೀಡಿದೆ. ನಾಗೇಂದ್ರಗೆ ಸೇರಿದ 8 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. ಅಲ್ಲದೆ, ನಾಗೇಂದ್ರಗೆ ಸಂಬಂಧಿಸಿದ ಮಹತ್ವದ ಮಾಹಿತಿ ನೀಡಿದೆ.
- Ganapathi Sharma
- Updated on: Dec 19, 2025
- 4:40 pm
ಇವರಿಗೆ ಅಧ್ಯಕ್ಷರು ಯಾರು ಎಂಬುದೇ ಗೊತ್ತಿಲ್ಲ: ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ
ವಿಧಾನಸಭೆ ಅಧಿವೇಶನದಲ್ಲಿ ಶುಕ್ರವಾರ ಸ್ವಾರಸ್ಯಕರ ಚರ್ಚೆ ನಡೆಯಿತು. ಉತ್ತರ ಕರ್ನಾಟಕ ಕುರಿತ ಚರ್ಚೆ ಸಂದರ್ಭದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿ, ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದರು. ಸದನದಲ್ಲಿ ಯತ್ನಾಳ್ ಮಾತಿನ ದಾಟಿಯ ವಿಡಿಯೋ ಇಲ್ಲಿದೆ.
- Ganapathi Sharma
- Updated on: Dec 19, 2025
- 12:53 pm
ತನ್ನದೇ ಪೊಲೀಸ್, ನ್ಯಾಯಾಲಯ, ಕಾನೂನು: ಬೆಂಗಳೂರಿನಲ್ಲಿ ಹೀಗೊಂದು ಅಪಾರ್ಟ್ಮೆಂಟ್ ರಾಜ್ಯ!
ಬೆಂಗಳೂರಿನ ಅಪಾರ್ಟ್ಮೆಂಟ್ ಅಸೋಸಿಯೇಷನ್ ಒಂದು ತನ್ನದೇ ಕಾನೂನು, ದಂಡ ವ್ಯವಸ್ಥೆ ಜಾರಿಗೆ ತಂದು ಲಕ್ಷಾಂತರ ರೂ. ವಸೂಲಿ ಮಾಡಿದ್ದು, ಇದೀಗ ಪೊಲೀಸ್ ಕೆಂಗಣ್ಣಿಗೆ ಗುರಿಯಾಗಿದೆ. ಅಕ್ರಮ ವಸ್ತು ಸಾಗಾಟ, ಮಾದಕವಸ್ತು ಸೇವನೆ, ನಿವಾಸಿಗಳ ದುರ್ವರ್ತನೆಗಳಿಗೆ ಅಪಾರ್ಟ್ಮೆಂಟೇ ಕಾನೂನುಬಾಹಿರವಾಗಿ ದಂಡ ಸಂಗ್ರಹ ಮಾಡಿದೆ. ಸದ್ಯ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ.
- Ganapathi Sharma
- Updated on: Dec 18, 2025
- 1:51 pm
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಇದೆ ಎಂಬುದನ್ನು ಒಪ್ಪಿಕೊಂಡ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ: ಪಾವತಿ ಬಗ್ಗೆ ಹೇಳಿದ್ದೇನು?
ಶಕ್ತಿ ಯೋಜನೆಗೆ ಸಂಬಂಧಿಸಿದಂತೆ 4000 ಕೋಟಿ ರೂಪಾಯಿ ಬಾಕಿ ಹಣದ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟಕ್ಕೆ ಹಿಂದಿನ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಸಾವಿರಾರು ಕೋಟಿ ಅನುದಾನವೇ ಕಾರಣ ಎಂದು ಹೇಳಿದ್ದಾರೆ. ಬಾಕಿ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.
- Ganapathi Sharma
- Updated on: Dec 18, 2025
- 12:24 pm
ಹಣ ಇದ್ದವರ ಮನೆಗೆ ಕರೆದು ಚಕ್ಕಂದ, ವಿಡಿಯೋ ಮಾಡಿ ಬ್ಲ್ಯಾಕ್ಮೇಲ್: ಪೊಲೀಸ್ ಹಿಂದೆ ಬಿದ್ದಿದ್ದ ಮಹಿಳೆ ಅಂತಿಂಥವಳಲ್ಲಾ ಗೊತ್ತಾ!
ರಾಮಮೂರ್ತಿ ನಗರ ಇನ್ಸ್ಪೆಕ್ಟರ್ ಸತೀಶ್ ಬಳಿ ಪ್ರೀತಿಸುವಂತೆ ದುಂಬಾಲು ಬಿದ್ದು, ಬ್ಲ್ಯಾಕ್ಮೇಲ್ ಮಾಡಿ ಬಂಧಿತಳಾದ ವನಜಾ ಅಲಿಯಾಸ್ ಸಂಜನಾ ಕುರಿತು ಹಲವು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಶ್ರೀಮಂತರನ್ನು ಗುರಿಯಾಗಿಸಿ ಸ್ನೇಹ ಬೆಳೆಸಿ, ಲೈಂಗಿಕ ಸಂಪರ್ಕ ಸಾಧಿಸಿ, ಫೋಟೋ-ವಿಡಿಯೋ ಮೂಲಕ ಹಣ, ಚಿನ್ನಾಭರಣ ವಸೂಲಿ ಮಾಡುತ್ತಿದ್ದಳು ಎಂಬುದು ಈಗ ಬೆಳಕಿಗೆ ಬಂದಿದೆ.
- Ganapathi Sharma
- Updated on: Dec 18, 2025
- 10:09 am
ಸುಧಾಮೂರ್ತಿ, ಸುಧಾಕರ್ ಸೇರಿ ಇತರ ಜನಪ್ರತಿನಿಧಿಗಳನ್ನು ಜಿಬಿಎ ಸದಸ್ಯರ ಪಟ್ಟಿಗೆ ಸೇರಿಸುವ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ಎರಡನೇ ತಿದ್ದುಪಡಿಗೆ ವಿಧಾನಸಭೆ ಅಂಗೀಕಾರ ನೀಡಿದ್ದು, ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಹಾಗೂ ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ ಸೇರಿದಂತೆ ಜಿಬಿಎ ವ್ಯಾಪ್ತಿಯ ಜನಪ್ರತಿನಿಧಿಗಳನ್ನು ಸದಸ್ಯರ ಪಟ್ಟಿಗೆ ಸೇರಿಸಲು ಅನುಮೋದನೆ ನೀಡಿದೆ. ಡಿಸಿಎಂ ಡಿಕೆ ಶಿವಕುಮಾರ್ ವಿಧೇಯಕ ಮಂಡನೆ ಮಾಡಿ ಮಾಹಿತಿ ನೀಡಿದರು.
- Ganapathi Sharma
- Updated on: Dec 18, 2025
- 8:50 am