AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಗಾದಿ ಹಬ್ಬದ ಖರೀದಿಗೆ ಕೆಆರ್​ ಮಾರ್ಕೆಟ್​ಗೆ ಮುಗಿಬಿದ್ದ ಗ್ರಾಹಕರು

ಯುಗಾದಿ ಹಬ್ಬದ ಖರೀದಿಗೆ ಕೆಆರ್​ ಮಾರ್ಕೆಟ್​ಗೆ ಮುಗಿಬಿದ್ದ ಗ್ರಾಹಕರು

Kiran Surya
| Edited By: |

Updated on: Mar 19, 2026 | 9:03 AM

Share

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಜನರಿಂದ ತುಂಬಿ ತುಳುಕುತ್ತಿದೆ. ಹೊಸ ವರ್ಷದ ಸಂಭ್ರಮಕ್ಕೆ ಬೇಕಾದ ಹೂವು, ಹಣ್ಣು, ಪೂಜಾ ಸಾಮಗ್ರಿಗಳನ್ನು ಖರೀದಿಸಲು ಸಾವಿರಾರು ಜನ ಮಧ್ಯರಾತ್ರಿಯಿಂದಲೇ ಆಗಮಿಸಿದ್ದಾರೆ. ತಾಜಾ ಮತ್ತು ವೈವಿಧ್ಯಮಯ ಹೂವುಗಳು ಅಲ್ಪ ಕಡಿಮೆ ದರದಲ್ಲಿ ಸಿಗುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಜನಜಂಗುಳಿ ಉಂಟಾಗಿದೆ.

ಬೆಂಗಳೂರು, ಮಾರ್ಚ್ 19: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಡಗರ ಮನೆ ಮಾಡಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಕೆಆರ್ ಮಾರ್ಕೆಟ್‌ನಲ್ಲಿ ಭಾರಿ ಖರೀದಿ ಭರಾಟೆ ಕಂಡುಬಂದಿದೆ. ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಸಿಲಿಕಾನ್ ಸಿಟಿ ಜನರು ಮಧ್ಯರಾತ್ರಿಯಿಂದಲೇ ಮಾರುಕಟ್ಟೆಗೆ ಧಾವಿಸಿದ್ದಾರೆ. ಕೆ.ಆರ್. ಮಾರ್ಕೆಟ್‌ನಲ್ಲಿ ತಾಜಾ ಮತ್ತು ವೈವಿಧ್ಯಮಯ ಹೂವುಗಳು ಹೋಲ್‌ಸೇಲ್ ದರದಲ್ಲಿ ಲಭ್ಯವಿರುವುದರಿಂದ ಜನರು ಹೆಚ್ಚಾಗಿ ಇಲ್ಲಿಗೆ ಆಗಮಿಸುತ್ತಾರೆ. ಬೆಂಗಳೂರಿನ ಸುತ್ತಮುತ್ತಲಿನ ರೈತರು ಮತ್ತು ಹೂವಿನ ವ್ಯಾಪಾರಿಗಳು ನೇರವಾಗಿ ಇಲ್ಲಿಗೆ ಬಂದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಇದು ಸ್ಥಳೀಯ ಸಣ್ಣ ಮಾರುಕಟ್ಟೆಗಳಿಗಿಂತ ಇಲ್ಲಿ ಅಲ್ಪ ಕಡಿಮೆ ದರದಲ್ಲಿ ಹೂವುಗಳು ಸಿಗಲು ಕಾರಣವಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ದರ ಕೊಂಚ ಏರಿಕೆಯಾಗಿದ್ದರೂ, ಮಾರುಕಟ್ಟೆಯಲ್ಲಿ ಜನಸಾಗರವೇ ಹರಿದುಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us