ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು; ವಿಡಿಯೋ ವೈರಲ್
ಆನೆಗಳ ಹಿಂಡು ರೈಲ್ವೆ ಹಳಿಯನ್ನು ಸುರಕ್ಷಿತವಾಗಿ ದಾಟುವ ಸಲುವಾಗಿ ಅಸ್ಸಾಂನ ಹೋಜಾಯ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ತಡೆಯಲಾಯಿತು. ಡೌನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಆಗಮಿಸುತ್ತಿದ್ದಾಗ, ಹವಾಯ್‌ಪುರದ ಬಳಿ ಕಾಡಾನೆಗಳ ಹಿಂಡು ರೈಲ್ವೆ ಹಳಿಯನ್ನು ದಾಟಲು ಯತ್ನಿಸುತ್ತಿರುವುದನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಗಮನಿಸಿದರು. ಅರಣ್ಯ ಸಿಬ್ಬಂದಿ, ಲೋಕೋ-ಪೈಲಟ್ ಮತ್ತು ಲುಮ್ಡಿಂಗ್ ರೈಲ್ವೆ ನಿಯಂತ್ರಣ ಕೊಠಡಿಯ ತಕ್ಷಣದ ಜಾಗರೂಕತೆಯ ಕ್ರಮದಿಂದಾಗಿ ಆನೆಗಳ ಹಿಂಡು ಹಳಿಯನ್ನು ಸುರಕ್ಷಿತವಾಗಿ ದಾಟಿತು.
ಗುವಾಹಟಿ, ಆಗಸ್ಟ್ 19: ಆನೆಗಳ ಹಿಂಡು (Elephant Video) ರೈಲ್ವೆ ಹಳಿಯನ್ನು ಸುರಕ್ಷಿತವಾಗಿ ದಾಟುವ ಸಲುವಾಗಿ ಅಸ್ಸಾಂನ ಹೋಜಾಯ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ತಡೆಯಲಾಯಿತು. ಡೌನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಆಗಮಿಸುತ್ತಿದ್ದಾಗ, ಹವಾಯ್‌ಪುರದ ಬಳಿ ಕಾಡಾನೆಗಳ ಹಿಂಡು ರೈಲ್ವೆ ಹಳಿಯನ್ನು ದಾಟಲು ಯತ್ನಿಸುತ್ತಿರುವುದನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಗಮನಿಸಿದರು. ಅರಣ್ಯ ಸಿಬ್ಬಂದಿ, ಲೋಕೋ-ಪೈಲಟ್ ಮತ್ತು ಲುಮ್ಡಿಂಗ್ ರೈಲ್ವೆ ನಿಯಂತ್ರಣ ಕೊಠಡಿಯ ತಕ್ಷಣದ ಜಾಗರೂಕತೆಯ ಕ್ರಮದಿಂದಾಗಿ ಆನೆಗಳ ಹಿಂಡು ಹಳಿಯನ್ನು ಸುರಕ್ಷಿತವಾಗಿ ದಾಟಿತು. ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರಿಸಿತು. ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

