AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending

Trending

ದೇಶದಲ್ಲಿ ನಡೆಯುವ ಅಚ್ಚರಿಯ ಘಟನೆಗಳನ್ನು ಹಾಗೂ ವೈರಲ್​​ ಆಗಿರುವ ಸುದ್ದಿಗಳನ್ನು ಇಲ್ಲಿ ಪ್ರಕಟ ಮಾಡಲಾಗುವುದು. ಜನರಿಗೆ ಆಸಕ್ತಿದಾಯಕ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್​​​ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್​​​ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್​​​ ಕ್ಯಾಟಗರಿಯಲ್ಲಿ ತಿಳಿಸಲಾಗುವುದು

ಇನ್ನೂ ಹೆಚ್ಚು ಓದಿ

Optical Illusion: ಈ ಚಿತ್ರದಲ್ಲಿ ಅವಿತು ಕುಳಿತಿರುವ ಇಲಿಯನ್ನು 5 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ

ಒಗಟಿನ ಚಿತ್ರಗಳನ್ನು ಬಿಡಿಸುವುದು ಖುಷಿಕೊಟ್ಟರೂ ಕೆಲವೊಮ್ಮೆ ಮೆದುಳಿಗೆ ಕೆಲಸ ಕೊಡುತ್ತದೆ. ಎಷ್ಟೇ ಯೋಚನೆ ಮಾಡಿದರೂ ಉತ್ತರ ಹೊಳೆಯುವುದೇ ಇಲ್ಲ. ಅದರಲ್ಲಿ ಜಾಣತನದಿಂದ ಮರೆ ಮಾಡಲಾಗಿರುವ ವಸ್ತುವನ್ನು ಹುಡುಕುವುದು ಮತ್ತೊಂದು ರೀತಿಯ ಸವಾಲು. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಸಿಂಹದ ಮುಖದ ನಡುವೆ ಇಲಿಯೊಂದು ಅಡಗಿ ಕುಳಿತಿದೆ. ಈ ಟ್ರಿಕ್ಕಿ ಒಗಟು ಬಿಡಿಸುವ ಸವಾಲು ನಿಮ್ಮ ಮುಂದೆ ಇದೆ.

ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ

ಸೈಕ್ಲಿಂಗ್ ಅಪಘಾತದಲ್ಲಿ ತಮ್ಮನನ್ನು ಉಳಿಸಲು ಅಣ್ಣ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ. ಈ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಸಹೋದರ ಧೈರ್ಯವನ್ನು ಪ್ರದರ್ಶಿಸುವ ಹೃದಯಸ್ಪರ್ಶಿ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಡಿಸೆಂಬರ್ 11ರಂದು ನಡೆದ ಈ ದೃಶ್ಯದಲ್ಲಿ, ಇಬ್ಬರು ಅಣ್ಣ-ತಮ್ಮಂದಿರು ಗುಡ್ಡಗಾಡು ರಸ್ತೆಯ ಬಳಿಯ ಉದ್ಯಾನದಂತಹ ಪ್ರದೇಶದಲ್ಲಿ ತಮ್ಮ ಮನೆಯ ಹೊರಗೆ ಸೈಕಲ್ ತುಳಿಯುತ್ತಿರುವುದನ್ನು ನೋಡಬಹುದು. ಆದರೆ ಹಠಾತ್ ಅಪಘಾತವು ಬಹುತೇಕ ದುರಂತವಾಗಿ ಬದಲಾಗುತ್ತದೆ.

Optical Illusion: ಈ ಚಿತ್ರದಲ್ಲಿದೆ ಕಲರ್ ಫುಲ್ ಕಪ್, 9 ಸೆಕೆಂಡುಗಳಲ್ಲಿ ಗುರುತಿಸಿದ್ರೆ ನೀವು ಬುದ್ಧಿವಂತರು

ನಿಮ್ಮ ಮೆದುಳು ಎಷ್ಟು ಚುರುಕುತನದಿಂದ ಕೂಡಿದೆ ಪರೀಕ್ಷಿಸಿಕೊಳ್ಳಲು ಮುಂದಾಗಿದ್ದೀರಾ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಲು ಸಹಾಯಕವಾಗಿದೆ. ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಟೀ ಕಪ್ ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ.

Optical Illusion: ಜಸ್ಟ್ 10 ಸೆಕೆಂಡುಗಳಲ್ಲಿ ಈ ಕಾಡಿನಲ್ಲಿ ಅಡಗಿರುವ ಬೆಕ್ಕನ್ನು ಹುಡುಕಿ

ಕಣ್ಣು ಹಾಗೂ ಮೆದುಳಿಗೆ ಕೆಲಸ ನೀಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಬಿಡಿಸುವುದೆಂದರೆ ಬಹುತೇಕರಿಗೆ ಇಷ್ಟ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಇಂತಹ ಒಗಟಿನ ಆಟದತ್ತ ಆಸಕ್ತಿ ತೋರಿಸುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಚಿತ್ರ ವೈರಲ್ ಆಗಿದೆ. ಈ ಕಾಡಿನಲ್ಲಿ ಅಡಗಿರುವ ಬೆಕ್ಕನ್ನು ಹತ್ತು ಸೆಕೆಂಡುಗಳಲ್ಲಿ ಗುರುತಿಸುವ ಸವಾಲು ನೀಡಲಾಗಿದೆ.

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!

ಕಾಸರಗೋಡಿನ ನೀಲೇಶ್ವರದ ರೈಲ್ವೆ ರಸ್ತೆ ಮೇಲ್ಸೇತುವೆ ಬಳಿಯ ಪಲ್ಲಿಕ್ಕರದಲ್ಲಿರುವ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವದಲ್ಲಿ ಪೂಮಾರುತನ್ ದೇವರ 'ವೆಲ್ಲಟ್ಟಂ' ಆಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ತೆಯ್ಯಂ ಎಂಬುದು ಕೇರಳದ ಒಂದು ಧಾರ್ಮಿಕ ವಿಧಿವಿಧಾನದ ರೂಪ. ಇದರದಲ್ಲಿ ಪ್ರದರ್ಶಕರು ಸಾಂಪ್ರದಾಯಿಕವಾಗಿ ಒಂದು ಕೈಯಲ್ಲಿ ಕತ್ತಿ ಮತ್ತು ಇನ್ನೊಂದು ಕೈಯಲ್ಲಿ ಮರದ ಗುರಾಣಿಯನ್ನು ಹಿಡಿದಿರುತ್ತಾರೆ. ಈ ಪ್ರದರ್ಶನವನ್ನು ಗುರಾಣಿಯನ್ನು ತಿರುಗಿಸುವುದು ಮತ್ತು ಕತ್ತಿಯನ್ನು ಬೀಸುವ ಬಿರುಸಾದ ಚಲನೆಗಳ ಮೂಲಕ ಮಾಡಲಾಗುತ್ತದೆ.

Video: ಮೊಟ್ಟೆಯಿಂದ ಹೊರ ಬಂದ ನಾಲ್ಕು ಕಾಲಿನ ಕೋಳಿ ಮರಿ, ವೈರಲ್‌ ಆಯ್ತು ವಿಡಿಯೋ

ಕೋಳಿ ಮರಿಗೆ ಎರಡು ಕಾಲುಗಳು ಇರುತ್ತದೆ. ಆದರೆ ಈ ಕೋಳಿ ಮರಿಗೆ ಎರಡಲ್ಲ ನಾಲ್ಕು ಕಾಲುಗಳಿವೆ. ಇಂತಹದೊಂದು ಘಟನೆಯೂ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದಿದೆ. ನಾಲ್ಕು ಕಾಲುಗಳನ್ನೊಳಗೊಂಡ ಕೋಳಿಮರಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಕುರತಾದ ಸ್ಟೋರಿ ಇಲ್ಲಿದೆ.

Brain Teaser: ನೀವು ಬುದ್ಧಿವಂತರಾಗಿದ್ರೆ ಈ ಟ್ರಿಕ್ಕಿ ಗಣಿತದ ಲೆಕ್ಕ ಬಿಡಿಸಿ ನೋಡೋಣ

ಈಗಂತೂ ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳು ಟ್ರೆಂಡಿಂಗ್‌ನಲ್ಲಿದೆ. ಬುದ್ಧಿವಂತಿಗೆ ಸವಾಲೊಡ್ಡುವಂತಹ ಇಂತಹ ಆಟಗಳನ್ನು ಆಡುವ ಮಜಾನೇ ಬೇರೆ. ಇದೀಗ ಗಣಿತದ ಲೆಕ್ಕವನ್ನು ನೀಡಲಾಗಿದ್ದು, ನೀವು ಲೆಕ್ಕ ಬಿಡಿಸೋದ್ರಲ್ಲಿ ಪಂಟರಾಗಿದ್ದರೆ ಈ ಒಗಟು ಬಿಡಿಸಿ ಸರಿಯಾದ ಉತ್ತರ ಹೇಳಲು ಪ್ರಯತ್ನಿಸಿ.

Optical Illusion: ಜಸ್ಟ್ 5 ಸೆಕೆಂಡುಗಳಲ್ಲಿ ಎಲೆಗಳ ನಡುವೆ ಅಡಗಿರುವ 47 ಸಂಖ್ಯೆಯನ್ನು ಗುರುತಿಸುವಿರಾ

ಕೆಲವರು ಬಿಡುವು ಸಿಕ್ಕಾಗಲ್ಲೆಲ್ಲಾ ಈ ಆಪ್ಟಿಕಲ್‌ ಇಲ್ಯೂಷನ್ ಚಿತ್ರಗಳನ್ನು ಬಿಡಿಸುವತ್ತ ಆಸಕ್ತಿ ತೋರುತ್ತಾರೆ. ಈ ಒಗಟಿನ ಚಿತ್ರಗಳು ಟೈಮ್ ಪಾಸ್ ಮಾತ್ರವಲ್ಲ, ಮೆದುಳಿಗೆ ಕೆಲಸ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೀಗ ಅಂತಹದ್ದೇ ಕಠಿಣ ಸವಾಲಿನ ಫೋಟೋವೊಂದು ವೈರಲ್‌ ಆಗಿದೆ. ಎಲೆಗಳ ನಡುವೆ ಅಡಗಿರುವ 47 ಸಂಖ್ಯೆಯನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು. ಬಿಡಿಸಿ ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಿಕೊಳ್ಳಿ.

Brain Teaser: ಲೆಕ್ಕ ಬಿಡಿಸೋದ್ರಲ್ಲಿ ನೀವು ಪಂಟರೇ, ಈ ಮ್ಯಾಥ್ಸ್‌ ಪಝಲ್ ಬಿಡಿಸಿ ನಿಖರ ಉತ್ತರ ಹೇಳಿ

ಒಗಟಿನ ಪ್ರಶ್ನೆಯನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಆದರೆ ಈ ಗಣಿತದ ಲೆಕ್ಕಗಳು ತಲೆಗೆ ಹುಳ ಬಿಡುತ್ತದೆ. ಇದೀಗ ನೀವು ನಿಜಕ್ಕೂ ಜಾಣರೇ ಎಂದು ಪರೀಕ್ಷಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ. ಇದೀಗ ಟ್ರಿಕ್ಕಿ ಗಣಿತದ ಪ್ರಶ್ನೆಯೊಂದು ವೈರಲ್ ಆಗಿದ್ದು, ಐದೇ ಐದು ನಿಮಿಷದಲ್ಲೇ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸಿ. ಈ ಕುರಿತಾದ ಒಗಟಿನ ಪ್ರಶ್ನೆ ಇಲ್ಲಿದೆ.

Optical Illusion: ಈ ವೃತ್ತಾಕಾರದ ಚಿತ್ರದಲ್ಲಿರುವ ಸಂಖ್ಯೆಯನ್ನು 10 ಸೆಕೆಂಡುಗಳಲ್ಲಿ ಹೇಳಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್‌ ಒಗಟಿನ ಚಿತ್ರಗಳನ್ನು ಬಿಡಿಸುವುದಲ್ಲಿರುವ ಮಜಾನೇ ಬೇರೆ. ಈ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಗೆ ಸವಾಲೊಡ್ದುತ್ತವೆ. ಟೈಮ್ ಪಾಸ್‌ನೊಂದಿಗೆ ಮೆದುಳಿಗೆ ಕೆಲಸ ನೀಡುತ್ತದೆ. ಈ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಗುಪ್ತ ಸಂಖ್ಯೆಯನ್ನು ನೀವು ಗುರುತಿಸಬೇಕು. ಈ ಒಗಟು ಬಿಡಿಸಲು ನಿಮಗಿರುವ ಸಮಯಾವಕಾಶ ಹತ್ತು ಸೆಕೆಂಡುಗಳು ಮಾತ್ರ. ಉತ್ತರ ಕಂಡು ಕೊಳ್ಳಲು ಸಾಧ್ಯವೇ ಎಂದು ನೋಡಿ.

Video: ಪುಟ್ಟ ಪುಟ್ಟ ಹೆಜ್ಜೆಯಲ್ಲಿ ದೊಡ್ಡ ಜವಾಬ್ದಾರಿ; ಕುಟುಂಬಕ್ಕೆ ಹೆಗಲಾದ ಪುಟ್ಟ ಹುಡುಗಿ

ಮೂರು ಹೊತ್ತಿನ ಊಟಕ್ಕಾಗಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಹೋರಾಟ. ಕೆಲ ಜನರ ಬದುಕಿನ ಹೋರಾಟ ಕಂಡಾಗ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ. ಪುಟ್ಟ ಹುಡುಗಿಯೊಬ್ಬಳು ಹಗ್ಗದ ಮೇಲೆ ನಡೆಯುತ್ತಾ ಕುಟುಂಬಕ್ಕಾಗಿ ತನ್ನ ಬಾಲ್ಯವನ್ನೇ ಮಾರಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಣ್ಣನ್ನು ಒದ್ದೆಯಾಗಿಸಿದೆ.

Optical Illusion: ಒಗಟು ಬಿಡಿಸೋದ್ರಲ್ಲಿ ನೀವು ಪಂಟರೇ, ಈ ಚಿತ್ರದಲ್ಲಿರುವ ಆನೆಯನ್ನು ಗುರುತಿಸಿ

ಒಗಟಿನ ಪ್ರಶ್ನೆಗಳನ್ನು ಬಿಡಿಸುವುದು ಖುಷಿಕೊಟ್ಟರೂ ಇದು ನೂರಕ್ಕೆ ನೂರರಷ್ಟು ಮೆದುಳಿಗೆ ಕೆಲಸ ನೀಡುತ್ತವೆ. ಎಷ್ಟೇ ಗಮನಿಸಿದ್ರು ಒಗಟು ಬಿಡಿಸಲು ಸಾಧ್ಯವಾಗಲ್ಲ. ಇದೀಗ ವೈರಲ್ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಅಡಗಿರುವ ಆನೆಯನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. 20 ಸೆಕೆಂಡುಗಳಲ್ಲಿ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ.