AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹ್ವಾನ ಇಲ್ಲದೇ ಮದುವೆ, ರಿಸೆಪ್ಷನ್ ಊಟಕ್ಕೆ ಹೋಗಿ ಸಿಕ್ಕಿಬಿದ್ದರೆ ಶಿಕ್ಷೆ ಏನು ಗೊತ್ತೇ? ಕೇಳಿದ್ರೆ ಶಾಕ್ ಆಗ್ತೀರಿ!

ಅತಿಥಿ ದೇವೋ ಭವ ಎಂಬುದು ನಮ್ಮ ಸಂಸ್ಕೃತಿಯಾದರೂ ಆಧುನಿಕ ಕಾಲಘಟ್ಟದಲ್ಲಿ ಆಹ್ವಾನವಿಲ್ಲದೆ ಮದುವೆ ಅಥವಾ ಇನ್ನಿತರ ಖಾಸಗಿ ಸಮಾರಂಭಕ್ಕೆ ಊಟಕ್ಕೆ ಹೋದರೆ ಶಿಕ್ಷೆಯನ್ನೂ ಎದುರಿಸಬೇಕಾಗಿ ಬರಬಹುದು ಗೊತ್ತೇ? 3 ತಿಂಗಳು ಜೈಲು ಅಥವಾ ದಂಡ ವಿಧಿಸುವ ಬಗ್ಗೆ ಮದುವೆ ಸಮಾರಂಭವೊಂದರ ಹಾಲ್​ನ ಹೊರಭಾಗದಲ್ಲಿ ಹಾಕಿರುವ ತೆಲುಗು ಬೋರ್ಡ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಆಹ್ವಾನ ಇಲ್ಲದೇ ಮದುವೆ, ರಿಸೆಪ್ಷನ್ ಊಟಕ್ಕೆ ಹೋಗಿ ಸಿಕ್ಕಿಬಿದ್ದರೆ ಶಿಕ್ಷೆ ಏನು ಗೊತ್ತೇ? ಕೇಳಿದ್ರೆ ಶಾಕ್ ಆಗ್ತೀರಿ!
ಸಾಂದರ್ಭಿಕ ಚಿತ್ರImage Credit source: TV9 Network
ಗಣಪತಿ ಶರ್ಮಾ
|

Updated on: Mar 10, 2026 | 1:07 PM

Share

ಮದುವೆ (Weeding), ಗೃಹಪ್ರವೇಶ ಸೇರಿದಂತೆ ವಿವಿಧ ಶುಭ ಸಮಾರಂಭಗಳಿಗೆ ಸಾಮಾನ್ಯವಾಗಿ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಿತರನ್ನು ಆಹ್ವಾನಿಸುವುದು ಸಂಪ್ರದಾಯ. ಆದರೆ ಕೆಲವರು ಆಹ್ವಾನವಿಲ್ಲದೆ ಇಂತಹ ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡುವುದು ಕೂಡ ಇರುತ್ತದೆ. ವಿಶೇಷವಾಗಿ ನಗರಗಳಲ್ಲಿ ಇಂಥ ‘(Gatecrashing) ಗೇಟ್ ಕ್ರ್ಯಾಶಿಂಗ್ (ಆಹ್ವಾನವಿಲ್ಲದೆ ಖಾಸಗಿ ಸಮಾರಂಭಗಳಿಗೆ ಹೋಗಿ ಊಟ ಮಾಡುವುದು)’ ನಡೆಯತ್ತದೆ. ‘ಅತಿಥಿ ದೇವೋ ಭವ (ಅತಿಥಿಗಳನ್ನೇ ದೇವರು ಎಂದು ಪರಿಗಣಿಸುವ)’ ಎಂಬ ದೇಶ ನಮ್ಮದಾಗಿರುವ ಕಾರಣ ಇದು ದೊಡ್ಡದಲ್ಲ ಬಿಡಿ. ಸಮಾರಂಭಕ್ಕೆ ಬಂದವರಿಗೆ ಉಪಚಾರ ಮಾಡಿ ಕಳುಹಿಸಲಾಗುತ್ತದೆ.

ಆದರೆ, ಈಗ ಕಾಲ ಬದಲಾಗುತ್ತಿದೆ. ಈ ದುಬಾರಿ ದುನಿಯಾದಲ್ಲಿ ಕರೆಯದೇ ಬಂದವರನ್ನು ಸ್ವಾಗತಿಸಿ ಊಟ ಹಾಕಲೇಬೇಕೆಂದೇನಿಲ್ಲವಲ್ಲ! ಅದು ಹಾಗಿರಲಿ. ಆಹ್ವಾನವಿಲ್ಲದೆ ಮದುವೆ ಅಥವಾ ಇತರ ಖಾಸಗಿ ಸಮಾರಂಭಗಳಿಗೆ ಹೋಗಿ ಊಟ ಮಾಡುವುದು ಕಾನೂನುಬಾಹಿರ ಆಗಬಹುದು ಎಂಬ ಕಲ್ಪನೆಯೂ ಅನೇಕರಿಗೆ ಇರಲಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲ ಕಾರ್ಯಕ್ರಮಗಳ ಆಯೋಜಕರು ಆಹ್ವಾನಿಸದೇ ಊಟಕ್ಕೆ ಬರುವವರನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ‘ತೆಲುಗು’ ಬೋರ್ಡ್ ಒಂದು ಇದೀಗ ವೈರಲ್ ಆಗುತ್ತಿದೆ.

ಸಮಾರಂಭವೊಂದರ ಹಾಲ್​ನ ಹೊರಭಾಗದಲ್ಲಿ ಹಾಕಲಾಗಿರುವ ಬೋರ್ಡ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ವೈರಲ್ ಆಗುತ್ತಿರುವ ತೆಲುಗು ಬೋರ್ಡ್ ಇಲ್ಲಿ ನೋಡಿ

Telugu Viral Post

ಬೋರ್ಡ್​​ನಲ್ಲಿ ಬರೆದಿರುವುದು ಏನು?

ಸಮಾರಂಭಕ್ಕೆ ಸಂಬಂಧಿಸದವರು ಒಳಗೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಂಥವರಿಗೆ ಸೆಕ್ಷನ್ 441 ರ ಅಡಿಯಲ್ಲಿ 3 ತಿಂಗಳು ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಎಂದು ಆ ಬೋರ್ಡ್‌ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ.

ಸೆಕ್ಷನ್ 441 ಎಂದರೇನು?

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 441 (ಈಗ ಭಾರತೀಯ ನ್ಯಾಯ ಸಂಹಿತಾ ಅಥವಾ BNS ಎಂದು ಬದಲಾಗಿದ್ದು, ಸೆಕ್ಷನ್ 329 ಆಗಿದೆ) ಕ್ರಿಮಿನಲ್ ಅತಿಕ್ರಮಣಕ್ಕೆ ಸಂಬಂಧಿಸಿದೆ. ಅಂದರೆ, ಯಾರಾದರೂ ವ್ಯಕ್ತಿಯ ಖಾಸಗಿ ಆಸ್ತಿ ಅಥವಾ ಅವರು ಕಾರ್ಯಕ್ರಮ ನಡೆಸುತ್ತಿರುವ ಸ್ಥಳಕ್ಕೆ ಅವರ ಅನುಮತಿಯಿಲ್ಲದೆ ಪ್ರವೇಶಿಸಿದರೆ ಅದು ಅಪರಾಧವಾಗುತ್ತದೆ.

ಈ ನಿಯಮದ ಅಡಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ವಿಧಿಸಬಹುದಾಗಿದೆ ಎಂದು ಕಾನೂನು ಹೇಳುತ್ತದೆ. ಕೆಲ ಸಂದರ್ಭಗಳಲ್ಲಿ ಆಯೋಜಕರು ದಂಡ ವಿಧಿಸುವ ಬಗ್ಗೆ ಕೂಡಾ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಅಂಗನವಾಡಿಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದಾಗಿ ಮಾತನಾಡಿ ಕಳಿಸಿಕೊಟ್ಟ ಕಂದಮ್ಮ

ಹೀಗಾಗಿ, ಆಹ್ವಾನಿಸದ ಮದುವೆ ಅಥವಾ ಸಮಾರಂಭಗಳಿಗೆ ಹೋಗಿ ಊಟ ಮಾಡುವ ಮುನ್ನ ಅದರ ಕಾನೂನು ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂಬ ಚರ್ಚೆ ಈಗ ಶುರುವಾಗಿದೆ. ಒಟ್ಟಿನಲ್ಲಿ, ಮೋಜಿಗಾಗಿ ಅಥವಾ ಉಚಿತ ಊಟಕ್ಕಾಗಿ ‘ಗೇಟ್ ಕ್ರ್ಯಾಶಿಂಗ್’ ಮಾಡುವವರು ಇಂತಹ ಕಾನೂನು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್