Viral: ಲಂಚ್ ಬ್ರೇಕ್ ಟೈಮ್‌ನಲ್ಲಿ ಕೆಲ್ಸ ಮಾಡಿದ್ದಕ್ಕೆ ಉದ್ಯೋಗಿಯನ್ನು ವಜಾಗೊಳಿಸಿದ ಕಂಪನಿ
ರೂಲ್ಸ್ ಅಂದ್ರೆ ಎಲ್ಲರಿಗೂ ಒಂದೇ. ಆದ್ರೆ ಇಲ್ಲೊಬ್ಬ ಉದ್ಯೋಗಿಯ ವಿರುದ್ಧ ಕಂಪನಿ ಕ್ರಮ ಕೈಗೊಂಡಿದೆ. ಹೌದು, ಉದ್ಯೋಗಿ ಲಂಚ್ ಬ್ರೇಕ್ ಸ್ಕಿಪ್ ಮಾಡಿ ಕೆಲಸ ಬೇಗನೇ ಮುಗಿಸಿ ಮನೆಗೆ ಹೋಗುತ್ತಾನೆ. ಮೇಲ್‌ನಲ್ಲಿ ಕೆಲಸದಿಂದ ತೆಗೆದು ಹಾಕಲು ಕಂಪನಿ ಕಾರಣವನ್ನು ಸ್ಪಷ್ಟವಾಗಿ ತಿಳಿಸಿದೆ. ಈ ಪೋಸ್ಟ್ ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಕಂಪನಿಗಳ ನಿಯಮಗಳನ್ನು (company rules) ಉದ್ಯೋಗಿಗಳು ಪಾಲಿಸುವುದು ಕಡ್ಡಾಯ. ಒಂದು ವೇಳೆ ರೂಲ್ಸ್ ಬ್ರೇಕ್ ಮಾಡಿದ್ರೆ ಮ್ಯಾನೇಜ್ ಮೆಂಟ್ ಉದ್ಯೋಗಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತವೆ. ಇದೀಗ ಉದ್ಯೋಗಿಯೊಬ್ಬನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಮಧ್ಯಾಹ್ನದ ಊಟ ಸ್ಕಿಪ್ ಮಾಡಿದ್ದಾನೆ. ಅದಲ್ಲದೇ, ಲಂಚ್ ಬ್ರೇಕ್ ಟೈಮ್ ನಲ್ಲೂ ಕೆಲಸ ಮುಗಿಸಿ ಕೆಲಸದ ಸಮಯಕ್ಕಿಂತ ಮುಂಚಿತವಾಗಿ ಮನೆಗೆ ಹೋಗಿದ್ದಾನೆ. ಕಂಪನಿ ರೂಲ್ಸ್ ಗೆ ವಿರುದ್ಧವಾಗಿ ನಡೆದುಕೊಂಡ ಉದ್ಯೋಗಿಯ ವಿರುದ್ಧ ಕ್ರಮ ಕೈಗೊಂಡಿದೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಕೆಲಸದಿಂದ ತೆಗೆದು ಹಾಕಿದ ಕಂಪನಿ
ಪ್ರತೀಕ್ ಶೆಟ್ಟಿ (Pratik Shetty) ಎಂಬ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಉದ್ಯೋಗಿಯನ್ನು ವಜಾಗೊಳಿಸುವುದರ ಹಿಂದಿನ ಕಾರಣ ವಿವರಿಸಿದ್ದಾರೆ. ತಕ್ಷಣದ ವಜಾ – ಕಚೇರಿ ನೀತಿಯ ಉಲ್ಲಂಘನೆ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್ ನಲ್ಲಿ ಊಟದ ಸಮಯದಲ್ಲಿ ಕೆಲಸ ಮುಗಿಸಿದೆ ಎಂಬ ಮಾತ್ರಕ್ಕೆ ಕಚೇರಿಯಿಂದ ಮನೆಗೆ ಬೇಗ ಹೋಗುವುದು ಸರಿಯಲ್ಲ. ಕೆಲಸ ಬೇಗನೇ ಮುಗಿಸಿ 6 ಗಂಟೆ ಬದಲು 5 ಗಂಟೆಗೆ ಮನೆಗೆ ಹೋಗುವುದು ಕಂಪನಿ ಒಪ್ಪುವುದಿಲ್ಲ. ಈ ಕಂಪನಿ ನಿಮ್ಮದು ಅಲ್ಲ, ನಾವು ರೂಲ್ಸ್ ಮಾಡಿದ್ದನ್ನು ನೀವು ಕಡ್ಡಾಯವಾಗಿ ಪಾಲಿಸಬೇಕು. ಆದರೆ ಲಂಚ್ ಬ್ರೇಕ್ ತೆಗೆದುಕೊಳ್ಳದೇ ಬೇಗ ಕೆಲಸ ಮುಗಿಸಿ ಕಂಪನಿ ಸಮಯಕ್ಕಿಂತ ಮುಂಚಿತವಾಗಿ ಮನೆಗೆ ಹೋದರೆ ಕಂಪನಿಯ ಶಿಸ್ತು ಹಾಳಾಗುತ್ತದೆ. ನೀವು ಹೀಗೆ ಮಾಡಿದ್ರೆ ಉಳಿದ ಉದ್ಯೋಗಿಗಳು ನಿಮ್ಮಂತೆ ಮಾಡುತ್ತಾರೆ ಎಂದು ಇಲ್ಲಿ ಉಲ್ಲೇಖಿಸಲಾಗಿದೆ.
ಲಿಂಕ್ಡ್ ಇನ್ ಪೋಸ್ಟ್ ಇಲ್ಲಿದೆ
ಇದನ್ನೂ ಓದಿ: ಕೆಲಸದಿಂದ ವಜಾಗೊಳಿಸಿದ್ದ ಮಾಜಿ ಉದ್ಯೋಗಿಯಿಂದಲೇ ಬಾಸ್‌ಗೆ ಬಂತು ಜಾಬ್ ಆಫರ್
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಂಪನಿ ಆತನ ಈ ನಡವಳಿಕೆ ಹಿಂದಿನ ಸಮಸ್ಯೆಯ ಬಗ್ಗೆ ಕೇಳಬೇಕಿತ್ತು ಎಂದಿದ್ದಾರೆ. ಇನ್ನೊಬ್ಬರು, ಕಂಪನಿ ರೂಲ್ಸ್ ಅಂದ್ರೆ ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ. ಮತ್ತೊಬ್ಬರು, ಏಕಾಏಕಿ ವಜಾಗೊಳಿಸಿದ್ದು ಸರಿಯಲ್ಲ, ಕಾರಣ ಕೇಳಿ ಆತನನ್ನು ಕೆಲಸದಿಂದ ವಜಾಗೊಳಿಸಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




