AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಕ್ರಾಂತಿ ಯಾವ ಸಿನಿಮಾ ರಿಲೀಸ್? ಸ್ಪಷ್ಟನೆ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಮತ್ತು ‘ಕಾಕ’ ಸಿನಿಮಾಗಳು ಇದೇ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಲಿವೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳಾಗಿದೆ. ಇದೀಗ ಖುದ್ದು ಚಿರಂಜೀವಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಮುಂಬರುವ ಸಂಕ್ರಾಂತಿಗೆ ಅವರ ನಟನೆಯ ‘ಕಾಕ’ ಸಿನಿಮಾ ಮಾತ್ರವೇ ರಿಲೀಸ್ ಆಗಲಿದೆ. ಅವರ ನಟನೆಯ ‘ವಿಶ್ವಂಭರ’ ಸಿನಿಮಾ ಈ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿಲ್ಲ.

ಸಂಕ್ರಾಂತಿ ಯಾವ ಸಿನಿಮಾ ರಿಲೀಸ್? ಸ್ಪಷ್ಟನೆ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ
Chiranjeevi
ಮಂಜುನಾಥ ಸಿ.
|

Updated on:Nov 29, 2026 | 5:40 PM

Share

ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಇದೇ ವರ್ಷ ಜನವರಿಯಲ್ಲಿ ಸಂಕ್ರಾಂತಿ ಸಮಯಕ್ಕೆ ರಿಲೀಸ್ ಆಗಿತ್ತು. ಅದಾದ ಬಳಿಕ ಚಿರಂಜೀವಿ ಕೆಲ ಸಿನಿಮಾಗಳನ್ನು ಒಪ್ಪಿಕೊಂಡರು. ಆದರೆ ಯಾವ ಸಿನಿಮಾ ಸಹ ಈ ನಡುವೆ ರಿಲೀಸ್ ಆಗಲಿಲ್ಲ. ಇದೀಗ ಮತ್ತೊಂದು ಸಂಕ್ರಾಂತಿ ಸನಿಹದಲ್ಲಿದ್ದು, ಈ ಸಂಕ್ರಾಂತಿಗೆ ಚಿರಂಜೀವಿ ನಟನೆಯ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗಲಿವೆ ಎಂಬ ಸುದ್ದಿ ಹಬ್ಬಿತ್ತು. ಇದು ಅವರ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು. ಇದೀಗ ಚಿರಂಜೀವಿ ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಮತ್ತು ‘ಕಾಕ’ ಸಿನಿಮಾಗಳು ಇದೇ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಲಿವೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳಾಗಿದೆ. ಇದೀಗ ಖುದ್ದು ಚಿರಂಜೀವಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಮುಂಬರುವ ಸಂಕ್ರಾಂತಿಗೆ ಅವರ ನಟನೆಯ ‘ಕಾಕ’ ಸಿನಿಮಾ ಮಾತ್ರವೇ ರಿಲೀಸ್ ಆಗಲಿದೆ. ಅವರ ನಟನೆಯ ‘ವಿಶ್ವಂಭರ’ ಸಿನಿಮಾ ಈ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿಲ್ಲ.

ಅಸಲಿಗೆ ‘ವಿಶ್ವಂಭರ’ ಸಿನಿಮಾ ಮುಂಚೆಯೇ ಚಿತ್ರೀಕರಣ ಆರಂಭಿಸಿದ ಸಿನಿಮಾ. ಆದರೆ ಅತಿಯಾದ ವಿಎಫ್‌ಎಕ್ಸ್, ಚಿತ್ರೀಕರಣದಲ್ಲಿನ ಸಮಸ್ಯೆ ಇನ್ನಿತರೆ ಕಾರಣಗಳಿಂದಾಗಿ ಆ ಸಿನಿಮಾ ತಡವಾಗುತ್ತಲೇ ಬರುತ್ತಿದೆ. ಈ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ಅದು ಸಹ ಸುಳ್ಳಾಗಿದೆ. ‘ವಿಶ್ವಂಭರ’ ಸಿನಿಮಾ ಈ ಸಂಕ್ರಾಂತಿಗೂ ರಿಲೀಸ್ ಆಗುತ್ತಿಲ್ಲ. ಅದರ ರಿಲೀಸ್ ಮತ್ತೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ:ಸಂಕ್ರಾಂತಿಗೆ ಒಟ್ಟಿಗೆ ರಿಲೀಸ್ ಆಗಲಿದೆ ಚಿರಂಜೀವಿ ನಟನೆಯ ಎರಡು ಸಿನಿಮಾಗಳು?

ಇನ್ನು ‘ಕಾಕ’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಬಾಬಿ ಕೊಲ್ಲಿ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದೆ. ಕೌಟುಂಬಿಕ ಕತೆಯ ಜೊತೆಗೆ ಆಕ್ಷನ್, ಗ್ಯಾಂಗ್‌ಸ್ಟರ್ ಕತೆಯನ್ನೂ ಸಹ ‘ಕಾಕ’ ಒಳಗೊಂಡಿದೆ. ಸಿನಿಮಾದ ಟೀಸರ್ ಒಂದು ಈಗಾಗಲೇ ರಿಲೀಸ್ ಆಗಿದ್ದು, ಟೀಸರ್ ಸಖತ್ ಗಮನ ಸೆಳೆದಿದೆ.

ಈ ಬಾರಿ ಸಂಕ್ರಾಂತಿಗೆ ಹಲವು ಸ್ಟಾರ್ ನಟರುಗಳ ಸಿನಿಮಾಗಳು ರಿಲೀಸ್ ಆಗಲಿಕ್ಕಿವೆ. ವೆಂಕಟೇಶ್ ನಟನೆಯ ‘ಸಂಕ್ರಾಂತಿಕಿ ವಸ್ತುನ್ನಾಂ’, ನಾಗಾರ್ಜುನ ನಟನೆಯ 100ನೇ ಸಿನಿಮಾ, ಪ್ರಶಾಂತ್ ವರ್ಮಾ ನಿರ್ಮಾಣದ ‘ಮಹಾಕಾಳಿ’, ಸಾಯಿ ಧರಮ್ ತೇಜ್ ನಟನೆಯ ‘ಸಂಬರಾಲ ಏಟಿ ಗಟ್ಟು’ ಇನ್ನೂ ಕೆಲ ಸಿನಿಮಾಗಳು ಈ ಬಾರಿ ರೇಸಿನಲ್ಲಿವೆ. ನಂದಮೂರಿ ಬಾಲಕೃಷ್ಣ ನಟನೆಯ ಸಿನಿಮಾ ಸಹ ಅದೇ ಸಮಯಕ್ಕೆ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Sun, 29 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More