AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜುನಾಥ ಸಿ.

ಮಂಜುನಾಥ ಸಿ.

Senior Sub Editor - TV9 Kannada

manjunatha.chandrashekhar@tv9.com

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow On:
ರಶ್ಮಿಕಾ-ವಿಜಯ್ ನಟನೆಯ ‘ರಣಬಾಲಿ’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

ರಶ್ಮಿಕಾ-ವಿಜಯ್ ನಟನೆಯ ‘ರಣಬಾಲಿ’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

Ranabaali movie twitter review: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮೂರನೇ ಬಾರಿ ಒಟ್ಟಿಗೆ ನಟನೆ ಮಾಡಿರುವ ‘ರಣಬಾಲಿ’ ಸಿನಿಮಾ ಇಂದು (ಅಕ್ಟೋಬರ್ 16) ರಿಲೀಸ್ ಆಗಿದೆ. ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೊ ನಟಿಸಿದ್ದಾರೆ. ಸಿನಿಮಾ ನೋಡಿದವರು ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ.

‘ಪ್ರೇಮದ ಊರಲಿ’ ಚಿತ್ರತಂಡವ ಭೇಟಿಯಾಗಿ ಅಭಿನಂದಿಸಿದ ಯಶ್-ರಾಧಿಕಾ: ಚಿತ್ರಗಳು

‘ಪ್ರೇಮದ ಊರಲಿ’ ಚಿತ್ರತಂಡವ ಭೇಟಿಯಾಗಿ ಅಭಿನಂದಿಸಿದ ಯಶ್-ರಾಧಿಕಾ: ಚಿತ್ರಗಳು

‘ಪ್ರೇಮದ ಊರಲಿ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಕನ್ನಡದ ಕೆಲ ಸ್ಟಾರ್ ನಟ-ನಟಿಯರು ಸಹ ಈ ಸಿನಿಮಾದ ಯಶಸ್ಸಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದು, ಇದೀಗ ನಟ ಯಶ್ ಸಹ ಸಿನಿಮಾ ತಂಡವನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ. ‘ರಾಮಾಯಣ’ ಸಿನಿಮಾ ಟ್ರೈಲರ್ ಲಾಂಚ್​​ಗೂ ಮುನ್ನ ಯಶ್ ಹಾಗೂ ರಾಧಿಕಾ ಪಂಡಿತ್ ಅವರುಗಳು ‘ಪ್ರೇಮದ ಊರಲಿ’ ಸಿನಿಮಾ ತಂಡವನ್ನು ಭೇಟಿಯಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

‘ರಾಮಾಯಣ’ ಸಿನಿಮಾ ಬಜೆಟ್​​ ಬಗ್ಗೆ ನಟ ಯಶ್ ಸ್ಪಷ್ಟನೆ?

‘ರಾಮಾಯಣ’ ಸಿನಿಮಾ ಬಜೆಟ್​​ ಬಗ್ಗೆ ನಟ ಯಶ್ ಸ್ಪಷ್ಟನೆ?

‘ರಾಮಾಯಣ’ ಸಿನಿಮಾಕ್ಕೆ ನಾಲ್ಕು ಸಾವಿರ ಕೋಟಿ ಖರ್ಚಾಗಿದೆ ಎನ್ನುತ್ತಿದ್ದಾರೆ. ಸಿನಿಮಾದ ಟ್ರೈಲರ್ ನೋಡಿದವರಿಗೆ ಇದು ಸಾಮಾನ್ಯ ಸಿನಿಮಾ ಅಂತೂ ಅಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಿನ್ನೆ (ಅಕ್ಟೋಬರ್ 15) ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಯಶ್, ಹಲವಾರು ವಿಷಯಗಳನ್ನು ಮಾತನಾಡುವ ಜೊತೆಗೆ ಸಿನಿಮಾದ ಬಜೆಟ್ ಬಗ್ಗೆಯೂ ಮಾತನಾಡಿದರು.

ಸ್ವಾರ್ಥದ ಆಟ ಆಡಿದ ಗಾನವಿ, ನಂಬಿದ ಸಹ ಸ್ಪರ್ಧಿಗಳಿಗೆ ಮೋಸ?

ಸ್ವಾರ್ಥದ ಆಟ ಆಡಿದ ಗಾನವಿ, ನಂಬಿದ ಸಹ ಸ್ಪರ್ಧಿಗಳಿಗೆ ಮೋಸ?

Bigg Boss Kannada 13: ಗೆಲುವಿಗಾಗಿ ಯತ್ನಿಸುತ್ತಿದ್ದಾರೆ. ಆದರೆ ಮನೆಯಲ್ಲಿ ಕೆಲ ಸ್ಪರ್ಧಿಗಳು ಗೆಲುವಿಗಾಗಿ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದ್ದರೆ. ಕೆಲವು ಬಾರಿಯಂತೆ ಗೆಲುವಿಗಾಗಿ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಂಡು ಮೋಸದಿಂದ ಆಟ ಆಡುತ್ತಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಇತ್ತೀಚೆಗೆ ನಡೆದ ಪವರ್ ಕಾಯಿನ್‌ಗಳ ಹಂಚಿಕೆಯ ಪ್ರಕ್ರಿಯೆಯು ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಸ್ಪರ್ಧಿ ಗಾನವಿ ತಮ್ಮದೇ ಸ್ವಂತ ತಂಡಕ್ಕೆ ಮೋಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪತಿ ನಿರ್ದೇಶಿಸಿದ್ದ ‘ಧುರಂಧರ್ 2’ನಲ್ಲಿ ನಟಿಸಲು ನಟಿ ಯಾಮಿ ಪಡೆದ ಸಂಭಾವನೆ ಎಷ್ಟು?

ಪತಿ ನಿರ್ದೇಶಿಸಿದ್ದ ‘ಧುರಂಧರ್ 2’ನಲ್ಲಿ ನಟಿಸಲು ನಟಿ ಯಾಮಿ ಪಡೆದ ಸಂಭಾವನೆ ಎಷ್ಟು?

ಯಾಮಿ ನಟಿಸಿರುವ ‘ನಯೀ ನವೇಲಿ’ ಹೆಸರಿನ ಸಿನಿಮಾ ಇಂದು (ಅಕ್ಟೋಬರ್ 16) ರಿಲೀಸ್ ಆಗುತ್ತಿದೆ. ಸಿನಿಮಾನಲ್ಲಿ ಯಾಮಿ ಗೌತಮ್ ನಾಯಕಿ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿದ್ದಾರೆ. ಇದೇ ಕಾರಣಕ್ಕೆ ಮರಾಠಿಯ ‘ಕೌನ್ ಬನೇಗಾ ಕರೋಡ್​​ಪತಿ’ ಕಾರ್ಯಕ್ರಮದಲ್ಲಿ ಯಾಮಿ ಗೌತಮ್ ಭಾಗಿ ಆಗಿದ್ದರು. ಆ ಶೋ ಅನ್ನು ಮಾಧುರಿ ದೀಕ್ಷಿತ್ ನಡೆಸಿಕೊಡುತ್ತಿದ್ದು, ಅಲ್ಲಿ ಯಾಮಿ ಅವರಿಗೆ ‘ಧುರಂಧರ್ 2’ ಸಿನಿಮಾಕ್ಕೆ ಪಡೆದ ಸಂಭಾವನೆ ಕುರಿತ ಪ್ರಶ್ನೆ ಎದುರಾಯ್ತು.

Bigg Boss Kannada: ಕಾವ್ಯಾಳನ್ನು ಕೆಣಕಿದ ಕುಮಾರಿ, ಮಾತಿನ ವರಸೆಗೆ ಮನೆ ಮಂದಿ ಶಾಕ್

Bigg Boss Kannada: ಕಾವ್ಯಾಳನ್ನು ಕೆಣಕಿದ ಕುಮಾರಿ, ಮಾತಿನ ವರಸೆಗೆ ಮನೆ ಮಂದಿ ಶಾಕ್

Bigg Boss kannada Season 13: ವೈಲ್ಡ್ ಕಾರ್ಡ್ ಮೂಲಕ ಬಿಗ್​​ಬಾಸ್ ಮನೆಗೆ ಕುಮಾರಿ ಮತ್ತು ಲಕ್ಷ್ಮಿ ಎಂಟ್ರಿ ಕೊಟ್ಟಿದ್ದಾರೆ. ಅಗ್ನಿಪರೀಕ್ಷೆ ಮೂಲಕ ಈ ಇಬ್ಬರು ಮನೆಯ ಒಳಗೆ ಬಂದಿದ್ದು ಆರಂಭದಿಂದಲೇ ಆಟ ಶುರು ಮಾಡಿದ್ದಾರೆ. ಅದರಲ್ಲೂ ಕುಮಾರಿ ಆರಂಭದ ಕೆಲವಾರು ದಿನ ಎಲ್ಲರೊಟ್ಟಿಗೆ ಬೆರೆತು, ನಗುತ್ತಾ, ಆಟವಾಡುತ್ತಾ ಇದ್ದರು. ಇದೀಗ ಹಠಾತ್ತನೆ ಮನೆ ಮಂದಿಯ ಮುಂದೆ ತಮ್ಮ ವರಸೆ ಪ್ರದರ್ಶಿಸಿದ್ದಾರೆ. ಕಾವ್ಯಾ ಮೇಲೆ ಕುಮಾರಿ ಹರಿ ಹಾಯ್ದಿದ್ದು, ಕಾವ್ಯಾಗೆ ತಲೆ ಇಲ್ಲ, ಮೆದುಳಿಲ್ಲ ಎಂದೆಲ್ಲ ವ್ಯಂಗ್ಯ ಮಾಡಿದ್ದಾರೆ. ಕುಮಾರಿಯ ಮಾತು ಕೇಳಿ ಮನೆ ಮಂದಿ ಸಹ ಶಾಕ್ ಆಗಿದ್ದಾರೆ. ವಿಡಿಯೋ ನೋಡಿ....

ಕನ್ನಡಿಗರ ಬಗ್ಗೆ ರೆಹಮಾನ್ ಹೇಳಿದ್ದೇನು? ಯಶ್ ಬಿಚ್ಚಿಟ್ಟರು ಋಣದ ಕತೆ

ಕನ್ನಡಿಗರ ಬಗ್ಗೆ ರೆಹಮಾನ್ ಹೇಳಿದ್ದೇನು? ಯಶ್ ಬಿಚ್ಚಿಟ್ಟರು ಋಣದ ಕತೆ

ಸಂಗೀತಕ್ಕೆ ಆಸ್ಕರ್ ಗೆದ್ದಿರುವ ರೆಹಮಾನ್ ದಶಕಗಳಿಂದಲೂ ಭಾರತೀಯರನ್ನು ತಮ್ಮ ಸಂಗೀತದಿಂದ ಮಂತ್ರಮುಗ್ಧಗೊಳಿಸುತ್ತಲೇ ಬಂದಿದ್ದಾರೆ. ದಶಕಗಳ ಬಳಿಕ ಈಗಲೂ ಸಹ ಮ್ಯಾಜಿಕ್ ಉಳಿಸಿಕೊಂಡಿರುವ ಅವರು, ಇದೀಗ ಯಶ್ ‘ರಾವಣ’ನ ಪಾತ್ರದಲ್ಲಿ ನಟನೆ ಮಾಡುತ್ತಿರುವ ‘ರಾಮಾಯಣ’ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ‘ರಾಮಾಯಣ’ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್ ಅವರು, ಕರ್ನಾಟಕ, ಕನ್ನಡಿಗರು ಹಾಗೂ ಎಆರ್ ರೆಹಮಾನ್ ನಡುವೆ ಇರುವ ಅನುಬಂಧದ ಬಗ್ಗೆ ಮಾತನಾಡಿದರು.

ಕಮ್ಮಿ ಆಗಿಲ್ಲ ರಜನಿ ಹವಾ, ಇಲ್ಲಿದೆ ‘ಜೈಲರ್ 2’ ಮೊದಲ ದಿನದ ಕಲೆಕ್ಷನ್ ರಿಪೋರ್ಟ್

ಕಮ್ಮಿ ಆಗಿಲ್ಲ ರಜನಿ ಹವಾ, ಇಲ್ಲಿದೆ ‘ಜೈಲರ್ 2’ ಮೊದಲ ದಿನದ ಕಲೆಕ್ಷನ್ ರಿಪೋರ್ಟ್

Jailer 2 First Day Collection Worldwide: ಜೈಲರ್ 2 ಸಿನಿಮಾ ಮೊದಲ ದಿನ 120 ಕೋಟಿಗೂ ಹೆಚ್ಚು ಮೊತ್ತವನ್ನು ವಿಶ್ವದಾದ್ಯಂತ ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಗೆ ಮುಂಚೆಯೇ ಸಿನಿಮಾದ ಮುಂಗಡ ಬುಕಿಂಗ್ ಬಲು ಜೋರಾಗಿತ್ತು. ಆಗಲೇ ಸಿನಿಮಾದ ಒಳ್ಳೆಯ ಗಳಿಕೆಯನ್ನು ಅಂದಾಜು ಮಾಡಲಾಗಿತ್ತು. ಅದರಂತೆ ಈ ಸಿನಿಮಾ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 120 ಕೋಟಿಗೂ ಹೆಚ್ಚು ಹಣವನ್ನು ಬಾಚಿಕೊಂಡಿದೆ. ಆ ಮೂಲಕ ವಾರಾಂತ್ಯದ ವೇಳೆಗೆ ಈ ಸಿನಿಮಾ 300 ಕೋಟಿ ಗಳಿಕೆ ದಾಟುವ ನಿರೀಕ್ಷೆಯನ್ನು ಮೂಡಿಸಿದೆ.

ಯಶ್ ಅವರನ್ನು ‘ಬಾಸ್’ ಎಂದ ರಣ್​​ಬೀರ್ ಕಪೂರ್: ವಿಡಿಯೋ ನೋಡಿ

ಯಶ್ ಅವರನ್ನು ‘ಬಾಸ್’ ಎಂದ ರಣ್​​ಬೀರ್ ಕಪೂರ್: ವಿಡಿಯೋ ನೋಡಿ

ನಟ ರಣ್​​ಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಸಿನಿಮಾಕ್ಕೆ ಇಡೀ ತಂಡ ಹಾಕಿರುವ ಶ್ರಮದ ಬಗ್ಗೆ ಮಾತನಾಡಿದರು. ಕನ್ನಡದಲ್ಲಿ ಭಾಷಣ ಆರಂಭಿಸಿದ ನಟ ರಣ್​​ಬೀರ್ ಕಪೂರ್, ಆರಂಭದ ಕೆಲ ಪದಗಳನ್ನು ಕನ್ನಡದಲ್ಲಿ ಮಾತನಾಡಿದರು. ಬಳಿಕ ‘ಈ ಬಾರಿ ಯಶ್ ಬಾಸ್ ಇಂದ ಇಷ್ಟನ್ನೇ ಕಲಿತಿದ್ದೀನಿ, ಮುಂದಿನ ಬಾರಿ ಇನ್ನೂ ಹೆಚ್ಚು ಕಲಿಯುತ್ತೇನೆ’ ಎಂದರು ರಣ್​​ಬೀರ್ ಕಪೂರ್. ವಿಡಿಯೋ ನೋಡಿ...

‘ಜೈಲರ್ 2’ನಲ್ಲಿ ಮೋಹನ್​​ಲಾಲ್ ದೃಶ್ಯಗಳಿಗೆ ಕತ್ತರಿ, ಅಭಿಮಾನಿಗಳ ಅಸಮಾಧಾನ

‘ಜೈಲರ್ 2’ನಲ್ಲಿ ಮೋಹನ್​​ಲಾಲ್ ದೃಶ್ಯಗಳಿಗೆ ಕತ್ತರಿ, ಅಭಿಮಾನಿಗಳ ಅಸಮಾಧಾನ

ಹಿಂದಿನ ‘ಜೈಲರ್’ನಲ್ಲಿ ಶಿವರಾಜ್ ಕುಮಾರ್, ಮೋಹನ್​​ಲಾಲ್ ಇನ್ನೂ ಕೆಲವರ ಪಾತ್ರ ಸಖತ್ ಹಿಟ್ ಆಗಿತ್ತು. ‘ಜೈಲರ್ 2’ನಲ್ಲೂ ಅವರು ಮುಂದುವರೆದಿರುವ ಜೊತೆಗೆ ಇನ್ನೂ ಕೆಲವು ಹೊಸ ಸ್ಟಾರ್ ನಟರನ್ನು ಸೇರಿಸಿಕೊಳ್ಳಲಾಗಿದೆ. ಆದರೆ ಇದೀಗ ಸಿನಿಮಾದ ಬಗ್ಗೆ ಸ್ಟಾರ್ ನಟ ಮೋಹನ್​​ಲಾಲ್ ಅಭಿಮಾನಿಗಳು ಖ್ಯಾತೆ ತೆಗೆದಿದ್ದು, ಸಿನಿಮಾನಲ್ಲಿ ಮೋಹನ್​​ಲಾಲ್​ ಪಾತ್ರ ಕತ್ತರಿಸಲಾಗಿದೆ ಎಂದಿದ್ದಾರೆ.

‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಯಶ್​​ ಹೆಮ್ಮೆಯ ಮಾತು: ನಟ ಹೇಳಿದ್ದೇನು?

‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಯಶ್​​ ಹೆಮ್ಮೆಯ ಮಾತು: ನಟ ಹೇಳಿದ್ದೇನು?

ಸಿನಿಮಾ ಹಿಟ್ ಆದ ಬಳಿಕ ಹಲವಾರು ಸ್ಟಾರ್ ನಟ, ನಟಿಯರು ‘ಪ್ರೇಮದ ಊರಲಿ’ ಸಿನಿಮಾಕ್ಕೆ ಬೆಂಬಲ ನೀಡುತ್ತಿದ್ದು, ಸಿನಿಮಾ ಬಗ್ಗೆ ಕೊಂಡಾಡುತ್ತಿದ್ದಾರೆ. ನಿನ್ನೆ (ಅಕ್ಟೋಬರ್ 15) ಬೆಂಗಳೂರಿನಲ್ಲಿ ‘ರಾಮಾಯಣ’ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್ ಸಹ ‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ವಿಶೇಷವಾಗಿ ಮಾತನಾಡಿದರು. ಸಿನಿಮಾ ಅನ್ನು ಕೊಂಡಾಡಿದರು. ಯಶ್ ಹೇಳಿದ್ದೇನು? ಇಲ್ಲಿದೆ ಮಾಹಿತಿ....

‘ರಾಯ’, ‘ರಾವಣ’, ‘ರಾಜಾ ಹುಲಿ’ ಏನೇ ಆಗ್ಲಿ…’: ರಾಧಿಕಾ ಬಗ್ಗೆ ಯಶ್ ಮಾತು

‘ರಾಯ’, ‘ರಾವಣ’, ‘ರಾಜಾ ಹುಲಿ’ ಏನೇ ಆಗ್ಲಿ…’: ರಾಧಿಕಾ ಬಗ್ಗೆ ಯಶ್ ಮಾತು

ರಾಧಿಕಾ ಬಗ್ಗೆ ಮಾತನಾಡುವಾಗ ಯಶ್ ಹೇಳಿದ ಮಾತುಗಳು ತಮಾಷೆಯ ಜೊತೆಗೆ ಅರ್ಥಪೂರ್ಣವಾಗಿಯೂ ಇದ್ದವು. ಎಲ್ಲ ಸಹನಟರ ಬಗ್ಗೆ ಮಾತನಾಡಿದ ಬಳಿಕ ಅಂತಿಮವಾಗಿ ರಾಧಿಕಾ ಬಗ್ಗೆ ಮಾತನಾಡಿದ ಯಶ್, ‘ನನ್ನ ಸೀತೆ’ ಎಂದರು. ಹೊರಗೆ ನಾನು ‘ರಾಯ ನಾಗಲಿ, ರಾವಣನಾಗಲಿ, ರಾಜಾ ಹುಲಿ’ ಏನೇ ಆಗಲಿ, ಮನೆಯಲ್ಲಿ ‘ರಾಧಿಕಾ ಪತಿ’ ಎಂದರು ನಟ ಯಶ್. ವಿಡಿಯೋ ನೋಡಿ....