AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ 2’ ಬಳಿಕ ‘ರಾಮಾಯಣ 2’ ದಾಖಲೆಯನ್ನೂ ಮುರಿದ ‘ರಾಮಾಯಣ’: ಇನ್ನೊಂದೇ ಹೆಜ್ಜೆ ಬಾಕಿ

‘ರಾಮಾಯಣ’ ಸಿನಿಮಾ 24 ದಿನದಲ್ಲಿ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1814 ಕೋಟಿ ಗಳಿಕೆ ಮಾಡಿದೆ. ಇದೇ ವರ್ಷ ಮೇ ತಿಂಗಳಲ್ಲಿ ರಿಲೀಸ್ ಆಗಿದ್ದ ‘ಧುರಂಧರ್ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1813 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿತ್ತು. ಆ ಮೂಲಕ ಅತಿ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆ ಮಾಡಿದ ಭಾರತದ ಎರಡನೇ ಸಿನಿಮಾ ಎನಿಸಿಕೊಂಡಿತ್ತು. ಇದೀಗ ‘ರಾಮಾಯಣ’ ಸಿನಿಮಾವು ‘ಧುರಂಧರ್ 2’ ಸಿನಿಮಾದ ಗಳಿಕೆಯ ದಾಖಲೆಯನ್ನು ಮುರಿದು, ಎರಡನೇ ಸ್ಥಾನಕ್ಕೇರಿದೆ, ‘ಧುರಂಧರ್ 2’ ಸಿನಿಮಾ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

‘ಬಾಹುಬಲಿ 2’ ಬಳಿಕ ‘ರಾಮಾಯಣ 2’ ದಾಖಲೆಯನ್ನೂ ಮುರಿದ ‘ರಾಮಾಯಣ’: ಇನ್ನೊಂದೇ ಹೆಜ್ಜೆ ಬಾಕಿ
Ramayana Dhurandhar2
ಮಂಜುನಾಥ ಸಿ.
|

Updated on: Nov 29, 2026 | 3:06 PM

Share

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾ ಹೊಸ ದಾಖಲೆ
  • ‘ಧುರಂಧರ್ 2’ ದಾಖಲೆ ಮುರಿದ ‘ರಾಮಾಯಣ’
  • ‘ದಂಗಲ್’ ದಾಖಲೆ ಮುರಿಯುವುತ್ತ ದಾಪುಗಾಲು

ಯಶ್, ರಣ್​ಬೀರ್ ಕಪೂರ್, ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಬಿರುಗಾಳಿ ಎಬ್ಬಿಸಿದೆ. ಆರಂಭದ ಒಂದೆರಡು ದಿನ ನಿರೀಕ್ಷಿತ ಗಳಿಕೆ ಮಾಡಲಿಲ್ಲವಾದರೂ ಅದರ ಬಳಿಕ ‘ರಾಮಾಯಣ’ದ ಓಟ ಈ ವರೆಗೆ ಕಡಿಮೆ ಆಗಿಲ್ಲ. ಸಿನಿಮಾ ರಿಲೀಸ್ ಆಗಿ 24 ದಿನಗಳ ಬಳಿಕವೂ ಪ್ರತಿ ದಿನ ಕೋಟ್ಯಂತರ ಹಣವನ್ನು ಬಾಕ್ಸ್ ಆಫೀಸ್​​ನಿಂದ ಬಾಚುತ್ತಿದೆ. ಮಾತ್ರವಲ್ಲದೆ ಮುರಿಯಲು ಅಸಾಧ್ಯ ಎನ್ನಲಾಗಿದ್ದು ಹಲವು ಬಾಕ್ಸ್ ಆಫೀಸ್​ ದಾಖಲೆಗಳನ್ನು ಮುರಿಯುತ್ತಾ ಸಾಗಿದೆ. ಈಗಾಗಲೇ ‘ಬಾಹುಬಲಿ 2’ ಸಿನಿಮಾದ ಬಾಕ್ಸ್ ಆಫೀಸ್ ದಾಖಲೆ ಪುಡಿಗಟ್ಟಿರುವ ‘ರಾಮಾಯಣ’ ಇದೀಗ ‘ಧುರಂಧರ್ 2’ ಸಿನಿಮಾದ ದಾಖಲೆಯನ್ನೂ ಸಹ ಮುರಿದಿದೆ.

‘ರಾಮಾಯಣ’ ಸಿನಿಮಾ 24 ದಿನದಲ್ಲಿ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1814 ಕೋಟಿ ಗಳಿಕೆ ಮಾಡಿದೆ. ಇದೇ ವರ್ಷ ಮೇ ತಿಂಗಳಲ್ಲಿ ರಿಲೀಸ್ ಆಗಿದ್ದ ‘ಧುರಂಧರ್ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1813 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿತ್ತು. ಆ ಮೂಲಕ ಅತಿ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆ ಮಾಡಿದ ಭಾರತದ ಎರಡನೇ ಸಿನಿಮಾ ಎನಿಸಿಕೊಂಡಿತ್ತು. ಇದೀಗ ‘ರಾಮಾಯಣ’ ಸಿನಿಮಾವು ‘ಧುರಂಧರ್ 2’ ಸಿನಿಮಾದ ಗಳಿಕೆಯ ದಾಖಲೆಯನ್ನು ಮುರಿದು, ಎರಡನೇ ಸ್ಥಾನಕ್ಕೇರಿದೆ, ‘ಧುರಂಧರ್ 2’ ಸಿನಿಮಾ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

‘ರಾಮಾಯಣ’ ಸಿನಿಮಾ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಇನ್ನೊಂದು ಹೆಜ್ಜೆಯಷ್ಟೆ ಬಾಕಿ ಇದೆ. ಆದರೆ ಅದು ಸುಲಭದ್ದಲ್ಲ. ಮೊದಲ ಸ್ಥಾನದಲ್ಲಿ ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾ ಇದೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಬರೋಬ್ಬರಿ 2024 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದ ದಾಖಲೆ ಮುರಿಯಲು ‘ರಾಮಾಯಣ’ ಸಿನಿಮಾಕ್ಕೆ ಇನ್ನೂರು ಕೋಟಿಗೂ ಹೆಚ್ಚಿನ ಕಮಾಯಿ ಬಾಕ್ಸ್ ಆಫೀಸ್​​ನಲ್ಲಿ ಆಗಬೇಕಿದೆ. ಚಿತ್ರತಂಡವು ‘ದಂಗಲ್’ ದಾಖಲೆ ಮುರಿಯುವ ಪ್ರಯತ್ನದಲ್ಲಿದೆ. ಇತ್ತೀಚೆಗಷ್ಟೆ ಸಿನಿಮಾದ ಟಿಕೆಟ್ ದರವನ್ನು ಕಡಿತಗೊಳಿಸಿದ್ದು, ಇದು ಚಿತ್ರತಂಡಕ್ಕೆ ನೆರವಾಗಿದೆ. ಟಿಕೆಟ್ ದರ ಕಡಿಮೆ ಆದ ಮೇಲೆ ಹೆಚ್ಚಿನ ಮಂದಿ ಚಿತ್ರಮಂದಿರದತ್ತ ಬರುತ್ತಿದ್ದ, ಒಟ್ಟಾರೆ ಗಳಿಕೆಯಲ್ಲಿ ಹೆಚ್ಚಳವೇ ಆಗಿದೆ.

ಇದನ್ನೂ ಓದಿ:‘ರಾಮಾಯಣ’ದ ವಿರುದ್ಧ ದೂರು, ಸಮಯ ವ್ಯರ್ಥ ಮಾಡಬೇಡಿ ಎಂದ ಸುಪ್ರೀಂ

‘ರಾಮಾಯಣ’ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದು, ಅದ್ಧೂರಿ ಗ್ರಾಫಿಕ್ಸ್, ವಿಎಫ್​ಕ್ಸ್​​ಗಳನ್ನು ಸಿನಿಮಾನಲ್ಲಿ ಬಳಕೆ ಮಾಡಲಾಗಿದೆ. ಹಿಂದೆಂದೂ ನೋಡದ ರೀತಿಯಲ್ಲಿ ‘ರಾಮಾಯಣ’ ಸಿನಿಮಾವನ್ನು ನಿತೇಶ್ ತಿವಾರಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾದ ಈ ಅದ್ಧೂರಿತನ, ತಾಂತ್ರಿಕ ಶ್ರೀಮಂತಿಕೆಯಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಪಾತ್ರ ಬಲು ದೊಡ್ಡದಿದೆ. ಆಸ್ಕರ್ ವಿಜೇತ ಡಿಎನ್​​ಇಜಿ ವಿಎಫ್​ಎಕ್ಸ್ ಸಂಸ್ಥೆಯು ಸಿನಿಮಾಕ್ಕೆ ತೆರೆಮರೆಯಲ್ಲಿ ಕೆಲಸ ಮಾಡಿದೆ. ಸಿನಿಮಾದ ಎರಡನೇ ಭಾಗ 2028ರ ಆರಂಭದಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More