ಬಿಗ್ ಬಾಸ್ ಫಿನಾಲೆ ಹೊತ್ತಲ್ಲಿ ಪ್ರಸಾರ ಸಮಯ ಬದಲಾವಣೆ; ರಾತ್ರಿ 9 ಗಂಟೆಗೆ ಬರಲಿದೆ ಎಪಿಸೋಡ್
ಬಿಗ್ ಬಾಸ್ ಕನ್ನಡ ಫಿನಾಲೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ವೀಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರದ ಸಮಯ ಬದಲಾಗಿದೆ. ಇನ್ನು ಮುಂದೆ ರಾತ್ರಿ 9:30ರ ಬದಲು ರಾತ್ರಿ 9 ಗಂಟೆಗೆ ಎಪಿಸೋಡ್ ಪ್ರಾರಂಭವಾಗಲಿದೆ ಎಂದು ಕಿಚ್ಚ ಸುದೀಪ್ ಪ್ರಕಟಿಸಿದ್ದಾರೆ. ವೀಕ್ಷಕರು ಯಾವಾಗ ಬೇಕಾದರೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಎಪಿಸೋಡ್ ನೋಡಬಹುದು.

ಮುಖ್ಯಾಂಶಗಳು
- ಫಿನಾಲೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಗ್ ಬಾಸ್ ಪ್ರಸಾರ ಸಮಯದಲ್ಲಿ ಬದಲಾವಣೆ
- ಇನ್ನು ಮುಂದೆ ರಾತ್ರಿ 9:30ರ ಬದಲು ರಾತ್ರಿ 9 ಗಂಟೆಗೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಶುರು
- ನಿಗದಿತ ಸಮಯದ ಜೊತೆಗೆ ಯಾವಾಗ ಬೇಕಾದರೂ ಎಪಿಸೋಡ್ ನೋಡುವ ಸೌಲಭ್ಯ
ಬಿಗ್ ಬಾಸ್ ಕನ್ನಡ ಫಿನಾಲೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರೇಕ್ಷಕರಿಗೆ ಹೊಸ ಅಪ್‌ಡೇಟ್ ಸಿಕ್ಕಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರವಾಗುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ಕಿಚ್ಚ ಸುದೀಪ್ ಅವರು ಪ್ರೋಮೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಶನಿವಾರದ ಎಪಿಸೋಡ್ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ.
9:30ರ ಬದಲು 9 ಗಂಟೆಗೆ ಪ್ರಾರಂಭ
ಇದುವರೆಗೂ ಟಿವಿ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿತ್ತು. ವೀಕೆಂಡ್‌ನಲ್ಲಿ 9 ಗಂಟೆಗೆ ಶೋ ಪ್ರಸಾರ ಆಗುತ್ತಿತ್ತು. ಈಗ ವಾರದ ದಿನಗಳಲ್ಲಿನ ಒಟಿಟಿ ಪ್ರಸಾರ ಸಮಯ ಬದಲಿಸಲಾಗಿದೆ ರಾತ್ರಿ 9:30ರ ಬದಲು ರಾತ್ರಿ 9 ಗಂಟೆಗೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ಪ್ರಸಾರ ಶುರುವಾಗಲಿದೆ. ಸುದೀಪ್ ಅವರು ಈ ಸಮಯವನ್ನು ಗಮನಿಸುವಂತೆ ವೀಕ್ಷಕರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಸೇಡು ತೀರಿಸಿಕೊಂಡ ಯಶಸ್; ಇಡೀ ಸೀಸನ್ ನಾಮಿನೇಟ್ ಆದ ಗಗನ್
ಯಾವಾಗ ಬೇಕಾದರೂ ವೀಕ್ಷಣೆಗೆ ಅವಕಾಶ
ನಿಗದಿತ ಸಮಯದ ಜೊತೆಗೆ ವೀಕ್ಷಕರಿಗೆ ಮತ್ತೊಂದು ಅನುಕೂಲವೂ ಇದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ತಮಗೆ ಅನುಕೂಲವಾದಾಗ ಯಾವಾಗ ಬೇಕಾದರೂ ಎಪಿಸೋಡ್ ನೋಡುವ ಅವಕಾಶವಿದೆ ಎಂದು ಪ್ರೋಮೋದಲ್ಲಿ ತಿಳಿಸಲಾಗಿದೆ. ಫಿನಾಲೆ ಹತ್ತಿರವಾಗುತ್ತಿರುವುದರಿಂದ ಈ ಬದಲಾವಣೆ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.
ಈ ಮೊದಲು ವೂಟ್ ಇದ್ದಾಗ ಟಿವಿಗಿಂತ ಮೊದಲು ಒಟಿಟಿಯಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತಿತ್ತು. ಹಾಟ್ಸ್ಟಾರ್ ಬಂದ ಬಳಿಕ ಈ ವಿಷಯ ಬದಲಾಗಿತ್ತು. ಟಿವಿ ಹಾಗೂ ಒಟಿಟಿಯಲ್ಲಿ ಒಂದೇ ಸಮಯಕ್ಕೆ ಪ್ರಸಾರ ಕಾಣುತ್ತಿತ್ತು. ಈಗ ಹೊಸ ನಿರ್ಧಾರಕ್ಕೆ ಬರಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




