AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಗಿಯಲ್ಲಿ ಕಲ್ಲು, ಮಣ್ಣು ಮಿಶ್ರಣ ಮಾಡ್ತಿದ್ದ ಘಟಕದ ಮೇಲೆ ದಾಳಿ: ಆರೋಪಿಗಳ ಕಳ್ಳಾಟ ಕಂಡು ಅಧಿಕಾರಿಗಳಿಗೇ ಶಾಕ್​!

ರಾಗಿಯಲ್ಲಿ ಕಲ್ಲು, ಮಣ್ಣು ಮಿಶ್ರಣ ಮಾಡ್ತಿದ್ದ ಘಟಕದ ಮೇಲೆ ದಾಳಿ: ಆರೋಪಿಗಳ ಕಳ್ಳಾಟ ಕಂಡು ಅಧಿಕಾರಿಗಳಿಗೇ ಶಾಕ್​!

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Nov 29, 2026 | 9:07 AM

Share

ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಲಿಂಗದಳ್ಳಿ ಬಳಿ ಪಡಿತರ ರಾಗಿಯಲ್ಲಿ ಕಲ್ಲು, ಮರಳು ಬೆರಸುತ್ತಿದ್ದ ವೇರ್‌ಹೌಸ್ ಮೇಲೆ ಆಹಾರ ನಿಗಮದ ಅಧಿಕಾರಿಗಳು ದಾಳಿ ನಡೆಸಿದ್ದು, ಮ್ಯಾನೇಜರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೇರೆ ಜಿಲ್ಲೆಗಳಿಂದ ರಾಗಿ ಖರೀದಿಸಿ ವೇರ್​ಹೌಸ್​ನಲ್ಲಿ ಸಂಗ್ರಹಿಸುತ್ತಿದೆ ರಾಗಿಗೆ ಬಿಹಾರದ ಕಾರ್ಮಿಕರಿಂದ ಮರಳು ಮಿಶ್ರಣ ಮಾಡಿಸಲಾಗುತ್ತಿತ್ತು. ಬಳಿಕ ವೇರ್​ಹೌಸ್​ಯಿಂದ ರಾಜ್ಯದ ವಿವಿಧ ಸೊಸೈಟಿಗಳು, ನ್ಯಾಯಬೆಲೆ ಅಂಗಡಿಗಳಿಗೆ ಇದನ್ನು ಗ್ಯಾಂಗ್​​ ಸರಬರಾಜು ಮಾಡುತ್ತಿತ್ತು ಎಂಬುದು ಗೊತ್ತಾಗಿದೆ.

ಚಿಕ್ಕಮಗಳೂರು, ನವೆಂಬರ್​​ 29: ರಾಗಿಯಲ್ಲಿ ಕಲ್ಲು, ಮಣ್ಣು ಮಿಶ್ರಣ ಮಾಡ್ತಿದ್ದ ಘಟಕದ ಮೇಲೆ ದಾಳಿ ಆಹಾರ ನಿಗಮದ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಳ್ಳಿ ಬಳಿ ನಡೆದಿದೆ. ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಅನುರಾಧ ನೇತೃತ್ವದಲ್ಲಿ ಲಿಂಗದಳ್ಳಿ ಬಳಿಯ ವೇರ್​​ಹೌಸ್ ಮೇಲೆ ರೇಡ್​​ ನಡೆಸಲಾಗಿದ್ದು, ಆರೋಪಿಗಳು ಹಣದ ಆಸೆ ಪಡಿತರದಾರರಿಗೆ ನೀಡುವ ರಾಗಿ ಕಲಬೆರಕೆ ಮಾಡುತ್ತಿರುವುದು ಕಂಡುಬಂದಿದೆ. ದಾಳಿ ವೇಳೆ ರಾಗಿಯಲ್ಲಿ ಮರಳು ಬೆರಸುತ್ತಿದ್ದ ತಂಡ ಲಾಕ್​​​ ಆಗಿದ್ದು, ಮರಳು ಮತ್ತು ಕಲ್ಲು ತುಂಬಿದ ಲಾರಿಯನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ವೇರ್​​ಹೌಸ್ ಮ್ಯಾನೇಜರ್​ ಲೋಕೇಶ್ ವಿರುದ್ಧ ಲಿಂಗದಳ್ಳಿ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ. ಬೇರೆ ಜಿಲ್ಲೆಗಳಿಂದ ರಾಗಿ ಖರೀದಿಸಿ ವೇರ್​ಹೌಸ್​ನಲ್ಲಿ ಸಂಗ್ರಹಿಸುತ್ತಿದೆ ರಾಗಿಗೆ ಬಿಹಾರದ ಕಾರ್ಮಿಕರಿಂದ ಮರಳು ಮಿಶ್ರಣ ಮಾಡಿಸಲಾಗುತ್ತಿತ್ತು. ಬಳಿಕ ವೇರ್​ಹೌಸ್​ಯಿಂದ ರಾಜ್ಯದ ವಿವಿಧ ಸೊಸೈಟಿಗಳು, ನ್ಯಾಯಬೆಲೆ ಅಂಗಡಿಗಳಿಗೆ ಇದನ್ನು ಗ್ಯಾಂಗ್​​ ಸರಬರಾಜು ಮಾಡುತ್ತಿತ್ತು ಎಂಬುದು ಗೊತ್ತಾಗಿದೆ. ಘಟನೆ ಸಂಬಂಧ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Nov 29, 2026 09:07 AM

Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More