AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಡ್ತಿ ಹೋರಾಟದ ಇತಿಹಾಸ: ಅಂದು ನಕ್ಕವರು ಹಲವರು, ನಿಂತವರು ಕೆಲವರು; ಇಂದು ನಮ್ಮ ಹೊಣೆ ಏನು?

ಬೇಡ್ತಿ ನದಿ ಉಳಿಸುವ ಹೋರಾಟ ಆರಂಭದಲ್ಲಿ ಟೀಕೆಗಳನ್ನು ಎದುರಿಸಿತು. ಈಗ ವೈಜ್ಞಾನಿಕ ದತ್ತಾಂಶ, ಕಾನೂನು ಕ್ರಮ, ಮತ್ತು ಜನಸಹಭಾಗಿತ್ವದ ಮೂಲಕ ನದಿ ಜೋಡಣೆ ಯೋಜನೆಗಳನ್ನು ರದ್ದುಗೊಳಿಸುವತ್ತ ಸಾಗಬೇಕು. ಇದು ಕೇವಲ ಒಂದು ನದಿಯ ಹೋರಾಟವಲ್ಲ, ಬದಲಾಗಿ ಪಶ್ಚಿಮಘಟ್ಟದ ಪರಿಸರ ಮತ್ತು ಮುಂದಿನ ಪೀಳಿಗೆಗಾಗಿ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ. ನದಿಗಳನ್ನು ಉಳಿಸೋಣ, ಪರಿಸರವನ್ನು ರಕ್ಷಿಸೋಣ.

ಬೇಡ್ತಿ ಹೋರಾಟದ ಇತಿಹಾಸ: ಅಂದು ನಕ್ಕವರು ಹಲವರು, ನಿಂತವರು ಕೆಲವರು; ಇಂದು ನಮ್ಮ ಹೊಣೆ ಏನು?
ಡಾ. ರವಿಕಿರಣ ಪಟವರ್ಧನ
TV9 Web
| Edited By: |

Updated on: Nov 29, 2026 | 12:39 PM

Share

ಹೋರಾಟ ಆರಂಭಿಸುವುದು ಸುಲಭವಲ್ಲ. ಜನರ ಬೆಂಬಲವಿಲ್ಲದೆ, ಸರ್ಕಾರದ ಯೋಜನೆಯ ವಿರುದ್ಧ, ಪ್ರಕೃತಿಯ ಪರವಾಗಿ ಧ್ವನಿ ಎತ್ತುವುದು ಇನ್ನೂ ಕಷ್ಟ. ಬೇಡ್ತಿ ನದಿ ಉಳಿಸುವ ಸತ್ಯಾಗ್ರಹ ಶುರುವಾದಾಗ ಜನರ ಪ್ರತಿಕ್ರಿಯೆ ಹಲವು ಬಗೆಯಾಗಿತ್ತು.

ಅಪಹಾಸ್ಯ ಮಾಡಿದವರು:

“ಮಾಗೋಡು, ಕಾರವಾರ ಅಂತ ಎಲ್ಲೆಲ್ಲೋ ಸತ್ಯಾಗ್ರಹ ಮಾಡಿದರೆ ಸರ್ಕಾರದ ಕೆಲಸ ನಿಲ್ಲುತ್ತದೆಯೇ? ಆ ಅನಸೂಯಾ ಶರ್ಮಾಳಿಗೆ ಬೇರೆ ಕೆಲಸವಿಲ್ಲವೇ?” ಎಂಬ ನೋವಿನ ಮಾತುಗಳಿಂದ ಹೋರಾಟಗಾರರ ಆತ್ಮವಿಶ್ವಾಸ ಕುಗ್ಗಿಸುವ ಪ್ರಯತ್ನ ನಡೆಯಿತು.

ಗೆದ್ದ ಮೇಲೆ ಬರುವವರು:

“ಏನಾದರೂ ಸಾಧಿಸಿದರೆ ಆಗ ನಾವೂ ಜೊತೆಯಾಗೋಣ” ಎಂದು ಕಾದು ನೋಡಿದವರು.

ತೊಂದರೆಯ ಭಯದಿಂದ ದೂರ ಉಳಿದವರು:

“ಭಾಗವಹಿಸಿದರೆ ಯಾವ ಸಮಸ್ಯೆ ಎದುರಾಗುತ್ತದೋ? ಎಲ್ಲರಿಗೆ ಆದಂತೆ ನಮಗೂ ಆಗುತ್ತದೆ” ಎಂದು ನಿಷ್ಕ್ರಿಯರಾದವರು.

ದೂರದಿಂದ ಧೈರ್ಯ ಹೇಳಿದವರು:

ದೂರದಲ್ಲಿ ನಿಂತು ಧೈರ್ಯದ ಮಾತಾಡುವುದು ಸುಲಭ. ಆದರೆ ಮುಂಚೂಣಿಯಲ್ಲಿ ನಿಂತು ಟೀಕೆ, ಅಪಹಾಸ್ಯ, ಒತ್ತಡ ಎದುರಿಸುವುದು ಕಷ್ಟ.

ಅಚಲ ವಿಶ್ವಾಸದಿಂದ ಮುನ್ನಡೆದವರು:

ಇಷ್ಟೆಲ್ಲಾ ವಿರೋಧದ ನಡುವೆಯೂ ಕೆಲವರು ತಮ್ಮ ಪ್ರಯತ್ನದ ಮೇಲೆ ನಂಬಿಕೆ ಕಳೆದುಕೊಳ್ಳಲಿಲ್ಲ. “ನಮ್ಮ ನದಿ ಉಳಿಸಲು ನಾವು ಹೋರಾಡಲೇಬೇಕು” ಎಂಬ ದೃಢ ಸಂಕಲ್ಪದಿಂದ ಮುಂದೆ ಸಾಗಿದರು. ಅವರ ಸ್ನೇಹ, ಸಹಕಾರ, ನಿರಂತರ ಪ್ರಯತ್ನ ಮತ್ತು ನಿಸ್ವಾರ್ಥ ಸೇವೆಯಿಂದಲೇ ಬೇಡ್ತಿ ಯೋಜನೆ ವಿರುದ್ಧದ ಹೋರಾಟಕ್ಕೆ ನಾಂದಿಯಾಯಿತು.

ಈಗ ನಾವು ಏನು ಮಾಡಬೇಕು?

ಅಂದು ಜನಜಾಗೃತಿ ಮೂಡಿಸುವುದು ಮುಖ್ಯವಾಗಿತ್ತು. ಇಂದು ನಮ್ಮ ಕೈಯಲ್ಲಿ ದಾಖಲೆಗಳಿವೆ, ಅಧಿಕೃತ ಪತ್ರಗಳಿವೆ, ಸರ್ಕಾರದ ಉತ್ತರಗಳಿವೆ, ನದಿ ನೀರಿನ ಲಭ್ಯತೆಯ ಬಗ್ಗೆ ಪ್ರಶ್ನೆಗಳಿವೆ. ಹಾಗಾಗಿ ಕೇವಲ ವಿರೋಧ ಸಾಕಾಗದು. ವೈಜ್ಞಾನಿಕ ದತ್ತಾಂಶ, ಕಾನೂನು ಹೋರಾಟ ಮತ್ತು ಜನಸಹಭಾಗಿತ್ವದ ಮೂಲಕ ಯೋಜನೆಯನ್ನು ಸಂಪೂರ್ಣ ರದ್ದುಗೊಳಿಸುವತ್ತ ಸಾಗಬೇಕು.

ಹೋರಾಟ ಜನಾಂದೋಲನವಾಗಲಿ:

ಇದು ಒಬ್ಬ ವ್ಯಕ್ತಿಯ ಅಥವಾ ಒಂದು ಸಂಘಟನೆಯ ಹೋರಾಟವಲ್ಲ. ಬೇಡ್ತಿ, ಅಘನಾಶಿನಿ, ಗಂಗಾವಳಿ ನದಿಗಳನ್ನು ಮತ್ತು ಪಶ್ಚಿಮಘಟ್ಟದ ಪರಿಸರವನ್ನು ಉಳಿಸುವ ಹೋರಾಟ. ಪ್ರತಿ ಗ್ರಾಮದಲ್ಲೂ ಜಾಗೃತಿ ಮೂಡಬೇಕು.

ನೀರಿನ ವೈಜ್ಞಾನಿಕ ದತ್ತಾಂಶ ಸಾರ್ವಜನಿಕವಾಗಲಿ:

ಬೇಡ್ತಿ–ಗಂಗಾವಳಿ ನದಿಗಳ ಮಳೆಗಾಲ ಮತ್ತು ಬೇಸಿಗೆಯ ಹರಿವಿನ ಕನಿಷ್ಠ 20 ವರ್ಷಗಳ ಪರಿಶೀಲಿತ ದಾಖಲೆಗಳನ್ನು ಕೇಳಬೇಕು:

  • ನೀರಿನ ಅಳತೆ ಮಾಡುವ ಸ್ಥಳಗಳು ಯಾವುವು?
  • ಬೇಸಿಗೆಯಲ್ಲಿ ಕನಿಷ್ಠ ಹರಿವು ಎಷ್ಟು?
  • ಬರಗಾಲದ ವರ್ಷಗಳಲ್ಲಿ ನದಿಯ ಸ್ಥಿತಿ ಹೇಗಿತ್ತು?
  • ಕುಡಿಯುವ ನೀರು, ಪರಿಸರದ ಹರಿವು ಮತ್ತು ಸ್ಥಳೀಯ ಅಗತ್ಯಗಳಿಗೆ ಎಷ್ಟು ನೀರು ಬೇಕು?
  • ನೀರನ್ನು ತಿರುಗಿಸಿದರೆ ಕೆಳಭಾಗದ ನದಿ ಮತ್ತು ಸಮುದ್ರ ಪರಿಸರಕ್ಕೆ ಏನು ಪರಿಣಾಮ?

ಈ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ಸಿಗುವವರೆಗೆ ಯೋಜನೆಯ ಮುಂದಿನ ಯಾವ ಪ್ರಕ್ರಿಯೆಯೂ ನಡೆಯಬಾರದು ಎಂದು ಒತ್ತಾಯಿಸಬೇಕು.

ಸರ್ಕಾರದ ಮುಂದೆ ಒಂದೇ ಸ್ಪಷ್ಟ ಬೇಡಿಕೆ ಇರಲಿ:

ನಮ್ಮ ಬೇಡಿಕೆ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಯುವುದಲ್ಲ. ಬೇಡ್ತಿ–ವರದಾ ಮತ್ತು ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಸಂಪೂರ್ಣ ರದ್ದುಗೊಳಿಸಬೇಕು. ನೀರಿನ ದತ್ತಾಂಶ ಮತ್ತು ಪರಿಸರ ಅಧ್ಯಯನಗಳಿಲ್ಲದೆ DPR, PFR, ಸಮೀಕ್ಷೆ ಸೇರಿದಂತೆ ಯಾವುದೇ ಮುಂದಿನ ಪ್ರಕ್ರಿಯೆ ಮುಂದುವರಿಸಬಾರದು.

ಜನಪ್ರತಿನಿಧಿಗಳ ನಿಲುವು ಸ್ಪಷ್ಟವಾಗಲಿ:

ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮತ ಕೇಳಲು ಬರುವ ಪ್ರತಿ ಅಭ್ಯರ್ಥಿಯನ್ನೂ ಕೇಳಬೇಕು: “ಬೇಡ್ತಿ ಮತ್ತು ಅಘನಾಶಿನಿ ನದಿಗಳನ್ನು ಉಳಿಸುವ ಪರವಾಗಿ ನೀವು ನಿಲ್ಲುತ್ತೀರಾ? ಯೋಜನೆ ರದ್ದುಗೊಳಿಸಲು ನಿಮ್ಮ ಸ್ಪಷ್ಟ ನಿಲುವೇನು?” ಮಾತಿನ ಭರವಸೆ ಸಾಲದು, ಲಿಖಿತ ಬೆಂಬಲ ಬೇಕು.

ಯುವಜನರು ಮತ್ತು ವಿದ್ಯಾರ್ಥಿಗಳು ಕೈಜೋಡಿಸಲಿ:

ನದಿ ಎಂದರೆ ಕೇವಲ ನೀರಿನ ಹರಿವಲ್ಲ. ಅದು ಕೃಷಿ, ಕುಡಿಯುವ ನೀರು, ಅರಣ್ಯ, ಜೀವವೈವಿಧ್ಯ, ಮೀನುಗಾರಿಕೆ ಮತ್ತು ಮುಂದಿನ ಪೀಳಿಗೆಯ ಬದುಕಿನ ಆಧಾರ. ಅಧ್ಯಯನ, ದಾಖಲೆ ಸಂಗ್ರಹ, ಜನಜಾಗೃತಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸತ್ಯವನ್ನು ಜನರಿಗೆ ತಲುಪಿಸುವ ಕೆಲಸ ಯುವಜನರಿಂದ ಆಗಬೇಕು.

ಭಿನ್ನಾಭಿಪ್ರಾಯವಿದ್ದರೂ ಗುರಿ ಒಂದೇ ಆಗಿರಲಿ:

ಯಾರು ಮೊದಲು ಹೋರಾಡಿದರು, ಯಾರ ಹೆಸರು ಪ್ರಚಾರವಾಯಿತು, ಯಾರು ಹೆಚ್ಚು ಮಾತಾಡಿದರು ಎನ್ನುವುದಕ್ಕಿಂತ ನದಿ ಉಳಿಯುವುದು ಮುಖ್ಯ. ವ್ಯಕ್ತಿಗಿಂತ ಹೋರಾಟ ದೊಡ್ಡದು, ಸಂಘಟನೆಗಿಂತ ನದಿ ದೊಡ್ಡದು, ವೈಯಕ್ತಿಕ ಪ್ರತಿಷ್ಠೆಗಿಂತ ಪಶ್ಚಿಮಘಟ್ಟದ ಭವಿಷ್ಯ ದೊಡ್ಡದು. ಅಂದು ಅಪಹಾಸ್ಯ ಮಾಡಿದವರು ಇಂದು ಏನು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ. ಅಂದು ಸುಮ್ಮನಿದ್ದವರು ಇಂದು ಕೈಜೋಡಿಸುತ್ತಾರೆಯೇ, ಅಂದು ದೂರದಿಂದ ನೋಡಿದವರು ಇಂದು ಮುಂಚೂಣಿಗೆ ಬರುತ್ತಾರೆಯೇ ಎನ್ನುವುದು ಮುಖ್ಯ.

ಆರಂಭದಲ್ಲಿ ಕೆಲವರಷ್ಟೇ ಇದ್ದರು. ಆದರೆ ನದಿ ಉಳಿಸುವ ಹೊಣೆ ಇಂದು ನಮ್ಮೆಲ್ಲರ ಮೇಲಿದೆ. ನಾಳೆ ನಮ್ಮ ಮಕ್ಕಳು, ಮೊಮ್ಮಕ್ಕಳು “ನಮ್ಮ ಊರಿನ ನದಿ ಉಳಿಸಲು ನೀವು ಏನು ಮಾಡಿದಿರಿ?” ಎಂದು ಕೇಳಿದಾಗ ನಮ್ಮಲ್ಲಿ ಉತ್ತರ ಇರಬೇಕು. “ನಾವು ಪ್ರಯತ್ನಿಸಿದ್ದೆವು” ಎಂದು ಹೆಮ್ಮೆಯಿಂದ ಹೇಳುವ ಅವಕಾಶವನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಇದು ಯಾರ ವಿರುದ್ಧದ ಹೋರಾಟವೂ ಅಲ್ಲ; ನಮ್ಮ ನದಿಗಳ ಪರವಾದ ಹೋರಾಟ.

ಬೇಡ್ತಿ–ವರದಾ ನದಿ ಜೋಡಣೆ ಬೇಡ. ಅಘನಾಶಿನಿ–ವೇದಾವತಿ ನದಿ ಜೋಡಣೆ ಬೇಡ.

ನಮ್ಮ ಸಂಕಲ್ಪ: ನದಿಗಳನ್ನು ಉಳಿಸೋಣ, ಪಶ್ಚಿಮಘಟ್ಟವನ್ನು ರಕ್ಷಿಸೋಣ, ಮುಂದಿನ ಪೀಳಿಗೆಗೆ ಜೀವಂತ ನದಿಗಳನ್ನು ಬಿಟ್ಟುಹೋಗೋಣ!

ಲೇಖನ:  ಡಾ. ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು, ಪಟವರ್ಧನ್ ಆಯುರ್ವೇದ, ಶಿರಸಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
TV9 Web
TV9 Web

TV9 Kannada

Read More
ಬಿಗ್ ಬಾಸ್ ಮನೆಯಲ್ಲಿ ತಾಂಡವ್ ಡ್ಯಾನ್ಸ್; ಕ್ರೇಜಿಸ್ಟಾರ್ ಶೈಲಿಯಲ್ಲಿ ನೃತ್ಯ
ಬಿಗ್ ಬಾಸ್ ಮನೆಯಲ್ಲಿ ತಾಂಡವ್ ಡ್ಯಾನ್ಸ್; ಕ್ರೇಜಿಸ್ಟಾರ್ ಶೈಲಿಯಲ್ಲಿ ನೃತ್ಯ
ನವೆಂಬರ್ 30 ರಿಂದ ಡಿಸೆಂಬರ್ 6ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 30 ರಿಂದ ಡಿಸೆಂಬರ್ 6ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ರಾಶಿಯವರು ಹೊಸ ಸಂಬಂಧಗಳನ್ನು ಸ್ವಾಗತಿಸಿ
ಇಂದು ರಾಶಿಯವರು ಹೊಸ ಸಂಬಂಧಗಳನ್ನು ಸ್ವಾಗತಿಸಿ
ಕ್ಷೇತ್ರ ಮರುವಿಂಗಡಣೆ ವಿರುದ್ಧ ಸಮರ; ನಾಳೆ ದಕ್ಷಿಣ ಭಾರತದ ಸಿಎಂಗಳ ಸಭೆ
ಕ್ಷೇತ್ರ ಮರುವಿಂಗಡಣೆ ವಿರುದ್ಧ ಸಮರ; ನಾಳೆ ದಕ್ಷಿಣ ಭಾರತದ ಸಿಎಂಗಳ ಸಭೆ
ಹೋರಾಟ ಮುಂದುವರಿಯುತ್ತೆ ಎಂದ ನಾಗಲಕ್ಷ್ಮೀ
ಹೋರಾಟ ಮುಂದುವರಿಯುತ್ತೆ ಎಂದ ನಾಗಲಕ್ಷ್ಮೀ
ವಿರಾಜಪೇಟೆ: ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಹಗಲು-ರಾತ್ರಿ ಕಾರ್ಯಾಚರಣೆ
ವಿರಾಜಪೇಟೆ: ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಹಗಲು-ರಾತ್ರಿ ಕಾರ್ಯಾಚರಣೆ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌