Bengaluru Power Cut: ಡಿಸೆಂಬರ್ 4ರಿಂದ 8ವರೆಗೆ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ: ಯಾವೆಲ್ಲ ಪ್ರದೇಶದಲ್ಲಿ ಪವರ್ ಕಟ್
ಬೆಂಗಳೂರಿನಲ್ಲಿ ಡಿಸೆಂಬರ್ 4 ರಿಂದ 8 ರವರೆಗೆ ಬೆಸ್ಕಾಂ ನಿಗದಿತ ವಿದ್ಯುತ್ ವ್ಯತ್ಯಯ ಘೋಷಿಸಿದೆ. ಮಳೆಗಾಲದಿಂದ ವಿಳಂಬವಾದ ದುರಸ್ತಿ ಕಾರ್ಯಕ್ಕಾಗಿ ಈ ಕಡಿತ ಅನಿವಾರ್ಯ. ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಕಡಿತಗೊಳ್ಳಲಿದ್ದು, ಹಲವು ಬೆಂಗಳೂರು ಪ್ರದೇಶಗಳು ಪ್ರಭಾವಿತವಾಗಲಿವೆ. ನಿವಾಸಿಗಳು ಮೊಬೈಲ್ ಚಾರ್ಜ್, ನೀರಿನ ಸಂಗ್ರಹದಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಬೆಸ್ಕಾಂ ಸೂಚಿಸಿದೆ.
- Web contact
- Updated on: Dec 4, 2025
- 10:55 am
‘ನಾನು ನಾಳೆ ನನ್ನ ಕೆಲಸವನ್ನು ಬಿಡುತ್ತಿದ್ದೇನೆ’: ಕಂಪನಿ ನೀಡುವ ಹಿಂಸೆಗೆ ಬೇಸತ್ತ ಯುವಕ
ಇಂದಿನ ಯುವಜನತೆ ಕಾರ್ಪೊರೇಟ್ ಉದ್ಯೋಗದಲ್ಲಿ ಹೆಚ್ಚಿದ ಕೆಲಸದ ಒತ್ತಡದಿಂದ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನ 22 ವರ್ಷದ ಅನ್ಶುಲ್ ಉತ್ತಯ್ಯ ಇದೇ ಕಾರಣಕ್ಕೆ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಅವರ ಈ ವಿಡಿಯೋ ವೈರಲ್ ಆಗಿದೆ. ಉದ್ಯೋಗದ ನಿರಸಕ್ತಿ, ಸಮಯದ ಕೊರತೆ ಮತ್ತು ಭವಿಷ್ಯದ ಯೋಜನೆಗಳು ಅವರ ನಿರ್ಧಾರಕ್ಕೆ ಕಾರಣವಾಗಿವೆ. ಇದು ಯುವಜನರ ಉದ್ಯೋಗದ ಆಯ್ಕೆ ಮತ್ತು ಜೀವನ ಸಮತೋಲನದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
- Web contact
- Updated on: Dec 2, 2025
- 2:08 pm
ಕಾರ್ಯಕ್ರಮದಲ್ಲೇ ಬ್ರೇಕ್ ಫಾಸ್ಟ್ಗೆ ಆಹ್ವಾನಿಸಿದ ಡಿಕೆಶಿ: ಸಿಎಂಗೆ ಇಷ್ಟವಾದ ನಾಟಿ ಕೋಳಿ ರೆಸಿಪಿ
ಸಿಎಂ ಕುರ್ಚಿ ಕದನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದ ಬೆನ್ನಲ್ಲೇ ಹೈಕಮಾಂಡ್ ಸಿಎಂಗೆ ಕರೆ ಮಾಡಿ ಒಟ್ಟಿಗೆ ಸೇರಿ ಬ್ರೇಕ್ ಫಾಸ್ಟ್ ಮಾಡುವಂತೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರು ಡಿಸಿಎಂ ಡಿಕೆ ಶಿವಕುಮಾರ್ ಕರೆ ಮಾಡಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದರು. ಬಳಿಕ ತಮ್ಮಿಬ್ಬರ ನಡುವೆಯಾವುದೇ ಗೊಂದಲ ಇಲ್ಲ ಎಂದು ಮಾಧ್ಯಮಗಳ ಮುಂದೆ ಒಗ್ಗಟ್ಟಿನ ಪ್ರದರ್ಶಿಸಿದ್ದರು. ಇದರ ಬೆನ್ನಲ್ಲೇ ಇದೀಗ ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರಿಗೆ ಬ್ರೇಕ್ ಫಾಸ್ಟ್ ಮಾಡಲು ನಾಳೆ(ಡಿಸೆಂಬರ್ 02) ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
- Web contact
- Updated on: Dec 1, 2025
- 3:31 pm
ನಾಳೆಯ ಹವಾಮಾನ: ಕರ್ನಾಟಕದಲ್ಲಿ ಮೈಕೊರೆಯುವ ಚಳಿ ಜತೆ ಮಳೆ, ಎಲ್ಲೆಲ್ಲಿ?
Karnataka Weather Tomorrow: ದಿತ್ವಾ ಚಂಡಮಾರುತದ ಎಫೆಕ್ಟ್ ಕರ್ನಾಟಕದ ಮೇಲೆ ಆಗಿದೆ. ಕರ್ನಾಟಕದ ಹಲವು ಜಿಲ್ಲೆಗಳಿಗೂ ಮಳೆಯ ಅಲರ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ (Bengaluru) ಬೆಳಗ್ಗೆಯೇ ತುಂತುರು ಮಳೆಯಾಗಿದೆ. ಕಳೆದೆರಡು ದಿನಗಳಿಂದ ಶೀತ ಗಾಳಿ ಬೀಸುತ್ತಿದ್ದು, ಮೈ ಕೊರೆಯುವ ಚಳಿಗೆ ಜನರು ನಡುಗುತ್ತಿದ್ದಾರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
- Web contact
- Updated on: Nov 30, 2025
- 4:27 pm
ಉಡುಪಿ ಭೇಟಿಗೆ ಪ್ರಧಾನಿ ಮೋದಿ ಕಾತರ: ಕನ್ನಡ ನಾಡಿಗೆ ಬರುತ್ತಿರುವುದಕ್ಕೆ ಕನ್ನಡದಲ್ಲೇ ಖುಷಿ ಹಂಚಿಕೊಂಡ ನಮೋ
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ(ನವೆಂಬರ್ 28) ಉಡುಪಿಗೆ ಆಗಮಿಸಲಿದ್ದಾರೆ. ಹೀಗಾಗಿ ಉಡುಪಿಯಲ್ಲಿ ಪ್ರಧಾನಿ ಸ್ವಾಗತಕ್ಕೆ ಸಕಲ ಸಿದ್ಧತೆಗಳು ಜೋರಾಗಿದ್ದು, ಇನ್ನು ನರೇಂದ್ರ ಮೋದಿ ಸಹ ಕನ್ನಡ ನಾಡಿಗೆ ಬರುತ್ತಿರುವ ಬಗ್ಗೆ ಕನ್ನಡದಲ್ಲೇ ಖುಷಿ ಹಂಚಿಕೊಂಡಿದ್ದಾರೆ. ಹಾಗಾದ್ರೆ, ಉಡುಪಿ ಭೇಟಿ ಬಗ್ಗೆ ಮೋದಿ ಹೇಳಿದ್ದೇನು? ಪ್ರಧಾನಿ ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
- Web contact
- Updated on: Nov 27, 2025
- 8:53 pm
ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ಬೇಸರ, ಗದ್ದುಗೆ ಗುದ್ದಾಟಕ್ಕೆ ಹೊಸ ತಿರುವು?
ದಿನದಿಂದ ದಿನಕ್ಕೆ ಹಾವು ಏಣಿಯಾಟದಂತೆ ನಡೆಯುತ್ತಿರುವ ಅಧಿಕಾರ ಹಸ್ತಾಂತರದ ಆಟ, ಈಗ ಬಣ ಬಡಿದಾಟವಾಗಿ ನಿಂತಿಲ್ಲ. ದೆಹಲಿಯಲ್ಲಿ ಭಾರಿ ಸಂಚಲನ ಸೃಷ್ಟಿ ಮೂಡಿಸಿದ ಈ ಬೆಳವಣಿಗೆ ಪಕ್ಷದ ನಾಯಕ ರಾಹುಲ್ ಗಾಂಧಿಗೂ ಸವಾಲಾಗಿದೆ. ಈ ಎಲ್ಲ ಬೆಳವಣಿಗೆ ಮತ್ತು ಇದರಲ್ಲಿ ಇಲ್ಲೀವರೆಗೆ ಸಿದ್ದರಾಮಯ್ಯ ಇಟ್ಟ ಹೆಜ್ಜೆ ಕುರಿತು ರಾಹುಲ್ ಬೇಸರಿಸಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
- Web contact
- Updated on: Nov 27, 2025
- 5:02 pm
ಚಾಮರಾಜನಗರ: 20ಕ್ಕೂ ಅಧಿಕ ಕಾಡಾನೆ ಹಿಂಡು ಜಮೀನಿಗೆ ಲಗ್ಗೆ, ಬೆಚ್ಚಿದ ರೈತರು
ಚಾಮರಾಜನಗರ ಜಿಲ್ಲೆಯ ಕರ್ನಾಟಕ ತಮಿಳುನಾಡು ಗಡಿ ಪ್ರದೇಶ ಎತ್ತಿಗಟ್ಟಿ ಬಳಿ 20ಕ್ಕೂ ಅಧಿಕ ಕಾಡಾನೆ ಹಿಂಡು ಜಮೀನುಗಳಿಗೆ ಲಗ್ಗೆ ಇಟ್ಟಿದೆ. ಈ ಆನೆಗಳು ಗ್ರಾಮಕ್ಕೆ ನುಗ್ಗಿದರೆ ಪ್ರಾಣಪಾಯದ ಭೀತಿ ಎದುರಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುವಂತೆ ರೈತರು ಮನವಿ ಮಾಡಿದ್ದಾರೆ. ಮೊಬೈಲ್ ಕ್ಯಾಮರದಲ್ಲಿ ಸೆರೆಯಾದ ಕಾಡಾನೆಗಳ ಹಿಂಡಿನ ವಿಡಿಯೋ ಇಲ್ಲಿದೆ.
- Web contact
- Updated on: Nov 27, 2025
- 10:38 am
ಗ್ರಾಮೀಣ ಆರ್ಥಿಕತೆಗೆ ಬಲ ತುಂಬುತ್ತಿರುವ ಪತಂಜಲಿ ಕಿಸಾನ್ ಸಮೃದ್ಧಿ ಯೋಜನೆ
Patanjali Kisan Samriddhi program: ಪತಂಜಲಿ ಕಿಸಾನ್ ಸಮೃದ್ಧಿ ಕಾರ್ಯಕ್ರಮವು ಸಾವಯವ ಕೃಷಿ, ತರಬೇತಿ, ತಂತ್ರಜ್ಞಾನ ಏಕೀಕರಣ ಮತ್ತು ನ್ಯಾಯಯುತ ಬೆಲೆ ನಿಗದಿಯ ಮೂಲಕ ಭಾರತೀಯ ರೈತರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಇದರ ಅನುಷ್ಠಾನ ಮತ್ತು ಅದು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾಹಿತಿ ಇಲ್ಲಿದೆ.
- Web contact
- Updated on: Nov 24, 2025
- 4:47 pm
ಖರ್ಗೆ, ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ ಜಾರ್ಜ್ ನಿವಾಸಕ್ಕೆ ಡಿಕೆಶಿ ದಿಢೀರ್ ಭೇಟಿ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಕರ್ನಾಟಕ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ಗದಿಗೆದರಿವೆ. ಸಿದ್ದರಾಮಯ್ಯ ಬಣ, ಡಿಕೆ ಶಿವಕುಮಾರ್ ಬಣ ನಾಯಕರಿಂದ ಹೈಕಮಾಂಡ್ ಭೇಟಿ ಬಳಿಕ ಸ್ವತಃ ಸಿದ್ದರಾಮಯ್ಯನವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇನ್ನು ಸಚಿವ ಜಾರ್ಜ್, ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿ ಜಾರ್ಜ್ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
- Web contact
- Updated on: Nov 23, 2025
- 10:56 pm
ಕನ್ನಡ ಸಿನಿಮಾ ಟೀಕಿಸಲು ಬಂದ ಸಂದರ್ಶಕನಿಗೆ ಉಪೇಂದ್ರ ಖಡಕ್ ಉತ್ತರ
ತೆಲುಗು ಸಂದರ್ಶಕರೊಬ್ಬರ ಪ್ರಶ್ನೆಗೆ ಉಪೇಂದ್ರ ಅವರು ಕನ್ನಡ ಚಿತ್ರರಂಗದ ದೊಡ್ಡ ಬಜೆಟ್ ಸಿನಿಮಾಗಳ ಇತಿಹಾಸವನ್ನು ಅನಾವರಣಗೊಳಿಸಿದ್ದಾರೆ.ವಿಷ್ಣುವರ್ಧನ್ ಕಾಲದಲ್ಲೇ ಸಿಂಗಾಪುರದಲ್ಲಿ ಚಿತ್ರೀಕರಣಗೊಂಡ ರಾಜಾ ಕುಳ್ಳದಂತಹ ಅದ್ಧೂರಿ ಸಿನಿಮಾಗಳು ಬಂದಿದ್ದವು ಎಂದು ಉಪ್ಪಿ ವಿವರಿಸಿದರು. ಕಾಂತಾರ, ಕೆಜಿಎಫ್ಗೂ ಮುನ್ನವೇ ಕನ್ನಡದಲ್ಲಿ ದೊಡ್ಡ ಬಜೆಟ್ ಚಿತ್ರಗಳು ಸಿದ್ಧವಾಗಿದ್ದವು ಎಂಬ ಸತ್ಯವನ್ನು ತೆರೆದಿಟ್ಟರು.
- Web contact
- Updated on: Nov 22, 2025
- 2:55 pm
ಮಿಸ್ ಯೂನಿವರ್ಸ್ ಆದ ಮೆಕ್ಸಿಕೊ ಸುಂದರಿ; ಕಾಲಿಗೆ ಗಾಜು ಚುಚ್ಚಿದರೂ ಬಿಡಲಿಲ್ಲ ಛಲ
74ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮೆಕ್ಸಿಕೋದ ಫಾತಿಮಾ ಬೋಷ್ ವಿಜೇತರಾಗಿದ್ದಾರೆ. ಗಾಯ ಮತ್ತು ವಿವಾದಗಳ ನಡುವೆಯೂ ಅವರು ಕಿರೀಟ ಗೆದ್ದಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ಮಾಣಿಕಾ ವಿಶ್ವಕರ್ಮ ಟಾಪ್ 12 ಹಂತಕ್ಕೆ ತಲುಪಲು ವಿಫಲರಾದರು. ಥೈಲ್ಯಾಂಡ್ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾರತ ಮೂಲದ ಪ್ರವೀಣರ್ ಸಿಂಗ್ ಮೊದಲ ರನ್ನರ್ ಅಪ್ ಆದರು.
- Web contact
- Updated on: Nov 21, 2025
- 3:15 pm
ಪರ್ಫೆಕ್ಟ್ ಆಗಿ ಅಶ್ವಿನಿ ಮಿಮಿಕ್ರಿ ಮಾಡಿದ ಗಿಲ್ಲಿ; ವಿಡಿಯೋ ನೋಡಿ
Bigg Boss: ಬಿಗ್ ಬಾಸ್ ಕನ್ನಡ 12ರಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಡುವಿನ ಜಗಳ ತೀವ್ರಗೊಂಡಿದೆ. ಗಿಲ್ಲಿ ಅಶ್ವಿನಿಯವರ 'ವೀಕೆಂಡ್ ವರ್ತನೆ'ಯನ್ನು ಮಿಮಿಕ್ರಿ ಮಾಡಿ ಗಮನ ಸೆಳೆದಿದ್ದಾರೆ. ಅಶ್ವಿನಿ ವಾರದ ದಿನ ಏಕವಚನದಲ್ಲಿ ಮಾತನಾಡಿ, ಕಿಚ್ಚ ಸುದೀಪ್ ಎದುರು ಮಾತ್ರ ಬದಲಾಗುತ್ತಾರೆ ಎಂದು ಗಿಲ್ಲಿ ತೋರಿಸಿದ್ದಾರೆ. 'ಮಹಿಳಾ ಕಾರ್ಡ್' ಬಳಕೆ ಆರೋಪವೂ ಅಶ್ವಿನಿ ಮೇಲಿದೆ.
- Web contact
- Updated on: Nov 21, 2025
- 9:04 am