AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1000 ಮೂತ್ರಪಿಂಡ ಕಸಿ ಸಾಧನೆ: ಕಿಡ್ನಿ ಆರೈಕೆಯಲ್ಲಿ ‘ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ’ ಮೈಲಿಗಲ್ಲು

ವಿಶ್ವ ಕಿಡ್ನಿ ದಿನದಂದು ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ 1000 ಮೂತ್ರಪಿಂಡ ಕಸಿಗಳ ಮಹತ್ವದ ಮೈಲಿಗಲ್ಲು ತಲುಪಿದೆ. ಈ ಸಂದರ್ಭದಲ್ಲಿ 'ರೆನಲ್ ವಾರಿಯರ್ ಲೀಗ್' ಕ್ರೀಡಾ ಕಾರ್ಯಕ್ರಮ ಆಯೋಜಿಸಿ, ಮೂತ್ರಪಿಂಡ ದಾನಿಗಳು ಮತ್ತು ಕಸಿ ಮಾಡಿಸಿಕೊಂಡವರನ್ನು ಸನ್ಮಾನಿಸಿದೆ. ಇದು ಅಂಗಾಂಗ ದಾನದ ಮಹತ್ವ ಮತ್ತು ಮೂತ್ರಪಿಂಡದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಅನೇಕ ಜೀವಗಳನ್ನು ಉಳಿಸಲು ಪ್ರೇರಣೆ ನೀಡಿದೆ.

1000 ಮೂತ್ರಪಿಂಡ ಕಸಿ ಸಾಧನೆ: ಕಿಡ್ನಿ ಆರೈಕೆಯಲ್ಲಿ ‘ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ’ ಮೈಲಿಗಲ್ಲು
Gleneagles BGS Hospital Image Credit source: tv9 kannada
TV9 Web
| Edited By: |

Updated on:Mar 13, 2026 | 7:14 PM

Share

ಬೆಂಗಳೂರು, ಮಾರ್ಚ್​ 13: ಸುಧಾರಿತ ಮೂತ್ರಪಿಂಡ (kidney) ಆರೈಕೆಯಲ್ಲಿ ಮಹತ್ವದ ಸಾಧನೆ ಮಾಡಿರುವ ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ (ಎ ಫೋರ್ಟಿಸ್ ಹೆಲ್ತ್‌ಕೇರ್ ನೆಟ್‌ವರ್ಕ್) ಯಶಸ್ವಿಯಾಗಿ 1000 ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಆ ಮೂಲಕ ಅತ್ಯಾಧುನಿಕ ಮೂತ್ರಪಿಂಡದ ಕಸಿ ಚಿಕಿತ್ಸೆಯನ್ನು ಒದಗಿಸುವ ಹಾಗೂ ಅಂಗಾಂಗ ದಾನದ ಮೂಲಕ ಅನೇಕ ಜೀವಗಳನ್ನು ಉಳಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.

ವಿಶ್ವ ಕಿಡ್ನಿ ದಿನದ ಅಂಗವಾಗಿ ಈ ಮಹತ್ವದ ಸಾಧನೆಯನ್ನು ಆಚರಿಸಲು ಆಸ್ಪತ್ರೆ “ರೀನಲ್ ವಾರಿಯರ್ ಲೀಗ್” ಎಂಬ ವಿಶೇಷ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮೂತ್ರಪಿಂಡ ದಾನಿಗಳು ಮತ್ತು ಕಸಿ ಮಾಡಿಸಿಕೊಂಡವರು ಭಾಗವಹಿಸಿ ತಮ್ಮ ಧೈರ್ಯ, ಪುನಶ್ಚೇತನ ಮತ್ತು ಆರೋಗ್ಯಕರ ಜೀವನದ ಸಂದೇಶವನ್ನು ಹಂಚಿಕೊಂಡರು.

ಇದು ಕುಟುಂಬಗಳು ನಮ್ಮ ಮೇಲಿಟ್ಟಿರುವ ವಿಶ್ವಾಸ: ಡಾ. ಅನಿಲಕುಮಾರ್ ಬಿ ಟಿ

ಈ ಕ್ರೀಡಾ ಕಾರ್ಯಕ್ರಮದ ಮುಖ್ಯ ಉದ್ದೇಶ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಬಳಿಕವೂ ಜೀವನದಲ್ಲಿ ಚುರುಕಾಗಿರುವುದು ಹಾಗೂ ಸಕ್ರಿಯವಾಗಿರುವುದನ್ನು ತೋರಿಸುತ್ತದೆ. ಇನ್ನು ಈ ಕ್ರೀಡಾ ಸ್ಪರ್ಧೆಗಳಲ್ಲಿ ಗೆದ್ದ ವಿಜೇತರಿಗೆ ಮಾಧ್ಯಮಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಸ್ಥರು ಮತ್ತು ಹಿರಿಯ ಸಲಹೆಗಾರರು, ನೆಫ್ರಾಲಜಿ ಮತ್ತು ಟ್ರಾನ್ಸ್‌ಪ್ಲಾಂಟ್ ವೈದ್ಯ ಡಾ. ಅನಿಲಕುಮಾರ್ ಬಿ ಟಿ, 1000 ಮೂತ್ರಪಿಂಡ ಕಸಿ ಮೈಲಿಗಲ್ಲು ತಲುಪಿರುವುದು ನಮ್ಮ ತಂಡದ ಸಮರ್ಪಣೆ ಹಾಗೂ ರೋಗಿಗಳು ಮತ್ತು ಅವರ ಕುಟುಂಬಗಳು ನಮ್ಮ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ ಎಂದರು.

ಡಾ. ನರೇಂದ್ರ ಎಸ್ ಹೇಳಿದ್ದಿಷ್ಟು 

ಯೂರಾಲಜಿ ಮತ್ತು ರೀನಲ್ ಟ್ರಾನ್ಸ್‌ಪ್ಲಾಂಟ್ ಮುಖ್ಯಸ್ಥರು ಮತ್ತು ಹಿರಿಯ ಸಲಹೆಗಾರರು ಡಾ. ನರೇಂದ್ರ ಎಸ್ ಮಾತನಾಡಿ, ಪ್ರತಿ ಮೂತ್ರಪಿಂಡ ಕಸಿ ಸಂಕೀರ್ಣವಾದ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಾಗಿದ್ದು, ಶಸ್ತ್ರಚಿಕಿತ್ಸಕರು, ನೆಫ್ರಾಲಜಿಸ್ಟ್‌ಗಳು, ಟ್ರಾನ್ಸ್‌ಪ್ಲಾಂಟ್ ಸಂಯೋಜಕರು ಹಾಗೂ ಬೆಂಬಲ ತಂಡಗಳ ಸಹಕಾರದಿಂದ ಸಾಧ್ಯವಾಗುತ್ತದೆ ಎಂದಿದ್ದಾರೆ.

ಇದು 1000 ಜೀವಗಳಿಗೆ ಹೊಸ ಆಸೆ: ರವಿ ಬಗಲಿ

ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಕಾರ್ಯಾಚರಣಾಧಿಕಾರಿ ರವಿ ಬಗಲಿ ಮಾತನಾಡಿ, ಈ ಮೈಲಿಗಲ್ಲು ಕೇವಲ ಒಂದು ಸಂಖ್ಯೆ ಅಲ್ಲ. ಇದು 1000 ಜೀವಗಳಿಗೆ ಹೊಸ ಆಸೆಯನ್ನು ನೀಡಿದ ಸಾಧನೆ ಎಂದು ಬಣ್ಣಿಸಿದರು.

ಇದನ್ನೂ ಓದಿ: ಅಪೋಲೋ ಆಸ್ಪತ್ರೆಗಳು 24×7 ಆರೋಗ್ಯ ಸೇವೆಗೆ ಬದ್ಧ: ಐಎಚ್​ಡಿ ಸಮಾವೇಶದಲ್ಲಿ ಘೋಷಣೆ

ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ (ಎ ಫೋರ್ಟಿಸ್ ಹೆಲ್ತ್‌ಕೇರ್ ನೆಟ್‌ವರ್ಕ್)ಯಲ್ಲಿ ಅತ್ಯಾಧುನಿಕ ಹೆಮೋಡಯಾಲಿಸಿಸ್ ಘಟಕವಿದ್ದು, ಉನ್ನತ ಮಟ್ಟದ ಹೆಮೋಡಯಾಲಿಸಿಸ್, ಹೆಮೋಡಿಯಾಫಿಲ್ಟ್ರೇಶನ್, ಪ್ಲಾಸ್ಮಾಫೆರಿಸಿಸ್ ಹಾಗೂ ನಿರಂತರ ರೀನಲ್ ರಿಪ್ಲೇಸ್ಮೆಂಟ್ ಥೆರಪಿ (CRRT) ಸೌಲಭ್ಯಗಳನ್ನು ಹೊಂದಿದೆ. ರೀನಲ್ ವಾರಿಯರ್ ಲೀಗ್ ಕಾರ್ಯಕ್ರಮವು ಅಂಗಾಂಗ ದಾನ ಮತ್ತು ಮೂತ್ರಪಿಂಡ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಮೂತ್ರಪಿಂಡ ಕಸಿ ನಂತರದ ಜೀವನದ ಪ್ರೇರಣಾದಾಯಕ ಕಥೆಗಳನ್ನು ಸಮಾಜಕ್ಕೆ ಪರಿಚಯಿಸಿತು.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:16 pm, Fri, 13 March 26

Follow Us
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು