ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್, ವೈಯಿಸ್ ಓವರ್, ಎಡಿಟಿಂಗ್ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.
ಲಕ್ಷಾಂತರ ರೂ ಬೆಲೆ ಬಾಳುವ ಗಿಳಿ ರಕ್ಷಿಸಲು ಹೋಗಿ ದುರಂತ ಅಂತ್ಯಕಂಡ ಯುವಕ
ಗಿಳಿ ರಕ್ಷಿಸಲು ಹೋಗಿ ವಿದ್ಯುತ್ ಶಾಕ್ ಹೊಡೆದು ಯುವಕ ದುರಂತ ಅಂತ್ಯಕಂಡ ಘಟನೆ ಬೆಂಗಳೂರಿನ ಗಿರಿನಗರದ ಖಾಸಗಿ ಪಾರ್ಟ್ಮೆಂಟ್ನಲ್ಲಿ ನಡೆದಿದೆ. ಸುಮಾರು 2 ಲಕ್ಷ ರೂ ಬೆಲೆ ಬಾಳುವ ಫಾರಿನ್ ಗಿಳಿ ರಕ್ಷಿಸಲು ಹೋಗಿ ದುರಂತ ಸಂಭವಿಸಿದೆ. ಸ್ಥಳಕ್ಕೆ ಬೆಸ್ಕಾಂ ಮತ್ತು ಕೆಇಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
- Gangadhar Saboji
- Updated on: Dec 12, 2025
- 6:01 pm
ಕೊನೆಗೂ ಅಲೋಕ್ ಕುಮಾರ್ಗೆ ಸಿಕ್ತು ಮುಂಬಡ್ತಿ: ಸರ್ಕಾರದ ವಿರುದ್ಧ ತೊಡೆತಟ್ಟಿ ಗೆದ್ದ IPS
ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಇತ್ತೀಚೆಗೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶಿಸಿದ್ದ ತನಿಖೆಯನ್ನು ರದ್ದುಗೊಳಿಸಿ ಬಡ್ತಿಗೆ ಆದೇಶಿಸಿತ್ತು. ಈ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ.
- Gangadhar Saboji
- Updated on: Dec 10, 2025
- 8:26 pm
ಲಕ್ಷಾಂತರ ರೂ ಮೌಲ್ಯದ ಹಸುಗಳ ಕಳ್ಳತನ: ಒಂದು ಹಸುವಿನ ಕತ್ತು ಕೊಯ್ದ ಕೀಚಕರು
ವಿಜಯಲಕ್ಷ್ಮಿ ಎಂಬುವವರು ಮಗನ ಆಸೆಯಂತೆ ಗಿರ್ ಹಸುಗಳನ್ನು ತಂದಿದ್ದರು. ತಮ್ಮ ಮನೆ ಮಕ್ಕಳಂತೆ ಮುದ್ದಾಗಿ ಸಾಕಿದ್ದರು. ಆದರೆ ಹೈನುಗಾರಿಕೆ ಮಾಡುವ ಆಸೆಯಲ್ಲಿದ್ದ ಅವರಿಗೆ ಖತರ್ನಾಕ್ ಕಳ್ಳರು ಶಾಕ್ ಕೊಟ್ಟಿದ್ದಾರೆ. ನಾಲ್ಕರ ಪೈಕಿ ಮೂರು ಹಸುಗಳನ್ನು ಕದ್ದು ಪರಾರಿಯಾಗಿದ್ದಾರೆ. ಒಂದು ಹಸು ಖದೀಮರಿಂದ ತಪ್ಪಿಸಿಕೊಂಡು ಬಂದಿದೆ.
- Gangadhar Saboji
- Updated on: Dec 8, 2025
- 4:00 pm
ಕಾಂಗ್ರೆಸ್ ತೆಕ್ಕೆಗೆ ಬೆಂಗಳೂರು ಬಿಡಿಸಿಸಿ ಬ್ಯಾಂಕ್: ಪಾರುಪತ್ಯ ಸಾಧಿಸಿದ ಡಿಕೆಶಿ ಬೆಂಬಲಿತ ಟೀಂ
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದಾರೆ. 18ರ ಪೈಕಿ 15 ಕ್ಷೇತ್ರಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿವೆ. ಆ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾರಮ್ಯ ಮುಂದುವರೆಯಲಿದೆ.
- Gangadhar Saboji
- Updated on: Dec 7, 2025
- 8:52 pm
ರಿಹ್ಯಾಬ್ ಸೆಂಟರ್ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು: ಎಣ್ಣೆ ಬಿಡಿಸುವ ನೆಪದಲ್ಲಿ ಕೊಂದೇ ಬಿಟ್ರಾ?
ಆತ ಮದ್ಯಪಾನ ವ್ಯಸನಿಯಾಗಿದ್ದ. ಹೀಗಾಗಿ ಆತನ ಕುಟುಂಬ ಸಾಕಷ್ಟು ಪರಿತಪ್ಪಿಸುತಿತ್ತು. ಈ ನಡುವೆ ರಿಹ್ಯಾಬ್ ಸೆಂಟರ್ಗೆ ಸೇರಿಸುವಂತೆ ಸ್ನೇಹಿತರ ಸಲಹೆ ಮೇರೆಗೆ ದಾಖಲಿಸಲಾಗಿತ್ತು. ಆದರೆ ದಾಖಲಾದ ನಾಲ್ಕು ದಿನದಲ್ಲಿ ಆ ವ್ಯಕ್ತಿ ಸಾವನಪ್ಪಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪ ಕೇಳಿಬಂದಿದೆ.
- Gangadhar Saboji
- Updated on: Dec 4, 2025
- 7:14 pm
RV Devaraj Death: ಕಾಂಗ್ರೆಸ್ ಮಾಜಿ ಶಾಸಕ ಆರ್ವಿ ದೇವರಾಜ್ ಹೃದಯಾಘಾತದಿಂದ ನಿಧನ
ಆರ್ ವಿ ದೇವರಾಜ್ ನಿಧನ: ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಆರ್ವಿ ದೇವರಾಜ್ ನಿಧನ ಹೊಂದಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಮೈಸೂರಿನಲ್ಲಿರುವ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ವೈದ್ಯರು ಕುಟುಂಬಸ್ಥರಿಗೆ ಆರ್ವಿ ದೇವರಾಜ್ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.
- Gangadhar Saboji
- Updated on: Dec 2, 2025
- 9:53 am
ಎಲ್ಲವೂ ಸುಸೂತ್ರ, ಒಂದು ಹಂತಕ್ಕೆ ಬರುತ್ತೆ: ಡಿಕೆ ಸುರೇಶ್ ಮಾತಿನ ಮರ್ಮವೇನು?
ನಾನು ನನ್ನ ವೈಯುಕ್ತಿಕ ಕೆಲಸ ಮೇಲೆ ದೆಹಲಿಗೆ ತೆರಳಿದ್ದೆ, ಅದನ್ನೆಲ್ಲಾ ಹೇಳುವ ಅವಶ್ಯಕತೆಯಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಐಎಬಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಎಲ್ಲವೂ ಒಂದು ಹಂತಕ್ಕೆ ಬರುತ್ತದೆ ಎಂದಿದ್ದಾರೆ.
- Gangadhar Saboji
- Updated on: Dec 1, 2025
- 10:27 pm
ಬೆಂಗಳೂರು ದರೋಡೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ: RBIಗೆ ಪತ್ರ, ಹೊಸ ಮಾರ್ಗಸೂಚಿಗೆ ಸಿದ್ದತೆ
ಎಟಿಎಂ ವಾಹನವನ್ನ ಹೊತ್ತೊಯ್ದು, ಏಳು ಕೋಟಿ ದೋಚಿದ್ದ ಕೇಸ್ ಬೆಂಗಳೂರು ಪೊಲೀಸರ ನಿದ್ದೆ ಭಂಗ ಮಾಡಿತ್ತು. ಆದರೆ ಸತತ ಕಾರ್ಯಚರಣೆ ಬಳಿಕ ದರೋಡೆಕೋರರನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸಿದರು. ಸದ್ಯ ಇದರಿಂದ ಎಚ್ಚೆತ್ತಿರುವ ಪೊಲೀಸರು ಇದೀಗ ಹೊಸ ಮಾರ್ಗಸೂಚಿಗೆ ಸಿದ್ದತೆ ನಡೆಸಿದ್ದಾರೆ.
- Gangadhar Saboji
- Updated on: Dec 1, 2025
- 8:56 pm
ಪಟ್ಟದಾಟ: ತೀವ್ರ ಕುತೂಹಲ ಮೂಡಿಸಿದ ‘ಹೈ’ ಮೀಟಿಂಗ್; ಬ್ರೇಕ್ಫಾಸ್ಟ್ ಸಭೆ ಬಗ್ಗೆ ಜೋಶಿ ವ್ಯಂಗ್ಯ
ಹೈಕಮಾಂಡ್ ಮಧ್ಯಪ್ರವೇಶ ಬೆನ್ನಲ್ಲೇ ಸದ್ಯ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಜಟಾಪಟಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇಂದು ಸಂಜೆ ದೆಹಲಿಯಲ್ಲಿ ಹೈಕಮಾಂಡ್ ಮಹತ್ವದ ಸಭೆ ನಡೆಯಲಿದೆ. ಶೀಘ್ರದಲ್ಲೇ ಸಿಎಂ, ಡಿಸಿಎಂಗೆ ಬುಲಾವ್ ಸಾಧ್ಯತೆ ಇದೆ.
- Gangadhar Saboji
- Updated on: Nov 30, 2025
- 1:39 pm
‘ಅಪ್ಪ ನಿಮ್ಮ ಪ್ರೀತಿಗೆ ನಾನು ಅರ್ಹಳಲ್ಲ’: 8 ಪುಟದ ಡೆತ್‌ನೋಟ್ ಬರೆದಿಟ್ಟು ಮಗಳು ಆತ್ಮಹತ್ಯೆಗೆ ಶರಣು
ಹಾಸನ ಮೂಲದ ವಿದ್ಯಾರ್ಥಿನಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್ ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಇದು ಕುಟುಂಬದವರಿಗೆ ಆಘಾತ ತರಿಸಿದೆ. ಸಾವಿಗೂ ಮುನ್ನ 8 ಪುಟದ ಡೆತ್‌ನೋಟ್ ಬರೆದಿದ್ದು, ತಂದೆ ಬಗೆಗೆ ಬರೆದ ಸಾಲುಗಳು ಮನಕಲಕುವಂತಿವೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Gangadhar Saboji
- Updated on: Nov 30, 2025
- 11:47 am
ದಿತ್ವಾ ಚಂಡಮಾರುತ ಎಫೆಕ್ಟ್: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮಳೆ, ಮೈನಡುಗಿಸುವ ಚಳಿ
ದಿತ್ವಾ ಚಂಡಮಾರುತದ ಪರಿಣಾಮ ಬೆಂಗಳೂರಿನ ಮೇಳು ಬೀರಿದೆ. ನಗರದಲ್ಲಿ ಬೆಳ್ಳಂಬೆಳಗ್ಗೆ ಮಳೆ ಸುರಿದಿದ್ದು, ತಾಪಮಾನ 19 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ತಮಿಳುನಾಡು, ಆಂಧ್ರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಕೆಲ ದಿನಗಳ ಕಾಲ ಬೆಂಗಳೂರಿನಲ್ಲೂ ಮಳೆ ಸಹಿತ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
- Gangadhar Saboji
- Updated on: Nov 30, 2025
- 8:49 am
ಬೆಂಗಳೂರು ದರೋಡೆ ಕೇಸ್: 2 ಕೋಟಿ ಕದಿಯಲು ಹೋಗಿ 7 ಕೋಟಿ ರೂ ಕದ್ದಿದ್ದ ರಾಬರ್ಸ್
ಬೆಂಗಳೂರಿನಲ್ಲಿ ನಡೆದಿದ್ದ ಎಟಿಎಂ ವಾಹನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಬಯಲಾಗಿತ್ತಿವೆ. ದರೋಡೆಕೋರರು ಕೇವಲ 2 ಕೋಟಿ ರೂ. ಕದಿಯಲು ಪ್ಲಾನ್ ಮಾಡಿದ್ದರು. ಆದರೆ 7.11 ಕೋಟಿ ರೂ. ದರೋಡೆ ಮಾಡಿದ್ದರು. ಅಷ್ಟೊಂದು ಹಣ ಕಂಡ ದರೋಡೆಕೋರರು ಕೂಡ ಅಕ್ಷರಶಃ ದಿಗ್ರಾಂತರಾಗಿದ್ದರು.
- Gangadhar Saboji
- Updated on: Nov 30, 2025
- 7:32 am