AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಹಾರ್ಡ್ ರಾಕ್ ಕೆಫೆ ಯುಗ ಅಂತ್ಯ: ಬೆಂಗಳೂರು ಸೇರಿದಂತೆ 10 ನಗರಗಳ ಔಟ್‌ಲೆಟ್ ಬಂದ್, ಕಾರಣವೇನು?

ಹಾರ್ಡ್ ರಾಕ್ ಕೆಫೆ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಕೊನೆಗೊಳಿಸಿದೆ. JSM ಕಾರ್ಪೊರೇಷನ್ ಜೊತೆಗಿನ ಒಪ್ಪಂದ ರದ್ದಾದ ಕಾರಣ, ಬೆಂಗಳೂರು ಸೇರಿದಂತೆ 10 ಪ್ರಮುಖ ನಗರಗಳಲ್ಲಿನ ಕೆಫೆಗಳು ಮುಚ್ಚಲಿವೆ. ಅಮೆರಿಕನ್ ಶೈಲಿಯ ಆಹಾರ ಮತ್ತು ರಾಕ್ ಸಂಗೀತಕ್ಕೆ ಹೆಸರಾಗಿದ್ದ HRC ನಿರ್ಗಮನವು ಗ್ರಾಹಕರಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ. ಹೆಚ್ಚಿನ ಬೆಲೆ ಮತ್ತು ಸ್ಥಳೀಯ ಪಬ್‌ಗಳ ಪೈಪೋಟಿಯೇ ಈ ನಿರ್ಧಾರಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಭಾರತದಲ್ಲಿ ಹಾರ್ಡ್ ರಾಕ್ ಕೆಫೆ ಯುಗ ಅಂತ್ಯ: ಬೆಂಗಳೂರು ಸೇರಿದಂತೆ 10 ನಗರಗಳ ಔಟ್‌ಲೆಟ್ ಬಂದ್, ಕಾರಣವೇನು?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Mar 17, 2026 | 3:11 PM

Share

ಬೆಂಗಳೂರು, ಮಾ.17: ದಶಕಗಳ ಕಾಲ ರಾಕ್ ಸಂಗೀತ ಮತ್ತು ಅಮೇರಿಕನ್ ಶೈಲಿಯ ಆಹಾರಕ್ಕೆ ಹೆಸರಾಗಿದ್ದ ‘ಹಾರ್ಡ್ ರಾಕ್ ಕೆಫೆ’ (HRC) ಭಾರತಕ್ಕೆ ಗುಡ್‌ಬೈ ಹೇಳುತ್ತಿದೆ. ಭಾರತದಲ್ಲಿ ಈ ಕೆಫೆಗಳನ್ನು ನಡೆಸುತ್ತಿದ್ದ JSM ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಜೊತೆಗಿನ ಒಪ್ಪಂದವನ್ನು ಹಾರ್ಡ್ ರಾಕ್ ಇಂಟರ್ನ್ಯಾಷನಲ್ ಅಧಿಕೃತವಾಗಿ ಕೊನೆಗೊಳಿಸಿದೆ. ಅದರಲ್ಲೂ ಬೆಂಗಳೂರಿನಲ್ಲಿ ತನ್ನದೇ ಆಗಿರುವ ರುಚಿಯನ್ನು ಹಾಗೂ ವೈಶಿಷ್ಟವನ್ನು ಹೊಂದಿದ್ದ ಇದು, ಇದೀಗ ಬೆಂಗಳೂರಿಗರಿಗೆ ದೊಡ್ಡ ನಿರಾಸೆಯನ್ನು ಮೂಡಿಸಿದೆ. ಇನ್ನು ಈ ನಿರ್ಧಾರದಿಂದಾಗಿ ಭಾರತದ ಪ್ರಮುಖ ನಗರಗಳಲ್ಲಿದ್ದ 10 ಕೆಫೆಗಳು ಮುಚ್ಚಲಿವೆ.

ಅದರಲ್ಲಿ ಒಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವೈಟ್‌ಫೀಲ್ಡ್ ಸೇಂಟ್ ಮಾರ್ಕ್ಸ್ ರೋಡ್ (ಐಕಾನಿಕ್) ಚಂಡೀಗಢ, ಚೆನ್ನೈ, ಹೈದರಾಬಾದ್ (ಹೈಟೆಕ್ ಸಿಟಿ ಸೇರಿದಂತೆ), ಕೋಲ್ಕತ್ತಾ, ನವದೆಹಲಿ ಮತ್ತು ಪುಣೆಯಲ್ಲೂ ಕೂಡ ತನ್ನ ಸೇವೆಯನ್ನು ಕೊನೆ ಮಾಡಲಿದೆ. ಆದರೆ ಗೋವಾದಲ್ಲಿರುವ ಹಾರ್ಡ್ ರಾಕ್ ಹೋಟೆಲ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಇದು ಪ್ರಸ್ತುತ ರದ್ದಾದ ಒಪ್ಪಂದದ ವ್ಯಾಪ್ತಿಗೆ ಬರುವುದಿಲ್ಲ.

ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರೆ, ಇನ್ನು ಕೆಲವರು ಕೆಫೆಯ ವೈಫಲ್ಯಕ್ಕೆ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ “ಹಾರ್ಡ್ ರಾಕ್ ಕೆಫೆ ಒಳ್ಳೆಯದಾಗಿತ್ತು, ಆದರೆ ಬೆಲೆ ಮಾತ್ರ ಗಗನಕ್ಕೇರಿತ್ತು. ಇದೇ ಕಾನ್ಸೆಪ್ಟ್ ಇಟ್ಟುಕೊಂಡು ಕಡಿಮೆ ಬೆಲೆಗೆ ಸ್ಥಳೀಯ ಪಬ್‌ಗಳು ಭರ್ಜರಿ ಪೈಪೋಟಿ ನೀಡಿದವು” ಎಂದು ಒಬ್ಬರು ಹೇಳಿದ್ದಾರೆ. “ಇದು ಕೇವಲ ತಿನ್ನುವ ಜಾಗವಾಗಿರಲಿಲ್ಲ, ಸಂಗೀತದ ಅನುಭವ ನೀಡುವ ತಾಣವಾಗಿತ್ತು. ಆದರೆ ಇತ್ತೀಚೆಗೆ ಅಲ್ಲಿ ರಾಕ್ ಸಂಗೀತದ ಬದಲು ಜನರಿಕ್ ಪ್ಲೇಲಿಸ್ಟ್‌ಗಳು ಪ್ಲೇ ಆಗುತ್ತಿದ್ದವು” ಎಂದು ಸಂಗೀತ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯುಗಾದಿಗೆ ಮೈಸೂರು, ಧರ್ಮಸ್ಥಳ, ಕುಕ್ಕೆಗೆ ಹೋಗುವವರಿಗೆ ಬಿಗ್​​ ಶಾಕ್​​​​​ ನೀಡಿದ ಖಾಸಗಿ ಬಸ್​​​: ಟಿಕೆಟ್​​​​ ದರ ಏರಿಕೆ ಪಟ್ಟಿ ಇಲ್ಲಿದೆ

“ಬೆಂಗಳೂರಿನ ಸೇಂಟ್ ಮಾರ್ಕ್ಸ್ ರೋಡ್ ಕೆಫೆ ಒಂದು ಸಂಕೇತವಾಗಿತ್ತು. ಐಟಿ ಮಂದಿ ಈಗ ಕೇವಲ ಇಡಿಎಂ (EDM) ಮತ್ತು ಪಂಜಾಬಿ ಸಂಗೀತಕ್ಕೆ ಮಾರುಹೋಗುತ್ತಿದ್ದಾರೆ” ಎಂದು ಬೆಂಗಳೂರಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಇದು 1971 ರಲ್ಲಿ ಐಸಾಕ್ ಟಿಗ್ರೆಟ್ ಮತ್ತು ಪೀಟರ್ ಮಾರ್ಟನ್ ಅವರಿಂದ ಲಂಡನ್‌ನಲ್ಲಿ ಆರಂಭವಾಯಿತು. ಅಮೇರಿಕನ್ ಶೈಲಿಯ ಆಹಾರ ಮತ್ತು ರಾಕ್ ಸಂಗೀತದ ಸ್ಮರಣಿಕೆಗಳು ಇಲ್ಲಿನ ವಿಶೇಷವಾಗಿತ್ತು. ಇಂದು 70 ಕ್ಕೂ ಹೆಚ್ಚು ದೇಶಗಳಲ್ಲಿ ಹೋಟೆಲ್, ಕ್ಯಾಸಿನೊ ಮತ್ತು ಮ್ಯೂಸಿಯಂಗಳನ್ನು ಈ ಸಂಸ್ಥೆ ಹೊಂದಿದೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Tue, 17 March 26

Follow Us
ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ
ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!
ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!
‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ಶ್ರುತಿ ಹರಿಹರನ್
‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ಶ್ರುತಿ ಹರಿಹರನ್
ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ
ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ
ಉಡುಪಿಯಲ್ಲೊಂದು ಅಪರೂಪದ ಘಟನೆ: ಗ್ಯಾಸ್ OTP ವ್ಯಕ್ತಿ ಜೀವ ಉಳಿಸಿದ್ಹೇಗೆ?
ಉಡುಪಿಯಲ್ಲೊಂದು ಅಪರೂಪದ ಘಟನೆ: ಗ್ಯಾಸ್ OTP ವ್ಯಕ್ತಿ ಜೀವ ಉಳಿಸಿದ್ಹೇಗೆ?
ದಾವಣಗೆರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಹ್ಲಾದ ಜೋಶಿ ಮಹತ್ವದ ಕರೆ
ದಾವಣಗೆರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಹ್ಲಾದ ಜೋಶಿ ಮಹತ್ವದ ಕರೆ
ಬೆಂಕಿ ಬೌಲಿಂಗ್: ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದ ಶಮಿ!
ಬೆಂಕಿ ಬೌಲಿಂಗ್: ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದ ಶಮಿ!
ನೆಲವೇ ಹಾಸಿಗೆ, ಕಟ್ಟೆಯೇ ತಲೆದಿಂಬು; ಪ್ರಭುದೇವ ಎಷ್ಟು ಸಿಂಪಲ್ ನೋಡಿ 
ನೆಲವೇ ಹಾಸಿಗೆ, ಕಟ್ಟೆಯೇ ತಲೆದಿಂಬು; ಪ್ರಭುದೇವ ಎಷ್ಟು ಸಿಂಪಲ್ ನೋಡಿ 
ಕಾದು ಕುಳಿತು ರೈಲು ಬರುತ್ತಿದ್ದಂತೆ ಪ್ರಯಾಣಿಕನನ್ನು ತಳ್ಳಿದ ವ್ಯಕ್ತಿ
ಕಾದು ಕುಳಿತು ರೈಲು ಬರುತ್ತಿದ್ದಂತೆ ಪ್ರಯಾಣಿಕನನ್ನು ತಳ್ಳಿದ ವ್ಯಕ್ತಿ