AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ಟಿ20 ಲೀಗ್​ಗೆ ಅಜಿಂಕ್ಯ ರಹಾನೆ ಪಾದಾರ್ಪಣೆ

Ajinkya Rahane Joins European T20 League: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆ, ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನಲ್ಲಿ ಆಮ್ಸ್ಟರ್‌ಡ್ಯಾಮ್ ಫ್ಲೇಮ್ಸ್‌ಗೆ ಮಾರ್ಕ್ವೀ ಆಟಗಾರರಾಗಿ ಸೇರ್ಪಡೆಗೊಂಡಿದ್ದಾರೆ. ಇದು ಅವರ ವೃತ್ತಿಜೀವನದ ಮೊದಲ ವಿದೇಶಿ ಟಿ20 ಲೀಗ್ ಆಗಿದ್ದು, ಹೊಸ ಇನ್ನಿಂಗ್ಸ್‌ಗೆ ಸಿದ್ಧರಾಗಿದ್ದಾರೆ. ಅಶ್ವಿನ್ ಕೂಡ ಈ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದು, ಭಾರತೀಯ ಕ್ರಿಕೆಟ್ ತಾರೆಯರು ಯುರೋಪಿನಲ್ಲಿ ಮಿಂಚಲಿದ್ದಾರೆ.

ಪೃಥ್ವಿಶಂಕರ
|

Updated on: Aug 07, 2026 | 7:25 PM

Share
ಕೆಲವೇ ದಿನಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಇದೀಗ ವಿದೇಶಿ ಟಿ20 ಲೀಗ್​ನಲ್ಲಿ ತಮ್ಮ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್​ನ ಉದ್ಘಾಟನಾ ಆವೃತ್ತಿಯಲ್ಲಿ ಅಜಿಂಕ್ಯ ರಹಾನೆ ಅವರನ್ನು 'ಮಾರ್ಕ್ವೀ ಆಟಗಾರ'ನನ್ನಾಗಿ ನೇಮಿಸಿಕೊಂಡಿರುವುದಾಗಿ ಆಮ್ಸ್ಟರ್‌ಡ್ಯಾಮ್ ಫ್ಲೇಮ್ಸ್ ಘೋಷಿಸಿದೆ(PC-PTI).

1 / 5
ಎಲ್ಲಾ ಮಾದರಿಗಳಲ್ಲಿಯೂ ಆಡಿರುವ ರಹಾನೆ ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿರುವ ಟಿ20 ಲೀಗ್‌ನಲ್ಲಿ ಆಮ್ಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡದ ಭಾಗವಾಗಲಿದ್ದಾರೆ. ಅವರೊಂದಿಗೆ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್ ಮತ್ತು ಟಿಮ್ ಡೇವಿಡ್ ಕೂಡ ಸೇರಲಿದ್ದಾರೆ(PC-PTI).

2 / 5
ತಮ್ಮ ವೃತ್ತಿಜೀವನದಲ್ಲಿ 308 ಟಿ20 ಪಂದ್ಯಗಳನ್ನು ಆಡಿರುವ ರಹಾನೆ, ಮೊದಲ ಬಾರಿಗೆ ವಿದೇಶಿ ಟಿ20 ಲೀಗ್‌ನಲ್ಲಿ ಆಡಲಿದ್ದಾರೆ. ಇಲ್ಲಿಯವರೆಗೆ, ಟೀಮ್ ಇಂಡಿಯಾ ಮತ್ತು ಐಪಿಎಲ್ ಹೊರತುಪಡಿಸಿ, ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಾತ್ರ ಆಡಿದ್ದಾರೆ(PC-PTI).

3 / 5
ಇನ್ನು ಈ ಲೀಗ್‌ನಲ್ಲಿರುವ ಏಕೈಕ ಭಾರತೀಯ ಆಟಗಾರ ರಹಾನೆ ಅಲ್ಲ. ಅವರ ಜೊತೆಗೆ ರವಿಚಂದ್ರನ್ ಅಶ್ವಿನ್ ಈಗಾಗಲೇ ಇಟಿಪಿಎಲ್ ಸೇರಿದ್ದಾರೆ. ಅವರು ರಾಹುಲ್ ದ್ರಾವಿಡ್ ಒಡೆತನದ ಡಬ್ಲಿನ್ ಗಾರ್ಡಿಯನ್ಸ್ ತಂಡದ ಪರ ಆಡಲಿದ್ದಾರೆ ಮತ್ತು ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಲಿದ್ದಾರೆ(PC-PTI).

4 / 5
ಆಮ್ಸ್ಟರ್‌ಡ್ಯಾಮ್ ಫ್ಲೇಮ್ಸ್‌ ತಂಡಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಮಾತನಾಡಿದ ಅಜಿಂಕ್ಯ ರಹಾನೆ, ‘ಕ್ರಿಕೆಟ್ ನನಗೆ ತುಂಬಾ ನೀಡಿದೆ. ಇದೀಗ ಆಮ್ಸ್ಟರ್‌ಡ್ಯಾಮ್ ಫ್ಲೇಮ್ಸ್ ಅನ್ನು ಯಶಸ್ವಿ ಫ್ರಾಂಚೈಸ್ ಆಗಿ ನಿರ್ಮಿಸಲು, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲು ಮತ್ತು ಯುರೋಪಿನಾದ್ಯಂತ ಕ್ರಿಕೆಟ್‌ನ ಭವಿಷ್ಯವನ್ನು ಬಲಪಡಿಸಲು ನಿರ್ವಹಣೆಯೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ(PC-PTI).

5 / 5
Follow Us
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ

ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ

ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ

ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು

ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?

ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ

ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ

ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್

ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್

ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​