- TV9 Kannada Photo gallery Mysuru Dasara Fireworks Rehearsal Successful; Elephants and Horses Remain Calm Despite Loud Noise
ಮೈಸೂರು ದಸರಾ: ಸಿಡಿಮದ್ದು ತಾಲೀಮು ಯಶಸ್ವಿ; ಭಾರೀ ಶಬ್ದಕ್ಕೆ ಅಂಜದ ಗಜಪಡೆ, ಅಶ್ವದಳ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ದಸರಾ ಗಜಪಡೆಗೆ ಮೊದಲ ಹಂತದ ಕುಶಾಲತೋಪು ತಾಲೀಮು ಯಶಸ್ವಿಯಾಗಿ ನಡೆಯಿತು. ಮೆರವಣಿಗೆ ವೇಳೆ ಸಿಡಿಸುವ ಭಾರೀ ಕುಶಾಲತೋಪು ಶಬ್ದಕ್ಕೆ ಬೆದರದಂತೆ ಗಜಪಡೆ ಮತ್ತು ಅಶ್ವದಳಕ್ಕೆ ವಿಶೇಷ ತಾಲೀಮು ಮಾಡಿಸಲಾಗಿದೆ. ಫೋಟೋಗಳು ಇಲ್ಲಿವೆ ನೋಡಿ.
Updated on: Oct 07, 2026 | 7:48 PM

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಜಂಬೂಸವಾರಿಯ ಪ್ರಮುಖ ಘಟ್ಟವಾದ ಕುಶಾಲತೋಪಿನ ಸಿಡಿತಕ್ಕೆ ದಸರಾ ಗಜಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಮೈಸೂರು ವಸ್ತುಪ್ರದರ್ಶನದ ಆವರಣದಲ್ಲಿ ಇಂದು ಮೊದಲ ಹಂತದ ಕುಶಾಲತೋಪಿನ ತಾಲೀಮು ನಡೆಸಲಾಯಿತು. ಭಾರೀ ಶಬ್ದಕ್ಕೆ ಬೆಚ್ಚದಂತೆ ಗಜಪಡೆಗೆ ವಿಶೇಷ ಅಭ್ಯಾಸ ಮಾಡಿಸಲಾಗಿದೆ.

ಮೈಸೂರು ವಸ್ತುಪ್ರದರ್ಶನದ ಆವರಣದಲ್ಲಿ ದಸರಾ ಗಜಪಡೆ ಸಮ್ಮುಖದಲ್ಲಿ ಮೊದಲ ಹಂತದ ಕುಶಾಲತೋಪು ಸಿಡಿಸುವ ತಾಲೀಮು ನಡೆಯಿತು. ಏಳು ಫಿರಂಗಿಗಳಿಂದ ತಲಾ ಮೂರು ಬಾರಿಯಂತೆ ಒಟ್ಟು 21 ಕುಶಾಲತೋಪುಗಳನ್ನು ಸಿಡಿಸಲಾಯಿತು.

ಜಂಬೂಸವಾರಿ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪಿಸಲಾಗುತ್ತೆ. ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ರಾಷ್ಟ್ರಗೀತೆ ಹಾಡಲಾಗುತ್ತದೆ. ರಾಷ್ಟ್ರಗೀತೆ ಮುಗಿಯುವ ಒಳಗೆ 21 ಬಾರಿ ಕುಶಾಲತೋಪು ಸಿಡಿಸಲಾಗುತ್ತೆ. ಆ ಬಳಿಕ ಚಿನ್ನದ ಅಂಬಾರಿ ಹೊತ್ತ ಗಜಪಡೆ ಮೆರವಣಿಗೆ ಮಾರ್ಗದತ್ತ ಹೆಜ್ಜೆ ಹಾಕಲಿದೆ. ಹೀಗಾಗಿ ಕುಶಾಲತೋಪಿನ ಅಬ್ಬರಕ್ಕೆ ಆನೆಗಳು ಬೆದರದಂತೆ ಪೂರ್ವಾಭ್ಯಾಸ ಮಾಡಿಸಲಾಗಿದೆ.

ಇಂದಿನ ತಾಲೀಮಿನಲ್ಲಿ ದಸರಾ ಗಜಪಡೆಯ ಜೊತೆಗೆ ಅಶ್ವಾರೋಹಿ ದಳದ ಕುದುರೆಗಳಿಗೂ ಶಬ್ದ ಅಭ್ಯಾಸ ಮಾಡಿಸಲಾಯಿತು. ಫಿರಂಗಿಗಳ ಭಾರೀ ಶಬ್ದದ ನಡುವೆಯೂ ಗಜಪಡೆ ಅಳುಕದೆ ಧೈರ್ಯ ಪ್ರದರ್ಶಿಸಿದವು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಕಲರವ ಜೋರಾಗಿದ್ದು, ದಸರೆಯ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತದೆ. ಈ ಬಾರಿ ಕ್ಯಾಪ್ಟನ್ ಯಾರಾಗುತ್ತಾರೆ ಎನ್ನುವ ಕುತೂಹಲದ ನಡುವೆ ಮೊದಲ ಹಂತದ ಸಿಡಿಮದ್ದು ತಾಲೀಮು ಯಶಸ್ವಿ ಆಗಿದ್ದು, ಅರಣ್ಯ ಇಲಾಖೆಯವರು ನಿರಾಳವಾಗುವಂತೆ ಮಾಡಿದೆ.

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.
Read More



