ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಕಟ್ಟಿಕೊಂಡ ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಮೈಸೂರಿನಲ್ಲಿ ಪತ್ನಿ ನಾಗರತ್ನಳ ಕೊಲೆಗೆ 5 ಲಕ್ಷ ರೂ ಸುಪಾರಿ ನೀಡಿದ್ದ ಪತಿ ಮಹೇಶ್ನ ಅಕ್ರಮ ಸಂಬಂಧ ತನಿಖೆಯಲ್ಲಿ ಬಯಲಾಗಿದೆ. ಸಾಯಿಸುವ ಸಂಚು ವಿಫಲವಾದ ಕಾರಣ ನಾಗರತ್ನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಅಗ್ನಿ ಅವಘಡ ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಪತಿಯನ್ನು ಬಂಧಿಸಲಾಗಿದೆ.
- Ram
- Updated on: Dec 19, 2025
- 9:52 pm
ಚಪ್ಪಲಿ ಹೊರಗಡೆ ಬಿಡಿ ಅಂದಿದಷ್ಟೇ: ತಂದೆ-ಮಗನಿಂದ ವೈದ್ಯನ ಮೇಲೆ ಮನಸೋ ಇಚ್ಛೆ ಹಲ್ಲೆ
ಚಪ್ಪಲಿ ಹೊರಗಡೆ ಬಿಟ್ಟು ಬರುವಂತೆ ಹೇಳಿದ್ದಕ್ಕೆ ತಂದೆ ಮತ್ತು ಮಗ ವೈದ್ಯರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ನಡೆದಿದೆ. ವೈದ್ಯ ಅನೂಪ್ ಮೇಲಿನ ಹಲ್ಲೆ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Ram
- Updated on: Dec 19, 2025
- 11:19 am
ನಂಜನಗೂಡು ಬಳಿ ಕೆಎಸ್ಆರ್ಟಿಸಿ ಬಸ್ ಬೆಂಕಿಗಾಹುತಿ: ಪ್ರಯಾಣಿಕರು ಪಾರಾಗಿದ್ದೇ ರೋಚಕ
ಅಗ್ನಿ ಅನಾಹುತಕ್ಕೆ ಕೇರಳ ಸಾರಿಗೆ ಸಂಸ್ಥೆಯ ಬಸ್ ಸುಟ್ಟು ಕರಕಲಾಗಿರುವ ಘಟನೆ ಮೈಸೂರಿನ ನಂಜನಗೂಡು ಹೊಸಳ್ಳಿ ಗೇಟ್ ಬಳಿ ನಡೆದಿದೆ. ಚಾಲಕನ ಮುಂಜಾಗೃತೆಯ ಕಾರಣ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿದಿದೆ. ಮೈಸೂರಿನಿಂದ ಕೇರಳ್ಕೆ ತೆರಳುತ್ತಿದ್ದ ಬಸ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಿಸಿದೆ ಎನ್ನಲಾಗಿದೆ.
- Ram
- Updated on: Dec 19, 2025
- 9:53 am
ಗಿರವಿ ಇಟ್ಟ ಚಿನ್ನದಲ್ಲಿ ವ್ಯತ್ಯಾಸ: ನಂಬಿಕೆಯ ಸರ್ಕಾರಿ ಬ್ಯಾಂಕ್ಗಳಲ್ಲಿ ಹೀಗಾದ್ರೆ ಹೇಗೆ?
ಚಿನ್ನ ಗಿರವಿ ಇಟ್ಟ ಗ್ರಾಹಕರಿಗೆ ಬ್ಯಾಂಕ್ನಿಂದ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಮೈಸೂರಿನಲ್ಲಿರುವ ಆ ಬ್ಯಾಂಕ್ ಬಳಿ ಜಮಾಯಿಸಿದ ನೂರಕ್ಕೂ ಹೆಚ್ಚು ಗ್ರಾಹಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ವಿಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತನಿಖೆ ನಡೆಸಿದ್ದಾರೆ.
- Ram
- Updated on: Dec 17, 2025
- 8:14 pm
ವಿಶ್ವ ವಿಖ್ಯಾತ ಮೈಸೂರು ಅರಮನೆ ಅಪಾಯದಲ್ಲಿದೆಯಾ? ಆ ಘಟನೆ ಮುನ್ಸೂಚನೆ ಕೊಡ್ತಾ?
ಮೈಸೂರು ಅರಮನೆ ಎಂದೂ ಕರೆಯಲ್ಪಡುವ ಅಂಬಾ ವಿಲಾಸ ಅರಮನೆಯು ಒಂದು ಕಾಲದಲ್ಲಿ ಮೈಸೂರು ಸಾಮ್ರಾಜ್ಯದ ಕೇಂದ್ರವಾಗಿತ್ತು. ಇದೀಗ ವಿಶ್ವ ವಿಖ್ಯಾತ ಮೈಸೂರು ಅರಮನೆ ಅಪಾಯದಲ್ಲಿದೆಯಾ? ಕಟ್ಟಡ ಶಿಥಿಲಗೊಂಡಿದೆಯಾ ? ಯಾವಾಗ ಬೇಕಾದರೂ ಕುಸಿದು ಬೀಳುತ್ತಾ ? ಇಂತಹ ಅನುಮಾನಕ್ಕೆ ಕಾರಣವಾಗಿರೋದು ಇಂದು ಅರಮನೆ ದ್ವಾರದ ಬಳಿಯ ಮೇಲ್ಚಾವಣಿಯ ಗಾರೆ ಕಳಚಿ ಕೆಳಗೆ ಬಿದ್ಷಿರುವುದು.
- Ram
- Updated on: Dec 12, 2025
- 8:31 pm
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
‘ನಾವು ಅಂದುಕೊಂಡಿದ್ದಕ್ಕಿಂತ ಡಬಲ್ ಚೆನ್ನಾಗಿದೆ. ಈ ಸಿನಿಮಾ 100 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತದೆ. ಒಂದೊಂದು ದೃಶ್ಯ ಕೂಡ ರೋಚಕವಾಗಿ ಇದೆ. ಸಾರಥಿ ಸಿನಿಮಾದ ಇತಿಹಾಸ ರಿಪೀಟ್ ಆಗುತ್ತದೆ’ ಎಂದು ‘ದಿ ಡೆವಿಲ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಮೈಸೂರಿನಲ್ಲಿ ಹೇಳಿದ್ದಾರೆ.
- Ram
- Updated on: Dec 12, 2025
- 7:31 pm
ಯೂನಿಟಿ ಮಾಲ್ ನಿರ್ಮಾಣ ವಿವಾದ: ಪತ್ರಿಕಾ ಪ್ರಕಟಣೆ ಮೂಲಕ ಪ್ರಮೋದಾ ದೇವಿ ಸ್ಪಷ್ಟನೆ
ಮೈಸೂರು ಯೂನಿಟಿ ಮಾಲ್ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ಮಾಲ್ ನಿರ್ಮಾಣಕ್ಕೆ ವಿರೋಧವಿಲ್ಲ, ಆದರೆ ತಮ್ಮ ಪಾರಂಪರಿಕ ಭೂಮಿಯಲ್ಲಿ ನಿರ್ಮಾಣ ಮಾಡುವುದಕ್ಕೆ ಆಕ್ಷೇಪವಿದೆ ಎಂದಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆದಿದ್ದು, ಪೂರ್ವಜರ ಆಸ್ತಿ ರಕ್ಷಣೆ ತಮ್ಮ ಜವಾಬ್ದಾರಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. 193 ಕೋಟಿ ರೂ. ವೆಚ್ಚದ ಈ ಯೋಜನೆಯೀಗ ಚರ್ಚೆಗೆ ಗ್ರಾಸವಾಗಿದೆ.
- Ram
- Updated on: Dec 12, 2025
- 4:37 pm
ಮೈಸೂರು ಅರಮನೆಯ ಮುಖ್ಯದ್ವಾರದ ಮೇಲ್ಚಾವಣಿ ಕುಸಿತ: ತಪ್ಪಿದ ಅನಾಹುತ
ಮೈಸೂರು ಅರಮನೆಯ ವರಾಹ ಗೇಟ್ ಮುಖ್ಯದ್ವಾರದ ಮೇಲ್ಚಾವಣಿಯ ಒಂದು ಭಾಗ ಬೈಕ್ ಮೇಲೆ ಕುಸಿದುಬಿದ್ದಿದೆ. ಅದೃಷ್ಟವಶಾತ್, ಘಟನೆ ಸಂದರ್ಭದಲ್ಲಿ ಜನರು ಅಲ್ಲಿ ಇಲ್ಲದೇ ಇದ್ದುದರಿಂದ ಅನಾಹುತ ತಪ್ಪಿದೆ. ಸದ್ಯ ಘಟನಾ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ಜನರು ಹೋಗದಂತೆ ನೋಡಿಕೊಳ್ಳಲಾಗಿದೆ. ಘಟನೆಯ ವಿಡಿಯೋ ಇಲ್ಲಿದೆ ನೋಡಿ.
- Ram
- Updated on: Dec 11, 2025
- 1:07 pm
ಮೇಕ್ ಇನ್ ಇಂಡಿಯಾ ಬಲಪಡಿಸಲು ಮೈಸೂರಿನಲ್ಲಿ ನಿರ್ಮಾಣವಾಗುತ್ತಿದ್ದ ಯೂನಿಟಿ ಮಾಲ್ಗೆ ವಿಘ್ನ
ಸ್ಥಳೀಯವಾಗಿ ಉತ್ಪಾದನೆಯಾಗುವ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ’ಯೂನಿಟಿ ಮಾಲ್’ ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದ ಸರ್ವೇ ನಂ.1ರ 6.5 ಎಕರೆ ಪ್ರದೇಶದಲ್ಲಿ ‘ಯೂನಿಟಿ ಮಾಲ್‘ ನಿರ್ಮಾಣಕ್ಕೆ ಕೆಲ ತಿಂಗಳುಗಳ ಹಿಂದಷ್ಟೆ ಚಾಲನೆ ನೀಡಲಾಗಿತ್ತು.
- Ram
- Updated on: Dec 10, 2025
- 6:13 pm
ಮೈಸೂರಿನಲ್ಲಿ ಸೆರೆ ಸಿಕ್ಕಿದ್ದ 4 ಹುಲಿ ಮರಿಗಳ ನಿಗೂಢ ಸಾವು
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌಡನಕಟ್ಟೆಯಲ್ಲಿ ತಾಯಿಯೊಂದಿಗೆ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ತಾಯಿ ಹುಲಿಯನ್ನು ಸೆರೆ ಹಿಡಿದ ಬಳಿಕ ಮರಿಗಳು ಆಹಾರವಿಲ್ಲದೆ, ಆಘಾತದಿಂದ ಅಸ್ವಸ್ಥಗೊಂಡಿದ್ದವು. ಚಿಕಿತ್ಸೆ ನೀಡುತ್ತಿದ್ದರೂ, ಒಂದೊಂದಾಗಿ ಪ್ರಾಣ ಕಳೆದುಕೊಂಡಿವೆ. ಮರಿಗಳ ಸಾವಿಗೆ ನಿಖರ ಕಾರಣ ತಿಳಿಯಲು ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.
- Ram
- Updated on: Dec 10, 2025
- 8:44 am
ಉದ್ಯಮಿ ಕಿಡ್ನ್ಯಾಪ್: 1 ಕೋಟಿ ರೂ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪಿಗಳ ಕೈಗೆ ಸಿಕ್ಕಿದ್ದು ಚಿಪ್ಪು
ಸದ್ಯದ ದಿನಮಾನಗಳಲ್ಲಿ ಯಾರನ್ನ ನಂಬುವುದು, ಯಾರನ್ನ ನಂಬಾರದು ಎಂಬುವುದು ದೊಡ್ಡ ಪ್ರಶ್ನೆ. ಏಕೆಂದರೆ ಜೊತೆಗೆ ಇದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವವರು ಹೆಚ್ಚಾಗಿದ್ದಾರೆ. ಇದಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಹಣದಾಸೆಗೆ ಅಪಹರಣ ಮಾಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
- Ram
- Updated on: Dec 8, 2025
- 6:09 pm
Mysuru: 40 ದಿನಗಳಲ್ಲಿ 22 ಹುಲಿ ಸೆರೆ; ನಿಟ್ಟುಸಿರು ಬಿಟ್ಟ ಕಾಡಂಚಿನ ಜನ
ಮೈಸೂರು ಭಾಗದಲ್ಲಿ ಹೆಚ್ಚಿದ್ದ ಹುಲಿ ದಾಳಿಗಳಿಂದ ಆತಂಕಗೊಂಡಿದ್ದ ಕಾಡಂಚಿನ ಜನರಿಗೆ ಅರಣ್ಯ ಇಲಾಖೆ ರಿಲೀಫ್ ನೀಡಿದೆ. ಕೇವಲ 40 ದಿನಗಳಲ್ಲಿ 22 ಹುಲಿಗಳನ್ನು ಸೆರೆ ಹಿಡಿದು, ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಇಲಾಖೆ ಹೊಸ ತಂತ್ರಜ್ಞಾನಗಳ ಬಳಕೆ ಜೊತೆಗೆ ಮುಖವಾಡಗಳನ್ನು ಸಹ ವಿತರಿಸಿತ್ತು.
- Ram
- Updated on: Dec 4, 2025
- 6:48 pm