AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್​ಗೆ ಸ್ಫೋಟಕ ತಿರುವು: ಮುಡಾ ಮಾಜಿ ಆಯುಕ್ತರಿಂದಲೇ ಮನಿ ಟ್ರ್ಯಾಪ್ ಶಂಕೆ!

ಹೋರಾಟಗಾರ ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್‌ಗೆ ಸ್ಪೋಟಕ ತಿರುವು ಸಿಕ್ಕಿದೆ. ಚಿನ್ನದ ಉದ್ಯಮಿ ವಿನೋದ್ ಮತ್ತು ಮುಡಾ ಮಾಜಿ ಆಯುಕ್ತ ನಟೇಶ್ ಸೇರಿ ಸ್ನೇಹಮಯಿ ಕೃಷ್ಣರನ್ನು ಸಿಲುಕಿಸಲು ಪಕ್ಕಾ ಪ್ಲಾನ್ ಮಾಡಿದ್ದಾರಾ ಎಂಬ ಸಂಶಯ ಸಿಸಿಬಿ ತನಿಖೆ ವೇಳೆ ಮೂಡಿದೆ. ನಟೇಶ್‌ನದ್ದೆನ್ನಲಾದ ಆಡಿಯೋ ಆಧರಿಸಿ ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ, ನಂತರ ಕ್ಷಮೆಯಾಚಿಸಿದ್ದರು. ಇದೀಗ ವಿನೋದ್-ನಟೇಶ್ ಸ್ನೇಹ ಬಯಲಾಗಿದೆ.

ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್​ಗೆ ಸ್ಫೋಟಕ ತಿರುವು: ಮುಡಾ ಮಾಜಿ ಆಯುಕ್ತರಿಂದಲೇ ಮನಿ ಟ್ರ್ಯಾಪ್ ಶಂಕೆ!
ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್​ಗೆ ಸ್ಫೋಟಕ ತಿರುವುImage Credit source: tv9
ರಾಮ್​, ಮೈಸೂರು
| Edited By: |

Updated on: Feb 23, 2026 | 12:50 PM

Share

ಮೈಸೂರು, ಫೆಬ್ರವರಿ 23: ಸ್ನೇಹಮಯಿ ಕೃಷ್ಣ (Snehamayi Krishna) ಆಡಿಯೋ ಬಾಂಬ್ ಪ್ರಕರಣ ಇದೀಗ ನಾಟಕೀಯ ತಿರುವು ಪಡೆದಿದೆ. ಚಿನ್ನದ ಉದ್ಯಮಿ ವಿನೋದ್ ಮತ್ತು ಮುಡಾ ಮಾಜಿ ಆಯುಕ್ತ ನಟೇಶ್ ಸೇರಿ ಸ್ನೇಹಮಯಿ ಕೃಷ್ಣರನ್ನು ಸಿಲುಕಿಸಲು ಪಕ್ಕಾ ಪ್ಲಾನ್ ರೂಪಿಸಿದ್ದಾರಾ ಎಂಬ ಗಂಭೀರ ಅನುಮಾನಗಳು ಸಿಸಿಬಿ (CCB Police) ತನಿಖೆಯಲ್ಲಿ ಮೂಡಿವೆ. ಬೆಂಗಳೂರು ಸಿಸಿಬಿ ಅಧಿಕಾರಿಗಳು ವಿನೋದ್ ಮತ್ತು ನಟೇಶ್ ಜೊತೆಗಿರುವ ಹಲವು ಫೋಟೋಗಳನ್ನು ಪತ್ತೆ ಮಾಡಿದ್ದು, ಇದೀಗ ಸ್ನೇಹಮಯಿ ಕೃಷ್ಣರನ್ನು ಟ್ರ್ಯಾಪ್ ಮಾಡುವ ಯತ್ನ ನಡೆದಿತ್ತೇ ಎಂಬ ಸಂಶಯ ಬಲವಾಗಿದೆ.

ವಿನೋದ್ ಆರಂಭದಲ್ಲಿ ಸ್ನೇಹಮಯಿ ಕೃಷ್ಣರ ವಿಶ್ವಾಸ ಗಳಿಸಿದ್ದರು. ನಟೇಶ್ ಮಾತನಾಡಿದ್ದು ಎನ್ನಲಾದ ಆಡಿಯೋ ಒಂದನ್ನು ಸ್ನೇಹಮಯಿ ಕೃಷ್ಣರಿಗೆ ನೀಡಿದ್ದರು. ಈ ಆಡಿಯೋದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ ಲಂಚ ನೀಡಿದ ಬಗೆಗೆ ಮಾತನಾಡಲಾಗಿದೆ ಎಂದು ವಿನೋದ್ ತಿಳಿಸಿದ್ದರು. ಲಂಚವಾಗಿ ನೀಡಿದ ಕಾರು ಮತ್ತು ಹಣದ ಚೀಲದ ಬಗ್ಗೆ ಕಥೆ ಹೇಳಿ, ಕಾರಿನ ಫೋಟೋಗಳನ್ನೂ ಸ್ನೇಹಮಯಿ ಕೃಷ್ಣರಿಗೆ ವಿನೋದ್ ಕೊಟ್ಟಿದ್ದರು. ವಿನೋದ್ ಮಾತುಗಳನ್ನು ನಂಬಿದ ಸ್ನೇಹಮಯಿ ಕೃಷ್ಣ, ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ, ಮಾಧ್ಯಮಗಳ ಎದುರು ಸಹ ಇದೇ ಆರೋಪಗಳನ್ನು ಪುನರುಚ್ಚರಿಸಿ, ದೂರು ಸಹ ದಾಖಲಿಸಿದ್ದರು. ಆದರೆ, ಪ್ರಕರಣದ ತನಿಖೆ ಮುಂದುವರಿದಂತೆ, ಸ್ನೇಹಮಯಿ ಕೃಷ್ಣ ಅವರು ಸಿಎಸ್‌ಗೆ ಕ್ಷಮೆಯಾಚಿಸಿ ತಾವು ನೀಡಿದ ದೂರನ್ನು ವಾಪಸ್ ಪಡೆದರು. ಸಿಎಸ್ ಮೇಲಿನ ಆರೋಪಗಳು ಸುಳ್ಳು ಎಂದು ಹೇಳಿದ್ದರು. ಆದರೂ, ನಟೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಲಂಚದ ವಿಚಾರ ಸತ್ಯ ಎಂದು ಸ್ನೇಹಮಯಿ ಕೃಷ್ಣ ಸಮರ್ಥಿಸಿಕೊಂಡಿದ್ದರು. ಇದೀಗ ಪ್ರಕರಣದಲ್ಲಿ ಹೊಸ ವಿಚಾರ ಬಯಲಾಗಿದ್ದು, ವಿನೋದ್ ಮತ್ತು ನಟೇಶ್ ಇಬ್ಬರು ಪರಸ್ಪರ ಸ್ನೇಹಿತರು ಎಂಬ ಅಂಶ ಬೆಳಕಿಗೆ ಬಂದಿದೆ.

ವಿನೋದ್, ನಟೇಶ್ ಸ್ನೇಹ ಬಯಲು: ಸಿಸಿಬಿ ತನಿಖೆಯ ದಿಕ್ಕೇ ಬದಲು

ವಿನೋದ್ ಮತ್ತು ನಟೇಶ್ ಸ್ನೇಹ ಬಯಲಾದ ನಂತರ, ಸಿಸಿಬಿ ತನಿಖೆಯ ದಿಕ್ಕು ಬದಲಾಗಿದೆ. ಸ್ನೇಹಮಯಿ ಕೃಷ್ಣರನ್ನು ಬಲೆಗೆ ಬೀಳಿಸಲು ಇವರಿಬ್ಬರು ಉದ್ದೇಶಪೂರ್ವಕವಾಗಿ ಪಿತೂರಿ ನಡೆಸಿದ್ದಾರಾ ಎಂಬ ಅನುಮಾನ ಬಲವಾಗಿದೆ. ವಿಶೇಷವಾಗಿ ವಿನೋದ್, ಈಗ ತಾನು ಸಿಎಸ್ ವಿಚಾರ ಹೇಳಿಯೇ ಇಲ್ಲ ಎಂದು ಉಲ್ಟಾ ಹೊಡೆಯುತ್ತಿದ್ದು, ಇವರ ಮಾತುಗಳಲ್ಲಿನ ವೈರುಧ್ಯಗಳು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿವೆ.

ಇದನ್ನೂ ಓದಿ: ಸಿಸಿಬಿ ವಿಚಾರಣೆ ಬಳಿಕ ಉಲ್ಟಾ ಹೊಡೆದ ಸ್ನೇಹಮಯಿ ಕೃಷ್ಣ: ಶಾಲಿನಿ ರಜನೀಶ್​​ಗೆ ಕ್ಷಮೆ ಕೇಳಿದ ಸಾಮಾಜಿಕ ಕಾರ್ಯಕರ್ತ

ಸಿಸಿಬಿ ಅಧಿಕಾರಿಗಳು ವಿನೋದ್ ಮತ್ತು ನಟೇಶ್‌ರನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆಡಿಯೋ ಸತ್ಯವಾಗಿದ್ದರೂ, ಸಿಎಸ್ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಲು ಹೊರಟಿರುವುದು ಈ ಪಿತೂರಿಯ ಭಾಗವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಮೂಲವನ್ನು ಭೇದಿಸಲು ಸಿಸಿಬಿ ತೀವ್ರ ತನಿಖೆ ನಡೆಸುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?