AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ: ಅತಿಯಾದ ಶುಲ್ಕಗಳಿಂದ ನಷ್ಟದ ಆರೋಪ

ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ: ಅತಿಯಾದ ಶುಲ್ಕಗಳಿಂದ ನಷ್ಟದ ಆರೋಪ

Vinay Kashappanavar
| Edited By: |

Updated on:Jul 27, 2026 | 5:29 PM

Share

ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ಹೋಟೆಲ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೇ ಔಟ್, ಡೆಲಿವರಿ, ಜಾಹೀರಾತು ಸೇರಿದಂತೆ ಹಲವು ಶುಲ್ಕಗಳನ್ನು ವಿಧಿಸುವುದರಿಂದ ಹೋಟೆಲ್‌ಗಳಿಗೆ ನಷ್ಟವಾಗುತ್ತಿದೆ. 1,000 ರೂ. ಆದಾಯದಲ್ಲಿ 400-500 ರೂ. ಮಾತ್ರ ಮಾಲೀಕರ ಜೇಬಿಗೆ ಸೇರುತ್ತಿದೆ. ಈ ನಿಟ್ಟಿನಲ್ಲಿ ಸಮಸ್ಯೆ ಪರಿಹರಿಸಲು ಹೋಟೆಲ್ ಮಾಲೀಕರ ಒಕ್ಕೂಟ ನಾಳೆ ಮಹತ್ವದ ಸಭೆ ಕರೆದಿದೆ.

ಬೆಂಗಳೂರು, ಜುಲೈ 27: ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳಾದ ಸ್ವಿಗ್ಗಿ ಸೇರಿದಂತೆ ಕೆಲವು ಆಪ್‌ಗಳ ವಿರುದ್ಧ ರಾಜ್ಯದ ಹೋಟೆಲ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಪ್‌ಗಳು ವಿಧಿಸುವ ಅತಿಯಾದ ಶುಲ್ಕಗಳಿಂದ ಹೋಟೆಲ್‌ಗಳಿಗೆ ಭಾರಿ ನಷ್ಟವಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಇವುಗಳಿಗೆ ಕಡಿವಾಣ ವಿಧಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ವಿಶೇಷವಾಗಿ ಸ್ವಿಗ್ಗಿ ಆ್ಯಪ್​​ ವಿರುದ್ಧ ಆರೋಪ ಕೇಳಿಬಂದಿದ್ದು, ಪೇಔಟ್ ಕಲೆಕ್ಷನ್ ಚಾರ್ಜ್, ಲಾಂಗ್ ಡಿಸ್ಟೇನ್ಸ್ ಫೀಸ್, ಕ್ಲಿಕ್ಸ್ ಅಡ್ವಟೈಸ್ ಚಾರ್ಜ್, ಪ್ರಮೋಷನ್ ಚಾರ್ಜ್ ಅಂತ ಬೇಕಾಬಿಟ್ಟಿ ದರ ವಿಧಿಸ್ತಿದ್ದಾರೆ. ಇದರಿಂದಾಗಿ, 1,000 ರೂ. ಮೌಲ್ಯದ ಉತ್ಪನ್ನವನ್ನು ಮಾರಾಟ ಮಾಡಿದಾಗ ಹೋಟೆಲ್ ಮಾಲೀಕರಿಗೆ ಕೇವಲ 400 ರಿಂದ 500 ರೂ. ಮಾತ್ರ ವಾಪಸ್ ಬರುತ್ತಿದೆ. ಉಳಿದ ಮೊತ್ತ ಅವರ ಪಾಲಾಗುತ್ತಿದೆ. ಇದು ಹೋಟೆಲ್ ಮಾಲೀಕರು ಮತ್ತು ಗ್ರಾಹಕರಿಬ್ಬರಿಗೂ ದೊಡ್ಡ ಹೊರೆಯಾಗಿದ್ದು, ಮಧ್ಯಮ ವರ್ಗದ ಹೋಟೆಲ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಗೌರವ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jul 27, 2026 05:29 PM

Follow Us