SIR - ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ
Special Intensive Revision – ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ
ಎಸ್‌ಐಆರ್ ಒತ್ತಡದಿಂದ ರಿಲ್ಯಾಕ್ಸ್ ಆಗಲು ಕೇರಳದ ಚುನಾವಣಾ ಸಿಬ್ಬಂದಿಯಿಂದ ಜುಂಬಾ ಡ್ಯಾನ್ಸ್
ಕೇರಳದ ಕಣ್ಣೂರಿನ ಬಿಎಲ್‌ಒ ಅನೀಶ್ ಜಾರ್ಜ್ ಅವರು ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಮೊದಲಿಗರು. ಅದಾದ ನಂತರ ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಾವಿನ ಸುದ್ದಿ ಒಂದರ ಹಿಂದೊಂದರಂತೆ ಕೇಳಿ ಬರುತ್ತಲೇ ಇದೆ. ಇದರ ನಡುವೆ ಕೇರಳದಲ್ಲಿ ಚುನಾವಣಾ ಸಿಬ್ಬಂದಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳು ವಿರಾಮದ ವೇಳೆ ಜುಂಬಾ ಡ್ಯಾನ್ಸ್ ಮಾಡುತ್ತಾ ರಿಲ್ಯಾಕ್ಸ್ ಮೂಡ್ನಲ್ಲಿರುವ ವಿಡಿಯೋವನ್ನು ಚುನಾವಣಾ ಆಯೋಗ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೂ ಕಾರಣವಾಗಿದೆ.
- Sushma Chakre
- Updated on: Dec 1, 2025
- 3:35 pm
ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ
ಚುನಾವಣಾ ಆಯೋಗ ಈಗಾಗಲೇ ಎರಡನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಅನ್ನು ಪ್ರಕಟಿಸಿದೆ. ಆದರೆ, ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಸರ್ವಪಕ್ಷ ಸಭೆ ನಡೆಸಿ ತಮಿಳುನಾಡು ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಘೋಷಿಸಲಾಗಿರುವ ಎರಡನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲು ನಿರ್ಧರಿಸಿದ್ದರು. ಇಂದು ಡಿಎಂಕೆ ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
- Sushma Chakre
- Updated on: Nov 3, 2025
- 9:38 pm
2 ರಾಜ್ಯಗಳಲ್ಲಿ ಮತದಾರರಾಗಿ ನೋಂದಣಿ; ಪ್ರಶಾಂತ್ ಕಿಶೋರ್ಗೆ ಚುನಾವಣಾ ಆಯೋಗದಿಂದ ನೋಟಿಸ್
ಬಿಹಾರ ಮತ್ತು ಪಶ್ಚಿಮ ಬಂಗಾಳ ಎರಡರಲ್ಲೂ ಮತದಾರರಾಗಿ ಸೇರ್ಪಡೆಗೊಂಡಿದ್ದಕ್ಕಾಗಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಎರಡು ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಪ್ರಶಾಂತ್ ಕಿಶೋರ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, 3 ದಿನಗಳಲ್ಲಿ ಕಾರಣಗಳನ್ನು ವಿವರಿಸಲು ಸೂಚಿಸಲಾಗಿದೆ.
- Sushma Chakre
- Updated on: Oct 28, 2025
- 5:09 pm
SIR in India: ಭಾರತದಲ್ಲಿ ಈ ಹಿಂದೆ ಮತದಾರರ ಪರಿಷ್ಕೃತ ಪಟ್ಟಿ ಯಾವಾಗ ನಡೆದಿತ್ತು? ಇದರ ಅಗತ್ಯವೇನು?
SIR Explainer: ಭಾರತದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಗೋವಾ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ಕೇರಳ, ರಾಜಸ್ಥಾನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಪುದುಚೆರಿಯಲ್ಲಿ ನಾಳೆಯಿಂದಲೇ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಡೆಯಲಿದೆ. 21 ವರ್ಷಗಳ ಬಳಿಕ ಇದೀಗ ಎಸ್‌ಐಆರ್ ನಡೆಯಲಿದೆ. ಈ ಮೊದಲು ಯಾವಾಗ ಎಸ್‌ಐಆರ್ ನಡೆದಿತ್ತು? ಈ ಬಾರಿಯ ಎಸ್ಐಆರ್ನಲ್ಲಿ ಏನೆಲ್ಲ ಇರಲಿದೆ? ಎಂಬುದೆಲ್ಲದರ ಮಾಹಿತಿ ಇಲ್ಲಿದೆ.
- Sushma Chakre
- Updated on: Oct 27, 2025
- 8:16 pm
ಮತದಾರರ ಪಟ್ಟಿಗೆ ಆಧಾರ್ ದಾಖಲೆ ನೀಡಬಹುದಾ? ಚುನಾವಣಾ ಆಯೋಗದ ಸ್ಪಷ್ಟನೆ ಇಲ್ಲಿದೆ
"ಗುರುತಿಗಾಗಿ ಆಧಾರ್ ಅನ್ನು 12ನೇ ಸ್ಥಾನದಲ್ಲಿ ಸೇರಿಸಲಾದ ದಾಖಲೆಗಳ ಸೂಚಕ ಪಟ್ಟಿಯನ್ನು ಬಹುತೇಕ ಎಲ್ಲಾ ಚುನಾವಣಾ ಆಯುಕ್ತರೊಂದಿಗೆ ಚರ್ಚಿಸಿದ ನಂತರ ಸಿದ್ಧಪಡಿಸಲಾಗಿದೆ. ಆದರೂ, ವಿಚಾರಣೆ ನಡೆದಾಗ ಮತ್ತು ಯಾರಾದರೂ ಪೌರತ್ವವನ್ನು ಸಾಬೀತುಪಡಿಸಬೇಕಾದರೆ ಅವರು ಬೇರೆ ಯಾವುದಾದರೂ ದಾಖಲೆಯನ್ನು ಸಲ್ಲಿಸಲೇಬೇಕಾಗುತ್ತದೆ. ಆಧಾರ್ ಕೇವಲ ಗುರುತಿನ ಚೀಟಿಯಾಗಿರುತ್ತದೆ" ಎಂದು ಚುನಾವಣಾ ಆಯೋಗ ಎಸ್‌ಐಆರ್ ಘೋಷಣೆ ವೇಳೆ ಹೇಳಿದೆ.
- Sushma Chakre
- Updated on: Oct 27, 2025
- 6:20 pm
SIR in India: ಮುಂದಿನ ವರ್ಷವೇ ಚುನಾವಣೆಯಿದ್ದರೂ ಅಸ್ಸಾಂನಲ್ಲಿ ಏಕೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸುತ್ತಿಲ್ಲ?
ಬಿಹಾರದ ಬಳಿಕ ಇದೀಗ 2ನೇ ಹಂತದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯನ್ನು ಭಾರತೀಯ ಚುನಾವಣಾ ಆಯೋಗ ಘೋಷಿಸಿದೆ. 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 12 ರಾಜ್ಯಗಳಲ್ಲಿ ಈ ಹಂತದ ಎಸ್‌ಐಆರ್ ನಡೆಯಲಿದೆ. ಆದರೆ, ಮುಂದಿನ ವರ್ಷವೇ ಚುನಾವಣೆ ನಡೆಯಲಿರುವ ಅಸ್ಸಾಂ ರಾಜ್ಯವನ್ನು ಈ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹೊರಗಿಡಲಾಗಿದೆ. ಇದಕ್ಕೆ ಕಾರಣವೇನೆಂಬುದರ ಬಗ್ಗೆ ವಿವರ ಇಲ್ಲಿದೆ.
- Sushma Chakre
- Updated on: Oct 27, 2025
- 5:44 pm
SIR in India: 12 ರಾಜ್ಯಗಳಲ್ಲಿ 2ನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ; ಚುನಾವಣಾ ಆಯೋಗ ಘೋಷಣೆ
ಚುನಾವಣಾ ಆಯೋಗ ಸುದ್ದಿಗೋಷ್ಠಿ ನೇರಪ್ರಸಾರ: ಚುನಾವಣಾ ಪ್ರಾಧಿಕಾರವು ಎಸ್‌ಐಆರ್ (SIR)ನ 2ನೇ ಹಂತವನ್ನು ಇಂದು ಘೋಷಿಸಿದೆ. ಈ ಬಗ್ಗೆ ಭಾರತೀಯ ಚುನಾವಣಾ ಆಯೋಗವು (ECI) ಪತ್ರಿಕಾಗೋಷ್ಠಿಯನ್ನು ನಡೆಸಿದೆ. 2026ರಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಇವುಗಳಲ್ಲಿ ಅಸ್ಸಾಂ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳಲ್ಲಿ 2ನೇ ಹಂತದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಅನ್ನು ಚುನಾವಣಾ ಆಯೋಗ ಘೋಷಿಸಿದೆ. ಈಗಾಗಲೇ ಮೊದಲ ಹಂತದ ಎಸ್‌ಐಆರ್ ಪ್ರಕ್ರಿಯೆಯು ಮುಂದಿನ ತಿಂಗಳು ವಿಧಾನಸಭಾ ಚುನಾವಣೆಗಳು ನಡೆಯಲಿರುವ ಬಿಹಾರದಲ್ಲಿ ಮುಕ್ತಾಯಗೊಂಡಿದೆ.
- Sushma Chakre
- Updated on: Oct 27, 2025
- 5:20 pm
ECI Press Conference Live: ದೇಶಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಗ್ಗೆ ಚುನಾವಣಾ ಆಯೋಗ ಸುದ್ದಿಗೋಷ್ಠಿ
ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ದಿನಾಂಕಗಳನ್ನು ಘೋಷಿಸಲು ಪತ್ರಿಕಾಗೋಷ್ಠಿ ನಡೆಸುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದಾರೆ. ಹಂತ ಹಂತವಾಗಿ ನಡೆಯುವ ಈ ಪರಿಷ್ಕರಣೆಯ ಪ್ರಮುಖ ವಿವರಗಳನ್ನು ಆಯೋಗ ಪ್ರಕಟಿಸುತ್ತಿದೆ. ಮತದಾರರು ತಮ್ಮ ಹೆಸರನ್ನು ಪರಿಶೀಲಿಸಲು ಮತ್ತು ಹೊಸದಾಗಿ ನೋಂದಾಯಿಸಲು ಇದು ಪ್ರಮುಖ ಅವಕಾಶವಾಗಿದೆ.
- Akshay Pallamajalu
- Updated on: Oct 27, 2025
- 4:33 pm
PAN India SIR: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಎಂದರೇನು? ಅದರ ಪ್ರಾಮುಖ್ಯತೆ ಏನು?
ದೇಶಾದ್ಯಂತ ಹಂತ ಹಂತವಾಗಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಲು ಭಾರತೀಯ ಚುನಾವಣಾ ಆಯೋಗವು ನಿರ್ಧರಿಸಿದೆ. ಅದರ ಕುರಿತಾಗಿ ಇಂದು (ಅ. 27) ಸಂಜೆ ಸುದ್ದಿಗೋಷ್ಠಿ ನಡೆಸಿ ರಾಜ್ಯಗಳು, ದಿನಾಂಕಗಳನ್ನು ಘೋಷಣೆ ಮಾಡಲಿದೆ.2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಸೇರಿದಂತೆ 10 ರಿಂದ 15 ರಾಜ್ಯಗಳನ್ನು ಒಳಗೊಂಡಿದೆ ಎಂದು ವರದಿಗಳು ಉಲ್ಲೇಖಿಸಿವೆ.ಪ ಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿಗಳಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಹಾಗಾದರೆ ಈ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಎಂದರೇನು?, ಅದರ ಪ್ರಾಮುಖ್ಯತೆ ಏನು? ಎಂಬುದನ್ನು ತಿಳಿಯೋಣ.
- Nayana Rajeev
- Updated on: Oct 27, 2025
- 2:28 pm
ಸಮಗ್ರ ಪರಿಷ್ಕರಣೆ ನಂತರ ಬಿಹಾರ ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ
Bihar final voters list release: ವಿವಾದಗಳು ಮತ್ತು ಆಕ್ಷೇಪಗಳ ಮಧ್ಯೆ ಬಿಹಾರ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಮುಗಿದಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗವು ಇಂದು (ಸೆ. 30) ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಏಳು ಕೋಟಿಗೂ ಅಧಿಕ ಮತದಾರರು ಇರುವ ಬಿಹಾರದಲ್ಲಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಆಗಬಹುದು.
- Vijaya Sarathy SN
- Updated on: Oct 27, 2025
- 2:31 pm