ಪಶ್ಚಿಮ ಬಂಗಾಳದ ಎಸ್‌ಐಆರ್ ಕರಡಿನಲ್ಲಿ 58 ಲಕ್ಷ ಹೆಸರುಗಳು ಡಿಲೀಟ್
ಪಶ್ಚಿಮ ಬಂಗಾಳದಲ್ಲಿ ಒಂದು ತಿಂಗಳ ಕಾಲ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನವು ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದಾದ ನಂತರ, ಭಾರತೀಯ ಚುನಾವಣಾ ಆಯೋಗ (ECI) ಇಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಕರಡು ಪಟ್ಟಿ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (CEO) ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ್ತು ಚುನಾವಣಾ ಆಯೋಗದ ಮತದಾರರ ಪೋರ್ಟಲ್‌ನಲ್ಲಿ ಲಭ್ಯವಿದೆ.

ಕೊಲ್ಕತ್ತಾ, ಡಿಸೆಂಬರ್ 16: ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆ ರಾಜಕೀಯ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ. ಈ ಬೆಳವಣಿಗೆಯಲ್ಲಿ ನಕಲು ಮತ್ತು ದೋಷಗಳನ್ನು ತೆಗೆದುಹಾಕಲು ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ನಂತರ ಬಂಗಾಳದ ಕರಡು ಮತದಾರರ ಪಟ್ಟಿಯಿಂದ ಒಟ್ಟು 58 ಲಕ್ಷ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಈ 58 ಲಕ್ಷ ಹೆಸರುಗಳಲ್ಲಿ 24 ಲಕ್ಷ ಹೆಸರುಗಳನ್ನು ಸಾವನ್ನಪ್ಪಿದ್ದಾರೆ ಎಂದು ನಮೂದಿಸಲಾಗಿದೆ. 19 ಲಕ್ಷ ಜನರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. 12 ಲಕ್ಷ ಜನರು ಕಣ್ಮರೆಯಾಗಿದ್ದಾರೆ. 1.3 ಲಕ್ಷ ಜನರ ಹೆಸರುಗಳು ಡೂಪ್ಲಿಕೇಟ್ ಆಗಿದೆ.
ಕರಡು ಪಟ್ಟಿಯ ಪ್ರಕಟಣೆಯು ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಮೊದಲ ಹಂತದ ಅಂತ್ಯವನ್ನು ಸೂಚಿಸುತ್ತದೆ. ಕರಡು ಪಟ್ಟಿಯಿಂದ ಹೆಸರುಗಳನ್ನು ತಪ್ಪಾಗಿ ಹೊರಗಿಟ್ಟವರು ಈಗ ಆಕ್ಷೇಪಣೆಗಳನ್ನು ಎತ್ತಬಹುದು ಮತ್ತು ತಿದ್ದುಪಡಿಗಳನ್ನು ಕೋರಬಹುದು. ಈ ಆಕ್ಷೇಪಣೆಗಳನ್ನು ಪರಿಹರಿಸಿದ ನಂತರ, ಅಂತಿಮ ಪಟ್ಟಿಯನ್ನು ಮುಂದಿನ ವರ್ಷದ ಫೆಬ್ರವರಿಯಲ್ಲಿ ಪ್ರಕಟಿಸಲಾಗುವುದು. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಘೋಷಣೆಯನ್ನು ಅಂತಿಮ ಪಟ್ಟಿಯ ಪ್ರಕಟಣೆಯ ನಂತರ ನಿರೀಕ್ಷಿಸಲಾಗಿದೆ. ಎಸ್‌ಐಆರ್ ಅನ್ನು ಕೊನೆಯದಾಗಿ ಪಶ್ಚಿಮ ಬಂಗಾಳದಲ್ಲಿ 2002ರಲ್ಲಿ ನಡೆಸಲಾಯಿತು.
ಇದನ್ನೂ ಓದಿ: ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ 6 ರಾಜ್ಯಗಳಲ್ಲಿ SIR ಗಡುವು 1 ವಾರ ವಿಸ್ತರಣೆ
ಮೂಲಗಳ ಪ್ರಕಾರ, 58,08,202ಕ್ಕೂ ಹೆಚ್ಚು ಜನರ ಹೆಸರುಗಳನ್ನು ಡಿಲೀಟ್ ಮಾಡಲು ಗುರುತಿಸಲಾಗಿದೆ. ಪ್ರಸ್ತುತ, ಪಶ್ಚಿಮ ಬಂಗಾಳದಲ್ಲಿ 24,18,699 ಮೃತ ಮತದಾರರಿದ್ದು, ಅವರ ಹೆಸರುಗಳು ಇನ್ನೂ ಮತದಾರರ ಪಟ್ಟಿಯಲ್ಲಿವೆ. 19,93,087 ಇತರ ಮತದಾರರು ತಮ್ಮ ವಿಳಾಸಗಳನ್ನು ಬದಲಾಯಿಸಿದ್ದಾರೆ. 12,01,462 ಮತದಾರರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆದರೆ 1,37,575 ಮತದಾರರು ನಕಲಿ ಎಂದು ಕಂಡುಬಂದಿದೆ.
ಇದನ್ನೂ ಓದಿ: ವೋಟ್ ಚೋರಿ ರಾಷ್ಟ್ರವಿರೋಧಿ ಕೃತ್ಯ; ಎಸ್‌ಐಆರ್ ಚರ್ಚೆ ವೇಳೆ ರಾಹುಲ್ ಗಾಂಧಿ ಆರೋಪ
ಕರಡು ಪಟ್ಟಿಯ ಪ್ರಕಟಣೆಯು ಎಸ್‌ಐಆರ್ ಬಗ್ಗೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲವನ್ನು ತೀವ್ರಗೊಳಿಸುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಈ ಪ್ರಕ್ರಿಯೆಯನ್ನು ವಿರೋಧಿಸಿದ್ದಾರೆ. ಚುನಾವಣೆಗೆ ಮುಂಚಿತವಾಗಿ ಲಕ್ಷಾಂತರ ಅರ್ಹ ಮತದಾರರ ಹೆಸರ ಹೆಸರನ್ನು ಡಿಲೀಟ್ ಮಾಡಲು ಕೇಂದ್ರ ಮತ್ತು ಚುನಾವಣಾ ಆಯೋಗವು ಎಸ್‌ಐಆರ್ ಅನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




