AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?

ಅಕ್ಷತಾ ವರ್ಕಾಡಿ
|

Updated on: Mar 11, 2026 | 4:33 PM

Share

2026ರ ಯುಗಾದಿಯ ಪರಾಭವನಾಮ ಸಂವತ್ಸರದಲ್ಲಿ ಮೀನ ರಾಶಿಯವರಿಗೆ ಡಾ. ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ. ಶನಿ ಸಾಡೇ ಸಾತಿಯ ಮಧ್ಯಭಾಗದಲ್ಲಿದ್ದರೂ ಆತಂಕಪಡುವ ಅಗತ್ಯವಿಲ್ಲ. ಆರ್ಥಿಕ ಪ್ರಗತಿ, ಉದ್ಯೋಗ ಯೋಗವಿದ್ದರೂ ಮಕ್ಕಳ ಚಿಂತೆ, ಅಪವಾದಗಳ ಕುರಿತು ಎಚ್ಚರವಿರಬೇಕು. ಶ್ರೀರಾಮ ಮಂತ್ರ ಜಪ ಮತ್ತು ದಾನ ಧರ್ಮಗಳಿಂದ ಶುಭ ಫಲಗಳ ನಿರೀಕ್ಷೆ ಇದೆ.

2026ರ ಪರಾಭವನಾಮ ಸಂವತ್ಸರದ ಯುಗಾದಿಯಂದು ಮೀನ ರಾಶಿಯವರ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು ವಿಶ್ಲೇಷಿಸಿದ್ದಾರೆ. ಈ ರಾಶಿಯವರಿಗೆ ಶನಿ ಸಾಡೇ ಸಾತಿಯ ಗರ್ಭ ಭಾಗ ನಡೆಯುತ್ತಿದ್ದು, ಗುರು ನಾಲ್ಕರಿಂದ ಐದಕ್ಕೆ, ಶನಿ ಒಂದರಲ್ಲಿ, ರಾಹು 12ರಿಂದ 11ರಲ್ಲಿ ಮತ್ತು ಕೇತು ಆರರಿಂದ ಐದರಲ್ಲಿ ಇರುತ್ತಾರೆ. ಆದಾಯ 14 ಮತ್ತು ವ್ಯಯ 7 ಇರಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾದರೂ ಆರ್ಥಿಕವಾಗಿ ಉತ್ತಮ ಪರಿಸ್ಥಿತಿ ಇರುತ್ತದೆ.

ಸರ್ಕಾರಿ ಉದ್ಯೋಗ, ವ್ಯಾಪಾರ, ಪಾಲುದಾರಿಕೆ ಹಾಗೂ ಉದ್ಯೋಗದಲ್ಲಿ ಶುಭ ಫಲಗಳಿವೆ. ಆದರೆ ಮಕ್ಕಳ ಚಿಂತೆ ಮತ್ತು ಅಪವಾದಗಳ ಕುರಿತು ಜಾಗ್ರತೆಯಾಗಿರಲು ಸಲಹೆ ನೀಡಲಾಗಿದೆ. ಕಾನೂನು ವಿಷಯಗಳಲ್ಲಿ ಮೋಸ ಹೋಗದಂತೆ ಎಚ್ಚರ ವಹಿಸಬೇಕು. ದೈವಾನುಗ್ರಹಕ್ಕಾಗಿ ದೇವಿಯ ಮೊರೆ ಹೋಗುವುದು ಮತ್ತು ಶ್ರೀರಾಮ ಸ್ತೋತ್ರ ಪಠಿಸುವುದು ಶುಭಕರ. ಮೀನ ರಾಶಿಯವರಿಗೆ ಈ ವರ್ಷ ಶೇ. 65 ರಷ್ಟು ಶುಭಫಲಗಳು ದೊರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us