Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi 2025

Ugadi 2025

ಯುಗಾದಿ ಎಂಬುದು ಹಿಂದೂ ಕ್ಯಾಲೆಂಡರ್ (ಚಾಂದ್ರಮಾನ ಪಂಚಾಂಗ) ಪ್ರಕಾರ ಹೊಸ ವರ್ಷ ಆರಂಭದ ದಿನ. ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ಸಾನ್ಯವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿ ಆಚರಣೆ ಮಾಡಲಾಗುತ್ತದೆ. ಇದು ಪ್ರಮುಖ ಹಿಂದೂ ಹಬ್ಬವಾಗಿದ್ದು, ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಬರುತ್ತದೆ. ‘ಯುಗಾದಿ’ ಎಂಬ ಹೆಸರು ಸಂಸ್ಕೃತ ಪದಗಳಾದ ‘ಯುಗ’ ಮತ್ತು ‘ ಆದಿ (ಆರಂಭ)’ ದಿಂದ ಬಂದಿದೆ, ಇದು ಹೊಸ ಯುಗದ ಆರಂಭ ಅಥವಾ ಹೊಸದರ ಆರಂಭ ಎಂಬುದನ್ನು ಸೂಚಿಸುತ್ತದೆ. ಸರಳವಾಗಿ ಹೇಳುವುದಾದರೆ, ಹೊಸ ಸಂವತ್ಸರದ ಆರಂಭವೇ ಯುಗಾದಿ. ಕರ್ನಾಟಕದಲ್ಲಿ ಬೇವು-ಬೆಲ್ಲ ಹಂಚುವ ಮೂಲಕ ಯುಗಾದಿಯ ಆಚರಣೆ ಚಾಲ್ತಿಯಲ್ಲಿದೆ. ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಈ ಹಬ್ಬವನ್ನು ಗುಡಿ ಪಾಡ್ವ ಎಂದು ಕರೆಯಲಾಗುತ್ತದೆ. ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸೌರಮಾನ ಯುಗಾದಿ ಆಚರಣೆಯಲ್ಲಿದ್ದು, ವಿಷು ಹಬ್ಬ ಎಂದು ಆಚರಿಸಲಾಗುತ್ತದೆ.

ಇನ್ನೂ ಹೆಚ್ಚು ಓದಿ

Aquarius Ugadi Horoscope 2025: ಕುಂಭ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ

ವಿಶ್ವಾವಸು ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ನೀಡಲಾಗಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.

Capricorn Ugadi Horoscope 2025: ಮಕರ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ

2025ರ ಮಾರ್ಚ್ 30ರ ಭಾನುವಾರದ ದಿನ ಚಾಂದ್ರಮಾನ ಯುಗಾದಿ. ವಿಶ್ವಾವಸು ಸಂವತ್ಸರ ಶುರುವಾಗುವ ದಿನ ಇದಾಗಿರುತ್ತದೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ನೀಡಲಾಗಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.

ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್

ನಿನ್ನೆ(ಮಾರ್ಚ್ 30) ಹಿಂದೂಗಳ ಹೊಸ ವರ್ಷ ಯುಗಾದಿ ಮುಗಿದಿದೆ. ಇದರ ಬೆನ್ನಲ್ಲೆ ಇಂದು(ಮಾರ್ಚ್ 31) ಮುಸ್ಲಿಮರು ಪವಿತ್ರ ಹಬ್ಬ ರಂಜಾನ್​​ ಇದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮುಸ್ಲಿಂ ಸಮುದಾಯದವರು ಬೆಳಗ್ಗೆಯೇ ಪ್ರಾರ್ಥನೆ ಮಾಡಿ ಸಿಹಿ ಅಡುಗೆ ಮಾಡಿ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಇದರ ಮಧ್ಯೆ ಕೆಲ ಮುಸ್ಲಿಂ ಯುವಕರು ದೇವಾಲಯದಲ್ಲಿ ಭಕ್ತಿಗೀತೆಯ ಸೌಂಡ್ ಕಡಿಮೆ ಮಾಡುವಂತೆ ಅವಾಜ್ ಹಾಕಿರುವ ಘಟನೆ ನಡೆದಿದೆ.

ಕರ್ನಾಟಕದಲ್ಲಿ ಯುಗಾದಿಯಂದೇ ದುರಂತಗಳ ಸಾಲು: 8 ಜನರು ದುರ್ಮರಣ, ಕಣ್ಣೀರಿಟ್ಟ ಸಂಬಂಧಿಕರು

ನಿನ್ನೆಯ ಯುಗಾದಿ ಹಬ್ಬದ ಸಂಭ್ರಮದ ನಡುವೆಯೇ ಕರ್ನಾಟಕದಲ್ಲಿ ಭೀಕರ ದುರಂತಗಳು ಸಂಭವಿಸಿವೆ. ನದಿಗಳಲ್ಲಿ ಮುಳುಗಿ ಮೂವರು ಬಾಲಕರು ಸೇರಿದಂತೆ ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತಗಳಲ್ಲಿಯೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸದ್ಯ ಹಬ್ಬದ ಸಂಭ್ರಮದಲ್ಲಿದ್ದ ಜಾಗದಲ್ಲಿ ಸೂತಕ ಛಾಯೆ ಆವರಿಸಿದೆ.

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ

ಯುಗಾದಿ ಹಬ್ಬದ ಪ್ರಯುಕ್ತ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕು ಚಿಕ್ಕಯ್ಯನ ಛತ್ರ ಗ್ರಾಮದ ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಆಚರಿಸಲಾಯಿತು. ಕಳಶದಲ್ಲಿ ನೀರು ತುಂಬಿಕೊಂಡು ಹೆಣ್ಣು ಮಕ್ಕಳು ತಲೆ ಮೇಲೆ ಹೊತ್ತು ವಾದ್ಯಗೋಷ್ಠಿ ಮೂಲಕ ಮೆರವಣಿಗೆ ನಡೆಸಲಾಯಿತು. ದೇವಾಲಯದ ಮುಂಭಾಗದಲ್ಲಿರುವ ಕೊಳದಲ್ಲಿ ಪೂಜೆ ನೆರವೇರಿಸಲಾಯಿತು.

  • Ram
  • Updated on: Mar 31, 2025
  • 7:58 am

ಭೂಕಂಪ, ರಾಜಕೀಯ ವ್ಯಕ್ತಿಗಳಿಗೆ ಕಂಟಕ: ಯುಗಾದಿಯಂದು ಬೀಳಗಿಯ ಜಕನೇರನಕಟ್ಟೆ ಶಾಕಿಂಗ್​ ಭವಿಷ್ಯ

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಯುಗಾದಿ ಪಾಡ್ಯದ ದಿನ ಜಕನೇರನಕಟ್ಟೆ ಎಂಬ ವಿಶೇಷ ಭವಿಷ್ಯ ನುಡಿಯಲಾಗುತ್ತದೆ. ಈ ಬಾರಿಯ ಭವಿಷ್ಯವೂ ಜನರಲ್ಲಿ ಆತಂಕ ಉಂಟುಮಾಡಿದೆ. ಮುಂದಿನ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಂಟಕ ಎದುರಾಗಲಿದೆ. ಭೂಕಂಪ ಸಂಭವಿಸಲಿದೆ ಎಂದು ಶಾಕಿಂಗ್ ಭವಿಷ್ಯ ನುಡಿಯಲಾಗಿದೆ.

ಈ ಬಾರಿ ಮುಂಗಾರುಗಿಂತ ಹಿಂಗಾರು ಮಳೆ ಜೋರು: ರಾಜಕೀಯ ಬಗ್ಗೆಯೂ ಬೊಂಬೆ ಯುಗಾದಿ ಭವಿಷ್ಯ!

ಧಾರವಾಡ ತಾಲೂಕಿನ ಹನುಮನಕೊಪ್ಪದಲ್ಲಿ ಬೊಂಬೆಗಳು ಪ್ರತಿ ಯುಗಾದಿ ಹಬ್ಬದಂದು ಭವಿಷ್ಯ ನುಡಿಯುತ್ತವೆ. ಹನುಮನಕೊಪ್ಪ ಗ್ರಾಮದಲ್ಲಿ 1936ರಿಂದಲೂ ಈ ಭವಿಷ್ಯ ನುಡಿಯಲಾಗುತ್ತಿದ್ದು, ಬಹುತೇಕ ನಿಜವಾಗಿವೆ. ಈ ಭವಿಷ್ಯ ನಿಜವಾಗುವುದರಿಂದ ಎಲ್ಲರು ಈ ಭವಿಷ್ಯವನ್ನು ಕಾತುರದಿಂದ ಎದುರು ನೋಡುತ್ತಾರೆ. ಅದರಂತೆ ಈ ವರ್ಷದ ಯುಗಾದಿ ಭವಿಷ್ಯ ಹೊರಬಿದ್ದಿದೆ. ಈ ವರ್ಷದ ಭವಿಷ್ಯದಲ್ಲಿ ರಾಜಕೀಯದ ಬಗ್ಗೆಯೂ ಹೇಳಲಾಗಿದೆ.

Ugadi 2025: ಯುಗಾದಿಯಂದು ಈ ಒಂದು ದೇವರನ್ನು ಪೂಜಿಸಿ; ವರ್ಷ ಪೂರ್ತಿ ಯಾವುದಕ್ಕೂ ಕೊರತೆಯಾಗದು!

ಯುಗಾದಿ ಹಬ್ಬದಂದು ಸೂರ್ಯ ದೇವನ ಪೂಜೆಯು ಅಪಾರ ಮಹತ್ವವನ್ನು ಹೊಂದಿದೆ. ಸೂರ್ಯ ದೇವಸ್ಥಾನಕ್ಕೆ ಭೇಟಿ ನೀಡುವುದು ಅಥವಾ ಮನೆಯಲ್ಲಿ ಸರಳ ಪೂಜೆ ಸಲ್ಲಿಸುವುದು ಶುಭವನ್ನು ತರುತ್ತದೆ ಎಂದು ನಂಬಲಾಗಿದೆ. ವಿಷ್ಣು ದೇವಾಲಯಗಳಿಗೆ ಭೇಟಿ ನೀಡಿ ಪೂಜಿಸುವುದರಿಂದಲೂ ಒಳ್ಳೆಯ ಫಲಿತಾಂಶಗಳನ್ನು ಪಡೆಯಬಹುದು. ಈ ದಿನ ಪಂಚಾಂಗ ಶ್ರವಣ ಮತ್ತು ಸೂರ್ಯನ ಮಂತ್ರ ಪಠಣೆ ಪ್ರಮುಖ ಅಂಶಗಳಾಗಿವೆ.

ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ

ಯುಗಾದಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆಆರ್​ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಇದೇ ವೇಳೆ, ಹೂವಿನ ದರವೂ ಹೆಚ್ಚಾಗಿದೆ. ಯಾವ ಹೂವಿಗೆ ಎಷ್ಟು ದರ? ಮಾರುಕಟ್ಟೆಯಲ್ಲಿ ಹೇಗಿದೆ ಖರೀದಿ ಭರಾಟೆ ಎಂಬ ಬಗ್ಗೆ ‘ಟಿವಿ9’ ಪ್ರತ್ಯಕ್ಷ ವರದಿ ಇಲ್ಲಿದೆ.

Virgo Ugadi Horoscope 2025: ಕನ್ಯಾ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ

ಕನ್ಯಾ ಯುಗಾದಿ ವರ್ಷ ಭವಿಷ್ಯ2025: ಮಾರ್ಚ್ 30ರ ಅಂದರೆ ನಾಳೆಯಿಂದ ಚಾಂದ್ರಮಾನ ಯುಗಾದಿ, ಅಲ್ಲಿಂದ ಹಿಂದೂಗಳಿಗೆ ಹೊಸ ವರ್ಷ ಆರಂಭ, ಅಂದಿನಿಂದ ವಿಶ್ವಾವಸು ಸಂವತ್ಸರದ ಆರಂಭವಾಗುತ್ತದೆ. ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ? ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು.ಈ ಬಗ್ಗೆ ಇಲ್ಲಿ ತಿಳಿಸಲಾಗಿದೆ.